ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಹೆಚ್ಚಿಸಲು ಬಿಎಂಡಬ್ಲ್ಯು 130 ಕೋಟಿ ರೂ ಹೂಡಿಕೆ

Written By:

ಭಾರತದಲ್ಲಿ ತನ್ನದೇ ರೀತಿಯ ಬಲಿಷ್ಠ ಗ್ರಾಹಕ ಪಡೆ ಹೊಂದಿರುವ ಕಾರು ತಯಾರಕ ಸಂಸ್ಥೆ ಬಿಎಂಡಬ್ಲ್ಯೂ , ಇಲ್ಲಿಯವರೆಗೆ ಒಟ್ಟು 1,250 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದೆ.

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆ ಬಿಎಂಡಬ್ಲ್ಯು ತನ್ನ ಕಾರ್ಯಾಚರಣೆಯನ್ನು ಭಾರತದಲ್ಲಿ ಹೆಚ್ಚಿಸಲು ಉದ್ದೇಶಿಸಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಈ ಸಂಸ್ಥೆ 130 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದೆ.

ಬಿಎಂಡಬ್ಲ್ಯೂ ಸಂಸ್ಥೆ ಈ ವರ್ಷದ ನಂತರ ಸ್ಥಳೀಯವಾಗಿ 5ನೇ ಸರಣಿಯ ಪುನರಾವರ್ತನಾ ಮಾದರಿಗಳನ್ನು ಮತ್ತು 6 ಸರಣಿಯ ಗ್ರ್ಯಾನ್ ಟೂರಿಸ್ಮೊ(ಜಿಟಿ) ಕಾರುಗಳನ್ನು ಬಿಡುಗಡೆಗೊಳಿಸಲು ಉದ್ದೇಶಿಸಿದೆ.

ಈ ಎರಡೂ ಕಾರುಗಳ ಬಿಡುಗಡೆ ಮಾಡುವುದರೊಂದಿಗೆ ಭಾರತದಲ್ಲಿ ಸಂಸ್ಥೆಯು ಉತ್ಪನ್ನ ಬಂಡವಾಳವನ್ನು ಬಲಪಡಿಸುವ ವಿಶ್ವಾಸ ಹೊಂದಿದೆ.

"2007ರಿಂದ, ನಾವು ಸತತವಾಗಿ ಭಾರತದಲ್ಲಿ ಹೂಡಿಕೆ ಮಾಡುತ್ತಿದ್ದೇವೆ ಮತ್ತು ಈ ವರ್ಷ ನಾವು ಒಟ್ಟಾರೆಯಾಗಿ 1,250 ಕೋಟಿ ರೂ. ಗಳಿಗೆ ನಮ್ಮ ನಮ್ಮ ಹೂಡಿಕೆಯನ್ನು ಹೆಚ್ಚಿಸಿಕೊಳ್ಳಲಿದ್ದೇವೆ" ಎಂದು ಬಿಎಂಡಬ್ಲ್ಯು ಇಂಡಿಯಾ ಅಧ್ಯಕ್ಷ ವಿಕ್ರಮ್ ಪಾವ ತಿಳಿಸಿದ್ದಾರೆ.

ಇತ್ತೀಚಿನ ಹೂಡಿಕೆಯು ಮೋಟರಾಡ್ ಮತ್ತು ಹಣಕಾಸು ಸೇವೆಗಳ ತಂಡ ಸೇರಿದಂತೆ ಬಿಎಂಡಬ್ಲ್ಯೂ ಗುಂಪುಗಳ ಕಾರ್ಯಾಚರಣೆಗಳಿಗೆ ಈ ಹೂಡಿಕೆ ಲಾಭದಾಯಕವಾಗಿದೆ.

ತನ್ನ ಮಾರಾಟಗಾರರ ಜಾಲವನ್ನು ದೇಶದಲ್ಲಿ ವಿಸ್ತರಿಸಲು ಯೋಜನೆ ರೂಪಿಸುತ್ತಿರುವ ಬಿಎಂಡಬ್ಲ್ಯೂ ಸಂಸ್ಥೆ, ಒಟ್ಟು ಪ್ರಯಾಣಿಕ ವಾಹನ ಮಾರುಕಟ್ಟೆಯ ಪ್ರೀಮಿಯಂ ಕಾರು ವಿಭಾಗದಲ್ಲಿ ಕೇವಲ 2% ಷೇರು ಹೊಂದಿದೆ.

English summary
German luxury car manufacturer BMW is investing Rs 130 crore in India to boost its operations.
Story first published: Monday, June 19, 2017, 14:46 [IST]
Please Wait while comments are loading...

Latest Photos