ಸಚಿನ್ ದಿವ್ಯ ಹಸ್ತಗಳನ್ನು ಸ್ಪರ್ಶಿಸಿದ ಬಿಎಂಡಬ್ಲ್ಯು
'ಕ್ರಿಕೆಟ್ ದೇವರು' ಎಂದೇ ಪ್ರೀತಿ ಪಾತ್ರವಾಗಿರುವ ಮಾಜಿ ಭಾರತೀಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, 2016 ಆಟೋ ಎಕ್ಸ್ ಪೋದಲ್ಲಿ ಜರ್ಮನಿಯ ಐಕಾನಿಕ್ ಬಿಎಂಡಬ್ಲ್ಯು ಸಂಸ್ಥೆಯ ಪರವಾಗಿ ಭಾಗವಹಿಸಿರುವುದು ಈ ಅತಿ ದೊಡ್ಡ ವಾಹನ ಪ್ರದರ್ಶನ ಮೇಳಕ್ಕೆ ಮತ್ತಷ್ಟು ಮೆರಗು ತುಂಬುವಂತಾಗಿತ್ತು.
ಬಿಎಂಡಬ್ಲ್ಯು ಮುಖ್ಯ ಪ್ರಚಾರ ರಾಯಭಾರಿ ಕೂಡಾ ಆಗಿರುವ ಸಚಿನ್ ಅವರ ದಿವ್ಯ ಹಸ್ತಗಳನ್ನು ಸ್ಪರ್ಶಿಸುವ ಅದೃಷ್ಟ ಬಿಎಂಡಬ್ಲ್ಯು ಕಾರುಗಳಿಗೆ ಲಭ್ಯವಾಗಿತ್ತು. ಈ ವೇಳೆಯಲ್ಲಿ ಬಿಎಂಡಬ್ಲ್ಯು ಅತಿ ದುಬಾರಿ 7 ಸಿರೀಸ್ ಹಾಗೂ ಎಕ್ಸ್1 ಕಾರುಗಳನ್ನು ಲೀಟ್ಲ್ ಮಾಸ್ಟರ್ ಬಿಡುಗಡೆ ಮಾಡಿದರು.

ಬಿಎಂಡಬ್ಲ್ಯು 7 ಸಿರೀಸ್ ಸಂಪೂರ್ಣ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಬಿಎಂಡಬ್ಲ್ಯು 730ಎಲ್‌ಡಿ ಡಿಸೈನ್ ಪ್ಯೂರ್ ಎಕ್ಸೆಲೆನ್ಸ್: 1.11 ಕೋಟಿ ರು.
ಬಿಎಂಡಬ್ಲ್ಯು 730ಎಲ್‌ಡಿ ಎಂ ಸ್ಪೋರ್ಟ್: 1.19 ಕೋಟಿ ರು.
ಬಿಎಂಡಬ್ಲ್ಯು 730ಎಲ್‌ಡಿ ಡಿಸೈನ್ ಪ್ಯೂರ್ ಎಕ್ಸೆಲೆನ್ಸ್ (ಸಿಬಿಯು): 1.40 ಕೋಟಿ ರು.
ಬಿಎಂಡಬ್ಲ್ಯು 730ಎಲ್‌ಐ ಡಿಸೈನ್ ಪ್ಯೂರ್ ಎಕ್ಸೆಲೆನ್ಸ್ (ಸಿಬಿಯು): 1.50 ಕೋಟಿ ರು.
ಬಿಎಂಡಬ್ಲ್ಯು 750ಎಲ್‌ಐ ಎಂ ಸ್ಪೋರ್ಟ್ (ಸಿಬಿಯು): 1.55 ಕೋಟಿ ರು.
ಎಂಜಿನ್ ಮತ್ತು ಗೇರ್ ಬಾಕ್ಸ್
3 ಲೀಟರ್ ಸ್ಟ್ರೈಟ್ ಸಿಕ್ಸ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್,
265 ಅಶ್ವಶಕ್ತಿ (4000 ಆರ್‌ಪಿಎಂ)
620 ಎನ್‌ಎಂ ತಿರುಗುಬಲ (2000-5000 ಆರ್‌ಪಿಎಂ)
ವೇಗವರ್ಧನೆ
ಗಂಟೆಗೆ 0-100 ಕೀ.ಮೀ.: 6.1 ಸೆಕಂಡು
ಗರಿಷ್ಠ ವೇಗ: ಗಂಟೆಗೆ 250 ಕೀ.ಮೀ.
4.4 ಲೀಟರ್ ಟ್ವಿನ್ ಟರ್ಬೊ ವಿ8
450 ಅಶ್ವಶಕ್ತಿ (5,500-6,000 ಆರ್‌ಪಿಎಂ)
650 ಎನ್‌ಎಂ ತಿರುಗುಬಲ (1800-4500)
ವೇಗವರ್ಧನೆ
ಗಂಟೆಗೆ 0-100 ಕೀ.ಮೀ.: 4.4 ಸೆಕಂಡು
ಗರಿಷ್ಠ ವೇಗ: ಗಂಟೆಗೆ 250 ಕೀ.ಮೀ.
ಗೇರ್ ಬಾಕ್ಸ್: 8 ಸ್ಪೀಡ್
ಪ್ರತಿಸ್ಪರ್ಧಿಗಳು: ಮರ್ಸಿಡಿಸ್ ಎಸ್ ಕ್ಲಾಸ್, ಆಡಿ ಎ8ಎಲ್

ಬಿಎಂಡಬ್ಲ್ಯು ಎಕ್ಸ್1 (ದೆಹಲಿ ಎಕ್ಸ್ ಶೋ ರೂಂ ಬೆಲೆ)
ಬಿಎಂಡಬ್ಲ್ಯು ಎಕ್ಸ್1 ಎಸ್‌ಡ್ರೈವ್20ಡಿ ಎಕ್ಸ್ಪೆಡಿಶನ್: 29.90 ಲಕ್ಷ ರು.
ಬಿಎಂಡಬ್ಲ್ಯು ಎಕ್ಸ್1 ಎಸ್‌ಡ್ರೈವ್20ಡಿ ಎಕ್ಸ್ ಲೈನ್: 33.90 ಲಕ್ಷ ರು.
ಬಿಎಂಡಬ್ಲ್ಯು ಎಕ್ಸ್1 ಎಕ್ಸ್ ಡ್ರೈವ್20ಡಿ ಎಕ್ಸ್ ಲೈನ್: 35.90 ಲಕ್ಷ ರು.
ಬಿಎಂಡಬ್ಲ್ಯು ಎಕ್ಸ್1 ಎಕ್ಸ್ ಡ್ರೈವ್20ಡಿ ಎಂ ಸ್ಪೋರ್ಟ್: 39.90 ಲಕ್ಷ ರು.
ಎಂಜಿನ್ ತಾಂತ್ರಿಕತೆ
2.0 ಲೀಟರ್ ಡೀಸೆಲ್
188 ಅಶ್ವಶಕ್ತಿ (4000 ಆರ್‌ಪಿಎಂ)
400 ಎನ್‌ಎಂ ತಿರುಗುಬಲ (1750-2500 ಆರ್‌ಪಿಎಂ)
ಗೇರ್ ಬಾಕ್ಸ್: 8 ಸ್ಪೀಡ್ ಸ್ಟೆಪ್ ಟ್ರಾನಿಕ್ ಆಮೋಟ್ಯಾಟಿಕ್.
ವೇಗವರ್ಧನೆ
ಗಂಟೆಗೆ 0-100 ಕೀ.ಮೀ.: 7.6 ಸೆಕೆಂಡು
ಗರಿಷ್ಠ ವೇಗ: ಗಂಟೆಗೆ 219 ಕೀ.ಮೀ.
ಮೈಲೇಜ್: 20.8 ಕೀ.ಮೀ.


Click it and Unblock the Notifications




























