ತಾಳಿರಿ ಸ್ವಲ್ಪ ಬರುತಲಿವೆ ಹೊಸ ಹೊಸ ಅಂದವಾದ ಮಾರುತಿ ಕಾರುಗಳು!

By Nagaraja

ಕೈಗೆಟುಕುವ ಬೆಲೆ, ಕಡಿಮೆ ನಿರ್ವಹಣಾ ವೆಚ್ಚ, ಆರಾಮ ಮತ್ತು ಅನುಕೂಲದಲ್ಲೂ ಪರಿಣಾಮಕಾರಿ ಎನಿಸಿಕೊಂಡಿರುವ ಮಾರುತಿ ಕಾರುಗಳು ದೇಶದ ಗ್ರಾಹಕರ ಮೊದಲ ಆಯ್ಕೆಯಾಗಿರುತ್ತದೆ. ದೇಶದೆಲ್ಲೆಡೆ ಬಹುಬೇಗನೇ ಬಿಡಿಭಾಗಗಳ ಲಭ್ಯತೆಯು ಸಹ ಮಾರುತಿ ಕಾರುಗಳನ್ನು ಖರೀದಿಸಲು ಅನೇಕರನ್ನು ಹುರಿದುಂಬಿಸುತ್ತಿದೆ.

ಪ್ರಯಾಣಿಕ ಕಾರುಗಳಲ್ಲಿ ಅಗ್ರಸ್ಥಾನ ಗಿಟ್ಟಿಸಿಕೊಂಡಿರುವ ಮಾರುತಿ, ಇತ್ತೀಚೆಗಿನ ಸಮಯಗಳಲ್ಲಿ ಬಲೆನೊ, ಎಸ್ ಕ್ರಾಸ್, ಬ್ರಿಝಾಗಳಂತಹ ಉಪಯುಕ್ತ ವಾಹನಗಳಲ್ಲೂ ತನ್ನ ಸಾನಿಧ್ಯ ಮೆರೆದಿತ್ತು. ಈ ಮೂಲಕ ದೇಶದ ಗ್ರಾಹಕರ ಬೇಡಿಕೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿತ್ತು. ಸದ್ಯ ಮುಂಬರುವ ದಿನಗಳಲ್ಲಿ ಮತ್ತಷ್ಟು ಆಕರ್ಷಕ ಕಾರುಗಳ ಪ್ರವೇಶವಾಗುತ್ತಿದೆ. ಈ ಸಂಬಂಧ ವಿವರವನ್ನು ನೀಡುವ ಪ್ರಯತ್ನವನ್ನು ಮಾಡಲಿದ್ದೇವೆ.

ಮಾರುತಿ ಇಗ್ನಿಸ್

ಮಾರುತಿ ಇಗ್ನಿಸ್

ಮುಂಬರುವ ಹಬ್ಬದ ಆವೃತ್ತಿಯ ವೇಳೆಯಲ್ಲಿ ಬಿಡುಗಡೆಯಾಗಲಿರುವ ನೂತನ ಮಾರುತಿ ಇಗ್ನಿಸ್, ಜನಪ್ರಿಯ ಸ್ವಿಫ್ಟ್ ಮತ್ತು ಸೆಲೆರಿಯೊ ಹಾಗೂ ವ್ಯಾಗನಾರ್ ನಡುವಣ ದರ್ಜೆಯಲ್ಲಿ ಗುರುತಿಸಿಕೊಳ್ಳಲಿದೆ. ಇದು ಮಹೀಂದ್ರದ ಕೆಯುವಿ100 ಮಾದರಿಗೆ ಪ್ರತಿಸ್ಪರ್ಧಿಯಾಗಲಿದೆ.

ಮಾರುತಿ ಇಗ್ನಿಸ್

ಮಾರುತಿ ಇಗ್ನಿಸ್

ಕಾಂಪಾಕ್ಟ್ ಕ್ರಾಸೋವರ್ ಮಾರುತಿ ಇಗ್ನಿಸ್ ಕಾರಿನಲ್ಲಿ 80 ಅಶ್ವಶಕ್ತಿ ಉತ್ಪಾದಿಸಬಲ್ಲ 1.3 ಲೀಟರ್ ಡೀಸೆಲ್ ಮತ್ತು 75 ಅಶ್ವಶಕ್ತಿ ಸಾಮರ್ಥ್ಯದ 1.2 ಲೀಟರ್ ಪೆಟ್ರೋಲ್ ಎಂಜಿನ್ ಜೋಡಣೆಯಾಗಲಿದೆ.

ಅಂದಾಜು ಬೆಲೆ: 4 ರಿಂದ 6 ಲಕ್ಷ ರು.

ನಿರೀಕ್ಷಿತ ಬಿಡುಗಡೆ: ಅಕ್ಟೋಬರ್- ನವೆಂಬರ್ 2016

ಮಾರುತಿ ಬಲೆನೊ ಆರ್‌ಎಸ್

ಮಾರುತಿ ಬಲೆನೊ ಆರ್‌ಎಸ್

ಪ್ರೀಮಿಯಂ ಹ್ಯಾಚ್ ಬ್ಯಾಕ್ ಬಲೆನೊ ಹ್ಯಾಚ್ ಬ್ಯಾಕ್ ಕಾರು ಅತಿ ಹೆಚ್ಚು ಬೇಡಿಕೆಯನ್ನು ಕಾಪಾಡಿಕೊಂಡಿದೆ. ಈಗ ದೇಶದ ಅತಿ ದೊಡ್ಡ ಸಂಸ್ಥೆಯಾಗಿರುವ ಮಾರುತಿ ಬಲೆನೊದ ಅತ್ಯಂತ ಶಕ್ತಿಶಾಲಿ ಆರ್ ಎಸ್ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಇದರಂತೆ 2016 ಆಟೋ ಎಕ್ಸ್ ಪೋದಲ್ಲಿ ಬಲೆನೊ ಆರ್ ಎಸ್ ಮಾದರಿಯನ್ನು ಪ್ರದರ್ಶನಕ್ಕಿರಿಸಿತ್ತು.

ಮಾರುತಿ ಬಲೆನೊ ಆರ್‌ಎಸ್

ಮಾರುತಿ ಬಲೆನೊ ಆರ್‌ಎಸ್

ಪ್ರಸಕ್ತ ಸಾಲಿನಲ್ಲೇ ಬಿಡುಗಡೆಯಾಗುವ ನಿರೀಕ್ಷೆ ಹೊಂದಿರುವ ಮಾರುತಿ ಬಲೆನೊ ಆರ್ ಎಸ್ ಮಾದರಿಯಲ್ಲಿ 1.0 ಲೀಟರ್ ಬೂಸ್ಟರ್ ಜೆಟ್ ಇಂಜೆಕ್ಷನ್ ಟರ್ಬೊ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ.

ಅಂದಾಜು ಬೆಲೆ: 5.5 ರಿಂದ 8.5 ಲಕ್ಷ ರು.

ನಿರೀಕ್ಷಿತ ಬಿಡುಗಡೆ: ನವೆಂಬರ್-ಡಿಸೆಂಬರ್ 2016

ವಿಟಾರಾ ಬ್ರಿಝಾ ಪೆಟ್ರೋಲ್

ವಿಟಾರಾ ಬ್ರಿಝಾ ಪೆಟ್ರೋಲ್

ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ಹಾಟ್ ಕೇಕ್ ತರಹನೇ ಮಾರಾಟವಾಗುತ್ತಿರುವ ವಿಟಾರಾ ಬ್ರಿಝಾ ಹಾಗೂ ಪೆಟ್ರೋಲ್ ಆವೃತ್ತಿಗೂ ಕಾಲಿಡುತ್ತಿದೆ. 2016 ಆಟೋ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿದ್ದ ಮಾರುತಿ ವಿಟಾರಾ ಬ್ರಿಝಾ ಬಳಿಕ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆಗೊಂಡಿತ್ತು.

ವಿಟಾರಾ ಬ್ರಿಝಾ

ವಿಟಾರಾ ಬ್ರಿಝಾ

ನಿಕಟ ಭವಿಷ್ಯದಲ್ಲೇ ಮಾರುತಿ ಸುಜುಕಿ ವಿಟಾರಾ ಬ್ರಿಝಾದ ಬಲೆನೊಗೆ ಸಮಾನವಾದ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆವೃತ್ತಿಯು ಬಿಡುಗಡೆಯಾಗಲಿದೆ. ಇದರ ಜೊತೆಗೆ 1.4 ಲೀಟರ್ ಪೆಟ್ರೋಲ್ ಎಂಜಿನ್ ಇರುವ ಸಾಧ್ಯತೆಯಿದೆ.

ಅಂದಾಜು ಬೆಲೆ: 7 ರಿಂದ 10 ಲಕ್ಷ ರು.

ನಿರೀಕ್ಷಿತ ಬಿಡುಗಡೆ: ಅಕ್ಟೋಬರ್-ನವೆಂಬರ್ 2016

ಮಾರುತಿ ಸುಜುಕಿ ವ್ಯಾಗನಾರ್ ಎಂಪಿವಿ

ಮಾರುತಿ ಸುಜುಕಿ ವ್ಯಾಗನಾರ್ ಎಂಪಿವಿ

ಮಾರುತಿ ವ್ಯಾಗನಾರ್ ಹ್ಯಾಚ್ ಬ್ಯಾಕ್ ಕಾರು ಮಾರುಕಟ್ಟೆಯಲ್ಲಿರುವುದು ನಿಮಗೆಲ್ಲರಿಗೂ ತಿಳಿದ ವಿಚಾರ. ಈಗ ಕಳೆದ ಕೆಲವು ವರ್ಷಗಳ ತನ್ನ ಯೋಜನೆಯನ್ನು ನನಸಾಗಿಸಲಿರುವ ಮಾರುತಿ, ಏಳು ಸೀಟುಗಳ ವ್ಯಾಗನಾರ್ ಬಹು ಬಳಕೆಯ ವಾಹನವನ್ನು ಬಿಡುಗಡೆ ಮಾಡುವ ಇರಾದೆಯಲ್ಲಿದೆ.

ವ್ಯಾಗನಾರ್ ಎಂಪಿವಿ

ವ್ಯಾಗನಾರ್ ಎಂಪಿವಿ

ಮಾರುತಿ ಎರ್ಟಿಗಾಗಿಂತಲೂ ಕೆಳದರ್ಜೆಯಲ್ಲಿ ಗುರುತಿಸಿಕೊಳ್ಳಲಿರುವ ವ್ಯಾಗನಾರ್ ಎಂಪಿವಿ, ಕಡಿಮೆ ಬೆಲೆಯಲ್ಲಿ ಏಳು ಸೀಟುಗಳ ಕಾರುಗಳನ್ನು ಹುಡುಕುವ ಗ್ರಾಹಕರಿಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ. ಇದು 1.0 ಲೀಟರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಸಾಧ್ಯತೆಯಿದೆ.

ಅಂದಾಜು ಬೆಲೆ: 4.5 ರಿಂದ 6 ಲಕ್ಷ ರು.

ನಿರೀಕ್ಷಿತ ಬಿಡುಗಡೆ: ವರ್ಷಾಂತ್ಯದಲ್ಲಿ

ಮಾರುತಿ ಸುಜುಕಿ ಸ್ವಿಫ್ಟ್ ಎಎಂಟಿ

ಮಾರುತಿ ಸುಜುಕಿ ಸ್ವಿಫ್ಟ್ ಎಎಂಟಿ

ತನ್ನ ಜನಪ್ರಿಯ ಹ್ಯಾಚ್ ಬ್ಯಾಕ್ ಕಾರನ್ನು ಮತ್ತಷ್ಟು ಬಲಪಡಿಸುವ ಇರಾದೆಯಲ್ಲಿರುವ ಮಾರುತಿ ಸಂಸ್ಥೆಯು ಸ್ವಿಫ್ಟ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಮಾದರಿಯನ್ನು ಬಿಡುಗಡೆ ಮಾಡುವ ಇರಾದೆಯಲ್ಲಿದೆ.

ಸ್ವಿಫ್ಟ್ ಎಎಂಟಿ

ಸ್ವಿಫ್ಟ್ ಎಎಂಟಿ

ಮಾರುತಿ ಸ್ವಿಫ್ಟ್ ಎಎಂಟಿ ಮಾದರಿಯು ಫಿಯೆಟ್ ನಿಂದ ಆಮದು ಮಾಡಲಾಗಿರುವ 1.3 ಲೀಟರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಸಾಧ್ಯತೆಯಿದ್ದು, 74 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಅಂದಾಜು ಬೆಲೆ: 6 ರಿಂದ 7 ಲಕ್ಷ ರು.

ನಿರೀಕ್ಷಿತ ಬಿಡುಗಡೆ: ವರ್ಷಾಂತ್ಯದಲ್ಲಿ

ಮಾರುತಿ ಸುಜುಕಿ ಆಲ್ಟೊ 800 ಡೀಸೆಲ್

ಮಾರುತಿ ಸುಜುಕಿ ಆಲ್ಟೊ 800 ಡೀಸೆಲ್

ರೆನೊ ಕ್ವಿಡ್ ಕಾರಿನಿಂದ ನಿಕಟ ಪೈಪೋಟಿಯನ್ನು ಎದುರಿಸುತ್ತಿರುವ ಮಾರುತಿ ಆಲ್ಟೊಗೆ ತಾಜಾತನ ತುಂಬುವ ಇರಾದೆಯಲ್ಲಿದೆ. ಇದರಂತೆ ಅತಿ ಚಿಕ್ಕ ಡೀಸೆಲ್ ಎಂಜಿನ್ ಕಾರು ಸಹ ಪ್ರತ್ಯಕ್ಷವಾಗಲಿದೆ.

ಆಲ್ಟೊ 800 ಡೀಸೆಲ್

ಆಲ್ಟೊ 800 ಡೀಸೆಲ್

ಸೆಲೆರಿಯೊದಲ್ಲಿರುವುದಕ್ಕೆ ಸಮಾನವಾದ 793 ಸಿಸಿ ಡೀಸೆಲ್ ಎಂಜಿನ್ ಆಲ್ಟೊದಲ್ಲಿ ಕಂಡುಬರಲಿದ್ದು, 125 ಎನ್ ಎಂ ತಿರುಗುಬಲದಲ್ಲಿ 47 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಅಂದಾಜು ಬೆಲೆ: 4 ರಿಂದ 5 ಲಕ್ಷ ರು.

ನಿರೀಕ್ಷಿತ ಬಿಡುಗಡೆ: ವರ್ಷಾಂತ್ಯದಲ್ಲಿ

ನೂತನ ಸ್ವಿಫ್ಟ್

ನೂತನ ಸ್ವಿಫ್ಟ್

ವಿದೇಶದಲ್ಲಿ ನೂತನ ಸ್ವಿಫ್ಟ್ ಬಿಡುಗಡೆಗೆ ಕಾಲ ಸನ್ನಿಹಿತವಾಗಿದೆ. ಇದರ ಬೆನ್ನಲ್ಲೇ ಮುಂದಿನ ವರ್ಷದಲ್ಲಿ ನೂತನ ಸ್ವಿಫ್ಟ್ ಭಾರತಕ್ಕೂ ಕಾಲಿಡುವ ಸಾಧ್ಯತೆಗಳಿವೆ. ಈ ಸಂಬಂಧ ಅನೇಕ ರಹಸ್ಯ ಚಿತ್ರಗಳು ಲೀಕ್ ಆಗಿವೆ.

ನೂತನ ಸ್ವಿಫ್ಟ್

ನೂತನ ಸ್ವಿಫ್ಟ್

ನೂತನ ಸ್ವಿಫ್ಟ್ ನಲ್ಲಿ 1.0 ಲೀಟರ್ ಬೂಸ್ಟರ್ ಜೆಟ್ ಪೆಟ್ರೋಲ್ ಜೊತೆಗೆ 1.3 ಲೀಟರ್ ಡೀಸೆಲ್ ಎಂಜಿನ್ ಬಳಕೆಯಾಲಿದೆ. ಅಲ್ಲದೆ ಅನೇಕ ಹೊಸ ವೈಶಿಷ್ಟ್ಯಗಳು ಗ್ರಾಹಕರನ್ನು ತಲುಪಲಿದೆ.

ಅಂದಾಜು ಬೆಲೆ: 5 ರಿಂದ 8 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2017ರಲ್ಲಿ

ನೂತನ ಸ್ವಿಫ್ಟ್ ಡಿಜೈರ್

ನೂತನ ಸ್ವಿಫ್ಟ್ ಡಿಜೈರ್

ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಅಗ್ರ ಕಾರುಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರಿನ ಹೊರಮೈ ಮತ್ತು ಒಳಮೈಯಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರಲಿದೆ. ಇದು ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರಿನ ಜೊತೆ ವಿನ್ಯಾಸ ತಂತ್ರಗಾರಿಕೆಯನ್ನು ಹಂಚಿಕೊಳ್ಳಲಿದೆ.

ನೂತನ ಸ್ವಿಫ್ಟ್ ಡಿಜೈರ್

ನೂತನ ಸ್ವಿಫ್ಟ್ ಡಿಜೈರ್

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಸಹ 1.0 ಲೀಟರ್ ಬೂಸ್ಟರ್ ಜೆಟ್ ಜೊತೆಗೆ ಹೊಸತಾದ ಡೀಸೆಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಯಿದೆ.

ಅಂದಾಜು ಬೆಲೆ: 5.50 ರಿಂದ 9 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2017ರಲ್ಲಿ

ತಾಳಿರಿ ಸ್ವಲ್ಪ ಬರುತಲಿವೆ ಹೊಸ ಹೊಸ ಅಂದವಾದ ಮಾರುತಿ ಕಾರುಗಳು!

ನಿಮ್ಮ ಬಳಿಯೂ ಮಾರುತಿ ಕಾರು ಇದೆಯೇ? ನೀವು ಸಂತೃಪ್ತರೇ? ಈ ಬಗ್ಗೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಮುಕ್ತವಾಗಿ ಚರ್ಚಿಸಿರಿ.

More from DriveSpark

Article Published On: Monday, June 13, 2016, 17:35 [IST]
English summary
Upcoming Maruti Cars In India; Interesting Line Up
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+