ಬೆಂಗಳೂರಿನಲ್ಲಿ ನಿರ್ಮಾಣವಾಗಲಿವೆ 25 ಎಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ಸ್ಟೇಷನ್‌ಗಳು..!

Written By:

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ಬೃಹತ್ ಯೋಜನೆ ರೂಪಿಸಿರುವ ಕರ್ನಾಟಕ ಸರ್ಕಾರವು ಪೈಲೆಟ್ ಯೋಜನೆ ಅಡಿ ಬೆಂಗಳೂರಿನಲ್ಲಿ 25 ಎಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ.

ಸರ್ಕಾರದಿಂದಲೇ 25 ಎಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ಸ್ಟೇಷನ್ ನಿರ್ಮಾಣ

ಮುಂಬರುವ ದಿನಗಳಲ್ಲಿ ಸಾಂಪ್ರದಾಯಿಕ ವಾಹನಗಳು ತಮ್ಮ ಮಿತಿಗಳನ್ನು ತಲುಪುವ ಕಾರಣದಿಂದಾಗಿ ಎಲೆಕ್ಟ್ರಿಕ್ ವಾಹನಗಳನ್ನು 'ಭವಿಷ್ಯದ ಸಾರಿಗೆ' ಎಂದು ಹೇಳಲಾಗುತ್ತದೆ. ಈ ಮಹತ್ವದ ಯೋಜನೆಗೆ ಪೂರಕವಾಗಿ ಕರ್ನಾಟಕ ಸರ್ಕಾರವು ಐಟಿ ಸಿಟಿ ಬೆಂಗಳೂರಿನಲ್ಲಿ 25 ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ ತೆರೆಯುತ್ತಿದೆ.

ಸರ್ಕಾರದಿಂದಲೇ 25 ಎಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ಸ್ಟೇಷನ್ ನಿರ್ಮಾಣ

ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಹೆಚ್ಚಿನ ಜನಕ್ಕೆ ಪ್ರೋತ್ಸಾಹ ತುಂಬುವ ಸಲುವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಇದಕ್ಕಾಗಿ ಹೊಸ ನಿಯಮಾವಳಿಗಳನ್ನು ರೂಪಿಸುತ್ತಿದ್ದೇವೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸರ್ಕಾರದಿಂದಲೇ 25 ಎಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ಸ್ಟೇಷನ್ ನಿರ್ಮಾಣ

ವಿಧಾನಸೌಧದಲ್ಲಿ ಇಂಧನ ಇಲಾಖೆ ಬೇಡಿಕೆ ಮೇಲೆ ನಡೆದ ಚರ್ಚೆ ವೇಳೆ ಉತ್ತರಿಸಿದ ಅವರು, ಚಾರ್ಜಿಂಗ್ ಸ್ಟೇಷನ್‌ಗಳ ನಿರ್ಮಾಣ ಸಂಬಂಧ ವರದಿ ಸಿದ್ಧಪಡಿಸುತ್ತಿದ್ದು, ದೇಶದಲ್ಲೇ ಮೊದಲ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಸ್ಟೇಷನ್‌ಗಳ ನಿರ್ಮಾಣ ಯೋಜನೆ ಇದಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸರ್ಕಾರದಿಂದಲೇ 25 ಎಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ಸ್ಟೇಷನ್ ನಿರ್ಮಾಣ

ಇನ್ನು 2030ರ ಹೊತ್ತಿಗೆ ಭಾರತೀಯ ರಸ್ತೆಗಳು ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳಿಂದ ಕೂಡಿರಲಿದ್ದು, ಭವಿಷ್ಯದ ಯೋಜನೆಗಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮ ಪ್ರಮುಖವಾಗಿದೆ.

ಸರ್ಕಾರದಿಂದಲೇ 25 ಎಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ಸ್ಟೇಷನ್ ನಿರ್ಮಾಣ

ಆಯ್ದ ಪ್ರದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಬಹುದಾದ ಇವಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ ಸದ್ಯದಲ್ಲೇ ಪ್ರಾರಂಭವಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ನಿರೀಕ್ಷೆ ಕೂಡಾ ಮಾಡಲಾಗಿದೆ.

ಸರ್ಕಾರದಿಂದಲೇ 25 ಎಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ಸ್ಟೇಷನ್ ನಿರ್ಮಾಣ

2030ರ ಹೊತ್ತಿಗೆ ಭಾರತದ ಎಲ್ಲಾ ವರ್ಗದವರು ಎಲೆಕ್ಟ್ರಿಕ್ ವಾಹನಗಳು ಹೊಂದುವ ಉದ್ದೇಶದೊಂದಿಗೆ ಈ ಯೋಜನೆಯು ಸಾಗುತ್ತಿದೆ ಎನ್ನಲಾಗಿದೆ. ಸದ್ಯ, ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿರುವ ಏಕೈಕ ವಾಹನ ತಯಾರಕ ಕಂಪನಿ ಮಹೀಂದ್ರಾ ಎನ್ನಬಹುದು.

English summary
Read in kannada about Bengaluru Receives Electric Charging Stations Under Government's Pilot Program.
Story first published: Friday, July 28, 2017, 21:06 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark