ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿರುವ 7 ಕಾರುಗಳು
ವರ್ಷಾರಂಭದಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ದೇಶದ ಮುಂಚೂಣಿಯ ಮುಂಚೂಣಿಯ ಸಂಸ್ಥೆಯ ಅನೇಕ ಹೊಸ ಹಾಗೂ ಪರಿಷ್ಕೃತ ಮಾದರಿಗಳ ಪ್ರದರ್ಶನ ನಡೆಸಿದ್ದವು. ಇವುಗಳನ್ನು ಒಂದೊಂದಾಗಿ ಮಾರುಕಟ್ಟೆಗೆ ಇಳಿಸುವ ಯೋಜನೆಯಲ್ಲಿದೆ.
ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲು ನೂತನ ಕಾರುಗಳು ಸಾಲು ಗಟ್ಟಿ ನಿಂತಿದ್ದು, ಮುಂಬರುವ ದಿನಗಳಲ್ಲಿ ವಾಹನ ಸಂಸ್ಥೆಗಳು ಹೆಚ್ಚಿನ ಮಾರಾಟವನ್ನು ನಿರೀಕ್ಷಿಸುತ್ತಿದ್ದು, ನಿಕಟ ಪೈಪೋಟಿಗೆ ವೇದಿಕೆಯಾಗಲಿದೆ. ಪ್ರಸ್ತುತ ಲೇಖನದಲ್ಲಿ ಮುಂಬರುವ ಎಪ್ರಿಲ್ ಮತ್ತು ಮೇ ತಿಂಗಳ ಅವಧಿಯಲ್ಲಿ ಬಿಡುಗಡೆಯಾಗಲಿರುವ ಅತಿ ನೂತನ ಕಾರುಗಳ ಬಗ್ಗೆ ವಿವರಣೆಯನ್ನು ಕೊಡಲಿದ್ದೇವೆ.

ದಟ್ಸನ್ ಗೊ ಕ್ರಾಸ್
ಗೊ ಹ್ಯಾಚ್ ಬ್ಯಾಕ್ ಮತ್ತು ಗೊ ಪ್ಲಸ್ ಎಂಪಿವಿ ಕಾರುಗಳನ್ನು ಭಾರತ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿರುವ ದಟ್ಸನ್ ಮಗದೊಂದು ಕ್ರಾಸೋವರ್ ಕಾರನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಅದುವೇ ಗೊ ಕ್ರಾಸ್

ದಟ್ಸನ್ ಗೊ ಕ್ರಾಸ್
ಭಾರತ ಮಾರುಕಟ್ಟೆಯಲ್ಲಿ ಉಪಯುಕ್ತ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಮನಗಂಡಿರುವ ದಟ್ಸನ್, ಗೊ ಕ್ರಾಸ್ ಕಾರನ್ನು ಬಿಡುಗಡೆ ಮಾಡಲಿದೆ. ಇದರ ಎಕ್ಸ್ ಶೋ ರೂಂ ಬೆಲೆಯು 5ರಿಂದ 10 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.

ದಟ್ಸನ್ ರೆಡಿ ಗೊ
ಸಣ್ಣ ಕಾರು ವಿಭಾಗದಲ್ಲಿ ಮೋಡಿ ಮಾಡುವ ಇರಾದೆಯಲ್ಲಿರುವ ದಟ್ಸನ್ ರೆಡಿ ಗೊ ಹ್ಯಾಚ್ ಬ್ಯಾಕ್ ಕಾರನ್ನು ಬಿಡುಗಡೆ ಮಾಡಲಿದೆ. ಇದು ಪ್ರಮುಖವಾಗಿಯೂ ಮಾರುತಿ ಆಲ್ಟೊ ಕಾರಿಗೆ ಪ್ರತಿಸ್ಪರ್ಧಿಯಾಗಲಿದೆ.

ದಟ್ಸನ್ ರೆಡಿ ಗೊ
ನಿಮ್ಮ ಮಾಹಿತಿಗಾಗಿ 2016 ಆಟೋ ಎಕ್ಸ್ ಪೋದಲ್ಲಿ ದಟ್ಸನ್ ರೆಡಿ ಗೊ ಮತ್ತು ಗೊ ಕ್ರಾಸ್ ಮಾದರಿಗಳನ್ನು ಪ್ರದರ್ಶನ ಕಂಡಿರುವುದು ವಾಹನ ಪ್ರೇಮಿಗಳ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಅಂದ ಹಾಗೆ ರೆನೊ ಕ್ವಿಡ್ ಅದೇ ತಳಹದಿಯಲ್ಲಿ ನಿರ್ಮಾಣವಾಗುತ್ತಿರುವ ದಟ್ಸನ್ ರೆಡಿ ಗೊ 2.5 ಲಕ್ಷ ರು.ಗಳಿಂದ 3.25 ಲಕ್ಷ ರು.ಗಳ ವರೆಗೆ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ.

ಜೀಪ್ ಗ್ರಾಂಡ್ ಚೆರೋಕೀ
ಗ್ರಾಂಡ್ ಚೆರೋಕೀ ಬಿಡುಗಡೆಯೊಂದಿಗೆ ಐಕಾನಿಕ್ ಜೀಪ್ ಬ್ರಾಂಡ್ ಭಾರತಕ್ಕೆ ಅಧಿಕೃತವಾಗಿ ಲಗ್ಗೆಯಿಡಲಿದೆ. ಇದರೊಂದಿಗೆ ವರ್ಷಗಳ ಕಾಯುವಿಕೆಗೆ ಅಮೆರಿಕ ಪ್ರಖ್ಯಾತ ಬ್ರಾಂಡ್ ತೆರೆ ಎಳೆಯಲಿದೆ.

ಜೀಪ್ ಗ್ರಾಂಡ್ ಚೆರೋಕೀ
ಫ್ರಾರಂಭದಲ್ಲಿ ಭಾರತಕ್ಕೆ ಪ್ರವೇಶಿಸಲಿರುವ ಜೀಪ್ ಕ್ರಮೇಣ ಇಲ್ಲಿಯೇ ಸ್ಥಳೀಯವಾಗಿ ನಿರ್ಮಾಣವಾಗಲಿದೆ. ಪ್ರಸ್ತುತ ಜೀಪ್ ಭಾರತದಲ್ಲಿ 35ರಿಂದ 45 ಲಕ್ಷ ರು.ಗಳ ವರೆಗೆ ದುಬಾರಿಯೆನಿಸಲಿದೆ.

ಆಡಿ ಎ4
ಹೊಸ ತಲೆಮಾರಿನ ಆಡಿ ಎ4 ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲು ಜರ್ಮನಿಯ ಈ ಐಷಾರಾಮಿ ಸಂಸ್ಥ ತಯಾರಿ ನಡೆಸುತ್ತಿದೆ. ಇದಕ್ಕನುಗುಣವಾಗಿ 2016 ಆಟೋ ಎಕ್ಸ್ ಪೋದಲ್ಲೂ ಭರ್ಜರಿ ಪ್ರದರ್ಶನ ಕಂಡಿತ್ತು.

ಆಡಿ ಎ4
ಹಳೆಯ ಮಾದರಿಗೆ ಹೋಲಿಸಿದಾಗ ಹೆಚ್ಚಿನ ವೈಶಿಷ್ಟ್ಯಗಳನ್ನು ಪಡೆಯಲಿರುವ ಹೊಸ ಆಡಿ ಎ4, ಕಡಿಮೆ ಭಾರದೊಂದಿಗೆ ಹೆಚ್ಚಿನ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ. ಇದರ ಬೆಲೆ ಭಾರತದಲ್ಲಿ 32ರಿಂದ 42 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಟೊಯೊಟಾ ಇನ್ನೋವಾ ಕ್ರೈಸ್ಟಾ
ಹಳೆಯ ಇನ್ನೋವಾ ನಿರ್ಮಾಣಕ್ಕೆ ಬ್ರೇಕ್ ಹಾಕಿರುವ ಜಪಾನ್ ಮೂಲದ ಟೊಯೊಟಾ ಸಂಸ್ಥೆಯ ಹೊಚ್ಚ ಹೊಸ ಇನ್ನೋವಾ ಕ್ರೈಸ್ಟಾ ಕಾರನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಇದರಂತೆ 2016 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಅನಾವರಣಗೊಂಡಿತ್ತು.

ಟೊಯೊಟಾ ಇನ್ನೋವಾ ಕ್ರೈಸ್ಟಾ
ದೇಶದ ನಂ.1 ಎಂಪಿವಿ ತಯಾರಕ ಸಂಸ್ಥೆ ಎನಿಸಿಕೊಂಡಿರುವ ಟೊಯೊಟಾ, ಇನ್ನೋವಾ ಕ್ರೈಸ್ಟಾ ಮುಖಾಂತರ ತನ್ನ ಅಧಿಪತ್ಯವನ್ನು ಮತ್ತಷ್ಟು ಭದ್ರಪಡಿಸಲಿದೆ. ಇದು ದೇಶದಲ್ಲಿ 12ರಿಂದ 18 ಲಕ್ಷ ರು.ಗಳ ವರೆಗೆ ದುಬಾರಿಯೆನಿಸಲಿದೆ.

ಟಾಟಾ ಟಿಯಾಗೊ
ಈ ನಡುವೆ 2016 ಮಾರ್ಚ್ 28ರಂದು ಟಾಟಾ ಟಿಯಾಗೊ ಭಾರತ ಮಾರುಕಟ್ಟೆಯಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ. ಈ ಮೂಲಕ ದೇಶದ ಅತಿ ದೊಡ್ಡ ಟಾಟಾ ಮೋಟಾರ್ಸ್ ಸಂಸ್ಥೆಯು ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಳ್ಳಲಿದೆ.

ಟಾಟಾ ಟಿಯಾಗೊ
3.5 ಲಕ್ಷ ರು.ಗಳಿಂದ 5 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿರುವ ಟಾಟಾ ಟಿಯಾಗೊ ಮುಖ್ಯ ಪ್ರಚಾರ ರಾಯಭಾರಿ ಜವಾಬ್ದಾರಿಯನ್ನು ಕ್ರಿಕೆಟ್ ದಿಗ್ಗಜ ಲಿಯೊನೆಲ್ ಮೆಸ್ಸಿ ನಿಭಾಯಿಸಲಿದ್ದಾರೆ.

ಮಹೀಂದ್ರ ನುವೊಸ್ಪೋರ್ಟ್
ಎಪ್ರಿಲ್ ಮೊದಲ ವಾರದಲ್ಲಿ ಪರಿಷ್ಕೃತ ಕ್ವಾಂಟೊ ಆಗಿರುವ 'ನುವೊಸ್ಪೋರ್ಟ್' ಬಿಡುಗಡೆಗೆ ವೇದಿಕೆ ಸಿದ್ಧಗೊಂಡಿದೆ. ದೇಶದ ನಂ.1 ಎಸ್‌ಯುವಿ ತಯಾರಕ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ನೂತನ ನುವೊಸ್ಪೋರ್ಟ್ ಕಾರಿನಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದಿದೆ.

ಮಹೀಂದ್ರ ನುವೊಸ್ಪೋರ್ಟ್
ನೂತನ ಎಂ ಹಾಕ್ ಎಂಜಿನ್, ಡೇಟೈಮ್ ರನ್ನಿಂಗ್ ಲೈಟ್ಸ್, ಶಕ್ತಿಯುತ ವಿನ್ಯಾಸ, ಟೈಲ್ ಲ್ಯಾಂಪ್, ಏಳು ಸೀಟುಗಳ ಆಯ್ಕೆಗಳು ಮತ್ತು ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪ್ರಮುಖ ಆಕರ್ಷಣೆಯಾಗಲಿದ್ದು, 5.5 ಲಕ್ಷ ರು.ಗಳಿಂದ 8.5 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಇವೆಲ್ಲದರ ಹೊರತಾಗಿ ಶಕ್ತಿಶಾಲಿ ಫೋರ್ಡ್ ಮಸ್ಟಾಂಗ್, ದೇಶದ ಮೊದಲ ಹೈಬ್ರಿಡ್ ಎಸ್ ಯುವಿ ನಿಸ್ಸಾನ್ ಎಕ್ಸ್ ಟ್ರೈಲ್ ಮತ್ತು ಬಹು ನಿರೀಕ್ಷಿತ ಟಾಟಾ ಹೆಕ್ಸಾ ಸಹ ಪ್ರಸಕ್ತ ಸಾಲಿನಲ್ಲೇ ಬಿಡುಗಡೆಯಾಗಲಿದೆ.


Click it and Unblock the Notifications








