ಫೋಕ್ಸ್‌ವ್ಯಾಗನ್ ಪೊಲೊ ಆಲ್ ಸ್ಟಾರ್ ಎಡಿಷನ್ ಬಿಡುಗಡೆ
ಫೋಕ್ಸ್ ವ್ಯಾಗನ್ ಪೊಲೊ ಆಲ್ ಸ್ಟಾರ್ ಎಡಿಷನ್ ಕಾರು ಕೇವಲ ಸೀಮಿತ ಸಂಖ್ಯೆಯಲ್ಲಿ ಮಾತ್ರ ದೇಶದಲ್ಲಿ ಮಾರಾಟವಾಗಲಿದೆ.
ಜರ್ಮನಿಯ ಮೂಲದ ಪ್ರಖ್ಯಾತ ವಾಹನ ಸಂಸ್ಥೆ ಫೋಕ್ಸ್ ವ್ಯಾಗನ್ ಇಂಡಿಯಾ, ದೇಶದ ವಾಹನ ಪ್ರೇಮಿಗಳಿಗಾಗಿ ಅತಿ ನೂತನ ಪೊಲೊ ಆಲ್ ಸ್ಟಾರ್ ಸೀಮಿತ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಇದಕ್ಕೂ ಮೊದಲು 2016 ಯುಇಎಫ್ ಎ ಯುರೋಪಿಯನ್ ಚಾಂಪಿಯನ್ ಫುಟ್ಬಾಲ್ ಮತ್ತು 2016 ಜಿನೆವಾ ಮೋಟಾರು ಶೋದಲ್ಲಿ ಪೆಲೊ ಆಲ್ ಸ್ಟಾರ್ ಎಡಿಷನ್ ಅನಾವರಣಗೊಂಡಿತ್ತು.

ಭಾರತದಲ್ಲಿ ಪೊಲೊ ಆಲ್ ಸ್ಟಾರ್ ಲಿಮಿಟೆಡ್ ಎಡಿಷನ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ದೊರಕಲಿದೆ. ಇವೆರಡು ಅನುಕ್ರಮವಾಗಿ ಮುಂಬೈ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 7.51 ಲಕ್ಷ ರು. ಮತ್ತು 9.07 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಅಂದರೆ ಸ್ಟ್ಯಾಂಡರ್ಡ್ ಪೊಲೊ ಟಾಪ್ ಎಂಡ್ ವೆರಿಯಂಟ್ ಗಿಂತಲೂ ನೂತನ ಆಲ್ ಸ್ಟಾರ್ ಆವೃತ್ತಿಯು ಸರಿ ಸುಮಾರು 30,000 ರುಪಾಯಿಗಳಷ್ಟು ಹೆಚ್ಚು ದುಬಾರಿಯೆನಿಸಲಿದೆ.

ನೂತನ ಪೊಲೊ ಆಲ್ ಸ್ಟಾರ್ ಎಡಿಷನ್ ಕಾರು ಎಲ್ ಇಡಿ ಹೆಡ್ ಲೈಟ್, 15 ಇಂಚುಗಳ 20 ಸ್ಪೋಕ್ ಅಲಾಯ್ ಚಕ್ರಗಳನ್ನು ಗಿಟ್ಟಿಸಿಕೊಳ್ಳಲಿದೆ.

ಬಿ ಪಿಲ್ಲರ್ ಬಳಿ 'ಆಲ್ ಸ್ಟಾರ್' ಲಾಂಛನವು ಎದ್ದು ಕಾಣಿಸಲಿದೆ. ಕಾರಿನೊಳಗೆ ಅಲ್ಯೂಮಿನಿಯಂ ಪೆಡಲ್, ಹೊಸ ಸೀಟು ಹೋದಿಕೆ, ಸೆಂಟರ್ ಆರ್ಮ್ ರೆಸ್ಟ್ ಹಾಗೂ ರಿಯರ್ ಎಸಿ ವೆಂಟ್ ಸೌಲಭ್ಯವಿರಲಿದೆ.

ಐದು ಆಕರ್ಷಕ ಬಣ್ಣಗಳು
ರಿಫ್ಲೆಕ್ಸ್ ಸಿಲ್ವರ್,
ಕ್ಯಾಂಡಿ ವೈಟ್,
ಬ್ಲೂ ಸಿಲ್ಕ್,
ಫ್ಲ್ಯಾಶ್ ರೆಡ್,
ಟೊಫಿ ಬ್ರೌನ್.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೊಲೊ ಆಲ್ ಸ್ಟಾರ್ ಎಡಿಷನ್ ಕಾರು 1.0 ಲೀಟರ್ ಟಿಎಸ್ ಐ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, ಆರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೋಡಣೆಯಾಗಿದೆ.

ಆದರೆ ಭಾರತದ ಮಾದರಿಯು 1.2 ಲೀಟರ್ ಎಂಪಿಐ ಪೆಟ್ರೋಲ್ ಎಂಜಿನ್ ಗಿಟ್ಟಿಸಿಕೊಳ್ಳಲಿದ್ದು, ಇದು 110 ಎನ್ ಎಂ ತಿರುಗುಬಲದಲ್ಲಿ 74 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಅತ್ತ 1.5 ಲೀಟರ್ ಡೀಸೆಲ್ ಎಂಜಿನ್ 230 ಎನ್ ಎಂ ತಿರುಗುಬಲದಲ್ಲಿ 89 ಅಶ್ವಶಕ್ತಿಯನ್ನು ನೀಡಲಿದ್ದು, 89 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಕೂಡಾ ಐದು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ.

ಇತ್ತೀಚೆಗಷ್ಟೇ ಫೋಕ್ಸ್ ವ್ಯಾಗನ್ ಅತ್ಯಂತ ಶಕ್ತಿಶಾಲಿ 25.65 ಲಕ್ಷ ರು.ಗಳಷ್ಟು ಬೆಲೆ ಬಾಳುವ (ಎಕ್ಸ್ ಶೋ ರೂಂ ಥಾಣೆ) ಪೊಲೊ ಜಿಟಿಐ ಕಾರನ್ನು ಬಿಡುಗಡೆಗೊಳಿಸಿತ್ತು. ಇದರಲ್ಲಿರುವ 1.8 ಲೀಟರ್ ಫೋರ್ ಸಿಲಿಂಡರ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ 320 ಎನ್ ಎಂ ತಿರುಗುಬಲದಲ್ಲಿ ಬರೋಬ್ಬರಿ 189 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಏಳು ಸ್ಪೀಡ್ ಡಿಎಸ್ ಜಿ ಗೇರ್ ಬಾಕ್ಸ್ ಪಡೆದಿರುವ ಪೊಲೊ ಆಲ್ ಸ್ಟಾರ್ ಎಡಿಷನ್ ಕೇವಲ 7.2 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗ ಮತ್ತು ಗಂಟೆಗೆ ಗರಿಷ್ಠ 233 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ.


Click it and Unblock the Notifications








