2016 ಹೋಂಡಾ ಬ್ರಿಯೊ ಎಂಟ್ರಿ ಭರ್ಜರಿ ಎಂಟ್ರಿ

By Nagaraja

ಜಪಾನ್ ಮೂಲದ ಪ್ರಖ್ಯಾತ ವಾಹನ ಸಂಸ್ಥೆ ಹೋಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಅತಿ ನೂತನ 2016 ಹೋಂಡಾ ಬ್ರಿಯೊ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ತನ್ಮೂಲಕ ಹ್ಯಾಚ್ ಬ್ಯಾಕ್ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ. ಪರಿಷ್ಕೃತ ಹೋಂಡಾ ಬ್ರಿಯೊ ತನ್ನ ಹಿಂದಿನ ಆವೃತ್ತಿಗಿಂತಲೂ ಹೇಗೆ ಭಿನ್ನವಾಗಿರಲಿದೆ? ಬೆಲೆ ಎಷ್ಟು ? ವೈಶಿಷ್ಟ್ಯಗಳೇನು ? ಎಂಬಿತ್ಯಾದಿ ಅಗತ್ಯ ಅಂಶಗಳ ಬಗ್ಗೆ ಇಲ್ಲಿ ವಿವರಣೆಯನ್ನು ಕೊಡಲಾಗುವುದು.

2016 ಹೋಂಡಾ ಬ್ರಿಯೊ ಎಂಟ್ರಿ ಭರ್ಜರಿ ಎಂಟ್ರಿ


ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
  • ಇ ಮ್ಯಾನುವಲ್: 4.69 ಲಕ್ಷ ರು.
  • ಎಸ್ ಮ್ಯಾನುವಲ್: 5.20 ಲಕ್ಷ ರು.
  • ವಿಎಕ್ಸ್ ಮ್ಯಾನುವಲ್: 5.95 ಲಕ್ಷ ರು.
  • ವಿಎಕ್ಸ್ ಆಟೋಮ್ಯಾಟಿಕ್: 6.81 ಲಕ್ಷ ರು.

ಈ ಮೊದಲೇ ತಿಳಿಸಿರುವಂತೆಯೇ ನೂತನ ಹೋಂಡಾ ಬ್ರಿಯೊ ಮುಂಭಾಗದಲ್ಲಿ ಕಪ್ಪು ಮತ್ತು ಕ್ರೋಮ್ ಗ್ರಿಲ್, ಪರಿಷ್ಕೃತ ಬಂಪರ್ ಇತ್ಯಾದಿ ವೈಶಿಷ್ಟ್ಯಗಳನ್ನು ಪಡೆದಿದೆ. ಹೋಂಡಾ ಬ್ರಿಯೊ ಕಾರಿನ ಹಿಂಭಾಗದಲ್ಲಿ ಪರಿಷ್ಕೃತ ಟೈಲ್ ಲೈಟ್ ಮತ್ತು ರಿಯರ್ ಸ್ಪಾಯ್ಲರ್ ಕಂಡುಬರಲಿದೆ.

2016 ಹೋಂಡಾ ಬ್ರಿಯೊ

ಕಾರಿನೊಳಗೆ ಹೊಸತಾದ ಡ್ಯಾಶ್ ಬೋರ್ಡ್ ಕಂಡುಬರಲಿದೆ. ಇದು ಹೋಂಡಾ ಅಮೇಜ್ ಹಾಗೂ ಹೋಂಡಾ ಬಿಆರ್-ವಿ ಕಾರಿನಲ್ಲಿರುವದಕ್ಕೆ ಸಮಾನ ವಿನ್ಯಾಸವನ್ನು ಪಡೆದಿದೆ. ಹೊಸ ಇನ್ಸ್ಟ್ರುಮೆಂಟ್ ಪ್ಯಾನೆಲ್, ಆಯತಾಕಾರದ ಎಸಿ ವೆಂಟ್ಸ್, ಸಿಲ್ವರ್ ಪಟ್ಟಿ, ಹೊಸ ಇನ್ಸ್ಟ್ರುಮೆಂಟ್ ಕ್ಲಸ್ಟರ್, 2 ಡಿನ್ ಆಡಿಯೋ ಸಿಸ್ಟಂ, ಯುಎಸ್ ಬಿ, ಆಕ್ಸ್ ಇನ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಇರಲಿದೆ.

ನೂತನ ಬ್ರಿಯೊದಲ್ಲಿ ಡಿಜಿಟಲ್ ಎಸಿ ಕಂಟ್ರೋಲ್ ವ್ಯವಸ್ಥೆಯನ್ನು ಕೊಡಲಾಗಿದ್ದು, ಹೆಚ್ಚು ಕೂಲ್ ಎನಿಸಿಕೊಂಡಿದೆ. ಹಿಂದಿನ ಮಾದರಿಯಂತೆ ಹೊಸ ಬ್ರಿಯೊದಲ್ಲಿ ಬೀಜ್ ಇಂಟಿರಿಯರ್ ಹಾಗೂ ಆಲ್ ಬ್ಲ್ಯಾಕ್ ಇಂಟಿರಿಯರ್ ಥೀಮ್ ಕೊಡಲಾಗಿದೆ. ಅಲ್ಲದೆ ಫ್ಯಾಬ್ರಿಕ್ ಸೀಟುಗಳು ಇದರಲ್ಲಿರಲಿದೆ.

2016 ಹೋಂಡಾ ಬ್ರಿಯೊ

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದರಲ್ಲಿರುವ 1.2 ಲೀಟರ್ ಫೋರ್ ಸಿಲಿಂಡರ್ ಐ-ವಿಟೆಕ್ ಎಂಜಿನ್ 109 ಎನ್ ಎಂ ತಿರುಗುಬಲದಲ್ಲಿ 88 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಜೊತೆಗೆ 5 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

2016 ಹೋಂಡಾ ಬ್ರಿಯೊ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಆವೃತ್ತಿಗಳು ಪ್ರತಿ ಲೀಟರ್ ಗೆ ಅನುಕ್ರಮವಾಗಿ 18.5 ಹಾಗೂ 16.5 ಮೈಲೇಜ್ ನೀಡುವಲ್ಲಿ ಕಾಪಾಡಿಕೊಳ್ಳಲಿದೆ.

ಬಣ್ಣಗಳು: ಟಫೆಟಾ ವೈಟ್, ಅಲಬಾಸ್ಟರ್ ಸಿಲ್ವರ್, ಅರ್ಬನ್ ಟೈಟಾನಿಯಂ, ರಾಲಿ ರೆಡ್, ವೈಟ್ ಓರ್ಕಿಡ್ ಪಿಯರ್ಲ್

More from DriveSpark

Article Published On: Tuesday, October 4, 2016, 16:28 [IST]
English summary
Honda Brio Facelift Launched In India; Prices Start At Rs. 4.69 Lakh
Read more on ಹೋಂಡಾ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+