ಹೊಸ ನೋಟ ತಾಜಾತನದೊಂದಿಗೆ ಬರುತ್ತಿದೆ ನೂತನ ಮಾರುತಿ ಆಲ್ಟೊ 800

By Nagaraja

ದೇಶದ ಸರ್ವಕಾಲಿಕ ಶ್ರೇಷ್ಠ ಕಾರುಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ಆಲ್ಟೊ 800 ಸದ್ಯದಲ್ಲೇ ಪರಿಷ್ಕೃತಗೊಳ್ಳುತ್ತಿದೆ. ಬಲ್ಲ ಮೂಲಗಳ ಪ್ರಕಾರ ಪ್ರಸಕ್ತ ತಿಂಗಳಿನಲ್ಲೇ 2016 ಮಾರುತಿ ಆಲ್ಟೊ 800 ಬಿಡುಗಡೆಯಾಗಲಿದೆ.

ಈ ನಡುವೆ ವಾಹನ ಉತ್ಸಾಹಿಗಳು ನೂತನ ಆಲ್ಟೊ ಕಾರಿನ ಎಕ್ಸ್ ಕ್ಲೂಸಿವ್ ಚಿತ್ರಗಳನ್ನು ಸೆರೆ ಹಿಡಿಯಲು ಯಶಸ್ವಿಯಾಗಿದ್ದು, ಮಹತ್ತರ ವಿವರಗಳು ಹೊರಬಿದ್ದಿವೆ. ಇವೆಲ್ಲದರ ಮುಖಾಂತರ ರೆನೊ ಕ್ವಿಡ್ ಕಾರಿಗೆ ಪ್ರಬಲ ತಿರುಗೇಟು ನೀಡುವ ಇರಾದೆಯಲ್ಲಿದೆ.

ಹೊಸ ನೋಟ ತಾಜಾತನದೊಂದಿಗೆ ಬರುತ್ತಿದೆ ನೂತನ ಮಾರುತಿ ಆಲ್ಟೊ 800

ಸದ್ಯಕ್ಕೆ ಆಲ್ಟೊ ಪೆಟ್ರೋಲ್ ಮತ್ತು ಸಿಎನ್ ಜಿ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಅಂದರೆ ಹೊಸ ಆಲ್ಟೊ ಡೀಸೆಲ್ ಎಂಜಿನ್ ಗಿಟ್ಟಿಸಿಕೊಳ್ಳಲಿದೆಯೇ ಎಂಬುದು ಬಹಳ ಕುತೂಹಲವೆನಿಸಿದೆ.

ಬೆಲೆ ಮಾಹಿತಿ

ಬೆಲೆ ಮಾಹಿತಿ

ಈಗ ಮಾರುಕಟ್ಟೆಯಲ್ಲಿರುವ ಆಲ್ಟೊ 800 2.57 ಲಕ್ಷ ರು.ಗಳಿಂದ 3.78 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ. ಅಲ್ಲದೆ ಮುಂಬರುವ ಫೇಸ್ ಲಿಫ್ಟ್ ಮಾದರಿಯೂ ಇದೇ ಬೆಲೆ ಪರಿಧಿಯನ್ನು ಕಾಪಾಡಿಕೊಳ್ಳುವ ನಿರೀಕ್ಷೆಯಿದೆ.

ಎಂಜಿನ್

ಎಂಜಿನ್

ಈಗ ಮಾರುಕಟ್ಟೆಯಲ್ಲಿರುವ ಆಲ್ಟೊ 800 ಕಾರಿನಲ್ಲಿರುವ 796 ಸಿಸಿ ಎಫ್8ಡಿ ಎಂಜಿನ್ 69 ಎನ್ ಎಂ ತಿರುಗುಬಲದಲ್ಲಿ 47.65 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸಹ ಪಡೆಯಲಿದೆ.

ಹೊಸ ನೋಟ ತಾಜಾತನದೊಂದಿಗೆ ಬರುತ್ತಿದೆ ನೂತನ ಮಾರುತಿ ಆಲ್ಟೊ 800

ಈಗ ಮಾರುಕಟ್ಟೆಯಲ್ಲಿರುವ ಆಲ್ಟೊ ಕೆ10 ಮಾದರಿಯಲ್ಲಿ ಎಎಂಟಿ ಗೇರ್ ಬಾಕ್ಸ್ ನೀಡಲಾಗಿದೆ. ಈಗ ಆಲ್ಟೊ 800 ಮಾದರಿಯಲ್ಲೂ ಎಎಂಟಿ ಗೇರ್ ಬಾಕ್ಸ್ ಲಭ್ಯವಾದ್ದಲ್ಲಿ ಅಚ್ಚರಿಪಡಬೇಕಾಗಿಲ್ಲ.

ಹೊಸ ನೋಟ ತಾಜಾತನದೊಂದಿಗೆ ಬರುತ್ತಿದೆ ನೂತನ ಮಾರುತಿ ಆಲ್ಟೊ 800

ನೂತನ ಆಲ್ಟೊ 800 ಮುಂಭಾಗದಲ್ಲಿ ಗಮನಾರ್ಹ ಬದಲಾವಣೆ ಕಂಡುಬರಲಿದೆ. ಪರಿಷ್ಕೃತ ಹೆಡ್ ಲ್ಯಾಂಪ್, ಫ್ರಂಟ್ ಗ್ರಿಲ್ ನೀವು ಕಾಣಬಹುದಾಗಿದೆ. ಆದರೆ ಬದಿ ಮತ್ತು ಹಿಂಭಾಗದಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬಂದಿಲ್ಲ.

ಹೊಸ ನೋಟ ತಾಜಾತನದೊಂದಿಗೆ ಬರುತ್ತಿದೆ ನೂತನ ಮಾರುತಿ ಆಲ್ಟೊ 800

ಚಕ್ರಗಳು ಹೊಸ ವಿನ್ಯಾಸವನ್ನು ಪಡೆದಿದ್ದು, ಟಾಪ್ ಎಂಡ್ ಆವೃತ್ತಿಯಲ್ಲಿ ಫಾಗ್ ಲ್ಯಾಂಪ್ ಸೌಲಭ್ಯ ಸಹ ಲಭ್ಯವಾಗಲಿದೆ. ಅಂತೆಯೇ ಆಯಾಮ, ಭಾರ ಮತ್ತು ಚಕ್ರಾಂತರದಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ.

ಹೊಸ ನೋಟ ತಾಜಾತನದೊಂದಿಗೆ ಬರುತ್ತಿದೆ ನೂತನ ಮಾರುತಿ ಆಲ್ಟೊ 800

ಕಾರಿನ ಒಳಭಾಗದಲ್ಲಿ ಪ್ರಭಾವತ್ಮಾಕ ಬದಲಾವಣೆಗಳನ್ನು ತರಲಾಗಿದೆ. ಇದರ ಡ್ಯಾಶ್ ಬೋರ್ಡ್ ಕೆ10 ಮಾದರಿಗೆ ಸಮಾನವಾಗಿರಲಿದೆ.

ಹೊಸ ನೋಟ ತಾಜಾತನದೊಂದಿಗೆ ಬರುತ್ತಿದೆ ನೂತನ ಮಾರುತಿ ಆಲ್ಟೊ 800

ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಫ್ರಂಟ್ ಮತ್ತು ಚಾಲಕ ಬದಿಯ ಏರ್ ಬ್ಯಾಗ್ ಮತ್ತು ಐಚ್ಛಿಕ ಆ್ಯಂಟಿ ಲಾಕ್ ಬ್ರೇಕಿಂಗ್ ವ್ಯವಸ್ಥೆಯು ಲಭ್ಯವಾಗಲಿದೆ.

Image Credit: Gaadiwaadi

More from DriveSpark

Article Published On: Monday, May 9, 2016, 18:03 [IST]
English summary
Spied: New Maruti-Suzuki Alto 800
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+