ಕಾರುಗಳ ಹಬ್ಬ; ಪ್ರಸಕ್ತ ಸಾಲಿನಲ್ಲಿ 20 ಕಾರುಗಳ ಬಿಡುಗಡೆ

By Nagaraja

ರಾಷ್ಟ್ರ ರಾಜಧಾನಿ ನವದಹಲಿಯಲ್ಲಿ ಸಾಗಿದ ದೇಶದ ಅತಿ ದೊಡ್ಡ 2016 ಆಟೋ ಎಕ್ಸ್ ಪೋದಲ್ಲಿ ಬಹುತೇಕ ಸಂಸ್ಥೆಗಳು ಅನೇಕ ನೂತನ ವಾಹನಗಳನ್ನು ಪ್ರದರ್ಶಿಸಿದ್ದವು. ಇವುಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾಗಲಿರುವ ಕಾರುಗಳು ಅತಿ ಹೆಚ್ಚಿನ ಕುತೂಹಲಕ್ಕೆ ಪಾತ್ರವಾಗಿದ್ದವು.

ಪ್ರಸಕ್ತ ಸಾಲಿನಲ್ಲೇ ರಸ್ತೆಗೆ ಪ್ರವೇಶಿಸಲಿರುವ 20 ಕಾರುಗಳು ಯಾವುವು? ಎಂಬುದನ್ನು ತಿಳಿಯುವ ಹಂಬಲ ನಿಮ್ಮಲ್ಲೂ ಇರಬಹುದು. ಇವೆಲ್ಲದರ ಉತ್ತರಕ್ಕಾಗಿ ಚಿತ್ರಪುಟದತ್ತ ಸಾಗಿರಿ.

01. ಮಾರುತಿ ವಿಟಾರಾ ಬ್ರಿಝಾ

01. ಮಾರುತಿ ವಿಟಾರಾ ಬ್ರಿಝಾ

ನಾಲ್ಕು ಮೀಟರ್ ಉದ್ದ ಪರಿಧಿಯೊಳಗೆ ನಿರ್ಮಾಣವಾಗಲಿರುವ ಮಾರುತಿ ವಿಟಾರಾ ಬ್ರಿಝಾ 2016ನೇ ಸಾಲಿನಲ್ಲಿ ಬಿಡುಗಡೆಯಾಗಲಿರುವ ಅತಿ ದೊಡ್ಡ ಬಿಡುಗಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಈ ಮೂಲಕ ಸಣ್ಣ ಕಾರು ವಿಭಾಗಗಳಿಂದ ಮಾರುತಿ ನಿಧಾನವಾಗಿ ಕ್ರೀಡಾ ಬಳಕೆಯ ವಾಹನಗಳ ನಿರ್ಮಾಣದತ್ತವೂ ಗಮನ ಕೇಂದ್ರಿಕರಿಸುತ್ತಿದ್ದು, ಗರಿಷ್ಠ ಮಾರಾಟವನ್ನು ಗುರಿಯಾರಿಸಿಕೊಂಡಿದೆ.

02. ಮಾರುತಿ ಇಗ್ನಿಸ್

02. ಮಾರುತಿ ಇಗ್ನಿಸ್

ಈ ಮೊದಲೇ ತಿಳಿಸಿರುವಂತೆಯೇ ದೇಶದ ವಾಹನ ಇತಿಹಾಸ ಪುಟದಲ್ಲಿ ಹೊಸ ಅಧ್ಯಾಯ ತೆರೆದುಕೊಳ್ಳಲಿರುವ ಮಾರುತಿ ಇಗ್ನಿಸ್ ಕಾನ್ಸೆಪ್ಟ್ ಕ್ರಾಸೋವರ್ ಕಾರನ್ನು ಅನಾವರಣಗೊಳಿಸಿತ್ತು. ಅಲ್ಲದೆ ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಮಾರುತಿ ಇಗ್ನಿಸ್ ಭಾರಿ ಸದ್ದು ಮಾಡುವ ನಿರೀಕ್ಷೆಯಿದೆ.

03. ಮಾರುತಿ ಬಲೆನೊ ಆರ್ ಎಸ್

03. ಮಾರುತಿ ಬಲೆನೊ ಆರ್ ಎಸ್

ಮಾರುತಿಯ ಬಲೆನೊ ಈಗಾಗಲೇ ಮಾರುಕಟ್ಟೆಯಲ್ಲಿದ್ದು, ಇದರ ಶಕ್ತಿಶಾಲಿ ಆರ್ ಎಸ್ ಆವೃತ್ತಿಯೂ ಅತಿ ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಇದು 1.0 ಲೀಟರ್ ಬೂಸ್ಟರ್ ಜೆಟ್ ಡೈರಕ್ಟ್ ಇಂಜೆಕ್ಷನ್ ಟರ್ಬೊ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, ಟಾಪ್ ಎಂಡ್ ಆಲ್ಪಾ ವೆರಿಯಂಟ್ ನಲ್ಲಿ ಲಭ್ಯವಾಗಲಿದೆ.

04. ಹ್ಯುಂಡೈ ಟಕ್ಸನ್

04. ಹ್ಯುಂಡೈ ಟಕ್ಸನ್

ಒಂದು ಪರಿಪೂರ್ಣ ಎಸ್‍‌ಯುವಿಯ ಕೊರತೆಯನ್ನು ನೀಗಿಸಲಿರುವ ಹ್ಯುಂಡೈ ಟಕ್ಸನ್ ಈಗಾಗಲೇ 2015 ಜಿನೆವಾ ಮೋಟಾರು ಶೋ ಸೇರಿದಂತೆ ಅನೇಕ ಆಟೋ ಶೋಗಳಲ್ಲಿ ತನ್ನ ಸಾನಿಧ್ಯವನ್ನು ಮೆರೆದಿದೆ. ಅಲ್ಲದೆ ಬಹುಬೇಗನೇ ಭಾರತೀಯ ರಸ್ತೆಗೂ ಪ್ರವೇಶಿಸುವ ಇರಾದೆಯನ್ನು ಹೊಂದಿದೆ.

05. ಹೋಂಡಾ ಬಿಆರ್ ವಿ

05. ಹೋಂಡಾ ಬಿಆರ್ ವಿ

ಈ ನಡುವೆ ಹೋಂಡಾ ಅಧಿಕೃತ ವೆಬ್ ಸೈಟ್ ಗೂ ಕಾಲಿರಿಸಿರುವ ಬಿಆರ್ ವಿ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನದ ಮೇಲೆ ವಾಹನ ಪ್ರೇಮಿಗಳು ಅತಿ ಹೆಚ್ಚು ನಂಬಿಕೆಯನ್ನಿರಿಸಿಕೊಂಡಿದ್ದಾರೆ. ಗುಣಮಟ್ಟತೆ ಹಾಗೂ ಅತ್ಯುತ್ತಮ ಎಂಜಿನ್ ಗಳಿಗೆ ಹೆಸರುವಾಸಿಯಾಗಿರುವ ಹೋಂಡಾ ಬಿಆರ್ ವಿ ದೇಶದಲ್ಲಿ ಮೋಡಿ ಮಾಡಿತೇ ಎಂಬುದನ್ನು ಕಾದು ನೋಡಬೇಕಾಗಿದೆ.

06. ಹೋಂಡಾ ಅಕಾರ್ಡ್

06. ಹೋಂಡಾ ಅಕಾರ್ಡ್

ಪ್ರೀಮಿಯಂ ಸೆಡಾನ್ ವಿಭಾಗದಲ್ಲಿ ಹೋಂಡಾ ಅಕಾರ್ಡ್ ಹೊಸ ಅನುಭವವಾಗಲಿದೆ. ಅಂದ ಹಾಗೆ ಹೋಂಡಾ ಅಕಾರ್ಡ್ ಹೈಬ್ರಿಡ್ ರೂಪ ಪಡೆಯಲಿದೆಯೇ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭ್ಯವಾಗಲಿದೆ.

07. ಟಾಟಾ ಝಿಕಾ

07. ಟಾಟಾ ಝಿಕಾ

ಖ್ಯಾತ ಫುಟ್ಬಾಲಿಗ ಲಿಯೊನೆಲ್ ಮೆಸ್ಸಿ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಳಿಸಿದ ಬಳಿಕ ಟಾಟಾ ಮೋಟಾರ್ಸ್ ಬಿಡುಗಡೆ ಮಾಡಲಿರುವ ಮೊದಲ ಕಾರು ಇದಾಗಿದೆ. ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಇದು ಟಾಟಾ ಮೇಲಿನ ಕಪ್ಪು ಚುಕ್ಕೆಯನ್ನು ನಿವಾರಣೆ ಮಾಡುವ ನಂಬಿಕೆಯಿದೆ.

08. ಟಾಟಾ ಹೆಕ್ಸಾ

08. ಟಾಟಾ ಹೆಕ್ಸಾ

ದೊಡ್ಡ ಕುಟುಂಬದಲ್ಲಿರುವ ಎಲ್ಲ ಸದ್ಯಸರಿಗೂ ಒಟ್ಟಾಗಿ ಸಂಚರಿಸಲು ಟಾಟಾ ಹೆಕ್ಸಾ ನೆರವಾಗಲಿದೆ. ಟಾಟಾ ಆರಿಯಾ ತಳಹದಿಯಲ್ಲಿ ನಿರ್ಮಾಣವಾಗುತ್ತಿರುವ ಹೆಕ್ಸಾ, ಪ್ರೀಮಿಯಂ ಕಾರು ವಿಭಾಗದಲ್ಲಿ ಛಾಪು ಮೂಡಿಸಲಿದೆ.

09. ಇನ್ನೋವಾ ಕ್ರೈಸ್ಟಾ

09. ಇನ್ನೋವಾ ಕ್ರೈಸ್ಟಾ

ಬದಲಾದ ಪರಿಸ್ಥಿತಿಯಲ್ಲಿ ತಾಜಾತನ ತುಂಬಿರುವ ಇನ್ನೋವಾ, 'ಕ್ರೈಸ್ಟಾ' ಎಂಬ ಹೊಸ ನಾಮಕರಣದೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

10. ಫೋಕ್ಸ್ ವ್ಯಾಗನ್ ಎಮಿಯೊ

10. ಫೋಕ್ಸ್ ವ್ಯಾಗನ್ ಎಮಿಯೊ

ಈಗಾಗಲೇ ಭರ್ಜರಿ ಅನಾವರಣ ಕಂಡಿರುವ ಫೋಕ್ಸ್ ವ್ಯಾಗನ್ ಎಮಿಯೊ ಮುಂದಿನ ದಿನಗಳಲ್ಲಿ ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲಿ ಹೊಸ ಅಲೆಯೆಬ್ಬಿಸುವ ಸಾಧ್ಯತೆಯಿದೆ.

11. ಜೀಪ್ ಗ್ರಾಂಡ್ ಚೆರೋಕೀ ಎಸ್‌ಆರ್‌ಟಿ

11. ಜೀಪ್ ಗ್ರಾಂಡ್ ಚೆರೋಕೀ ಎಸ್‌ಆರ್‌ಟಿ

ಕೊನೆಗೂ ಭಾರತೀಯ ವಾಹನ ಮಾರುಕಟ್ಟೆಗೆ ಎಂಟ್ರಿ ಕೊಡಲು ಸಜ್ಜಾಗಿರುವ ಜೀಪ್ ಗ್ರಾಂಡ್ ಚೆರೋಕೀ ಎಸ್‌ಆರ್‌ಟಿ, ಪ್ರೀಮಿಯಂ ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ಹೊಸತನವನ್ನುಂಟು ಮಾಡಲಿದೆ.

12. ರೆನೊ ಡಸ್ಟರ್ ಎಎಂಟಿ

12. ರೆನೊ ಡಸ್ಟರ್ ಎಎಂಟಿ

ಡಸ್ಟರ್ ಯಶಸ್ಸಿನ ಬಳಿಕ ನಗರ ಪ್ರದೇಶದ ನಿವಾಸಿಗಳಿಗಾಗಿ ಡಸ್ಟರ್ ಎಎಂಟಿ ಮಾದರಿಯನ್ನು ಬಿಡುಗಡೆ ಮಾಡಲು ರೆನೊ ಸಜ್ಜಾಗುತ್ತಿದೆ. ಇದು ಗಮನಾರ್ಹ ಬದಲಾವಣೆಗಳನ್ನು ಪಡೆಯಲಿದೆ.

13. ರೆನೊ ಕ್ವಿಡ್ ಎಎಂಟಿ ಮತ್ತು 1.0 ಲೀಟರ್ ಆವೃತ್ತಿ

13. ರೆನೊ ಕ್ವಿಡ್ ಎಎಂಟಿ ಮತ್ತು 1.0 ಲೀಟರ್ ಆವೃತ್ತಿ

ಶಕ್ತಿಶಾಲಿ ಕ್ವಿಡ್ 1.0 ಲೀಟರ್ ಜೊತೆಗೆ ಎಎಂಟಿ ಆವೃತ್ತಿಯೂ ಸಣ್ಣ ಕಾರು ವಿಭಾಗದಲ್ಲಿ ಮಾರುತಿಗೆ ಪ್ರಬಲ ಪ್ರತಿಸ್ಪರ್ಧೆಯನ್ನು ಒಡ್ಡಲು ರೆನೊಗೆ ನೆರವಾಗಲಿದೆ.

14. ನಿಸ್ಸಾನ್ ಎಕ್ಸ್ ಟ್ರೈಲ್

14. ನಿಸ್ಸಾನ್ ಎಕ್ಸ್ ಟ್ರೈಲ್

ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಮನ ಮೆಚ್ಚಿದ ಮಾದರಿಗಳಲ್ಲಿ ನಿಸ್ಸಾನ್ ಎಕ್ಸ್ ಟ್ರೈಲ್ ಕೂಡಾ ಒಂದಾಗಿತ್ತು. ಇದು ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ಭರ್ಜರಿ ಪುನರಾಗಮನ ಮಾಡಿಕೊಳ್ಳಲು ನಿಸ್ಸಾನ್ ಗೆ ನೆರವಾಗಲಿದೆ.

15. ನಿಸ್ಸಾನ್ ಜಿಟಿಆರ್

15. ನಿಸ್ಸಾನ್ ಜಿಟಿಆರ್

ವಿಸ್ತಾರವಾಗಿ ಹರಡಿರುವ ಭಾರತೀಯ ವಾಹನ ಮಾರುಕಟ್ಟೆಗೆ ನಿಸ್ಸಾನ್ ನೀಡುತ್ತಿರುವ ಪ್ರಾಮುಖ್ಯತೆಗೆ ಜಿಟಿಆರ್ ಆಗಮನವು ತೋರಿಸಿ ಕೊಡುತ್ತಿದೆ. ಪ್ರಸ್ತುತ ಜಿಟಿಆರ್ ಆಗಮನದೊಂದಿಗೆ ದೇಶದಲ್ಲಿ ನಿಸ್ಸಾನ್ ಪ್ರತಿಷ್ಠೆಯೂ ಇಮ್ಮಡಿಯಾಗಲಿದೆ.

16. ಸ್ಕೋಡಾ ಸೂಪರ್ಬ್

16. ಸ್ಕೋಡಾ ಸೂಪರ್ಬ್

ಮಾರಾಟಗಿಂತಲೂ ಮಿಗಿಲಾಗಿ ಗುಣಮಟ್ಟದ ಕಾರುಗಳನ್ನು ನಿರ್ಮಿಸುವುದರಲ್ಲಿ ಹೆಚ್ಚು ಮಗ್ನವಾಗಿರುವ ಸ್ಕೋಡಾ ಪ್ರಸ್ತಕ್ತ ಸಾಲಿನಲ್ಲೇ ಹೊಸ ಸೂಪರ್ಬ್ ಮಾದರಿಯನ್ನು ದೇಶಕ್ಕೆ ಪರಿಚಯಿಸಲಿದೆ.

17. ಫೋರ್ಡ್ ಮಸ್ಟಾಂಗ್

17. ಫೋರ್ಡ್ ಮಸ್ಟಾಂಗ್

ಅಮೆರಿಕ ಮೂಲದ ಐಕಾನಿಕ್ ಫೋರ್ಡ್ ಮಸ್ಟಾಂಗ್ ಆಗಮನದೊಂದಿಗೆ ಭಾರತದ ವಾಹನಗಳ ಬಲ ಇಮ್ಮಡಿಯಾಗಲಿದೆ. ಈ ಮುಖಾಂತರ ಸ್ಪರ್ಧಾತ್ಮಕ ಪೈಪೋಟಿಗೂ ವೇದಿಕೆಯಾಗಲಿದೆ.

18. ಟೊಯೊಟಾ ಪ್ರಯಸ್

18. ಟೊಯೊಟಾ ಪ್ರಯಸ್

ಇನ್ನೋವಾ ಕ್ರೈಸ್ಟಾ ಬಳಿಕ 2016ರಲ್ಲೇ ಟೊಯೊಟಾ ಬಿಡುಗಡೆ ಮಾಡಲಿರುವ ಮಗದೊಂದು ಜನಪ್ರಿಯ ಕಾರು ಪ್ರಯಸ್ ಆಗಿರಲಿದೆ.

19. ಫೋಕ್ಸ್ ವ್ಯಾಗನ್ ಟೈಗನ್

19. ಫೋಕ್ಸ್ ವ್ಯಾಗನ್ ಟೈಗನ್

ಪ್ರತಿಸ್ಪರ್ಧಿಗಳ ಸಾಲು ಸಾಲು ಕಾರುಗಳ ಬಿಡುಗಡೆಯೊಂದಿಗೆ ಎಚ್ಚೆತ್ತುಕೊಂಡಿರುವ ಪೋಕ್ಸ್ ವ್ಯಾಗನ್, ಜಾಗತಿಕ ಮಟ್ಟದಲ್ಲಿ ಮಾರಾಟದಲ್ಲಿರುವ ಟೈಗನ್ ಕಾರನ್ನು ದೇಶಕ್ಕೆ ಪರಿಚಯಿಸಲು ಯೋಜನೆ ಸಿದ್ಧಪಡಿಸುತ್ತಿದೆ.

20. ದಟ್ಸನ್ ರೆಡಿ ಗೊ

20. ದಟ್ಸನ್ ರೆಡಿ ಗೊ

2014 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ದಟ್ಸನ್ ರೆಡಿ ಗೊ ಇನ್ನೇನು ಕೆಲವೇ ತಿಂಗಳೊಳಗೆ ದೇಶದ ರಸ್ತೆ ಪ್ರವೇಶಿಸುವುದಂತೂ ಗ್ಯಾರಂಟಿ.

More from DriveSpark

Article Published On: Friday, February 19, 2016, 10:26 [IST]
English summary
Umcoming car launches in India
Read more on ಕಾರು cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+