ಮಾರುತಿ ಎಸ್ ಕ್ರಾಸ್ ಕಾರಿಗೆ 5.5 ಲಕ್ಷದ ವರೆಗೂ ಡಿಸ್ಕೌಂಟ್

Written By:

ಮಾರುತಿ ಸಂಸ್ಥೆಯು ಹೊಸದಾಗಿ ಆರಂಭಿಸಿರುವ ನೆಕ್ಸಾ ಶೋ ರೂಂಗಳ ಮುಖಾಂತರ ಎಸ್-ಕ್ರಾಸ್ ಮಾರಾಟವನ್ನು ಆರಂಭಿಸಿತ್ತು. ಆದರೆ ಎಸ್ ಕ್ರಾಸ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮಾರಾಟ ದೊಪ್ಪನೆ ಇಳಿಕೆಯಾಗಿತ್ತು.

ಪ್ರಸ್ತುತ ಎಸ್ ಕ್ರಾಸ್ ಕಾರಿಗೆ ಡೀಲರ್ ಶಿಪ್ ಗಳು ನಾನಾ ರೀತಿಯ ಆಫರ್ ಗಳನ್ನು ನೀಡಿದರೂ ಮಾರಾಟದಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿರಲಿಲ್ಲ.

ಮಾರುತಿ ಎಸ್ ಕ್ರಾಸ್ ಕಾರಿಗೆ 5.5 ಲಕ್ಷದ ವರೆಗೂ ಡಿಸ್ಕೌಂಟ್

ಈಗ ಬಂದಿರುವ ತಾಜಾ ವರದಿಗಳ ಪ್ರಕಾರ ಮಾರುತಿ ಎಸ್ ಕ್ರಾಸ್ ಕಾರಿಗೆ 5.5 ಲಕ್ಷ ರು.ಗಳ ವರೆಗೂ ಡಿಸ್ಕೌಂಟ್ ನೀಡಲಾಗುತ್ತದೆ. ಈ ಮುಖಾಂತರ ಹೆಚ್ಚೆಚ್ಚು ಗ್ರಾಹಕರನ್ನು ಆಕರ್ಷಿಸುವ ಇರಾದೆಯಲ್ಲಿದೆ.

ಮಾರುತಿ ಎಸ್ ಕ್ರಾಸ್ ಕಾರಿಗೆ 5.5 ಲಕ್ಷದ ವರೆಗೂ ಡಿಸ್ಕೌಂಟ್

ಮಾರುಕಟ್ಟೆಯಲ್ಲಿ ಮಿಂಚಿಂಗ್ ಪ್ರದರ್ಶನ ನೀಡುತ್ತಿರುವ ಹ್ಯುಂಡೈ ಕ್ರೆಟಾಗಳಂತಹ ಕಾರುಗಳೊಂದಿಗೆ ಸ್ಪರ್ಧಿಸುತ್ತಿರುವ ಎಸ್ ಕ್ರಾಸ್, ಕಳೆದ ಆಗಸ್ಟ್ ನಿಂದ ಡಿಸೆಂಬರ್ ವರೆಗೆ 16,000 ಯುನಿಟ್ ಗಳಷ್ಟು ಮಾರಾಟ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿದೆ. ಇನ್ನೊಂದೆಡೆ ಕ್ರೆಟಾ 37,000 ಸಂಖ್ಯೆಯನ್ನು ದಾಟಿದೆ.

ಮಾರುತಿ ಎಸ್ ಕ್ರಾಸ್ ಕಾರಿಗೆ 5.5 ಲಕ್ಷದ ವರೆಗೂ ಡಿಸ್ಕೌಂಟ್

ಬಿಡುಗಡೆಯಾದ ಕೆಲವೇ ವಾರಗಳಲ್ಲಿ ಎಸ್ ಕ್ರಾಸ್ ಕಾರಿಗೆ ಒಂದು ಲಕ್ಷದ ವರೆಗೆ ಡಿಸ್ಕೌಂಟ್ ನೀಡಲಾಗಿತ್ತು. ಇದಾದ ಬಳಿಕ ಡಿಸೆಂಬರ್ ತಿಂಗಳಲ್ಲಿ ಅತಿ ವಿಶಿಷ್ಟ ಪ್ರೈಮಿಯಾ ಎಡಿಷನ್ ಬಿಡುಗಡೆಗೊಳಿಸಿತ್ತು.

ಮಾರುತಿ ಎಸ್ ಕ್ರಾಸ್ ಕಾರಿಗೆ 5.5 ಲಕ್ಷದ ವರೆಗೂ ಡಿಸ್ಕೌಂಟ್

ಪ್ರಸ್ತುತ ಎಸ್ ಕ್ರಾಸ್ ಡಿಡಿಐಎಸ್ 320 ಟಾಪ್ ಎಂಡ್ ಕಾರು 16.5 ಲಕ್ಷದ ವರೆಗೂ ದುಬಾರಿಯೆನಿಸಲಿದ್ದು, ಮುಂಬೈನ ಆಯ್ದ ನೆಕ್ಸಾ ಶೋ ರೂಂಗಳಲ್ಲಿ 5.5 ಲಕ್ಷ ರು.ಗಳ ವರೆಗೆ ಡಿಸ್ಕೌಂಟ್ ನೀಡಲಾಗುತ್ತಿದೆ.

ಮಾರುತಿ ಎಸ್ ಕ್ರಾಸ್ ಕಾರಿಗೆ 5.5 ಲಕ್ಷದ ವರೆಗೂ ಡಿಸ್ಕೌಂಟ್

ಒಟ್ಟಿನಲ್ಲಿ ಮಾರುತಿ ಎಸ್ ಕ್ರಾಸ್ ಸ್ಟೋಕ್ ಗಳನ್ನು ಮಾರಾಟಗೊಳಿಸಲು ನೆಕ್ಸಾ ಡೀಲರುಶಿಪ್ ಗಳು ಭಾರಿ ಆಫರುಗಳನ್ನು ಮುಂದಿಡಬೇಕಾದ ಪರಿಸ್ಥಿತಿ ಎದುರಾಗಿದೆ.

English summary
Nexa Dealers Offering Massive Discount Of Rs 5.5 Lakh On S-Cross
Story first published: Friday, January 8, 2016, 10:59 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark