ರಿ ಎಂಟ್ರಿ ಕೊಡಲಿರುವ ಐಕಾನಿಕ್ ಹ್ಯುಂಡೈ ಸ್ಯಾಂಟ್ರೊ
ಭಾರತೀಯ ಸಣ್ಣ ಕಾರು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಯಶಸ್ಸು ಸಾಧಿಸಿರುವ ಹ್ಯುಂಡೈ ಸ್ಯಾಂಟ್ರೊ ಹೊಸ ಸ್ವರೂಪದೊಂದಿಗೆ ಆಗಮನವಾಗುತ್ತಿದೆ. ದಕ್ಷಿಣ ಕೊರಿಯಾ ಮೂಲದ ಈ ದೈತ್ಯ ವಾಹನ ಸಂಸ್ಥೆಯು 2018ರಲ್ಲಿ ಮುಂದಿನ ತಲೆಮಾರಿನ ಸ್ಯಾಂಟ್ರೊ ಕಾರನ್ನು ಬಿಡುಗಡೆ ಮಾಡಲಿದೆ.
ಎರಡು ದಶಲಕ್ಷಕ್ಕೂ ಹೆಚ್ಚು ಯುನಿಟ್ ಮಾರಾಟವಾಗುವ ಮೂಲಕ ದೇಶದ ಅತ್ಯಂತ ಯಶಸ್ವಿ ಕಾರುಗಳ ಸಾಲಿನ ಕಾರುಗಳಲ್ಲಿ ಗುರುತಿಸಿಕೊಂಡಿರುವ ಸ್ಯಾಂಟ್ರೊ ಮಾರುತಿ ಸಣ್ಣ ಕಾರುಗಳಿಗೆ ಸ್ಪರ್ಧೆ ಒಡ್ಡುವಲ್ಲಿ ಯಶಸ್ವಿಯಾಗಿತ್ತು.

ಎರಡು ವರ್ಷಗಳ ಹಿಂದೆಯಷ್ಟೇ ಕಳೆಗುಂದಿದ್ದ ಸ್ಯಾಂಟ್ರೊ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲು ಹ್ಯುಂಡೈ ನಿರ್ಧರಿಸಿತ್ತು. 1997ನೇ ಇಸವಿಯಲ್ಲಿ ಮೊದಲ ಬಾರಿಗೆ ಎಂಟ್ರಿ ಕೊಟ್ಟಿರುವ ಸ್ಯಾಂಟ್ರೊ ಚೆನ್ನೈನ ಘಟಕದಲ್ಲಿ ನಿರ್ಮಿಸಲಾಗಿತ್ತು.

ಬಿಡುಗಡೆ ವೇಳೆಯಲ್ಲಿ ಮಾರುತಿ ಜೆನ್ ಮಾದರಿಗೆ ಪ್ರತಿಸ್ಪರ್ಧಿಯಾಗಿದ್ದ ಸ್ಯಾಂಟ್ರೊ ಹೆಚ್ಚಿನ ಜನಪ್ರಿಯತೆಯನ್ನು ಕಾಪಾಡಿಕೊಂಡಿತ್ತು. ತದಾ ಬಳಿಕ ಸ್ಯಾಂಟ್ರೊ ಕ್ಸಿಂಗ್ ಕಾರಿನ ಉತ್ತರಾಧಿಕಾರಿಯಾಗಿ ಐ10 ಗುರುತಿಸಿಕೊಂಡಿತ್ತು.

ಹಾಗಿದ್ದರೂ ಹೊಸ ಸ್ಯಾಂಟ್ರೊ ಕಾರಿನ ಬಗ್ಗೆ ವಿವರಗಳು ಇನ್ನಷ್ಟೇ ಬಯಲಾಗಬೇಕಿದೆ. ಹ್ಯುಂಡೈ ಎಎಚ್ ಎಂಬ ಕೋಡ್ ಹೆಸರಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಇದು ಹಳೆಯ ಐ10 ಸ್ಥಾನ ತುಂಬುವ ಸಾಧ್ಯತೆಯಿದೆ.

ನೂತನ ಸ್ಯಾಂಟ್ರೊ ಭಾರತ ಮಾರುಕಟ್ಟೆಯಲ್ಲಿ ರೆನೊ ಕ್ವಿಡ್, ಮಾರುತಿ ಸುಜುಕಿ ಆಲ್ಟೊ, ದಟ್ಸನ್ ರೆಡಿ ಗೊ ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧೆಯೊಡ್ಡಲಿದೆ.

ನೂತನ ಹ್ಯುಂಡೈ ಸ್ಯಾಂಟ್ರೊ 0.8 ಲೀಟರ್ ಅಥವಾ 1.0 ಲೀಟರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಸಾಧ್ಯತೆಯಿದ್ದು, 5 ಸ್ಪೀಡ್ ಮ್ಯಾನುವಲ್ ಜೊತೆಗೆ ಎಎಂಟಿ ಗೇರ್ ಬಾಕ್ಸ್ ಆಳವಡಿಕೆಯಾಗಲಿದೆ.

ಹ್ಯುಂಡೈ ಸ್ಯಾಂಟ್ರೊ ಭಾರತ ಮಾರುಕಟ್ಟೆಯಲ್ಲಿ ನಾಲ್ಕರಿಂದ ಆರು ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.


Click it and Unblock the Notifications