ಸಮುದ್ರ ಮಟ್ಟಕ್ಕಿಂತ 13 ಸಾವಿರ ಅಡಿ ಎತ್ತರದಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ

ರೋಹಟಂಗ್ ಪಾಸ್ ನಲ್ಲಿ ವಾಹನ ಸಂಚಾರ ಮಾಡುವುದು ಅಷ್ಟು ಸುಲಭದ ವಿಚಾರವಲ್ಲ. ಈ ನಡುವೆ ಎಲೆಕ್ಟ್ರಿಕ್ ಬಸ್ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ.

By Nagaraja

ಕಾರು, ಬೈಕ್ ಸವಾರಿಯಲ್ಲಿ ಅತೀವ ಕ್ರೇಜ್ ಇರುವವರು ಹೆಚ್ಚಾಗಿ ಘಾಟಿ ಪ್ರದೇಶವನ್ನು ಆಯ್ಕೆ ಮಾಡುತ್ತಾರೆ. ನಮ್ಮ ಕರ್ನಾಟಕದಲ್ಲಿ ಶಿರಾಡಿ ಘಾಟಿ, ಆಗುಂಬೆ, ಚಾರ್ಮಾಡಿ ಹೀಗೆ ಹಲವಾರು ಕಡೆ ಸಾಹಸ ಟ್ರಿಪ್ ಗಳನ್ನು ಹೊರಡಬಹುದಾಗಿದೆ. ಇಂಥದ್ದರಲ್ಲಿ ಅಲ್ಲಿ ದೂರದ ಹಿಮಾಲಚಲ ಪ್ರದೇಶದ ರೋಹಟಂಗ್ ಪಾಸ್ ನಲ್ಲಿ ಎಲೆಕ್ಟ್ರಿಕ್ ಬಸ್ ಪರೀಕ್ಷೆಗಿಳಿಯುವ ಮೂಲಕ ಅಚ್ಚರಿ ಮೂಡಿಸಿದೆ.

ಸಮುದ್ರ ಮಟ್ಟಕ್ಕಿಂತ 13 ಸಾವಿರ ಅಡಿ ಎತ್ತರದಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ

ಗಗನಕ್ಕೆ ತಲುಪಿದ ಹಾಗೆಯೇ ಸಮುದ್ರ ಮಟ್ಟಕ್ಕಿಂತ 13 ಸಾವಿರ ಅಡಿ ಎತ್ತರದಲ್ಲಿರುವ ರೋಹಟಂಗ್ ಪಾಸ್, ವಿಶ್ವದ ಅತಿ ಎತ್ತರದ ವಾಹನ ಸಂಚಾರ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ ಗಾಡಿ ಓಡಿಸಲು ಕೌಶಲ್ಯಗಿಂತಲೂ ಹೆಚ್ಚಾಗಿ ಧಮ್ ಇದ್ದೇ ಇರಬೇಕು.

ಸಮುದ್ರ ಮಟ್ಟಕ್ಕಿಂತ 13 ಸಾವಿರ ಅಡಿ ಎತ್ತರದಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ

ಸಮುದ್ರ ಮಟ್ಟದಿಂದ 13,050 ಅಡಿ ಎತ್ತರದಲ್ಲಿರುವ ರೋಹಟಂಗ್ ಪಾಸ್ ನಲ್ಲಿ ಹಿಮಾಚಲ ಸಾರಿಗೆ ಇಲಾಖೆಯು ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್ಸುಗಳ ಪರೀಕ್ಷೆಯನ್ನು ನಡೆಸಿದೆ.

ಸಮುದ್ರ ಮಟ್ಟಕ್ಕಿಂತ 13 ಸಾವಿರ ಅಡಿ ಎತ್ತರದಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ

ಹಾಗಿದ್ದರೂ ಎಲೆಕ್ಟ್ರಿಕ್ ಬಸ್ಸುಗಳ ಗ್ರೌಂಡ್ ಕ್ಲಿಯರನ್ಸ್ ಇನ್ನು ಹಿಮಾಲಯ ಪರ್ವತ ಪ್ರದೇಶಗಳ ರಸ್ತೆಗಳಲ್ಲಿ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಮೂಲಗಳು ತಿಳಿಸಿವೆ.

ಸಮುದ್ರ ಮಟ್ಟಕ್ಕಿಂತ 13 ಸಾವಿರ ಅಡಿ ಎತ್ತರದಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ

ಮಾನಾಲಿ ಮತ್ತು ರೋಹಟಂಗ್ ಪ್ರದೇಶದಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ಮಹತ್ತರ ಯೋಜನೆಯನ್ನು ಹಿಮಾಚಲ ಪ್ರದೇಶ ಸಾರಿಗೆ ಇಲಾಖೆಯು ಹೊಂದಿದೆ. ಈ ನಿಟ್ಟಿನಲ್ಲಿ ಕಠಿಣ ಚಾಲನಾ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗುತ್ತಿದೆ.

ಸಮುದ್ರ ಮಟ್ಟಕ್ಕಿಂತ 13 ಸಾವಿರ ಅಡಿ ಎತ್ತರದಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ

ಇದರೊಂದಿಗೆ 13,050 ಅಡಿ ಎತ್ತರದಲ್ಲಿ ವಿದ್ಯುತ್ ಚಾಲಿತ ಬಸ್ಸನ್ನು ಓಡಿಸಿದ ದೇಶದ ಮೊದಲ ರಾಜ್ಯವೆಂಬ ಹೆಗ್ಗಳಿಕೆಗೆ ಹಿಮಾಚಲ ಪ್ರದೇಶ ಪಾತ್ರವಾಗಿದೆ.

ಸಮುದ್ರ ಮಟ್ಟಕ್ಕಿಂತ 13 ಸಾವಿರ ಅಡಿ ಎತ್ತರದಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ

ಪರೀಕ್ಷಾರ್ಥ ಚಾಲನೆ ಪರೀಕ್ಷೆಯ ವೇಳೆ ಅನೇಕ ಸವಾಲುಗಳು ಎದುರಾಗಿದ್ದವು. ಮಾನಾಲಿಯಿಂದ ರೋಹಟಂಗ್ ವರೆಗಿನ 50 ಕೀ.ಮೀ. ದೂರದ ಯಾತ್ರೆಯಲ್ಲಿ 40 ಮಂದಿ ಪ್ರಯಾಣಿಯಕರನ್ನು ಹೊತ್ತೊಯ್ಯಲಾಗಿತ್ತು.

ಸಮುದ್ರ ಮಟ್ಟಕ್ಕಿಂತ 13 ಸಾವಿರ ಅಡಿ ಎತ್ತರದಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ

ಈ ದೂರವನ್ನು ತಲುಪಲು ಶೇಕಡಾ 28ರಿಂದ 30ರಷ್ಟು ಬ್ಯಾಟರಿ ವ್ಯಯವಾಗಿದೆ. ಇನ್ನು ಒಂದೆರಡು ಸಂಸ್ಥೆಗಳು ಪ್ರಾಯೋಗಿಕ ಸಂಚಾರವನ್ನು ನಡೆಸಲಿದ್ದು, ಗ್ರೌಂಡ್ ಕ್ಲಿಯರನ್ಸ್ ಹೆಚ್ಚಿಸುವಂತೆ ಹಿಮಾಚಲ ಪ್ರದೇಶ ಸಾರಿಗೆ ಇಲಾಖೆಯು ಸೂಚನೆ ನೀಡಿದೆ.

ಸಮುದ್ರ ಮಟ್ಟಕ್ಕಿಂತ 13 ಸಾವಿರ ಅಡಿ ಎತ್ತರದಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ

ಪೆಟ್ರೋಲ್ ಹಾಗೂ ಡೀಸೆಲ್ ಚಾಲಿತ ವಾಹನಗಳಿಗೆ ಬದಲಿ ಪರ್ಯಾಯ ವ್ಯವಸ್ಥೆಯನ್ನು ಹುಡುಕಲಾಗುತ್ತಿದೆ. ಸದ್ಯ 25 ಎಲೆಕ್ಟ್ರಿಕ್ ಬಸ್ಸುಗಳನ್ನು ರಸ್ತೆಗಿಳಿಸುವ ಯೋಜನೆಯನ್ನು ಹೊಂದಲಾಗಿದೆ.

ಇವನ್ನೂ ಓದಿ

ಇವನ್ನೂ ಓದಿ

ದೇಶದ ಶ್ರೇಷ್ಠ ಚಾಲಕರು ಯಾವ ರಾಜ್ಯದವರು ?

More from DriveSpark

Article Published On: Monday, October 24, 2016, 16:43 [IST]
English summary
Rohtang Witnesses Its First Trial Of Electric Buses
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+