ಮುಂಬರುವ ಫೇಸ್‌ಲಿಫ್ಟ್ ಕಾರುಗಳು; ಯಾವುದು ಖರೀದಿಗೆ ಯೋಗ್ಯ?
ಆಧುನಿಕ ಕಾಲಘಟ್ಟದಲ್ಲಿ ಬಿಡುಗಡೆಯಾದ ಒಂದೆರಡು ವರ್ಷಗಳ ಒಳಗಡೆಯಲ್ಲೇ ತನ್ನ ಮಾದರಿಯ ತಾಜಾತನವನ್ನು ಉಳಿಸಿಕೊಳ್ಳಲು ಬಹುತೇಕ ವಾಹನ ತಯಾರಿಕ ಸಂಸ್ಥೆಗಳು ಪರಿಷ್ಕೃತ ಮಾದರಿಗಳನ್ನು ಬಿಡುಗೊಳಿಸುತ್ತಿದೆ. ಸಮಕಾಲೀನ ಮಾರುಕಟ್ಟೆಯಲ್ಲಿ ಭಾರತದಲ್ಲೂ ಈ ಪ್ರಕ್ರಿಯೆ ಬಹಳ ಜೋರಾಗಿ ಕಂಡುಬರುತ್ತಿದೆ.
ಈ ಸಂಬಂಧ ನಿಖರ ಮಾಹಿತಿಯನ್ನು ಕಲೆ ಹಾಕಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವು 2016 ಹಾಗೂ 2017ರಲ್ಲಿ ಬಿಡುಗಡೆಯಾಗಲಿರುವ ಕೆಲವು ಫೇಸ್ ಲಿಫ್ಟ್ ಮಾದರಿಗಳ ಬಗ್ಗೆ ಮಾಹಿತಿಯನ್ನು ಕೊಡುವ ಪ್ರಯತ್ನ ಮಾಡಲಿದ್ದೇವೆ.

ಷೆವರ್ಲೆ ಬೀಟ್ ಆಕ್ಟಿವ್
ಅಮೆರಿಕದ ಜನರಲ್ ಮೋಟಾರ್ಸ್ ಸಮಸ್ಥೆಯು ತನ್ನ ಚಿಕ್ಕ ಕಾರು ಷೆವರ್ಲೆ ಬೀಟ್ ಗೆ ಹೊಸ ಸ್ವರೂಪವನ್ನು ಕಲ್ಪಿಸುತ್ತಿದ್ದು, ಷೆವರ್ಲೆ ಬೀಟ್ ಆಕ್ಟಿವ್ ಎಂದೆನಿಸಿಕೊಳ್ಳಲಿದೆ. ಇದು ಜೋಡಿ ಬಣ್ಣಗಳೊಂದಿಗೆ ಹೆಚ್ಚು ಕ್ರೀಡಾತ್ಮಕ ವೈಶಿಷ್ಟ್ಯಗಳಿಗೆ ಆದ್ಯತೆ ಕೊಡಲಾಗಿದೆ. ಇನ್ನುಳಿದಂದೆ ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್, ಸ್ಕಿಡ್ ಪ್ಲೇಟ್, ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಪ್ರಮುಖ ಆಕರ್ಷಣೆಯಾಗಿರಲಿದ್ದು, 1.2 ಲೀಟರ್ ಪೆಟ್ರೋಲ್ ಮತ್ತು 1.3 ಡೀಸೆಲ್ ಎಂಜಿನ್ ಗಳು ಇದರಲ್ಲಿರಲಿದೆ.
ಅಂದಾಜು ಬೆಲೆ: 4ರಿಂದ 6.5 ಲಕ್ಷ ರು.

ಹೋಂಡಾ ಸಿಆರ್-ವಿ
ಇದುವರೆಗೆ ಪೆಟ್ರೋಲ್ ಎಂಜಿನ್ ಆಯ್ಕೆ ಮಾತ್ರ ಲಭ್ಯವಾಗಿದ್ದ ಹೋಂಡಾ ಸಿಆರ್-ವಿ ಈಗ ದೇಶದಲ್ಲಿ ವಾಹನ ಉತ್ಸಾಹಗಳನ್ನು ಗಮನದಲ್ಲಿಟ್ಟುಕೊಂಡು ನೂತನ ಡೀಸೆಲ್ ಪಡೆಯಲಿದೆ. ಆಗಲೇ ಅಮೇಜ್, ಮೊಬಿಲಿಯೊ, ಸಿಟಿ ಡೀಸೆಲ್ ಎಂಜಿನ್ ಗಳ ಮೂಲಕ ಗಮನ ಸೆಳೆದಿರುವ ಹೋಂಡಾ ಈಗ ಸಿಆರ್-ವಿಯಲ್ಲೂ ಹೆಚ್ಚಿನಮಾರಾಟ ಗಿಟ್ಟಿಸಿಕೊಳ್ಳುವ ಇರಾದೆಯಲ್ಲಿದೆ. ಇದು 2.0 ಲೀಟರ್ ಮತ್ತು 2.4 ಲೀಟರ್ ಪೆಟ್ರೋಲ್ ಜೊತೆಗೆ ಹೊಸತಾದ 1.6 ಲೀಟರ್ ಡೀಸೆಲ್ ಎಂಜಿನ್ ಪಡೆಯಲಿದೆ.
ಅಂದಾಜು ಬೆಲೆ: 21ರಿಂದ 25 ಲಕ್ಷ ರು.

ಹೋಂಡಾ ಬ್ರಿಯೊ
ಮಾರುಕಟ್ಟೆಯಲ್ಲಿ ಕಳೆಗುಂದಿರುವ ಬ್ರಿಯೊ ಹ್ಯಾಚ್ ಬ್ಯಾಕ್ ಮಾದರಿಗೆ ಉತ್ತೇಜನ ನೀಡಲು ಮುಂದಾಗಿರುವ ಹೋಂಡಾ, ಎಲ್ಲ ಹೊಸತನದಿಂದ ಕೂಡಿದ ಬ್ರಿಯೊ ಕಾರನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಆಧುನಿಕತೆಗೆ ತಕ್ಕಂತೆ ಟ್ರೆಂಡಿ ಸ್ಪೋರ್ಟಿ ಲುಕ್ ಇದು ಕಾಪಾಡಿಕೊಳ್ಳಲಿದೆ.
ಅಂದಾಜು ಬೆಲೆ: 5ರಿಂದ 8 ಲಕ್ಷ ರು.

ಹ್ಯುಂಡೈ ಟಕ್ಸನ್
ಕ್ರೀಡಾ ಬಳಕೆಯ ವಾಹನಕ್ಕೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಟಕ್ಸನ್ ಮಾದರಿಗಳನ್ನು ಬಿಡುಗಡೆ ಮಾಡಲು ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಜ್ಜಾಗುತ್ತಿದೆ. ಇದರ ಮುಂದುವರಿದ ಬೆಳವಣಿಗೆಯಂತೆಯೇ ಫ್ಯೂಯಿಡಿಕ್ 2.0 ವಿನ್ಯಾಸ ತತ್ವಶಾಸ್ತ್ರವನ್ನು ಹೊಂದಿರು ಟಕ್ಸನ್ ಟೆಸ್ಟಿಂಗ್ ವೇಳೆ ಸೆರೆ ಹಿಡಿಯಲಾಗಿತ್ತು. ಕ್ರೆಟಾ ಮತ್ತು ಸಾಂಟಾಫೆ ನಡುವೆ ಗುರುತಿಸಿಕೊಳ್ಳಲಿರುವ ಟಕ್ಸನ್ 1.4 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.0 ಪೆಟ್ರೋಲ್ ಡೀಸೆಲ್ ಎಂಜಿನ್ ಪಡೆಯುವ ಸಾಧ್ಯತೆಯಿದೆ.
ಅಂದಾಜು ಬೆಲೆ: 17ರಿಂದ 22 ಲಕ್ಷ ರು.

ಟೊಯೊಟಾ ಫಾರ್ಚ್ಯುನರ್
ಈಗಷ್ಟೇ ನೂತನ ಇನ್ನೋವಾ ಕ್ರೈಸ್ಟಾ ಪರಿಚಯಿಸಿರುವ ಜಪಾನ್ ಮೂಲದ ಟೊಯೊಟಾ ಸಂಸ್ಥೆಯು ತನ್ನ ಪ್ರೀಮಿಯಂ ಎಸ್‌ಯುವಿ ಫಾರ್ಚ್ಯುನರ್ ಕಾರಿಗೂ ಹೊಸ ಲುಕ್ ನೀಡುವ ಇರಾದೆಯಲ್ಲಿದೆ. ಇದು 2.4 ಲೀಟರ್ ಮತ್ತು 2.8 ಲೀಟರ್ ಡೀಸೆಲ್ ಎಂಜಿನ್ ಪಡೆಯುವ ಸಾಧ್ಯತೆಯಿದೆ.
ಅಂದಾಜು ಬೆಲೆ: 24ರಿಂದ 27 ಲಕ್ಷ ರು.

ಹೋಂಡಾ ಅಕಾರ್ಡ್
ತನ್ನ ಶ್ರೇಣಿಯ ವಾಹನಗಳನ್ನು ವಿಸ್ತರಿಸುವ ಯೋಜನೆಯಲ್ಲಿರುವ ಹೋಂಡಾ, ಸಿಟಿ, ಬ್ರಿಯೊ, ಅಮೇಜ್, ಮೊಬಿಲಿಯೊ, ಬಿಆರ್-ವಿ ಬಳಿಕವೀಗ ಹೆಚ್ಚು ಪ್ರೀಮಿಯಂ ಸೌಲಭ್ಯಗಳ ಅಕಾರ್ಡ್ ಮಾದರಿಯನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಒಂಬತ್ತನೇ ತಲೆಮಾರಿನ ಹೋಂಡಾ ಅಕಾರ್ಡ್ ಪ್ರಸಕ್ತ ಸಾಲಿನಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದ್ದು, 2.0 ಹಾಗೂ 2.4 ಲೀಟರ್ ಪೆಟ್ರೋಲ್ ಎಂಜಿನ್ ನೊಂದಿಗೆ 2.2 ಲೀಟರ್ ಡೀಸೆಲ್ ಪಡೆಯುವ ಸಾಧ್ಯತೆಯಿದೆ.
ಅಂದಾಜು ಬೆಲೆ: 23ರಿಂದ 26 ಲಕ್ಷ ರು.

ರೆನೊ ಡಸ್ಟರ್ ಏಳು ಸೀಟು
ಆಗಲೇ ಪರಿಷ್ಕೃತ ಡಸ್ಟರ್ ಮಾದರಿಯನ್ನು ಪರಿಚಯಿಸಿರುವ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು, ಏಳು ಸೀಟುಗಳ ಆವೃತ್ತಿಯನ್ನು ಬಿಡುಗಡೆ ಮಾಡುವ ಇರಾದೆಯಲ್ಲಿದೆ. ಅಂದರೆ ಪರಿಷ್ಕೃತ ಡಸ್ಟರ್ ಗೆ ಮೂರನೇ ಸಾಲಿನ ಆಸನ ವ್ಯವಸ್ಥೆಯು ಜೋಡಣೆ ಮಾಡಲಾಗುವುದು. ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದು 1.5 ಲೀಟರ್ ಡೀಸೆಲ್ ಮತ್ತು 1.6 ಲೀಟರ್ ಪೆಟ್ರೋಲ್ ಎಂಜಿನ್ ಗಳಿಂದ ನಿಯಂತ್ರಿಸ್ಪಡಲಿದೆ.

ಸ್ಯಾಂಗ್ಯೊಂಗ್ ರೆಕ್ಸ್ಟಾನ್
ಸ್ಯಾಂಗ್ಯೊಂಗ್ ಜೊತೆ ಪಾಲುದಾರಿಕೆ ಹೊಂದಿರುವ ದೇಶದ ಎಸ್‌ಯುವಿ ದೈತ್ಯ ಮಹೀಂದ್ರ ಆಂಡ್ ಮಹೀಂದ್ರ, ನೂತನ ರೆಕ್ಸ್ಟಾನ್ ಕ್ರೀಡಾ ಬಳಕೆಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಇದರಲ್ಲಿರುವ 2696 ಸಿಸಿ ಡೀಸೆಲ್ ಎಂಜಿನ್ 162 ಹಾಗೂ 184 ಅಶ್ವಶಕ್ತಿಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಸ್ಕೋಡಾ ರಾಪಿಡ್
ಗುಣಮಟ್ಟದ ಕಾರುಗಳನ್ನು ಪರಿಚಯಿಸುವುದರಲ್ಲಿ ಹೆಸರು ಮಾಡಿರುವ ಸ್ಕೋಡಾ, ನೂತನ ರಾಪಿಡ್ ಸೆಡಾನ್ ಕಾರನ್ನು ಭಾರತಕ್ಕೆ ಪರಿಚಯಿಸಲಿದೆ. ಇದು ಪ್ರೀಮಿಯಂ ಗ್ರಾಹಕರಿಗೆ ಹೊಸ ಅನುಭೂತಿಯನ್ನು ನೀಡಲಿದೆ.

ನಿಸ್ಸಾನ್ ಎಕ್ಸ್ ಟ್ರೈಲ್
ಈಗಾಗಲೇ 2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಳಿಸಿರುವ ನಿಸ್ಸಾನ್ ಎಕ್ಸ್ ಟ್ರೈಲ್ ಭಾರತಕ್ಕೆ ಎಂಟ್ರಿ ಕೊಡಲಿದೆ. ಆದರೆ ಇದು ಹೈಬ್ರಿಡ್ ಅಥವಾ ಸಾಮಾನ್ಯ ಆವೃತ್ತಿಯನ್ನು ಪಡೆಯಲಿದೆಯೇ ಎಂಬುದು ಕುತೂಹಲ ಮೂಡಿಸಿದೆ. ಪ್ರೀಮಿಯಂ ಎಸ್ ಯುವಿ ವಿಭಾಗದಲ್ಲಿ ತನ್ನ ಶಕ್ತಿ ಪ್ರದರ್ಶಕ್ಕೆ ನಿಸ್ಸಾನ್ ಗೆ ನೆರವಾಗಲಿದೆ.

ಮಾರುತಿ ಸುಜುಕಿ ಸ್ವಿಫ್ಟ್
ದೇಶದ ಅತ್ಯುತ್ತಮ ಹ್ಯಾಚ್ ಬ್ಯಾಕ್ ಕಾರುಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ಸ್ವಿಫ್ಟ್, ತಾಜಾತನದೊಂದಿಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಪಡೆಯಲಿದೆ. ಪರಿಷ್ಕೃತ ಸ್ವಿಫ್ಟ್ ಮಾರಾಟಕ್ಕೆ ಉತ್ತೇಜನ ನೀಡಲಿದ್ದು, ಮಾರುತಿ ಸಾನಿಧ್ಯನವನ್ನು ಮತ್ತಷ್ಟು ಗಟ್ಟಿಪಡಿಸಲಿದೆ.


Click it and Unblock the Notifications








