ರಿಕ್ಷಾ ಏರಿದ ಪ್ರಧಾನಿ; ಓಲಾ ಇ-ರಿಕ್ಷಾಗಳಿಗೆ ಚಾಲನೆ

By Nagaraja

ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪರಿಸರ ಸ್ನೇಹಿ ಇ-ರಿಕ್ಷಾಗಳಿಗೆ ಚಾಲನೆ ನೀಡಿದ್ದಾರೆ. 'ಪ್ರಧಾನ್ ಮಂತ್ರಿ ಮುದ್ರ' ಯೋಜನೆಯಡಿಯಲ್ಲಿ ನೂತನ 'ಸ್ಟ್ಯಾಂಡ್ ಅಪ್ ಇಂಡಿಯಾ' ಅಭಿಯಾನದ ಸಮಾರಂಭದಲ್ಲಿ ಇ-ರಿಕ್ಷಾಗಳನ್ನು ಸಮರ್ಪಿಸಲಾಗಿದೆ.

ನೋಯ್ಡಾದಲ್ಲಿ ನಡೆದ ಕಾರ್ಯಕ್ರಮದ ವೇಳೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ ಬಳಿಕ ರಿಕ್ಷಾವನ್ನು ಏರಿದ್ದರು. ನೂತನ ಇ-ರಿಕ್ಷಾ ಸೇವೆಯು ಓಲಾ ಸಂಸ್ಥೆಯ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದೆ.

ರಿಕ್ಷಾ ಏರಿದ ಪ್ರಧಾನಿ ಮೋದಿ; ಓಲಾ ಇ-ರಿಕ್ಷಾಗಳಿಗೆ ಚಾಲನೆ

ಇದೇ ಸಂದರ್ಭದಲ್ಲಿ ಮೊದಲ ಓಲಾ ಇ-ರಿಕ್ಷಾವನ್ನು ಪ್ರಧಾನ ಮಂತ್ರಿ ಮೊಬೈಲ್ ನಲ್ಲಿ ಬುಕ್ ಮಾಡುವ ಮೂಲಕ ಗಮನ ಸೆಳೆದರು.

ರಿಕ್ಷಾ ಏರಿದ ಪ್ರಧಾನಿ ಮೋದಿ; ಓಲಾ ಇ-ರಿಕ್ಷಾಗಳಿಗೆ ಚಾಲನೆ

ಮುಂಬರುವ ದಿನಗಳಲ್ಲಿ ಇ-ರಿಕ್ಷಾ ಸೇವೆಯು ಸಣ್ಣ ಸಣ್ಣ ನಗರಗಳಲ್ಲಿ ಪರ್ಯಾಯ ಸಂಚಾರ ವ್ಯವಸ್ಥೆಯಾಗಲಿದೆ. ಈಗ ಪ್ರಯಾಣಿಕರು ಓಲಾ ಮೊಬೈಲ್ ಆಪ್ ಮುಖಾಂತರ ಇ-ರಿಕ್ಷಾವನ್ನು ಆರ್ಡರ್ ಮಾಡಬಹುದಾಗಿದೆ.

ರಿಕ್ಷಾ ಏರಿದ ಪ್ರಧಾನಿ ಮೋದಿ; ಓಲಾ ಇ-ರಿಕ್ಷಾಗಳಿಗೆ ಚಾಲನೆ

ಭಾರತೀಯ ಮೈಕ್ರೊ ಕ್ರೆಡಿಟ್ ಜೊತೆಗಾರಿಕೆಯಲ್ಲಿ 5,100ರಷ್ಟು ಇ-ರಿಕ್ಷಾಗಳನ್ನು ಬಿಡುಗಡೆಗೊಳಿಸಲಾಗಿದ್ದು, ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಉಪನಗರಗಳಾದ ಗುರ್ಗಾಂವ್, ನೋಯ್ಡಾ, ಫರಿದಾಬಾದ್ ಮತ್ತು ಗಾಝಿಯಾಬಾದ್ ನಲ್ಲಿ ಸೇವೆ ಆರಂಭಿಸಲಾಗಿದೆ.

ರಿಕ್ಷಾ ಏರಿದ ಪ್ರಧಾನಿ ಮೋದಿ; ಓಲಾ ಇ-ರಿಕ್ಷಾಗಳಿಗೆ ಚಾಲನೆ

ಈ ವೇಳೆಯಲ್ಲಿ ತಮ್ಮ ಹೊಟ್ಟೆಪಾಡಿಗಾಗಿ ದೈನಂದಿನ ಬದುಕಿನಲ್ಲಿ ಕಷ್ಟಪಡುತ್ತಿರುವ 5,100 ಬಡ ಕುಟುಂಬದವರಿಗೆ ಇ-ರಿಕ್ಷಾಗಳ ಕೀಲಿಯನ್ನು ಹಸ್ತಾಂತರಿಸಲಾಯಿತು.

ರಿಕ್ಷಾ ಏರಿದ ಪ್ರಧಾನಿ ಮೋದಿ; ಓಲಾ ಇ-ರಿಕ್ಷಾಗಳಿಗೆ ಚಾಲನೆ

ಇ-ರಿಕ್ಷಾಗಳಲ್ಲಿ ಆಳವಡಿಸಲಾಗಿರುವ ಬ್ಯಾಟರಿಗಳನ್ನು ಸೌರ ಶಕ್ತಿ ಬಳಕೆ ಮಾಡುವ ಮೂಖಾಂತರವೂ ಚಾರ್ಜ್ ಮಾಡಿಸಬಹುದಾಗಿದೆ.

ರಿಕ್ಷಾ ಏರಿದ ಪ್ರಧಾನಿ ಮೋದಿ; ಓಲಾ ಇ-ರಿಕ್ಷಾಗಳಿಗೆ ಚಾಲನೆ

ಪ್ರಸ್ತುತ ಇ-ರಿಕ್ಷಾ ಸೇವೆಯು ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ದೇಶದ ಇತರ ನಗರಗಳಿಗೂ ವ್ಯಾಪಿಸಲಿದೆ.

ರಿಕ್ಷಾ ಏರಿದ ಪ್ರಧಾನಿ ಮೋದಿ; ಓಲಾ ಇ-ರಿಕ್ಷಾಗಳಿಗೆ ಚಾಲನೆ

ಪ್ರಸ್ತುತ ಪ್ರತಿ ಎರಡು ಕೀ.ಮೀ.ಗಳ ಸಂಚಾರಕ್ಕೆ 25 ರು. ಶುಲ್ಕವನ್ನು ನಿಗಪಡಿಸಲಾಗಿದ್ದು, ನಂತರದ ಪ್ರತಿ ಕೀ.ಮೀ.ಗೆ 8 ರು. ದರ ವಿಧಿಸಲಾಗುತ್ತದೆ. ನಿಮ್ಮ ಮಾಹಿತಿಗಾಗಿ, ಓಲಾ ಸಂಸ್ಥೆಯು ದೇಶದಲ್ಲಿ 80,000ದಷ್ಟು ರಿಕ್ಷಾಗಳೊಂದಿಗೆ ತನ್ನ ಜಾಲವನ್ನು ವಿಸ್ತರಿಸಿದೆ.

Article Published On: Wednesday, April 6, 2016, 18:25 [IST]
English summary
PM Narendra Modi launches E rickshaw services in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+