ಡೀಸೆಲ್ ಆವೃತ್ತಿ ಬಂದರೂ ಬದಲಾಗದ ಎಮಿಯೊ ಶನಿ ದೆಸೆ
ಭಾರತೀಯರಿಗಾಗಿ ಭಾರತದಲ್ಲಿ ನಿರ್ಮಿತ ಫೋಕ್ಸ್ ವ್ಯಾಗನ್ ಎಮಿಯೊ ಪೆಟ್ರೋಲ್ ಆವೃತ್ತಿಯ ಬಳಿಕ ಇತ್ತೀಚೆಗಷ್ಟೇ ಹಬ್ಬದ ಸಂಭ್ರಮದ ಭಾಗವಾಗಿ ಡೀಸೆಲ್ ಕಾರನ್ನು ಜರ್ಮನಿಯ ಮೂಲದ ಈ ಪ್ರಖ್ಯಾತ ವಾಹನ ಸಂಸ್ಥೆಯು ಬಿಡುಗಡೆಗೊಳಿಸಿತ್ತು. ಆದರೆ ಫೋಕ್ಸ್ ವ್ಯಾಗನ್ ಎಮಿಯೊಗೆ ತಟ್ಟಿರುವ ಶನಿ ದೆಸೆ ಮಾತ್ರ ಸದ್ಯಕ್ಕಂತೂ ಬದಲಾಗುವ ಸಾಧ್ಯತೆಗಳಿಲ್ಲ. ಮುಂದಕ್ಕೆ ಓದಿ...

ವಾಹನೋದ್ಯಮದ ಬಂದಿರುವ ತಾಜಾ ಮಾಹಿತಿಗಳ ಪ್ರಕಾರ ಫೋಕ್ಸ್ ವ್ಯಾಗನ್ ಎಮಿಯೊ ಮೂರು ತಿಂಗಳುಗಳ ಹಿಂದೆ ಜೂನ್ ತಿಂಗಳಲ್ಲಿ ಮಾರುಕಟ್ಟೆಗೆ ಭರ್ಜರಿ ಪ್ರವೇಶ ಪಡೆದಿತ್ತು.

ಭಾರತೀಯ ವಾಹನ ಅಧ್ಯಯನ ಸಂಸ್ಥೆ (ಸಿಯಾಮ್) ಬಿಡುಗಡೆ ಮಾಡಿರುವ ವರದಿಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಎಮಿಯೊ ಮಾರಾಟ ಶೇಕಡಾ 62.7ರಷ್ಟು ಕುಸಿದಿದೆ ಎಂಬುದು ತಿಳಿದು ಬರುತ್ತದೆ.

ಆಗಸ್ಟ್ ತಿಂಗಳಲ್ಲಿ 2,427 ಯುನಿಟ್ ಗಳಿಷ್ಟಿದ್ದ ಎಮಿಯೊ ಮಾರಾಟವು ಸೆಪ್ಟೆಂಬರ್ ವೇಳೆಯಾಗುವಾಗ ಒಂದೇ ಸವನೆ 1,491 ಯುನಿಟ್ ಗಳಿಗೆ ಇಳಿಕೆಯಾಗಿದೆ.

ಇದಕ್ಕೂ ಮೊದಲು ಜುಲೈ ತಿಂಗಳಲ್ಲಿ 2,200 ಯುನಿಟ್ ಗಳಿಷ್ಟಿದ್ದ ಎಮಿಯೊ ಮಾರಾಟ ಸಂಖ್ಯೆಯು ಆಗಸ್ಟ್ ತಿಂಗಳಲ್ಲಿ ಮತ್ತಷ್ಟು ಏರಿಕೆಯಾಗಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಸೆಪ್ಟೆಂಬರ್ ನಲ್ಲಿ ಹಿನ್ನಡೆ ಅನುಭವಿಸಿದೆ.

ಸಿ1 ವಿಭಾಗದಲ್ಲಿ ಗುರುತಿಸಿಕೊಂಡಿರುವ ಎಮಿಯೊಗೆ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್, ಹ್ಯುಂಡೈ ಎಕ್ಸ್ ಸೆಂಟ್, ಹೋಂಡಾ ಅಮೇಜ್ ಹಾಗೂ ಫೋರ್ಡ್ ಫಿಗೊ ಆಸ್ಪೈರ್ ಕಾರುಗಳಿಂದ ಪ್ರಬಲ ಪೈಪೋಟಿ ಎದುರಾಗುತ್ತಿದೆ.

ಇದೇ ಕಾರಣದಿಂದಾಗಿ ಕಾಂಪಾಕ್ಟ್ ಸೆಡಾನ್ ವಿಭಾಗದ ಅತ್ಯಂತ ಅಗ್ಗದ ಕಾರೆನಿಸಿಕೊಂಡರೂ ಮಾರಾಟ ಏರುಗತಿ ಸಾಧಿಸುವಲ್ಲಿ ಎಮಿಯೊ ವೈಫಲ್ಯವನ್ನು ಕಂಡಿದೆ.

ಫೋಕ್ಸ್ ವ್ಯಾಗನ್ ಎಮಿಯೊ ಪ್ರಾರಂಭಿಕ ಬೆಲೆ 5.14 ಲಕ್ಷ ರು.ಗಳಷ್ಟಾಗಿದ್ದು ಟಾಪ್ ಎಂಡ್ ವೆರಿಯಂಟ್ 6.91 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ.

ಇನ್ನೊಂದೆಡೆ ಹ್ಯುಂಡೈ ಎಕ್ಸ್ ಸೆಂಟ್ ಟಾಪ್ ಎಂಡ್ 7.45 ಲಕ್ಷ ರು., ಸ್ವಿಫ್ಟ್ ಡಿಜೈರ್ 7.24 ಲಕ್ಷ ರು., ಹೋಂಡಾ ಅಮೇಜ್ 7.78 ಲಕ್ಷ ರು., ಟಾಟಾ ಜೆಸ್ಟ್ 6.85 ಲಕ್ಷ ರು. ಮತ್ತು ಫೋರ್ಡ್ ಫಿಗೊ ಆಸ್ಪೈರ್ 7.72 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

ಸಿ1 ಕಾರು ವಿಭಾಗದಲ್ಲಿ ಸೆಪ್ಟೆಂಬರ್ ಮಾರಾಟ ಸಂಖ್ಯೆಗಳು ಇಂತಿದೆ
ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್: 18,961
ಹ್ಯುಂಡೈ ಎಕ್ಸ್ ಸೆಂಟ್: 3,896
ಹೋಂಡಾ ಅಮೇಜ್: 2,861
ಟೊಯೊಟಾ ಎಟಿಯೋಸ್: 2,781
ಫೋರ್ಡ್ ಆಸ್ಪೈರ್: 2613
ಟಾಟಾ ಮಾಂಝಾ: 2,260
ಫೋಕ್ಸ್ ವ್ಯಾಗನ್ ಎಮಿಯೊ: 1491


Click it and Unblock the Notifications








