ಐಷಾರಾಮಿ ಕಾರುಗಳ ಲಾಂಛನ ಬಣ್ಣ ಬದಲಿಸಿದ ಬಿಎಂಡಬ್ಲ್ಯು

Written By:

ಜರ್ಮನಿಯ ಮೂರು ಪ್ರಮುಖ ಐಷಾರಾಮಿ ವಾಹನಗಳ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಬಿಎಂಡಬ್ಲ್ಯು ಸಂಸ್ಥೆಯು ತನ್ನ ವಿಶಿಷ್ಠವಾದ ಲಾಂಛನದಿಂದಲೇ ಆಟೋ ಉದ್ಯಮದಲ್ಲಿ ಚಿರಪರಿಚಿತವಾದ ಕಾರು ಮಾದರಿ. ಆದ್ರೆ ತನ್ನ ಉತ್ಪನ್ನಗಳಿಗೆ ಹೊಸತನ ನೀಡಲು ಮುಂದಾಗಿದ್ದು, ಲಾಂಛನ ಬಣ್ಣ ಬದಲಿಸುವ ನಿರ್ಧಾರ ಕೈಗೊಂಡಿದೆ.

To Follow DriveSpark On Facebook, Click The Like Button
ಐಷಾರಾಮಿ ಕಾರುಗಳ ಲಾಂಛನ ಬಣ್ಣ ಬದಲಿಸಿದ ಬಿಎಂಡಬ್ಲ್ಯು

1918ರಲ್ಲಿ ಒಂದನೇ ಮಹಾಯುದ್ಧದ ಬಳಿಕ ವರ್ಸೇಲ್ಸ್ ಕದನ ವಿರಾಮ ಒಪ್ಪಂದದ ಪ್ರಕಾರ ವಿಮಾನ ಎಂಜಿನ್ ಉತ್ಪಾದನೆ ನಿಲ್ಲಿಸಲು ಒಪ್ಪಿಗೆ ಸೂಚಿಸಿದ್ದ ಬಿಎಂಡಬ್ಲ್ಯು, ತರುವಾಯ ಮೋಟಾರ್ ಸೈಕಲ್ ಹಾಗೂ ಕಾರು ಉತ್ಪಾದನೆಯನ್ನು ಆರಂಭಿಸಿತ್ತು. ಈ ಮೂಲಕ ಶ್ರೀಮಂತ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದು ಈಗ ಇತಿಹಾಸ.

ಐಷಾರಾಮಿ ಕಾರುಗಳ ಲಾಂಛನ ಬಣ್ಣ ಬದಲಿಸಿದ ಬಿಎಂಡಬ್ಲ್ಯು

ಇದರ ಜೊತೆಗೆ ಕಳೆದ ಒಂದು ಶತಮಾನದ ಅವಧಿಯಲ್ಲಿ ಕಾಲಕ್ಕೆ ತಕ್ಕಂತೆ ತನ್ನ ಉತ್ಪನ್ನಗಳನ್ನು ಬದಲಿಸಿಕೊಂಡು ಬಂದಿರುವ ಬಿಎಂಡಬ್ಲ್ಯು, ಇದೀಗ ಜನಪ್ರಿಯ ಲಾಂಛನದ ಬಣ್ಣವನ್ನು ಕೂಡಾ ಬದಲಿಸುವ ನಿರ್ಧಾರಕ್ಕೆ ಬಂದಿದೆ.

ಐಷಾರಾಮಿ ಕಾರುಗಳ ಲಾಂಛನ ಬಣ್ಣ ಬದಲಿಸಿದ ಬಿಎಂಡಬ್ಲ್ಯು

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಬಿಎಂಡಬ್ಲ್ಯು ಲಾಂಛನದ ಬಣ್ಣ ಬದಲಾವಣೆ ಇದೇ ಮೊದಲ ಬಾರಿ ಏನು ಅಲ್ಲಾ. ಈ ಹಿಂದಿಯೂ ಕಾಲಕ್ಕೆ ತಕ್ಕಂತೆ ಬಣ್ಣ ಬದಲಾಯಿಸಿಕೊಂಡೆ ಬಂದಿದೆ. ಆದರೂ ಲಾಂಛನದ ಮೂಲ ವಿನ್ಯಾಸವನ್ನು ಬಿಟ್ಟುಕೊಟ್ಟಿಲ್ಲ.

Recommended Video
BMW HP4 Competition Package With Akrapovič Titanium Exhaust Roars Into Life - DriveSpark
ಐಷಾರಾಮಿ ಕಾರುಗಳ ಲಾಂಛನ ಬಣ್ಣ ಬದಲಿಸಿದ ಬಿಎಂಡಬ್ಲ್ಯು

ಇದಲ್ಲದೇ ಬಿಎಂಡಬ್ಲ್ಯು ಲಾಂಛನವು ಹಲವು ಕುತೂಹಲಗಳಿಂದ ಕೂಡಿದ್ದು, ಸ್ವತಂತ್ರ ಬವರಿಯ ಪ್ರಾಂತ್ಯದ ರಾಷ್ಟ್ರೀಯ ಬಣ್ಣವನ್ನು ಪ್ರತಿನಿಧಿಸುತ್ತದೆ. ರಾಪ್ ಮೋಟಾರ್ ವರ್ಕ್ಸ್ (Rapp Motorenwerke) ವಿಮಾನ ಎಂಜಿನ್ ನಿರ್ಮಾಣ ಸಂಸ್ಥೆಯ ಮರು ಸ್ಥಾಪನೆಯ ವೇಳೆ ಹುಟ್ಟಿಕೊಂಡಿದ್ದ ಬಿಎಂಡಬ್ಲ್ಯು, ರಾಪ್ ಮೋಟಾರ್ ವರ್ಕ್ಸ್ ನ ಅದೇ ವೃತ್ತಾಕಾರದ ಲಾಂಛನವನ್ನು ಉಳಿಸಿಕೊಂಡು ಬಂದಿದೆ.

ಐಷಾರಾಮಿ ಕಾರುಗಳ ಲಾಂಛನ ಬಣ್ಣ ಬದಲಿಸಿದ ಬಿಎಂಡಬ್ಲ್ಯು

ಬಿಎಂಡಬ್ಲ್ಯು ವೃತ್ತಾಕಾರದ ಲಾಂಛನವು ವಿಮಾನದ ಮುಂದಿರುವ ಫ್ಯಾನ್ ಅನ್ನು ಪ್ರತಿನಿಧಿಸುತ್ತದೆ. ವೃತ್ತಾಕಾರದ ಮಧ್ಯದಲ್ಲಿ ಬಿಳಿ ಹಾಗೂ ನೀಲಿ ಬಣ್ಣಗಳನ್ನು ಹೊಂದಿರುವ ಬಿಎಂಡಬ್ಲ್ಯು ಲೊಗೊ ನೀಲಿ ಆಕಾಶವನ್ನು ಬಳಿ ರೆಕ್ಕೆಯು ಕತ್ತರಿಸುವ ವಿಮಾನ ಫ್ಯಾನ್‌ನ ಚಳುವಳಿಯನ್ನು ಬಿಂಬಿಸುತ್ತದೆ. 1929ರಲ್ಲಿ ಮೊದಲ ಬಾರಿಗೆ ಬಿಎಂಡಬ್ಲ್ಯು ಜಾಹೀರಾತಿನಲ್ಲಿ ಇದನ್ನು ಬಳಸಿಕೊಂಡಿತ್ತು.

ಐಷಾರಾಮಿ ಕಾರುಗಳ ಲಾಂಛನ ಬಣ್ಣ ಬದಲಿಸಿದ ಬಿಎಂಡಬ್ಲ್ಯು

ಆದ್ರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಸ್ಪರ್ಧೆಗಳಿಗೆ ಅನುಗುಣವಾಗಿ ಆಧುನಿಕತೆಗೆ ತೆರೆದುಕೊಳ್ಳಬೇಕಾದ ಅನಿವಾರ್ಯತೆಗಳಿದ್ದು, ಹೊಸ ಲಾಂಛನವನ್ನು ಕಪ್ಪು, ಬಿಳಿ ಮತ್ತು ಅಲ್ಪ ಪ್ರಮಾಣದಲ್ಲಿ ನಿಲಿ ಬಣ್ಣಗಳನ್ನು ಬಳಿಸಿಕೊಂಡು ಮರುವಿನ್ಯಾಸ ಕೈಗೊಳ್ಳಲಾಗಿದೆ.

ಐಷಾರಾಮಿ ಕಾರುಗಳ ಲಾಂಛನ ಬಣ್ಣ ಬದಲಿಸಿದ ಬಿಎಂಡಬ್ಲ್ಯು

ಇನ್ನು ಹೊಸ ಮಾದರಿಯ ಲಾಂಛನ ಬಗ್ಗೆ ಈಗಾಗಲೇ ಅಧಿಕೃತ ಮಾಹಿತಿ ಹೊರಹಾಕಿರುವ ಬಿಎಂಡಬ್ಯು ಸಂಸ್ಥೆಯು ಮುಂಬರುವ ಹೊಸ ಕಾರು ಮಾದರಿಗಳಲ್ಲಿ ನವಿಕೃತ ಲಾಂಛನವನ್ನು ಪರಿಚಯಿಸುತ್ತಿರುವ ಬಗ್ಗೆ ಹೇಳಿಕೊಂಡಿದೆ.

English summary
Read in Kannada about BMW Changes Logo Color into Black and White.
Story first published: Wednesday, September 13, 2017, 17:28 [IST]
Please Wait while comments are loading...

Latest Photos