ಬಹುನಿರೀಕ್ಷಿತ 5ನೇ ಸರಣಿಯ ಬಿಎಂಡಬ್ಲ್ಯು ಕಾರು ಬೆಂಗಳೂರಿನಲ್ಲಿ ಬಿಡುಗಡೆ

ಕಳೆದು ತಿಂಗಳು 29ರಂದು ದೇಶದ ವಿವಿಧೆಡೆ 5ನೇ ಸರಣಿಯ ಕಾರು ಮಾದರಿಯನ್ನು ಬಿಡುಗಡೆ ಮಾಡಿದ್ದ ಬಿಎಂಡಬ್ಲ್ಯು ಸಂಸ್ಥೆಯು ಇಂದು ಬೆಂಗಳೂರಿನಲ್ಲೂ ಬಿಡುಗಡೆಗೊಳಿಸಲಾಗಿದ್ದು, ಹೊಚ್ಚ ಹೊಸ ಕಾರು ಮಾದರಿಯ ಹೆಚ್ಚಿನ ಮಾಹಿತಿ ಇಲ್ಲಿದೆ.

By Praveen

ಕಳೆದು ತಿಂಗಳು 29ರಂದು ದೇಶದ ವಿವಿಧೆಡೆ 5ನೇ ಸರಣಿಯ ಕಾರು ಮಾದರಿಯನ್ನು ಬಿಡುಗಡೆ ಮಾಡಿದ್ದ ಬಿಎಂಡಬ್ಲ್ಯು ಸಂಸ್ಥೆಯು ಇಂದು ಬೆಂಗಳೂರಿನ ಪ್ರತಿಷ್ಥಿತ ನವನಿತ್ ಮೋಟಾರ್ಸ್‌ನಲ್ಲಿ ಬಿಡುಗಡೆಗೊಳಿಸಲಾಗಿದ್ದು, ಹೊಚ್ಚ ಹೊಸ ಕಾರು ಮಾದರಿಯ ಹೆಚ್ಚಿನ ಮಾಹಿತಿ ಇಲ್ಲಿದೆ.

ಬಹುನಿರೀಕ್ಷಿತ 5ನೇ ಸರಣಿಯ ಬಿಎಂಡಬ್ಲ್ಯು ಕಾರು ಬೆಂಗಳೂರಿನಲ್ಲಿ ಬಿಡುಗಡೆ

ಹೌದು, ಐಷಾರಾಮಿ ಸೆಡಾನ್ ಕಾರು ಉತ್ಪಾದನಾ ಸಂಸ್ಥೆಯಾದಂತಹ ಬಿಎಂಡಬ್ಲ್ಯು ತನ್ನ ಹೊಸ ಮಾದರಿಯ 5 ಸರಣಿಯ ಕಾರಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ವಿನೂತನ ವೈಶಿಷ್ಟ್ಯತೆಗಳನ್ನು ಹೊಂದಿರುವ ಸರಣಿ 5 ಕಾರುಗಳ ಆರಂಭಿಕ ಬೆಲೆ ರೂ. 49.90 (ಎಕ್ಸ್‌ ಷೋ ರೂಂ) ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಬಹುನಿರೀಕ್ಷಿತ 5ನೇ ಸರಣಿಯ ಬಿಎಂಡಬ್ಲ್ಯು ಕಾರು ಬೆಂಗಳೂರಿನಲ್ಲಿ ಬಿಡುಗಡೆ

ಕಾರು ಮಾದರಿಗಳು ಬೆಲೆ(ಎಕ್ಸ್ ಷೋ ರೂಂ ಪ್ರಕಾರ)

520ಡಿ ಸ್ಪೋರ್ಟ್ ಲೈನ್ ರೂ. 49.90 ಲಕ್ಷ

530ಐ ಸ್ಪೋರ್ಟ್ ಲೈನ್ ರೂ. 49.90 ಲಕ್ಷ

520ಡಿ ಲಗ್ಷುರಿ ಲೈನ್ ರೂ. 53.60 ಲಕ್ಷ

530ಡಿ ಎಂ ಸ್ಪೋರ್ಟ್ ರೂ. 61.30 ಲಕ್ಷ

ಬಹುನಿರೀಕ್ಷಿತ 5ನೇ ಸರಣಿಯ ಬಿಎಂಡಬ್ಲ್ಯು ಕಾರು ಬೆಂಗಳೂರಿನಲ್ಲಿ ಬಿಡುಗಡೆ

ಹೊಸ ಬಿಎಂಡಬ್ಲ್ಯು 5 ಸರಣಿಯ ಕಾರು ಭಾರತದಲ್ಲಿ ಸೋಲಿಟರಿ ಪೆಟ್ರೋಲ್ ಮತ್ತು ಎರಡು ಡೀಸೆಲ್ ಪವರ್‌ಪ್ಲ್ಯಾಂಟ್ ಎಂಬ ಮೂರು ವಿಭಿನ್ನ ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆಯಾಗುತ್ತಿದೆ.

ಬಹುನಿರೀಕ್ಷಿತ 5ನೇ ಸರಣಿಯ ಬಿಎಂಡಬ್ಲ್ಯು ಕಾರು ಬೆಂಗಳೂರಿನಲ್ಲಿ ಬಿಡುಗಡೆ

ಸದ್ಯ ಲಭ್ಯವಿರುವ ಬಿಎಂಡಬ್ಲ್ಯು 5 ಸರಣಿಯ 4 ಮಾದರಿಯಲ್ಲೂ ಸಹ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರಲಿದ್ದು, ಹಿಂದಿನ ಚಕ್ರಗಳಿಗೆ ಶಕ್ತಿ ಮತ್ತು ಟಾರ್ಕ್ ಕಳುಹಿಸುವ ತಂತ್ರಜ್ಞಾನ ಪಡೆದುಕೊಂಡಿವೆ. ಇದರಿಂದ ವೇಗದ ಚಾಲನೆಗೆ ಸಹಕಾರಿಯಾಗಲಿವೆ.

ಬಹುನಿರೀಕ್ಷಿತ 5ನೇ ಸರಣಿಯ ಬಿಎಂಡಬ್ಲ್ಯು ಕಾರು ಬೆಂಗಳೂರಿನಲ್ಲಿ ಬಿಡುಗಡೆ

ಹೀಗಾಗಿಯ ಅತ್ಯದ್ಭುತ ಹಿಡಿತ ಹೊಂದಿರುವ 5 ಸರಣಿಯ ಪೆಟ್ರೋಲ್ ಎಂಜಿನ್ 350ಎನ್‌ಎಂ ತಿರುಗುಬಲದಲ್ಲಿ 248.5ರಷ್ಟು ಅಶ್ವಶಕ್ತಿ ಉತ್ಪಾದಿಸುವಷ್ಟು ಬಲಿಷ್ಠವಾಗಿದ್ದು, ಕೇವಲ 6.2 ಸೆಕೆಂಡುಗಳಲ್ಲಿ 0 ಕಿ.ಮೀ ಇಂದ 100 ಕಿ.ಮೀ.ವರೆಗೂ ವೇಗ ಪಡೆದುಕೊಳ್ಳಲಿದೆ.

ಬಹುನಿರೀಕ್ಷಿತ 5ನೇ ಸರಣಿಯ ಬಿಎಂಡಬ್ಲ್ಯು ಕಾರು ಬೆಂಗಳೂರಿನಲ್ಲಿ ಬಿಡುಗಡೆ

ಇನ್ನು 5 ಸರಣಿಯ ಡೀಸೆಲ್ ಆವೃತ್ತಿಯು ಟರ್ಬೊ‌ಚಾರ್ಜ್ಡ್ ಎಂಜಿನ್ ಹೊಂದಿದ್ದು, 400 ಎನ್‌ಎಂ ತಿರುಗುಬಲದಲ್ಲಿ 187ರಷ್ಟು ಅಶ್ವಶಕ್ತಿ ಉತ್ಪಾದಿಸುವಷ್ಟು ಶಕ್ತಿ ಪಡೆದುಕೊಂಡಿದ್ದು, ಕೇವಲ 7.5 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗದಲ್ಲಿ ಚಲಿಸಬಲ್ಲದು.

ಬಹುನಿರೀಕ್ಷಿತ 5ನೇ ಸರಣಿಯ ಬಿಎಂಡಬ್ಲ್ಯು ಕಾರು ಬೆಂಗಳೂರಿನಲ್ಲಿ ಬಿಡುಗಡೆ

'ಎಂ ಸ್ಪೋರ್ಟ್' ಮಾದರಿಯ ಕಾರು ಬಿಎಂಡಬ್ಲ್ಯೂ 5 ಸರಣಿಯ ಕಾರಿನಲ್ಲಿಯೇ ಅತ್ಯಂತ ದೊಡ್ಡ ಎಂಜಿನ್ ಪಡೆದುಕೊಂಡಿದ್ದು, ಈ ಕಾರು 3.0-ಲೀಟರ್ ಅವಳಿ-ಟರ್ಬೊ ನೇರ 6 ಡೀಸೆಲ್ ಎಂಜಿನ್ ಪಡೆದುಕೊಂಡಿದೆ.

ಬಹುನಿರೀಕ್ಷಿತ 5ನೇ ಸರಣಿಯ ಬಿಎಂಡಬ್ಲ್ಯು ಕಾರು ಬೆಂಗಳೂರಿನಲ್ಲಿ ಬಿಡುಗಡೆ

ಹೆಡ್ ಲ್ಯಾಂಪ್‌ಗಳು ಕ್ರೋಮ್-ಲೇಪಿತಹೊಸ ವಿನ್ಯಾಸಗಳೊಂದಿಗೆ ಅಭಿವೃದ್ಧಿಗೊಂಡಿದ್ದು, 5 ಸರಣಿಯ ಕಾರುಗಳು 4,935 ಮಿ.ಮೀ ಉದ್ದ, 1,868 ಮಿ.ಮೀ ಅಗಲ, 1,466 ಮಿಮೀ ಎತ್ತರವನ್ನು ಹೊಂದಿವೆ.

ಬಹುನಿರೀಕ್ಷಿತ 5ನೇ ಸರಣಿಯ ಬಿಎಂಡಬ್ಲ್ಯು ಕಾರು ಬೆಂಗಳೂರಿನಲ್ಲಿ ಬಿಡುಗಡೆ

ಕಾರಿನ ಒಳಭಾಗದಲ್ಲಿ ಅಳವಡಿಸಿರುವ 10.25 ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ‌ಯನ್ನು ಸನ್ನೆಗಳ ಮೂಲಕ ನಿಯಂತ್ರಿಸಬಹುದು ಮತ್ತು ಪ್ರದರ್ಶನ ಕೀಲಿಯ ಸಹಾಯದಿಂದ ಸಕ್ರಿಯಗೊಳಿಸಬಹುದಾದ ರಿಮೋಟ್ ಕಂಟ್ರೋಲ್ ಪಾರ್ಕಿಂಗ್ ಆಯ್ಕೆಯನ್ನು ಒಳಗೊಂಡಿರುತ್ತದೆ.

ಬಹುನಿರೀಕ್ಷಿತ 5ನೇ ಸರಣಿಯ ಬಿಎಂಡಬ್ಲ್ಯು ಕಾರು ಬೆಂಗಳೂರಿನಲ್ಲಿ ಬಿಡುಗಡೆ

ಆರು ಏರ್‌ಬ್ಯಾಗ್, ಕ್ರಿಯಾತ್ಮಕ ಬ್ರೇಕಿಂಗ್ ದೀಪಗಳು, ಪಾರ್ಕ್ ದೂರ ನಿಯಂತ್ರಣ, ಎಳೆತ ನಿಯಂತ್ರಣ, ಸ್ಥಿರತೆ ನಿಯಂತ್ರಣ ಮತ್ತು ಕಾರ್ನರ್ ಬ್ರೇಕ್ ನಿಯಂತ್ರಣ ವ್ಯವಸ್ಥೆಯನ್ನು ಈ ಕಾರುಗಳಲ್ಲಿ ಇರಿಸಲಾಗಿದೆ.

ಬಹುನಿರೀಕ್ಷಿತ 5ನೇ ಸರಣಿಯ ಬಿಎಂಡಬ್ಲ್ಯು ಕಾರು ಬೆಂಗಳೂರಿನಲ್ಲಿ ಬಿಡುಗಡೆ

ಇದಲ್ಲದೇ ಅಲ್ಪೈನ್ ವೈಟ್, ಬ್ಲಾಕ್ ಸಪ್ಫಿರೆ, ಬ್ಲೂಸ್ಟೋನ್ ಮೆಟಾಲಿಕ್, ಕಾರ್ಬನ್ ಬ್ಲಾಕ್, ಕ್ಯಾಷ್ಮೆರೆ ಸಿಲ್ವರ್, ಇಂಪೀರಿಯಲ್ ಬ್ಲೂ ಬ್ರಿಲಿಯಂಟ್ ಎಫೆಕ್ಟ್ ಜಟೊಬ ಮತ್ತು ಮೆಡಿಟರೇನಿಯನ್ ಬ್ಲೂ ಎಂಬ ಎಂಟು ಬಣ್ಣಗಳಲ್ಲಿ 5 ಸರಣಿ ಕಾರುಗಳು ಖರೀದಿಗೆ ಲಭ್ಯವಿವೆ.

Most Read Articles

Kannada
English summary
Read in Kannada about 2017 BMW 5 Series Launched In Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X