ಮಾರುತಿ ಹೈಬ್ರಿಡ್ ಕಾರುಗಳು 4 ತಿಂಗಳಲ್ಲೇ 40,000 ಮಾರಾಟ

By Nagaraja

ದೇಶದ ಅತಿ ದೊಡ್ಡ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಕಳೆದ ವರ್ಷಾಂತ್ಯದ ವೇಳೆಯಲ್ಲಷ್ಟೇ ಸಿಯಾಝ್ ಮಧ್ಯಮ ಗಾತ್ರದ ಸೆಡಾನ್ ಮತ್ತು ಎರ್ಟಿಗಾ ಬಹು ಬಳಕೆಯ ವಾಹನಗಳ ಹೈಬ್ರಿಡ್ ಮಾದರಿಯನ್ನು ಬಿಡುಗಡೆಗೊಳಿಸಿತ್ತು.

ಪ್ರಸ್ತುತ ಎರಡು ಕಾರುಗಳಿಗೂ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ನಾಲ್ಕು ತಿಂಗಳಲ್ಲೇ 40,000 ಯುನಿಟ್ ಗಳಷ್ಟು ಮಾರಾಟವಾಗಿದೆ ಎಂದು ಸಂಸ್ಥೆ ಮೂಲಗಳು ತಿಳಿಸಿವೆ.

ಮಾರುತಿ ಹೈಬ್ರಿಡ್ ಕಾರುಗಳಿಗೆ ಭಾರಿ ಬೇಡಿಕೆ

ಪರಿಸರ ಸ್ನೇಹಿ ಸಿಯಾಝ್ ಮತ್ತು ಎರ್ಟಿಗಾ ಹೈಬ್ರಿಡ್ ಕಾರಿನಲ್ಲಿ ಸುಜುಕಿ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ (ಎಸ್‌ಎಚ್‌ವಿಎಸ್) ತಂತ್ರಜ್ಞಾನವನ್ನು ಆಳವಡಿಸಲಾಗಿದೆ. ಇದಕ್ಕೀಗ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಮಾರುತಿ ಹೈಬ್ರಿಡ್ ಕಾರುಗಳಿಗೆ ಭಾರಿ ಬೇಡಿಕೆ

ಕಳೆದ ನಾಲ್ಕೈದು ತಿಂಗಳಲ್ಲಿ ಸಿಯಾಝ್ ಮತ್ತು ಎರ್ಟಿಗಾ ಮಾದರಿಗಳು ಅನುಕ್ರಮವಾಗಿ ಸರಾಸರಿ 5,000 ಮತ್ತು 6,000 ದಷ್ಟು ಮಾರಾಟವನ್ನು ಸಾಧಿಸುತ್ತಿದೆ. ಈ ಮುಖಾಂತರ ಒಟ್ಟಾರೆಯಾಗಿ ಇವೆರಡು 40,000 ಯುನಿಟ್ ಗಳ ಮಾರಾಟ ಸಂಖ್ಯೆಯನ್ನು ದಾಟಿದೆ.

ಮಾರುತಿ ಹೈಬ್ರಿಡ್ ಕಾರುಗಳಿಗೆ ಭಾರಿ ಬೇಡಿಕೆ

ಇದು ಸಿಯಾಝ್ ಮತ್ತು ಎರ್ಟಿಗಾದ ಒಟ್ಟು ಮಾರಾಟದ ಅನುಕ್ರಮವಾಗಿ ಶೇಕಡಾ 58 ಮತ್ತು 57ರಷ್ಟಾಗಿದೆ ಎಂದು ಸಂಸ್ಥೆಯು ಬಹಿರಂಗಪಡಿಸಿದೆ.

ಮಾರುತಿ ಹೈಬ್ರಿಡ್ ಕಾರುಗಳಿಗೆ ಭಾರಿ ಬೇಡಿಕೆ

ಕೈಗೆಟುಕುವ ದರಗಳಲ್ಲಿ ಹೈಬ್ರಿಡ್ ಕಾರುಗಳು ಗ್ರಾಹಕರನ್ನು ತಲುಪುತ್ತಿರುವುದು ಸಂತೋಷದಾಯಕ ವಿಚಾರವಾಗಿದೆ. ಈ ಮುಖಾಂತರ ಎಂಜಿನ್ ಕ್ಷಮತೆ ಕಾಪಾಡಿಕೊಳ್ಳುವುದರೊಂದಿಗೆ, ಮಾಲಿನ್ಯ ಮಟ್ಟ ಕಾಪಾಡಿಕೊಳ್ಳಲು ನೆರವಾಗುತ್ತಿದೆ.

ಮಾರುತಿ ಹೈಬ್ರಿಡ್ ಕಾರುಗಳಿಗೆ ಭಾರಿ ಬೇಡಿಕೆ

ಇನ್ನೊಂದೆಡೆ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳಿಗೆ ಫೇಮ್ ಯೋಜನೆಯಡಿಯಲ್ಲಿ (Faster Adoption and Manufacturing of Electric vehicles) ಕೇಂದ್ರ ಸರಕಾರವು ಸಬ್ಸಿಡಿಯನ್ನು ನೀಡುತ್ತಿರುವುದು ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆ ಮಾಡಲು ಸಹಕಾರಿಯಾಗಿದೆ.

ಮಾರುತಿ ಹೈಬ್ರಿಡ್ ಕಾರುಗಳಿಗೆ ಭಾರಿ ಬೇಡಿಕೆ

ದೇಶದ ಅತ್ಯುತ್ತಮ ಮೈಲೇಜ್ ಕಾರೆನಿಸಿಕೊಳ್ಳಲಿರುವ ಸಿಯಾಝ್ ಹೈಬ್ರಿಡ್ ಕಾರು ಪ್ರತಿ ಲೀಟರ್‌ಗೆ 28 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಅಲ್ಲದೆ 1.3 ಲೀಟರ್ ಡೀಸೆಲ್ ಎಂಜಿನ್ ಆಳವಡಿಸಲಾಗಿದೆ.

ಮಾರುತಿ ಹೈಬ್ರಿಡ್ ಕಾರುಗಳಿಗೆ ಭಾರಿ ಬೇಡಿಕೆ

ಅದೇ ಹೊತ್ತಿಗೆ ಎರ್ಟಿಗಾ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳು ಪ್ರತಿ ಲೀಟರ್ ಗೆ ಅನುಕ್ರಮವಾಗಿ 17.5 ಮತ್ತು 24.52 ಕೀ.ಮೀ. ಮೈಲೇಜ್ ನೀಡಲಿದೆ.

Article Published On: Friday, April 1, 2016, 17:22 [IST]
English summary
Over 40,000 Maruti SHVS cars sold in 4 months
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+