ಸಿಯಾಝ್ ಸೇರಿದಂತೆ ಜನಪ್ರಿಯ ಕಾರುಗಳಿಗೆ ಭಾರಿ ಆಫರ್!
ಒಂದೆಡೆ ಜನಪ್ರಿಯ ಕಾರು ಮಾದರಿಗಳ ಬೆಲೆ ಏರಿಕೆ ಬಿಸಿ. ಇನ್ನೊಂದೆಡೆ ಆಫರುಗಳ ಸುರಿಮಳೆ. ಹೀಗೆ ಎಲ್ಲ ಹಂತದಲ್ಲೂ ಆಗಸ್ಟ್ ತಿಂಗಳಲ್ಲಿ ವಾಹನ ಜಗತ್ತಿಗೆ ಸಿಹಿ-ಕಹಿ ಅನುಭವಗಳು ಎದುರಾಗಿವೆ.
ಮಾರಾಟಕ್ಕೆ ಉತ್ತೇಜನ ನೀಡಲು ಹೊರಟಿರುವ ದೇಶದ ಪ್ರಮುಖ ಸಂಸ್ಥೆಗಳು ಭಾರಿ ಆಫರುಗಳನ್ನು ಮುಂದಿರಿಸಿದೆ. ಈ ಸಂಬಂಧ ಸಮಗ್ರ ವಿವರಗಳಿಗಾಗಿ ಕೆಳಗಡೆ ಕೊಟ್ಟಿರುವ ಚಿತ್ರ ಸಂಪುಟ ಭೇಟಿ ಕೊಡಲು ಮರೆಯದಿರಿ.

ಮಾರುತಿ ವ್ಯಾಗನಾರ್ ಸ್ಟ್ರಿಂಗ್ರೇ
ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟದಲ್ಲಿರುವ ವ್ಯಾಗನಾರ್ ಮಗದೊಂದು ಆವೃತ್ತಿಯಾಗಿರುವ ಸ್ಟ್ರಿಂಗ್ರೇ ಅಷ್ಟೇನೂ ಸದ್ದು ಮಾಡಿರಲಿಲ್ಲ. ಈ ನಿಟ್ಟಿನಲ್ಲಿ ದೇಶದ ಅತಿ ದೊಡ್ಡ ಮಾರುತಿ ಸಂಸ್ಥೆಯು 70,000 ರು.ಗಳ ವರೆಗೆ ಡಿಸ್ಕೌಂಡ್ ಒದಗಿಸಲು ನಿರ್ಧರಿಸಿದೆ. 998 ಸಿಸಿ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಮಾರುತಿ ವ್ಯಾಗನಾರ್ ಸ್ಟಿಂಗ್ರೇ 90 ಎನ್ ಎಂ ತಿರುಗುಬಲದಲ್ಲಿ 67 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು 5 ಸ್ಪೀಡ್ ಮ್ಯಾನುವಲ್ ಜೊತೆಗೆ ಎಎಂಟಿ ಗೇರ್ ಬಾಕ್ಸ ಆಯ್ಕೆಯಲ್ಲೂ ಲಭ್ಯವಿರುತ್ತದೆ.

ಹ್ಯುಂಡೈ ಗ್ರಾಂಡ್ ಐ10
ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಹ್ಯುಂಡೈ, ತನ್ನ ಜನಪ್ರಿಯ ಗ್ರಾಂಡ್ ಐ10 ನಿರ್ದಿಷ್ಟ ಮಾದರಿಗಳಿಗೆ 45,000 ರು.ಗಳ ವರೆಗೆ ಆಫರ್ ನೀಡುತ್ತಿದೆ. ಈ ಜನಪ್ರಿಯ ಹ್ಯಾಚ್ ಬ್ಯಾಕ್ ಕಾರು 1.2 ಲೀಟರ್ ಪೆಟ್ರೋಲ್ ಹಾಗೂ 1.1 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಫೋಕ್ಸ್ ವ್ಯಾಗನ್ ಪೊಲೊ
ಅತ್ತ ಗಮನಾರ್ಹ ಮಾರಾಟ ಸಾಧಿಸುವ ಇರಾದೆಯಲ್ಲಿರುವ ಜರ್ಮನಿಯ ಮೂಲದ ಫೋಕ್ಸ್ ವ್ಯಾಗನ್ ಸಂಸ್ಥೆಯು, ಪೊಲೊ ಮಾದರಿಗೆ 35,000 ರು.ಗಳ ವರೆಗೆ ಡಿಸ್ಕೌಂಟ್ ನೀಡುತ್ತದೆ. ಫೋಕ್ಸ್ ವ್ಯಾಗನ್ ಪೊಲೊ 1.2 ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಹಾಗೂ 1.5 ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಫಿಯೆಟ್ ಅವೆಂಚ್ಯುರಾ
ಇಟಲಿಯ ಐಕಾನಿಕ್ ಫಿಯೆಟ್ ಸಂಸ್ಥೆಯು ಅವೆಂಚ್ಯುರಾ ಹ್ಯಾಚ್ ಬ್ಯಾಕ್ ಕಾರಿಗೆ ಗರಿಷ್ಠ 65,000 ರು.ಗಳ ವರೆಗೆ ಡಿಸ್ಕೌಂಟ್ ನೀಡುತ್ತಿದೆ. ಇದರ ಪೆಟ್ರೋಲ್ 1.4 ಲೀಟರ್ ಫೈರ್ ಎಂಜಿನ್ 115 ಎನ್ ಎಂ ತಿರುಗುಬಲದಲ್ಲಿ 89 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಡೀಸೆಲ್ 1.3 ಲೀಟರ್ ಮಲ್ಟಿಜೆಟ್ ಎಂಜಿನ್ 197 ಎನ್ ಎಂ ತಿರುಗುಬಲದಲ್ಲಿ 75 ಅಶ್ವಶಕ್ತಿಯನ್ನು ನೀಡಲಿದೆ.

ಬಿಎಂಡಬ್ಲ್ಯು ಎಕ್ಸ್5
ಐಷಾರಾಮಿ ಕಾರುಗಳಿಗೂ ಆಗಸ್ಟ್ ತಿಂಗಳಲ್ಲಿ ಭಾರಿ ಆಫರ್ ಗಳು ಲಭ್ಯವಾಗಲಿದೆ. ಜರ್ಮನಿಯ ಪ್ರೀಮಿಯಂ ಕಾರು ಸಂಸ್ಥೆಯಾಗಿರುವ ಬಿಎಂಡಬ್ಲ್ಯು ಸಹ ತನ್ನ ಜನಪ್ರಿಯ ಎಕ್ಸ್5 ಕಾರಿಗೆ 5.5 ಲಕ್ಷ ರು.ಗಳ ವರೆಗೆ ಡಿಸ್ಕೌಂಟ್ ನೀಡಲಿದೆ. ಈ 3.0 ಲೀಟರ್ ಎಂಜಿನ್ ಆವೃತ್ತಿಯು ಮರ್ಸಿಡಿಸ್ ಜಿಎಲ್ ಇ ಹಾಗೂ ಜಿಎಲ್ ಎಸ್ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

ರೆನೊ ಡಸ್ಟರ್ ಮ್ಯಾನುವಲ್
ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವಾಗಿರುವ ರೆನೊ ಡಸ್ಟರ್ ಮ್ಯಾನುವಲ್ ಆವೃತ್ತಿಯ ಖರೀದಿ ವೇಳೆಯಲ್ಲಿ 70,000 ರು.ಗಳ ವರೆಗೆ ಡಿಸ್ಕೌಂಟ್ ನೀಡಲಾಗುತ್ತಿದೆ. ನಿಮ್ಮ ಮಾಹಿತಿಗಾಗಿ, ರೆನೊ ಡಸ್ಟರ್ ಎಎಂಟಿ ಆವೃತ್ತಿಯೂ ಮಾರುಕಟ್ಟೆಯಲ್ಲಿದ್ದು, ಆದರೆ ಡಿಸ್ಕೌಂಟ್ ಅನ್ವಯವಾಗುವುದಿಲ್ಲ.

ಮರ್ಸಿಡಿಸ್ ಬೆಂಝ್ ಸಿ 200
ಜರ್ಮನಿಯ ಮರ್ಸಿಡಿಸ್ ಬೆಂಝ್ ಸಹ ಡಿಸ್ಕೌಂಟ್ ಗಳೊಂದಿಗೆ ಮುಂದೆ ಬಂದಿದೆ. ಇದರಂತೆ ಸಿ ಶ್ರೇಣಿಯ 200 ಖರೀದಿ ವೇಳೆಯಲ್ಲಿ ನಾಲ್ಕು ಲಕ್ಷ ರು.ಗಳ ವರೆಗೆ ಡಿಸ್ಕೌಂಟ್ ಹಾಗೂ ಉಚಿತ ವಿಮಾ ಸೌಲಭ್ಯವು ಲಭ್ಯವಾಗಲಿದೆ.

ಸ್ಕೋಡಾ ರಾಪಿಡ್
ಸ್ಟೋಕ್ ಕ್ಲಿಯರನ್ಸ್ ಭಾಗವಾಗಿ ಸ್ಕೋಡಾ ರಾಪಿಡ್ ಗೆ ಗರಿಷ್ಠ 1.10 ಲಕ್ಷ ರು.ಗಳ ವಿಶೇಷ ಆಫರನ್ನು ಚೆಕ್ ಗಣರಾಜ್ಯದ ಸ್ಕೋಡಾ ಸಂಸ್ಥೆಯು ನೀಡುತ್ತಿದೆ. ಇದು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದರ 1.6 ಲೀಟರ್ ಎಂಪಿಐ ಪೆಟ್ರೋಲ್ ಎಂಜಿನ್ 153 ಎನ್ ಎಂ ತಿರುಗುಬಲದಲ್ಲಿ 103 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅದೇ ರೀತಿ 1.5 ಲೀಟರ್ ಟಿಡಿಐ ಎಂಜಿನ್ 250 ಎನ್ ಎಂ ತಿರುಗುಬಲದಲ್ಲಿ 103 ಅಶ್ವಶಕ್ತಿಯನ್ನು ನೀಡಲಿದೆ.

ಹೋಂಡಾ ಅಮೇಜ್
ಹಳೆಯ ಹೋಂಡಾ ಅಮೇಜ್ ಮಾದರಿಯ ಮೇಲೂ ಒಂದು ಲಕ್ಷ ರುಪಾಯಿಗಳ ವರೆಗೂ ಡಿಸ್ಕೌಂಟ್ ನೀಡಲಾಗುತ್ತಿದೆ. ಇದರ 1.2 ಲೀಟರ್ ಪೆಟ್ರೋಲ್ ಎಂಜಿನ್ 87 ಅಶ್ವಶಕ್ತಿಯನ್ನು ಉತ್ಪಾದಿಸುತ್ತಿದ್ದು, ಸಿವಿಟಿ ಗೇರ್ ಬಾಕ್ಸ್ ಆಯ್ಕೆಯೂ ಇರುತ್ತದೆ. ಅಂತೆಯೇ 1.5 ಲೀಟರ್ ಡೀಸೆಲ್ ಎಂಜಿನ್ 200 ಎನ್ ಎಂ ತಿರುಗುಬಲದಲ್ಲಿ 99 ಅಶ್ವಶಕ್ತಿಯನ್ನು ನೀಡಲಿದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ನಿಸ್ಸಾನ್ ಸನ್ನಿ
ನಿಸ್ಸಾನ್ ಸನ್ನಿ ಖರೀದಿಯಲ್ಲಿ 90,000 ರು.ಗಳ ವರೆಗೆ ಡಿಸ್ಕೌಂಟ್ ಪಡೆಯಬಹುದಾಗಿದೆ. ಇದು 1.5 ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದ್ದು, ಅನುಕ್ರಮವಾಗಿ 98 (134ಎನ್ ಎಂ ತಿರುಗುಬಲ) ಹಾಗೂ 85 (200 ಎನ್ ಎಂ ತಿರುಗುಬಲ) ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಫೋಕ್ಸ್ ವ್ಯಾಗನ್ ವೆಂಟೊ
ಮಾರುತಿ ಸಿಯಾಝ್ ಪ್ರತಿಸ್ಪರ್ಧಿಯಾಗಿರುವ ಫೋಕ್ಸ್ ವ್ಯಾಗನ್ ವೆಂಟೊ ಸೆಡಾನ್ ಕಾರಿನ ವೇಳೆಯಲ್ಲಿ 75,000 ರು.ಗಳ ವರೆಗೆ ಉಳಿತಾಯ ಮಾಡಬಹುದಾಗಿದೆ. ಇದು 1.6 ಲೀಟರ್ ಎಂಪಿಐ ಪೆಟ್ರೋಲ್ ಹಾಗೂ 1.2 ಲೀಟರ್ ಟಿಎಸ್ ಐ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಹಾಗೆಯೇ 1.5 ಲೀಟರ್ ಟಿಡಿಐ ಡೀಸೆಲ್ ಎಂಜಿನ್ ಆಯ್ಕೆಯೂ ಇರುತ್ತದೆ.

ಮಾರುತಿ ಸಿಯಾಝ್
ಅತಿ ಹೆಚ್ಚು ಮಾರಾಟವಾಗುತ್ತಿರುವ ಹೊರತಾಗಿಯೂ ಸಿಯಾಝ್ ನ ಕೆಲವು ಆಯ್ದ ವೆರಿಯಂಟ್ ಗಳಿಗೆ 45,000 ರು.ಗಳ ವರೆಗೆ ಡಿಸ್ಕೌಂಟ್ ನೀಡಲಾಗುತ್ತಿದೆ. ಆದರೂ ಸಿಯಾಝ್ ಆರ್ ಎಸ್ ವೆರಿಯಂಟ್ ಗೆ ಆಫರ್ ಅನ್ವಯವಾಗುವುದಿಲ್ಲ.


Click it and Unblock the Notifications