ಭಾರತಕ್ಕೆ ಕಾಲಿಡಲಿರುವ ಹೊಚ್ಚ ಹೊಸ ಹ್ಯುಂಡೈ ಎಲಾಂಟ್ರಾ

By Nagaraja

ಭಾರತದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆ ಹ್ಯುಂಡೈ, 2016ನೇ ಸಾಲಿನಲ್ಲಿ ಅತಿ ನೂತನ ಎಲಾಂಟ್ರಾ ಕಾರನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

2020ನೇ ಇಸವಿಯ ವರೆಗೆ ವರ್ಷಕ್ಕೊಂದು ಮಾಡೆಲ್ ಬಿಡುಗಡೆ ಮಾಡುವ ಯೋಜನೆ ಹೊಂದಿರುವ ಹ್ಯುಂಡೈ ಪಾಲಿಗೆ ಎಲಾಂಟ್ರಾ ಪ್ರೀಮಿಯಂ ಸೆಡಾನ್ ವಿಭಾಗದಲ್ಲಿ ತಾಜಾತನವನ್ನು ತುಂಬಲಿದೆ.

ಭಾರತಕ್ಕೆ ಕಾಲಿಡಲಿರುವ ಹೊಚ್ಚ ಹೊಸ ಹ್ಯುಂಡೈ ಎಲಾಂಟ್ರಾ

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ 2016 ಮಧ್ಯಂತರ ಅವಧಿಯ ವೇಳೆಯಾಗುವಾಗ ಎಲಾಂಟ್ರಾ ಭಾರತದಲ್ಲಿ ಬಿಡುಗಡೆಯಾಗಲಿದೆ.

ಭಾರತಕ್ಕೆ ಕಾಲಿಡಲಿರುವ ಹೊಚ್ಚ ಹೊಸ ಹ್ಯುಂಡೈ ಎಲಾಂಟ್ರಾ

ಕೆಲವು ಸಮಯಗಳ ಹಿಂದೆಯಷ್ಟೇ ನಡೆದ 2015 ದುಬೈ ಮೋಟಾರು ಶೋದಲ್ಲೂ ಭರ್ಜರಿ ಪ್ರದರ್ಶನ ಕಂಡಿರುವ ಎಲಾಂಟ್ರಾ ಕಾರಿನ ಹೊರಮೈ ಹಾಗೂ ಒಳಮೈಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಪಡೆಯಲಿದೆ.

ಭಾರತಕ್ಕೆ ಕಾಲಿಡಲಿರುವ ಹೊಚ್ಚ ಹೊಸ ಹ್ಯುಂಡೈ ಎಲಾಂಟ್ರಾ

ಕಾರಿನಡಿಯಲ್ಲಿ ಎರಡು ಪೆಟ್ರೋಲ್ ಹಾಗೂ ಒಂದು ಡೀಸೆಲ್ ಎಂಜಿನ್ ಆಯ್ಕೆಯಿರಲಿದೆ. ಇದು 1.6 ಲೀಟರ್ ವಿಜಿಟಿ ಸಿಆರ್‌ಡಿಐ ಡೀಸೆಲ್ ಎಂಜಿನ್ ಮತ್ತು 1.6 ಲೀಟರ್ ಜಿಡಿಐ ಪೆಟ್ರೋಲ್ ಹಾಗೂ 2.0 ಲೀಟರ್ ಎಂಪಿಐ ಪೆಟ್ರೋಲ್ ಎಂಜಿನ್ ಗಳನ್ನು ಪಡೆದುಕೊಳ್ಳಲಿದೆ. ಅಂತೆಯೇ ಆರು ಸ್ಪೀಡ್ ಆಟೋಮ್ಯಾಟಿಕ್ ಹಾಗೂ ಮ್ಯಾನುವಲ್ ಗೇರ್ ಬಾಕ್ಸ್ ಕಂಡುಬರಲಿದೆ.

ಭಾರತಕ್ಕೆ ಕಾಲಿಡಲಿರುವ ಹೊಚ್ಚ ಹೊಸ ಹ್ಯುಂಡೈ ಎಲಾಂಟ್ರಾ

ಚೆನ್ನೈನಲ್ಲಿ ಸ್ಥಿತಗೊಂಡಿರುವ ಘಟಕದಲ್ಲೇ ನೂತನ ಹ್ಯುಂಡೈ ಎಲಾಂಟ್ರಾ ನಿರ್ಮಾಣವಾಗಲಿದೆ. ಇದಕ್ಕೂ ಮುಂಚಿತವಾಗಿ 2016 ಆಟೋ ಎಕ್ಸ್ ಪೋದಲ್ಲೂ ಭರ್ಜರಿ ಪ್ರದರ್ಶನ ಕಾಣಲಿದೆ.

ಭಾರತಕ್ಕೆ ಕಾಲಿಡಲಿರುವ ಹೊಚ್ಚ ಹೊಸ ಹ್ಯುಂಡೈ ಎಲಾಂಟ್ರಾ

ಭಾರತದಲ್ಲಿ ಫೋಕ್ಸ್ ವ್ಯಾಗನ್ ಜೆಟ್ಟಾ, ಷೆವರ್ಲೆ ಕ್ರೂಝ್, ಸ್ಕೋಡಾ ಒಕ್ಟಾವಿಯಾ, ಟೊಯೊಟಾ ಕರೊಲ್ಲಾ ಆಲ್ಟೀಸ್ ಮುಂತಾದ ಪ್ರೀಮಿಯಂ ಸೆಡಾನ್ ಕಾರುಗಳಿಗೆ 2016 ಎಲಾಂಟ್ರಾ ಪ್ರತಿಸ್ಪರ್ಧಿಯಾಗಲಿದೆ.

ಭಾರತಕ್ಕೆ ಕಾಲಿಡಲಿರುವ ಹೊಚ್ಚ ಹೊಸ ಹ್ಯುಂಡೈ ಎಲಾಂಟ್ರಾ

ಅಂತಿಮವಾಗಿ ಬೆಲೆಯ ಬಗ್ಗೆ ಚರ್ಚಿಸುವುದಾದ್ದಲ್ಲಿ ಹ್ಯುಂಡೈ ಎಲಾಂಟ್ರಾ 14.5 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

Article Published On: Friday, January 1, 2016, 11:16 [IST]
English summary
Hyundai New Elantra Coming To India During 2016
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+