ಬಳುಕುತ್ತಾ ಬಂದ ಸ್ವಿಫ್ಟ್ ಚೆಲುವೆ; ಏನ್ ವೈಯ್ಯಾರ!

Written By:

ವಾಹನ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದ ಸಮಯ ಹತ್ತಿರವಾಗುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಮಾರುಕಟ್ಟೆಯಲ್ಲಿ ಭರ್ಜರಿ ಯಶಸ್ಸು ಕಂಡಿರುವ ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರು ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ.

ನೂತನ ಸ್ವಿಫ್ಟ್ ಆವೃತ್ತಿಯ ಎಕ್ಸ್ ಕ್ಲೂಸಿವ್ ಚಿತ್ರ ಹೊರಬಂದಿದ್ದು, ಮುಂದಿನ ವರ್ಷದಲ್ಲಿ ಮಾರುಕಟ್ಟೆಯನ್ನು ತಲುಪಲಿದೆ. ಇದು ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಕುತೂಹಲವನ್ನುಂಟು ಮಾಡಿದೆ.

 

To Follow DriveSpark On Facebook, Click The Like Button
ಬಳುಕುತ್ತಾ ಬಂದ ಸ್ವಿಫ್ಟ್ ಚೆಲುವೆ; ಏನ್ ವೈಯ್ಯಾರ!

ಮಾರುತಿ ಅಂಗಸಂಸ್ಥೆಯಾಗಿರುವ ಸುಜುಕಿ ನೂತನ ಸ್ವಿಫ್ಟ್ ಕಾರನ್ನು ಅನಾವರಣಗೊಳಿಸಿದೆ. ಇದು ಮುಂದಿನ ವರ್ಷದಲ್ಲಿ ಯುರೋಪ್ ಮಾರುಕಟ್ಟೆಯನ್ನು ತಲುಪಲಿದೆ.

ಬಳುಕುತ್ತಾ ಬಂದ ಸ್ವಿಫ್ಟ್ ಚೆಲುವೆ; ಏನ್ ವೈಯ್ಯಾರ!

ನೂತನ ಎಕ್ಸ್ ಕ್ಲೂಸಿವ್ ಚಿತ್ರದಲ್ಲಿ ಗೋಚರಿಸುತ್ತಿರುವಂತೆಯೇ ನೂತನ ಸ್ವಿಪ್ಟ್ ಹೆಚ್ಚು ಉದ್ದಗಲವನ್ನು ಪಡೆದುಕೊಂಡಿದೆ. ಒಟ್ಟಿನಲ್ಲಿ ಮೋಜಿನ ಚಾಲನೆಯನ್ನು ಪ್ರದಾನ ಮಾಡಲಿರುವುದಂತೂ ಗ್ಯಾರಂಟಿ.

ಬಳುಕುತ್ತಾ ಬಂದ ಸ್ವಿಫ್ಟ್ ಚೆಲುವೆ; ಏನ್ ವೈಯ್ಯಾರ!

ಇದಕ್ಕೂ ಮೊದಲು ಸ್ವಿಫ್ಟ್ ರೇಖಾಚಿತ್ರವು ಅಂತರ್ಜಾಲದಲ್ಲಿ ಬಿತ್ತರಿಸಿತ್ತು. ಇದರಲ್ಲಿ ಹೆಚ್ಚು ಆಕ್ರಮಣಕಾರಿ ವಿನ್ಯಾಸವನ್ನು ಮೈಗೂಡಿಸಿಕೊಳ್ಳಲಾಗಿತ್ತು.

ಬಳುಕುತ್ತಾ ಬಂದ ಸ್ವಿಫ್ಟ್ ಚೆಲುವೆ; ಏನ್ ವೈಯ್ಯಾರ!

ಬಲೆನೊ ಜೊತೆ ಹಂಚಿಕೊಂಡಿರುವ ಹಗುರ ಭಾರದ ಚಾಸೀ ಹೊಸ ಸ್ವಿಫ್ಟ್ ಕಾರಿನಲ್ಲಿರಲಿದೆ. ಅಲ್ಲದೆ ಮಾಲಿನ್ಯ ಮಟ್ಟ ಕಾಪಾಡುವುದರೊಂದಿಗೆ ಗರಿಷ್ಠ ನಿರ್ವಹಣೆ ಹಾಗೂ ಇಂಧನ ಕ್ಷಮತೆಯನ್ನು ಕಾಯ್ದುಕೊಳ್ಳಲಿದೆ.

ಬಳುಕುತ್ತಾ ಬಂದ ಸ್ವಿಫ್ಟ್ ಚೆಲುವೆ; ಏನ್ ವೈಯ್ಯಾರ!

2017 ಸುಜುಕಿ ಸ್ವಿಫ್ಟ್ ಆವೃತ್ತಿಯಲ್ಲಿ ಎರಡು ಪೆಟ್ರೋಲ್ ಹಾಗೂ ಡೀಸೆಲ್ ಸೇರಿದಂತೆ ಮೂರು ಎಂಜಿನ್ ಆಯ್ಕೆಗಳಿರಲಿದೆ. ಇದು 1.3 ಲೀಟರ್ ಎಂಜೆಡಿ ಡೀಸೆಲ್ ಹಾಗೂ 1.0 ಲೀಟರ್ ಬೂಸ್ಟರ್ ಜೆಟ್ ಮತ್ತು 1.2 ಲೀಟರ್ ಕೆ-ಸಿರೀಸ್ ಪೆಟ್ರೋಲ್ ಎಂಜಿನ್ ಗಳನ್ನು ಪಡೆಯಲಿದೆ.

ಬಳುಕುತ್ತಾ ಬಂದ ಸ್ವಿಫ್ಟ್ ಚೆಲುವೆ; ಏನ್ ವೈಯ್ಯಾರ!

ಯುರೋಪ್ ಮಾರುಕಟ್ಟೆಯ ಬೆನ್ನಲ್ಲೇ ನೂತನ ಸ್ವಿಫ್ಟ್ ಭಾರತಕ್ಕೂ ಕಾಲಿಡಲಿದೆ. ತದಾ ಬಳಿಕ ಅತಿ ಹೆಚ್ಚು ಮಾರಾಟ ವಲಯವನ್ನು ಹೊಂದಿರುವ ಭಾರತಕ್ಕೂ ಎಂಟ್ರಿ ಕೊಡಲಿದೆ.

English summary
New Suzuki Swift exclusive image revealed
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark