ಬಿಎಂಡಬ್ಲ್ಯು ಪರಿಚಯಿಸುತ್ತಿರುವ ಎಕ್ಸ್7 ಐ ಪರ್ಪಾಮೆನ್ಸ್ ಕಾರು ಹೇಗಿದೆ ಗೊತ್ತಾ?

Written By:

ಐಷಾರಾಮಿ ಎಸ್‌ಯುವಿ ವಿಭಾಗದಲ್ಲೇ ಹೊಸದೊಂದು ಮಾದರಿಯನ್ನು ಪರಿಚಯಿಸಲು ಮುಂದಾಗಿರುವ ಪ್ರತಿಷ್ಠಿತ ಬಿಎಂಡಬ್ಲ್ಯು ಸಂಸ್ಥೆಯು, ಮೊಟ್ಟ ಮೊದಲ ಬಾರಿಗೆ ಅತಿ ದೊಡ್ಡ ಗಾತ್ರದ ಎಕ್ಸ್7 ಐ ಪರ್ಪಾಮೆನ್ಸ್ ಕಾರು ಮಾದರಿ ಅನ್ನು ಪರಿಚಯಿಸಲು ಸಜ್ಜಾಗಿದೆ.

To Follow DriveSpark On Facebook, Click The Like Button
ಬಿಎಂಡಬ್ಲ್ಯು ಎಕ್ಸ್7 ಐ ಪರ್ಪಾಮೆನ್ಸ್ ಕಾರು ಹೇಗಿದೆ ಗೊತ್ತಾ?

ಎಸ್‌ಯುವಿ ಮಾದರಿಗಳಲ್ಲೇ ಹೊಸದೊಂದು ಆವೃತ್ತಿಯನ್ನು ಪರಿಚಯಿಸುತ್ತಿರುವ ಬಿಎಂಡಬ್ಲ್ಯು ಸಂಸ್ಥೆಯು ಎಕ್ಸ್7 ಐ ಪರ್ಪಾಮೆನ್ಸ್ ಕಾರನ್ನು ಬಿಡುಗಡೆಗೆ ಸಜ್ಜುಗೊಳಿಸುತ್ತಿದ್ದು, ಮುಂದಿನ ವಾರ ಆರಂಭಗೊಳ್ಳಲಿರುವ ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಭಾಗಿಯಾಗಲಿದೆ.

ಬಿಎಂಡಬ್ಲ್ಯು ಎಕ್ಸ್7 ಐ ಪರ್ಪಾಮೆನ್ಸ್ ಕಾರು ಹೇಗಿದೆ ಗೊತ್ತಾ?

ಹತ್ತು ಹಲವು ವಿಶೇಷತೆಗಳಿಗೆ ಕಾರಣವಾಗಿರೋ ಎಕ್ಸ್7 ಐ ಪರ್ಪಾಮೆನ್ಸ್ ಕಾರು ಮಾದರಿಯೂ ಈ ಹಿಂದಿನ ಎಲ್ಲಾ ಮಾದರಿಗಳಿಂತಲೂ ಅದ್ಭುತ ಹೊರವಿನ್ಯಾಸ ಮತ್ತು ಒಳ ವಿನ್ಯಾಸಗಳನ್ನು ಪಡೆದುಕೊಂಡಿರುವುದು ಐಷಾರಾಮಿ ಕಾರು ಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ.

ಬಿಎಂಡಬ್ಲ್ಯು ಎಕ್ಸ್7 ಐ ಪರ್ಪಾಮೆನ್ಸ್ ಕಾರು ಹೇಗಿದೆ ಗೊತ್ತಾ?

ಇದಲ್ಲದೇ ಮೊದಲ ಬಾರಿಗೆ 7 ಆಸನಗಳ ಎಸ್‌ಯುವಿ ಮಾದರಿಯನ್ನು ಪರಿಚಯಿಸುತ್ತಿರುವ ಬಿಎಂಡಬ್ಲ್ಯು, ಎಕ್ಸ್7 ಐ ಪರ್ಪಾಮೆನ್ಸ್ ಕಾರನ್ನು ಸುಧಾರಿತ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಅಭಿವೃದ್ಧಿಗೊಳಿಸಿರುವ ಮತ್ತೊಂದು ವಿಶೇಷ.

ಬಿಎಂಡಬ್ಲ್ಯು ಎಕ್ಸ್7 ಐ ಪರ್ಪಾಮೆನ್ಸ್ ಕಾರು ಹೇಗಿದೆ ಗೊತ್ತಾ?

ಹೊಸ ಕಾರಿನಲ್ಲಿ ಹೆಚ್‌ಡಿ ಹೆಡ್‌ಲ್ಯಾಂಪ್, ಹೆಚ್‌ಡಿ ಟೈಲ್ ಲ್ಯಾಂಪ್ ಜೊತೆಗೆ 23-ಇಂಚಿನ ಅಲಾಯ್ ಚಕ್ರಗಳನ್ನು ಹೊಂದಿರುವ ಎಕ್ಸ್7 ಐ ಪರ್ಪಾಮೆನ್ಸ್ ಕಾರು, 5,020ಎಂಎಂ ಉದ್ದ, 2,020ಎಂಎಂ ಅಗಲ, 1,800ಎಂಎಂಎತ್ತರ ಪಡೆದುಕೊಂಡಿದೆ.

Recommended Video
2017 Mercedes New GLA India Launch Kannada - DriveSpark ಕನ್ನಡ
ಬಿಎಂಡಬ್ಲ್ಯು ಎಕ್ಸ್7 ಐ ಪರ್ಪಾಮೆನ್ಸ್ ಕಾರು ಹೇಗಿದೆ ಗೊತ್ತಾ?

ಜೊತೆಗೆ ಉನ್ನತ ಮಟ್ಟದ ಎಂಜಿನ್ ಹೊಂದುವ ಸಾಧ್ಯತೆಗಳು ಕೂಡಾ ಇದ್ದು, ಆರು ಇಲ್ಲವೇ ಎಂಟು ಸಿಲಿಂಡರ್ ಎಂಜಿನ್ ಪಡೆದುಕೊಳ್ಳಲಿವೆ ಎನ್ನಲಾಗಿದೆ. ಹೀಗಾಗಿ ಎಕ್ಸ್7 ಐ ಪರ್ಪಾಮೆನ್ಸ್ ಕಾರುಗಳಲ್ಲಿ ವಿ12 ಎಂಜಿನ್ ಇರಿಸಲಾಗುತ್ತಿದ್ದು, ಇದೇ ಕಾರಣಕ್ಕೆ ಇದು ಅತ್ಯುತ್ತಮ ಎಸ್‌ಯುವಿ ಮಾದರಿಯಾಗುವುದಲ್ಲಿ ಯಾವುದೇ ಅನುಮಾನವಿಲ್ಲ.

ಬಿಎಂಡಬ್ಲ್ಯು ಎಕ್ಸ್7 ಐ ಪರ್ಪಾಮೆನ್ಸ್ ಕಾರು ಹೇಗಿದೆ ಗೊತ್ತಾ?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಎಸ್‌ಯುವಿ ಮಾದರಿಗಳಲ್ಲೇ ಎಕ್ಸ್7 ಐ ಪರ್ಪಾಮೆನ್ಸ್ ಅನ್ನು ವಿಶೇಷ ಮಾದರಿಯನ್ನಾಗಿಸುವ ಉದ್ದೇಶದೊಂದಿಗೆ ಬಿಎಂಡಬ್ಲ್ಯು ವಿಶೇಷ ಸೌಲಭ್ಯವುಳ್ಳ ಕಾರು ಮಾದರಿಯನ್ನು ಪರಿಚಯಿಸುತ್ತಿದ್ದು, ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಮತ್ತಷ್ಟು ಮಾಹಿತಿ ಲಭ್ಯವಾಗಲಿವೆ.

English summary
Read in Kannada about BMW X7 iPerformance Concept Revealed.
Story first published: Saturday, September 9, 2017, 19:17 [IST]
Please Wait while comments are loading...

Latest Photos