ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಬೃಹತ್ ಯೋಜನೆ ರೂಪಿಸಿದ ಆಡಿ...!!

Written By:

2030ರ ವೇಳೆಗೆ ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಕಾರುಗಳ ಸದ್ದು ಸಂಪೂರ್ಣವಾಗಿ ತಗ್ಗಲಿದ್ದು, ಎಲೆಕ್ಟ್ರಿಕ್ ಕಾರು ಬಳಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ.

ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಬೃಹತ್ ಯೋಜನೆ ರೂಪಿಸಿದ ಆಡಿ...!!

ಈ ಹಿನ್ನೆಲೆ ಭಾರತೀಯ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಹೊಸ ಯೋಜನೆ ರೂಪಿಸಿರುವ ಆಡಿ, 2025ರ ವೇಳೆಗೆ ಶೇ.30 ರಷ್ಟು ಎಲೆಕ್ಟ್ರಿಕ್ ಕಾರು ಮಾರಾಟ ಗುರಿ ಹೊಂದಿದೆ.

ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಬೃಹತ್ ಯೋಜನೆ ರೂಪಿಸಿದ ಆಡಿ...!!

ಫೋಕ್ಸ್‌ವ್ಯಾಗನ್ ಗ್ರೂಪ್‌ನ ಪ್ರಮುಖ ಕಾರು ಬ್ರ್ಯಾಂಡ್ ಆಗಿರುವ ಆಡಿ, ಸದ್ಯದಲ್ಲೇ ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿರುವ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುತ್ತಿದೆ.

ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಬೃಹತ್ ಯೋಜನೆ ರೂಪಿಸಿದ ಆಡಿ...!!

ಇದರಿಂದಾಗಿ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿ ವಿಶೇಷ ಆಸಕ್ತಿ ತೊರಿರುವ ಆಡಿ ಸಂಸ್ಥೆಯು, ಪೆಟ್ರೋಲ್ ಮತ್ತು ಡಿಸೇಲ್ ಕಾರುಗಳ ಉತ್ಪಾದನೆಗಿಂತ ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುಲು ನಿರ್ಧರಿಸಿದೆ.

ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಬೃಹತ್ ಯೋಜನೆ ರೂಪಿಸಿದ ಆಡಿ...!!

ಈ ಹಿಂದೆ ಎಲೆಕ್ಟ್ರಿಕ್ ಕಾರು ಅಭಿವೃದ್ಧಿಗಾಗಿ ಫೋರ್ಷೆ ತಂತ್ರಜ್ಞಾನ ಬಳಕೆ ಮಾಡುತ್ತಿದ್ದ ಆಡಿ, ಇನ್ಮುಂದೆ ತನ್ನ ಮಾತೃ ಸಂಸ್ಥೆ ಫೋಕ್ಸ್‌ವ್ಯಾಗನ್ ಮಾದರಿಗಳಲ್ಲಿನ ತಂತ್ರಜ್ಞಾನವನ್ನು ಬಳಕೆ ಮಾಡಿ ಕಾರು ಅಭಿವೃದ್ಧಿಗೊಳಿಸಲಿದೆ.

ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಬೃಹತ್ ಯೋಜನೆ ರೂಪಿಸಿದ ಆಡಿ...!!

ಹೀಗಾಗಿಯೇ 2025ರ ವೇಳೆಗೆ ಶೇ.30ರಷ್ಟು ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದನೆ ಮಾಡಲಿರುವ ಆಡಿ, ಎಲೆಕ್ಟ್ರಿಕ್ ಕಾರು ಉತ್ಪಾದಕರಿಗೆ ತೀವ್ರ ಸ್ಪರ್ಧೆ ಒಡ್ಡುವ ನೀರಿಕ್ಷೆಯಲ್ಲಿದೆ.

ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಬೃಹತ್ ಯೋಜನೆ ರೂಪಿಸಿದ ಆಡಿ...!!

ಇದಷ್ಟೇ ಅಲ್ಲದೇ ಆಟೋಮೊನಸ್(ಚಾಲಕ ರಹಿತ) ಕಾರುಗಳಿಗೂ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಅಭಿವೃದ್ಧಿಗೊಳ್ಳಲಿರುವ ಆಡಿ ಎಲೆಕ್ಟ್ರಿಕ್ ಮಾದರಿಗಳಲ್ಲಿ ಆಟೋಮೊನಸ್ ತಂತ್ರಜ್ಞಾನ ಅಳವಡಿಸುವ ಸಾಧ್ಯತೆಗಳು ಕೂಡಾ ಇವೆ ಎನ್ನಲಾಗುತ್ತಿದೆ.

ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಬೃಹತ್ ಯೋಜನೆ ರೂಪಿಸಿದ ಆಡಿ...!!

ಒಟ್ಟಿನಲ್ಲಿ 2030ರ ವೇಳೆಗೆ ಎಲೆಕ್ಟ್ರಿಕ್ ಕಾರುಗಳ ಸದ್ದು ಜೋರಾಗಲಿದ್ದು, ಕೇಂದ್ರ ಸರ್ಕಾರ ಯೋಜನೆಗೆ ಪೂರಕವಾಗಿ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಬೇಡಿಕೆ ಸಂಪೂರ್ಣವಾಗಿ ತಗ್ಗಲಿದೆ.

English summary
Read in Kannada about audi targets 30 percent electric vehicle sales by 2025.
Story first published: Wednesday, June 7, 2017, 14:48 [IST]
Please Wait while comments are loading...

Latest Photos