ಲಾಸ್ ಏಂಜಲೀಸ್ ಆಟೋ ಮೇಳದಲ್ಲಿ ಭಾಗಿಯಾಗಲಿದೆ ಬಿಎಂಡಬ್ಲ್ಯು ಐ8 ರೋಡ್‌ಸ್ಟರ್

Written By:

ಜರ್ಮನ್ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಬಿಎಂಡಬ್ಲ್ಯು ಸಂಸ್ಥೆಯು ತನ್ನ ಬಹುನೀರಿಕ್ಷಿತ ಐ8 ರೋಡ್‌ಸ್ಟರ್ ಹೈಬ್ರಿಡ್ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಅದಕ್ಕೂ ಮೊದಲು ಲಾಸ್ ಏಂಜಲೀಸ್ ಆಟೋ ಮೇಳದಲ್ಲಿ ಪ್ರದರ್ಶನ ನಡೆಯಲಿದೆ.

To Follow DriveSpark On Facebook, Click The Like Button
ಲಾಸ್ ಏಂಜಲೀಸ್ ಆಟೋ ಮೇಳದಲ್ಲಿ ಭಾಗಿಯಾಗಲಿದೆ ಐ8 ರೋಡ್‌ಸ್ಟರ್

ಫೇಸ್‌ಲಿಫ್ಟ್ ವೈಶಿಷ್ಟ್ಯತೆಗಳೊಂದಿಗೆ ಐ8 ರೋಡ್‌ಸ್ಟರ್ ಆವೃತ್ತಿಯನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಿರುವ ಬಿಎಂಡಬ್ಲ್ಯು, ಲಾಸ್ ಏಂಜಲೀಸ್ ಆಟೋ ಮೇಳದಲ್ಲಿ ಪ್ರದರ್ಶನಗೊಂಡ ನಂತರ 2018ರ ಮೊದಲ ತ್ರೈಮಾಸಿಕ ಅವಧಿಗೆ ಬಿಡುಗಡೆಯಾಗಲಿದೆ.

ಲಾಸ್ ಏಂಜಲೀಸ್ ಆಟೋ ಮೇಳದಲ್ಲಿ ಭಾಗಿಯಾಗಲಿದೆ ಐ8 ರೋಡ್‌ಸ್ಟರ್

ಮುಂಬರುವ ನವೆಂಬರ್‌ನಲ್ಲಿ ಲಾಸ್ ಏಂಜಿಲೀಸ್ ಆಟೋ ಮೇಳವು ಆರಂಭಗೊಳ್ಳಲಿದ್ದು, ಹೈಬ್ರಿಡ್ ವಿಭಾಗದ ಸೂಪರ್ ಕಾರು ಮಾದರಿಗಳಲ್ಲಿ ಐ8 ರೋಡ್‌ಸ್ಟರ್ ವಿಶೇಷ ಗಮನಸೆಳೆಯುವ ನೀರಿಕ್ಷೆಯಲ್ಲಿದೆ.

ಲಾಸ್ ಏಂಜಲೀಸ್ ಆಟೋ ಮೇಳದಲ್ಲಿ ಭಾಗಿಯಾಗಲಿದೆ ಐ8 ರೋಡ್‌ಸ್ಟರ್

ಬಟರ್ ಫೈ ಡೋರ್‌ಗಳ ವ್ಯವಸ್ಥೆಯನ್ನು ಹೊಂದಿರುವ ಬಿಎಂಡಬ್ಲ್ಯು ಐ8 ರೋಡ್‌ಸ್ಟರ್, ಅನುಕೂಲಕ್ಕೆ ತಕ್ಕಂತೆ ಟಾಪ್ ಅಪ್ ತೆರೆದುಕೊಳ್ಳಬಹುದಾದ ವ್ಯವಸ್ಥೆಯನ್ನು ಹೊಂದಿದೆ.

ಲಾಸ್ ಏಂಜಲೀಸ್ ಆಟೋ ಮೇಳದಲ್ಲಿ ಭಾಗಿಯಾಗಲಿದೆ ಐ8 ರೋಡ್‌ಸ್ಟರ್

ಹಿಂಭಾಗದ ವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆ ತರಲಾಗಿದ್ದು, ಸೂಪರ್ ಕಾರುಗಳ ಲುಕ್ ನೀಡುವ ಉದ್ದೇಶದಿಂದ ಜೋಡಣೆ ಮಾಡಲಾದ ಆಕ್ರಮಣಕಾರಿ ಹಂಪ್ ಮತ್ತಷ್ಟು ಖದರ್ ಹೆಚ್ಚಿಸಿದೆ.

ಲಾಸ್ ಏಂಜಲೀಸ್ ಆಟೋ ಮೇಳದಲ್ಲಿ ಭಾಗಿಯಾಗಲಿದೆ ಐ8 ರೋಡ್‌ಸ್ಟರ್

ಇನ್ನು 1.5-ಲೀಟರ್ ಟರ್ಬೋಚಾರ್ಜ್ಡ್ ಇನ್‌ಲೈನ್ ತ್ರಿ-ಸಿಲಿಂಡರ್ ಮತ್ತು ಎಲೆಕ್ಟ್ರಿಕ್ ಎಂಜಿನ್ ಜೊತೆ ಅಭಿವೃದ್ಧಿ ಹೊಂದಿರುವ ಬಿಎಂಡಬ್ಲ್ಯು ಐ8 ರೋಡ್‌ಸ್ಟರ್, 400-ಬಿಎಚ್‌ಪಿ ಉತ್ಪಾದನಾ ಶಕ್ತಿಯನ್ನು ಹೊಂದಿದೆ.

ಲಾಸ್ ಏಂಜಲೀಸ್ ಆಟೋ ಮೇಳದಲ್ಲಿ ಭಾಗಿಯಾಗಲಿದೆ ಐ8 ರೋಡ್‌ಸ್ಟರ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹೈಬ್ರಿಡ್ ಸೂಪರ್ ಕಾರು ಮಾದರಿಗಳಲ್ಲೇ ಭಾರೀ ನೀರಿಕ್ಷೆ ಹೊಂದಿರುವ ಬಿಎಂಡಬ್ಲ್ಯು ಐ8 ರೋಡ್‌ಸ್ಟರ್ ಕಾರು ಲಾಸ್ ಏಂಜಲೀಸ್ ಆಟೋ ಮೇಳದ ನಂತರ ಬಿಡುಗಡೆಯಾಗಲಿದ್ದು, ತದನಂತರ ಮುಂದುವರಿದ ಆವೃತ್ತಿಯು ಪೂರ್ಣ ಪ್ರಮಾಣದಲ್ಲಿ ಎಲೆಕ್ಟ್ರಿಕ್ ಎಂಜಿನ್ ಪಡೆದುಕೊಳ್ಳಲಿವೆ ಎನ್ನಲಾಗಿದೆ.

English summary
Read in Kannada about BMW To Debut i8 Roadster At Los Angeles Auto Show.
Story first published: Thursday, August 10, 2017, 15:36 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark