ಎಕ್ಸ್5 ಸ್ಪೆಷಲ್ ಎಡಿಷನ್ ಮತ್ತು ಎಕ್ಸ್6 ಎಂ ಸ್ಪೋರ್ಟ್ ಎಡಿಷನ್ ಮಾಹಿತಿ ಬಹಿರಂಗ
ಜರ್ಮನ್ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆ ಬಿಎಂಡಬ್ಲ್ಯು ತನ್ನ ಬಹುನೀರಿಕ್ಷಿತ ಎಕ್ಸ್5 ಸ್ಪೆಷಲ್ ಎಡಿಷನ್ ಹಾಗೂ ಎಕ್ಸ್6 ಎಂ ಸ್ಪೋರ್ಟ್ ಎಡಿಷನ್ ಮಾಹಿತಿಯನ್ನು ಬಿಡುಗಡೆಗೊಳಿಸಿದ್ದು, ವಷ್ಯಾಂತಕ್ಕೆ ಹೊಸ ಕಾರುಗಳು ಖರೀದಿಗೆ ಲಭ್ಯವಾಗಲಿವೆ.
ಜರ್ಮನ್ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆ ಬಿಎಂಡಬ್ಲ್ಯು ತನ್ನ ಬಹುನೀರಿಕ್ಷಿತ ಎಕ್ಸ್5 ಸ್ಪೆಷಲ್ ಎಡಿಷನ್ ಹಾಗೂ ಎಕ್ಸ್6 ಎಂ ಸ್ಪೋರ್ಟ್ ಎಡಿಷನ್ ಮಾಹಿತಿಯನ್ನು ಬಿಡುಗಡೆಗೊಳಿಸಿದ್ದು, ವಷ್ಯಾಂತಕ್ಕೆ ಹೊಸ ಕಾರುಗಳು ಖರೀದಿಗೆ ಲಭ್ಯವಾಗಲಿವೆ.

ಈಗಾಗಲೇ ಭಾರತೀಯ ಮಾರುಕಟ್ಟೆ ಹತ್ತಾರು ಬಗೆಯ ಐಷಾರಾಮಿ ಕಾರು ಆವೃತ್ತಿಗಳನ್ನು ಪರಿಚಯಿಸುವ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿರುವ ಬಿಎಂಡಬ್ಲ್ಯು ಸಂಸ್ಥೆಯು ಡಿಸೆಂಬರ್ ಅಂತ್ಯಕ್ಕೆ ಎಕ್ಸ್5 ಸ್ಪೆಷಲ್ ಎಡಿಷನ್ ಹಾಗೂ ಎಕ್ಸ್6 ಎಂ ಸ್ಪೋರ್ಟ್ ಎಡಿಷನ್‌ಗಳನ್ನು ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.

ಇದಕ್ಕೂ ಮೊದಲ ಇದೇ ಆವೃತ್ತಿಗಳನ್ನು ಯುರೋಪ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ನಿರ್ಧರಿಸಿರುವ ಬಿಎಂಡಬ್ಲ್ಯು, ತದನಂತರವಷ್ಟೇ ಭಾರತ ಸೇರಿದಂತೆ ಲ್ಯಾಟಿನ್ ಅಮೆರಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಿದೆ.
Recommended Video


ಹೀಗಾಗಿ ಬಿಡುಗಡೆಗೊಳ್ಳಲು ಸಿದ್ಧಗೊಂಡಿರುವ ಎಕ್ಸ್5 ಸ್ಪೆಷಲ್ ಎಡಿಷನ್ ಹಾಗೂ ಎಕ್ಸ್6 ಎಂ ಸ್ಪೋರ್ಟ್ ಎಡಿಷನ್ ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಸುಧಾರಿತ ತಂತ್ರಜ್ಞಾನಗಳ ಜೊತೆ ಅಂತರ್‌ರಾಷ್ಟ್ರಿಯ ಗುಣಮಟ್ಟದ ಹೊರ ಮತ್ತು ಒಳ ವಿನ್ಯಾಸಗಳನ್ನು ಪಡೆದುಕೊಂಡಿರುವುದು ಮತ್ತೊಂದು ವಿಶೇಷ.

ಜೊತೆಗೆ ಎಕ್ಸಿಕ್ಯೂಟಿವ್ ಸೆಡಾನ್ ವೈಶಿಷ್ಟ್ಯತೆಗಳೊಂದಿಗೆ ಸಿದ್ಧಗೊಂಡಿರುವ ಎಕ್ಸ್5 ಸ್ಪೆಷಲ್ ಎಡಿಷನ್ ಮಾದರಿಯೂ ಬ್ಯೂ ಮ್ಯಾಟಾಲಿಕ್ ಹೊರ ವಿನ್ಯಾಸವನ್ನು ಹೊಂದಿದ್ದು, ಎಕ್ಸ್6 ಎಂ ಸ್ಪೋರ್ಟ್ ಎಡಿಷನ್ ಮಾದರಿಯೂ ಆಪ್ ರೋಡಿಂಗ್‌ಗೆ ಅನೂಕರವಾಗಬಲ್ಲ 20-ಇಂಚಿನ ಅಲಾಯ್ ಚಕ್ರಗಳನ್ನು ಹೊಂದಿದೆ.

ಈ ಮೂಲಕ ಇತರೆ ಐಷಾರಾಮಿ ಕಾರು ಆವೃತ್ತಿಗಳಿಂತ ವಿಭಿನ್ನತೆ ಪಡೆದಿರುವ ಎಕ್ಸ್5 ಸ್ಪೆಷಲ್ ಎಡಿಷನ್ ಹಾಗೂ ಎಕ್ಸ್6 ಎಂ ಸ್ಪೋರ್ಟ್ ಎಡಿಷನ್‌ಗಳು, ಸದ್ಯ ಮಾರುಕಟ್ಟೆಯಲ್ಲಿರುವ ಎಕ್ಸ್5, ಎಕ್ಸ್6,ಎಂ50ಡಿ ಆವೃತ್ತಿಗಳಿಂತ ಉನ್ನತ ಮಟ್ಟದ ತಂತ್ರಜ್ಞಾನವನ್ನು ವ್ಯವಸ್ಥೆಯನ್ನು ಪಡೆದುಕೊಂಡಿವೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಐಷಾರಾಮಿ ಕಾರುಗಳ ಸ್ಪೆಷಲ್ ಎಡಿಷನ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಎಕ್ಸ್5 ಸ್ಪೆಷಲ್ ಎಡಿಷನ್ ಹಾಗೂ ಎಕ್ಸ್6 ಎಂ ಸ್ಪೋರ್ಟ್ ಎಡಿಷನ್‌ಗಳನ್ನು ಭಾರತದಲ್ಲೂ ಪರಿಚಯಿಸುತ್ತಿರುವ ಬಿಎಂಡಬ್ಲ್ಯು ಸಂಸ್ಥೆಯು ಈ ಹಿಂದಿನ ಎಕ್ಸ್5, ಎಕ್ಸ್6 ಮಾದರಿಗಳಿಂತ ಸ್ವಲ್ಪ ಮಟ್ಟಿಗೆ ದುಬಾರಿ ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಲಿದೆ.


Click it and Unblock the Notifications