ಮಾರುತಿ ವಿಟಾರಾ ಬ್ರಿಝಾ ಟೆಸ್ಟಿಂಗ್ ವೇಳೆ ಲೀಕ್

By Nagaraja

ಭಾರತದಲ್ಲಿ ನಡೆಯಲಿರುವ ಮುಂದಿನ 'ಮಹಾ' ಬಿಡುಗಡೆ ಎಂದೇ ವಿಶ್ಲೇಷಿಸಲಾಗುತ್ತಿರುವ ಅತಿ ನೂತನ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಪ್ರಯೋಗಾರ್ಥ ಪರೀಕ್ಷೆ ನಡೆಸುತ್ತಿರುವ ವೇಳೆ ಕ್ಯಾಮೆರಾಗಳ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿವೆ.

Also Read: 2016 ಆಟೋ ಎಕ್ಸ್‌ಪೋ; ಗೇರ್ ಬದಲಾಯಿಸಿದ ಹೋಂಡಾ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನೂತನ ವಿಟಾರಾ ಬ್ರಿಝಾ ಚಿತ್ರಗಳು ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಪ್ರಭಾವವನ್ನುಂಟು ಮಾಡಿದೆ. ಈ ಬಹುನಿರೀಕ್ಷಿತ ಕಾರು ಮುಂದಿನ ತಿಂಗಳಲ್ಲಿ ನಡೆಯಲಿರುವ 2016 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ.

ಮಾರುತಿ ವಿಟಾರಾ ಬ್ರಿಝಾ ಟೆಸ್ಟಿಂಗ್ ವೇಳೆ ಲೀಕ್

ವಿಟಾರಾ ಬ್ರಿಝಾ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿಯಿಂದ ಬಿಡುಗಡೆಯಾಗಿರುವ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವಾಗಿರಲಿದೆ.

ಚಿತ್ರಕೃಪೆ: GaadiWaadi.com
ಮಾರುತಿ ವಿಟಾರಾ ಬ್ರಿಝಾ ಟೆಸ್ಟಿಂಗ್ ವೇಳೆ ಲೀಕ್

ಈಗ ಬಂದಿರುವ ರಹಸ್ಯ ಚಿತ್ರಗಳಂತೆ ಮುಂದುಗಡೆ ವಿಶಿಷ್ಟತೆ ಕಾಪಾಡಿಕೊಂಡಿರುವ ಮಾರುತಿ ವಿಟಾರಾ ಬ್ರಿಝಾ ಸಣ್ಣದಾದ ಹೆಡ್ ಲ್ಯಾಂಪ್ ಹಾಗೂ ಎಲ್‌ಇಡಿ ಡೇಟೈಮ್ ರನ್ನಿಂಗ್ಸ್ ಲೈಟ್ಸ್ ಹಾಗೂ ವೃತ್ತಾಕಾರಾದ ಫಾಗ್ ಲ್ಯಾಂಪ್ ಪಡೆದುಕೊಂಡಿದೆ.

ಚಿತ್ರಕೃಪೆ: GaadiWaadi.com
ಮಾರುತಿ ವಿಟಾರಾ ಬ್ರಿಝಾ ಟೆಸ್ಟಿಂಗ್ ವೇಳೆ ಲೀಕ್

ನೂತನ ವಿಟಾರಾ ಬ್ರಿಝಾ, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಬ್ರೇಕಿಂಗ್ ಡಿಸ್ಟ್ರಿಬ್ಯೂಷನ್ ಹಾಗೂ ಡ್ಯುಯಲ್ ಏರ್ ಬ್ಯಾಗ್ ಗಳಂತಹ ಆಧುನಿಕ ಭದ್ರತಾ ವ್ಯವಸ್ಥೆಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಳ್ಳುವ ಸಾಧ್ಯತೆಯಿದೆ.

ಚಿತ್ರಕೃಪೆ: GaadiWaadi.com
ಮಾರುತಿ ವಿಟಾರಾ ಬ್ರಿಝಾ ಟೆಸ್ಟಿಂಗ್ ವೇಳೆ ಲೀಕ್

ಇನ್ನುಳಿದಂತೆ ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಜೊತೆ ಪಾರ್ಕಿಂಗ್ ಕ್ಯಾಮೆರಾ, ಟಚ್ ಸ್ಕ್ರೀನ್ ಸ್ಮಾರ್ಟ್ ಪ್ಲೇ ಮನರಂಜನಾ ವ್ಯವಸ್ಥೆ, ಕೀಲೆಸ್ ಎಂಟ್ರಿ, ಪುಶ್ ಬಟನ್ ಸ್ಟ್ಯಾರ್ಟ್, ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್ ಹಾಗೂ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಪ್ರಮುಖ ವೈಶಿಷ್ಟ್ಯವಾಗಿರಲಿದೆ.

ಚಿತ್ರಕೃಪೆ: GaadiWaadi.com
ಮಾರುತಿ ವಿಟಾರಾ ಬ್ರಿಝಾ ಟೆಸ್ಟಿಂಗ್ ವೇಳೆ ಲೀಕ್

ನೂತನ ಮಾರುತಿ ಸುಜುಕಿ ವಿಟಾರಾ ಬ್ರಿಝಾ 1.3 ಲೀಟರ್ ಡಿಡಿಐಎಸ್ ಡೀಸೆಲ್ ಹಾಗೂ 1.2 ಲೀಟರ್ ಕೆ ಸಿರೀಸ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸ್ಪಡುವ ಸಾದ್ಯತೆಯಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಚಿತ್ರಕೃಪೆ: IndianAutosBlog.com
ಮಾರುತಿ ವಿಟಾರಾ ಬ್ರಿಝಾ ಟೆಸ್ಟಿಂಗ್ ವೇಳೆ ಲೀಕ್

ಅದೇ ಹೊತ್ತಿಗೆ ವಿಟಾರಾ ಬ್ರಿಝಾ ಡೀಸೆಲ್ ಮಾದರಿಯಲ್ಲಿ ಸುಜುಕಿಯ ನಾವೀನ್ಯ ಹೈಬ್ರಿಡ್ ತಂತ್ರಜ್ಞಾನ (ಎಸ್‌ಎಚ್‌ವಿಎಸ್) ಆಳವಡಿಕೆಯಾಗಲಿದೆಯೇ ಎಂಬುದಕ್ಕೆ ಸ್ಪಷ್ಟನೆ ಲಭಿಸಿಲ್ಲ.

ಚಿತ್ರಕೃಪೆ: IndianAutosBlog.com

ಮಾರುತಿ ವಿಟಾರಾ ಬ್ರಿಝಾ ಟೆಸ್ಟಿಂಗ್ ವೇಳೆ ಲೀಕ್

ದೇಶದ ವಾಹನ ಮಾರುಕಟ್ಟೆಯಲ್ಲಿ ಮಹೀಂದ್ರ ಟಿಯುವಿ300 ಹಾಗೂ ಫೋರ್ಡ್ ಇಕೊಸ್ಪೋರ್ಟ್ ಗಳಂತಹ ಮಾದರಿಗಳಿಗೆ ನೂತನ ವಿಟಾರಾ ಬ್ರಿಝಾ ಪ್ರತಿಸ್ಪರ್ಧಿಯಾಗಲಿದೆ.

ಚಿತ್ರಕೃಪೆ: IndianAutosBlog.com
ಮಾರುತಿ ವಿಟಾರಾ ಬ್ರಿಝಾ ಟೆಸ್ಟಿಂಗ್ ವೇಳೆ ಲೀಕ್

ಮಗದೊಂದು ಗಮನಾರ್ಹ ಅಂಶವೆಂದರೆ ಮಾರುತಿ ಹೊಸದಾಗಿ ಆರಂಭಿಸಿರುವ ನೆಕ್ಸಾ ಡೀಲರ್ ಶಿಪ್ ಗಳ ಬದಲು ಈಗಿರುವ ಸಾಮಾನ್ಯ ಮಾರುತಿ ಡೀಲರ್ ಗಳಿಂದಲೇ ವಿಟಾರಾ ಮಾರಾಟ ನಡೆಯಲಿದೆ. ಪ್ರಸ್ತುತ ನೆಕ್ಸಾ ಮುಖಾಂತರ ಎಸ್ ಕ್ರಾಸ್ ಹಾಗೂ ಬಲೆನೊ ಮಾದರಿಗಳನ್ನು ಮಾರಾಟ ಮಾಡಲಾಗುತ್ತಿದೆ.

ಚಿತ್ರಕೃಪೆ: IndianAutosBlog.com
ಇವನ್ನೂ ಓದಿ

ಏಳು ಸೀಟುಗಳ ವ್ಯಾಗನಾರ್ ಎಂಪಿವಿ ಭಾರತಕ್ಕೆ

Article Published On: Thursday, January 14, 2016, 14:40 [IST]
English summary
Spied: Maruti Suzuki Vitara Brezza Spotted Testing
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+