ಹೊಸ ವರ್ಷದಲ್ಲಿ ದುಬಾರಿಯಾದ 11 ಕಾರು ಸಂಸ್ಥೆಗಳು
2015 ವರ್ಷಾಂತ್ಯದ ವೇಳೆಯಲ್ಲಿ ನಾನಾ ರೀತಿ ಆಫರ್ ಗಳನ್ನು ಮುಂದಿಟ್ಟಿರುವ ವಾಹನ ಸಂಸ್ಥೆಗಳೀಗ ಹೊಸ ವರ್ಷ ಆಗಮನವಾಗಿರುವಂತೆಯೇ ಬೆಲೆ ಏರಿಕೆ ನೀತಿಯನ್ನು ಅನುಸರಿಸಿವೆ. ಇದರಿಂದ ಹೊಸ ವರ್ಷದಲ್ಲಿ ನೂತನ ಕಾರು ಖರೀದಿಸುವ ಯೋಜನೆಗಳಿಗೆ ಸ್ವಲ್ಪ ಹಿನ್ನಡೆಯಾಗಿದೆ.
Also Read: ಮುಂಬರುವ ಕಾರುಗಳು
ದೇಶದ ಮುಂಚೂಣಿಯ ವಾಹನ ಸಂಸ್ಥೆಗಳು ಶೇಕಡಾ 2ರಿಂದ 3ರಷ್ಟು ಬೆಲೆ ಏರಿಕೆಯನ್ನು ಘೋಷಿಸಿವೆ. ನಿರ್ಮಾಣ ವೆಚ್ಚ ಹೆಚ್ಚಾಗಿರುವುದರಿಂದ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಸಂಸ್ಥೆಗಳು ಸ್ಪಷ್ಟನೆ ನೀಡಿವೆ. ಪ್ರಸ್ತುತ ಲೇಖನದಲ್ಲಿ ಬೆಲೆ ಏರಿಕೆಗೊಳಿಸಿರುವ ಅಗ್ರ 11 ವಾಹನ ಸಂಸ್ಥೆಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ.

ಬಿಎಂಡಬ್ಲ್ಯು
ಜರ್ಮನಿಯ ಐಷಾರಾಮಿ ಕಾರು ಸಂಸ್ಥೆಯಾಗಿರುವ ಬಿಎಂಡಬ್ಲ್ಯು ತನ್ನೆಲ್ಲ ಶ್ರೇಣಿಯ ಕಾರುಗಳಿಗೆ ಶೇಕಡಾ 3ರಷ್ಟು ಬೆಲೆ ಏರಿಕೆಗೊಳಿಸಿದೆ. ಇದು ಬಿಎಂಡಬ್ಲ್ಯುಅಧೀನತೆಯಲ್ಲಿರುವ ಮಿನಿ ಕಾರುಗಳಿಗೂ ಅನ್ವಯವಾಗಲಿದೆ.

ಮರ್ಸಿಡಿಸ್ ಬೆಂಝ್
ಬಿಎಂಡಬ್ಲ್ಯು ಅದೇ ನೀತಿ ಅನುಸರಿಸಿರುವ ಜರ್ಮನಿಯ ಮಗದೊಂದು ಲಗ್ಷುರಿ ಸಂಸ್ಥೆ ಮರ್ಸಿಡಿಸ್ ಬೆಂಝ್ ಶೇಕಡಾ 2ರಷ್ಟು ಬೆಲೆ ಏರಿಕೆಗೊಳಿಸಿದೆ.

ಷೆವರ್ಲೆ
ಜನರಲ್ ಮೋಟಾರ್ಸ್ ಅಧೀನತೆಯಲ್ಲಿರುವ ಷೆವರ್ಲೆ ಶ್ರೇಣಿಯ ಕಾರುಗಳಿಗೆ ಶೇಕಡಾ 2ರಷ್ಟು ಬೆಲೆ ಏರಿಕೆಗೊಂಡಿದೆ. ಆದರೆ ಈ ಬೆಲೆ ಏರಿಕೆ ನೀತಿಯು ಟ್ರೈಲ್ ಬ್ಲೇಜರ್ ಮಾದರಿಗೆ ಅನ್ವಯವಾಗುವುದಿಲ್ಲ.

ಫೋರ್ಡ್
ಅಮೆರಿಕದ ಮಗದೊಂದು ವಾಹನ ಸಂಸ್ಥೆ ಫೋರ್ಡ್ ಕೂಡಾ ಇದಕ್ಕೆ ಸಮಾನವಾದ ನೀತಿಯನ್ನು ಅನುಸರಿಸಿದ್ದು, ಶೇಕಡಾ 2ರಷ್ಟು ಬೆಲೆ ಏರಿಕೆಗೊಳಿಸಿದೆ.

ಸ್ಕೋಡಾ
ಸ್ಕೋಡಾ ಸಂಸ್ಥೆಯು ಇದರಿಂದ ಹೊರತಾಗಿಲ್ಲ. ಅದ ಹಾಗೆ ಸ್ಕೋಡಾ ಕಾರುಗಳಿಗೆ ದೇಶದಲ್ಲಿ ಶೇಕಡಾ 2ರಿಂದ 3ರಷ್ಟು ಬೆಲೆ ಹೆಚ್ಚಳಗೊಂಡಿದೆ.

ರೆನೊ, ನಿಸ್ಸಾನ್
ರೆನೊ, ನಿಸ್ಸಾನ್ ಕಾರುಗಳಿಗೂ ಭಾರತದಲ್ಲೇ ಶೇಕಡಾ 3ರಷ್ಟು ಬಿಸಿ ತಗುಲಿದೆ. ಅಂದರೆ ರೆನೊದ ಜನಪ್ರಿಯ ಎಸ್‌ಯುವಿ ಡಸ್ಟರ್‌ಗೆ 20,000 ರು.ಗಳ ವರೆಗೆ ಬೆಲೆ ಏರಿಕೆಯಾಗಲಿದೆ.

ಟೊಯೊಟಾ
ಅತ್ತ ಟೊಯೊಟಾ ಸಂಸ್ಥೆಯು ಶೇಕಡಾ 3ರಷ್ಟು ಬೆಲೆ ಏರಿಕೆಯನ್ನು ಘೋಷಿಸಿದೆ.

ಮಾರುತಿ ಸುಜುಕಿ
ದೇಶದ ನಂ.1 ಪ್ರಯಾಣಿಕ ಕಾರು ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಮಾರುತಿ ಸುಜುಕಿ ಸಹ ನಿರ್ಮಾಣ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತನ್ನೆಲ್ಲ ಶ್ರೇಣಿಯ ವಾಹನಗಳಿಗೆ 20,000 ರು.ಗಳ ವರೆಗೆ ಬೆಲೆ ಏರಿಕೆಗೊಳಿಸಿದೆ.

ಟಾಟಾ ಮೋಟಾರ್ಸ್
ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ಸಹ 20,000 ರು.ಗಳ ವರೆಗೆ ಬೆಲೆ ಏರಿಕೆಯನ್ನು ಪ್ರಕಟಿಸಿದೆ.

ಹ್ಯುಂಡೈ
ದಕ್ಷಿಣ ಕೊರಿಯಾದ ಹ್ಯುಂಡೈ ಸಂಸ್ಥೆಯು ತನ್ನೆಲ್ಲ ಶ್ರೇಣಿಯ ಕಾರುಗಳಿಗೆ 30,000 ರು.ಗಳ ವರೆಗೆ ಬೆಲೆ ಏರಿಕೆಗೊಳಿಸಿದೆ.

ಹೋಂಡಾ
ಜಪಾನ್ ಮೂಲದ ಹೋಂಡಾ ಸಂಸ್ಥೆಯು ಸಹ ಬೆಲೆ ಏರಿಕೆ ನೀತಿಯನ್ನು ಘೋಷಿಸಿದ್ದು, ಹೊಸ ವರ್ಷದಿಂದ ಹೋಂಡಾ ಕಾರುಗಳು ಗರಿಷ್ಠ 16,000 ರು.ಗಳ ವರೆಗೆ ದುಬಾರಿಯೆನಿಸಲಿದೆ.


Click it and Unblock the Notifications








