ಫೋಕ್ಸ್ ವ್ಯಾಗನ್ ವೆಂಟೊ ಪ್ರಿಫೇರ್ಡ್ ಆವೃತ್ತಿ ಬಿಡುಗಡೆ
ಫೋಕ್ಸ್‌ವ್ಯಾಗನ್ ವೆಂಟೊ ಪ್ರಿಫೇರ್ಡ್ ಎಡಿಷನ್ ಮೂಲಕ ದೇಶದಲ್ಲಿ ಗರಿಷ್ಠ ಮಾರಾಟವನ್ನು ಗುರಿಯಿರಿಸಿಕೊಳ್ಳಲಾಗಿದೆ.
ಭಾರತದಲ್ಲಿ ತಾಜಾತನವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತನ್ನ ಜನಪ್ರಿಯ ವೆಂಟೊ ಸೆಡಾನ್ ಕಾರಿನ ನೂತನ ಪ್ರಿಫೇರ್ಡ್ ಎಡಿಷನ್ ಬಿಡುಗಡೆ ಮಾಡುವ ಮೂಲಕ ಜರ್ಮನಿಯ ಮೂಲದ ಪ್ರಖ್ಯಾತ ವಾಹನ ಸಂಸ್ಥೆ ಫೋಕ್ಸ್ ವ್ಯಾಗನ್ ಗಮನ ಸೆಳೆದಿದೆ. ಇದು ಸೆಡಾನ್ ವಿಭಾಗದಲ್ಲಿ ಮತ್ತಷ್ಟು ಹೊಸ ಆಯ್ಕೆಗೆ ಕಾರಣವಾಗಲಿದೆ.

ನೂತನ ಫೋಕ್ಸ್ ವ್ಯಾಗನ್ ವೆಂಟೊ ಪ್ರಿಫೇರ್ಡ್ ಎಡಿಷನ್ ಸೀಮಿತ ಆವೃತ್ತಿಯ ಕಾರು ನೇವಿಗೇಷನ್ ಡಿವೈಸ್ ಸೇರಿದಂತೆ ಇನ್ನಿತರ ಹೊಸ ವೈಶಿಷ್ಟ್ಯಗಳನ್ನು ಪಡೆಯಲಿದೆ.

ಫೋಕ್ಸ್ ವ್ಯಾಗನ್ ವೆಂಟೊ ಪ್ರಿಫೇರ್ಡ್ ಎಡಿಷನ್ ಕಾರು ವೆಂಟೊ, ಎಂಪಿಐ, ಟಿಎಸ್ ಐ, ಟಿಡಿಐ ಮತ್ತು ಟಿಡಿಐ ಡಿಎಸ್ ಜಿ ವೆರಿಯಂಟ್ ಗಳಲ್ಲಿ ದೊರಕಲಿದೆ.

ಕಾರ್ಪೋರೇಟ್ ಉದ್ಯಮಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ನೂತನ ಕಾರು, ಅಲಾಯ್ ಚಕ್ರ, ರೂಫ್ ಫಾಯಿಲ್, ಸೈಡ್ ಮೌಲ್ಡಿಂಗ್, ಉನ್ನತ ಗುಣಮಟ್ಟದ ಸೀಟು ಕವರು, ನೇವಿಗೇಷನ್ ಡಿವೈಸ್ ಮತ್ತು ವೈರ್ ಲೆಸ್ ರಿಯರ್ ವ್ಯೂ ಕ್ಯಾಮೆರಾ ಸೇವೆಗಳು ಲಭ್ಯವಾಗಲಿದೆ.

ಇಲ್ಲಿ ಕಂಡುಬಂದಿರುವ ಕುತೂಹಲದಾಯಕ ಸಂಗತಿಯೆಂದರೆ ಬೆಲೆ ಮಾಹಿತಿಯನ್ನು ಫೋಕ್ಸ್ ವ್ಯಾಗನ್ ಬಹಿರಂಗಪಡಿಸಿಲ್ಲ. ಈ ಸಂಬಂಧ ಗ್ರಾಹಕರು ಡೀಲರುಗಳನ್ನು ಸಂಪರ್ಕಿಸಬೇಕಿದೆ.

ಡೀಲರುವೊಂದರ ಮಾಹಿತಿಗಳ ಪ್ರಕಾರ ಈ ಎಲ್ಲ ಪ್ಯಾಕೇಜ್ ಗಳು 70,000 ರು.ಗಳಿಗೆ ಲಭ್ಯವಾಗಲಿದೆ. ಇದಕ್ಕಾಗಿ ಗ್ರಾಹಕರು ಬೇಡಿಕೆಯನ್ನು ಮುಂದಿಡಬೇಕಾಗುತ್ತದೆ.

ಹೊಸತಾದ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಸ್ಕ್ರೀನ್ ನಲ್ಲೇ ವಿಂಡ್ ಶಿಲ್ಡ್ ಮೌಂಟೆಡ್ ನೇವಿಗೇಷನ್ ಡಿವೈಸ್ ಸೇವೆಯು ಲಭ್ಯವಾಗಲಿದೆ.

ಇದಲ್ಲದೆ ಒಂದು ವರ್ಷದ ಉಚಿತ ವಿಮೆ ಮತ್ತು ನಾಲ್ಕು ವರ್ಷಗಳ ರೋಡ್ ಸೈಡ್ ಅಸಿಸ್ಟನ್ಸ್ ಸೌಲಭ್ಯವೂ ಲಭ್ಯವಾಗಲಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಫೋಕ್ಸ್ ವ್ಯಾಗನ್ ವೆಂಟೊ ಪ್ರಿಫೇರ್ಡ್ ಎಡಿಷನ್ ಸಿಗಲಿದೆ. ಇದರಲ್ಲಿರುವ 1.6 ಲೀಟರ್ ಪೆಟ್ರೋಲ್ ಎಂಜಿನ್ 153 ಎನ್ ಎಂ ತಿರುಗುಬಲದಲ್ಲಿ 105 ಅಶ್ವಶಕ್ತಿಯನ್ನು ನೀಡಲಿದೆ.

ಅಂತೆಯೇ 1.5 ಲೀಟರ್ ಡೀಸೆಲ್ ಎಂಜಿನ್ 250 ಎನ್ ಎಂ ತಿರುಗುಬಲದಲ್ಲಿ 110 ಅಶ್ವಶಕ್ತಿಯನ್ನು ನೀಡಲಿದೆ. ಐದು ಸ್ಪೀಡ್ ಮ್ಯಾನುವಲ್ ಮತ್ತು 7 ಸ್ಪೀಡ್ ಡಿಎಸ್ ಜಿ ಆಟೋ ಗೇರ್ ಬಾಕ್ಸ್ ಗಳು ಟ್ರಾನ್ಸ್ ಮಿಷನ್ ಜವಾಬ್ದಾರಿಯನ್ನು ವಹಿಸಲಿದೆ.


Click it and Unblock the Notifications








