ದೀಪಾವಳಿ ವಿಶೇಷ : ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

Written By:

ಮಾರುತಿ ಸುಜುಕಿ, ಭಾರತದ ಅತಿದೊಡ್ಡ ಕಾರು ತಯಾರಕ ಕಂಪೆನಿಯು ತನ್ನ ವಾಹನಗಳ ಮೇಲೆ ಹಬ್ಬದ ಋತುವಿನಲ್ಲಿ ಭರ್ಜರಿ ರಿಯಾಯಿತಿಯನ್ನು ಘೋಷಿಸಿದ್ದು, ಯಾವ ಕಾರಿನ ಮೇಲೆ ಎಷ್ಟೆಲ್ಲಾ ಡಿಸ್‌ಕೌಂಟ್ ನೀಡಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ದೀಪಾವಳಿ ವಿಶೇಷ : ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

ಮಾರುತಿ ಆಲ್ಟೊ, ಸ್ವಿಫ್ಟ್, ಸ್ವಿಫ್ಟ್ ಡಿಜೈರ್, ಸೆಲೆರಿಯೊ, ವ್ಯಾಗನಾರ್ ಹಾಗು ಮುಂತಾದ ಮಾದರಿಗಳು ಹಬ್ಬದ ರಿಯಾಯಿತಿಯನ್ನು ಆಕರ್ಷಿಸಲಿದ್ದು, ಭಾರತದಲ್ಲಿ ಮಾರುತಿ ಸುಜುಕಿ ಕಾರುಗಳ ಮೇಲೆ ನಗದು ರಿಯಾಯಿತಿ ಮತ್ತು ಎಕ್ಸ್‌ಚೇಂಜ್ ಬೋನಸ್‌ಗಳನ್ನೂ ಸಹ ನೀಡುತ್ತಿರುವುದು ಕಾರು ಖರೀದಿದಾರರಲ್ಲಿ ಸಂತೋಷ ಉಂಟು ಮಾಡಿದೆ.

ದೀಪಾವಳಿ ವಿಶೇಷ : ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಆಲ್ಟೊ 800 ಮತ್ತು ಆಲ್ಟೊ ಕೆ10

ಮಾರುತಿ ಆಲ್ಟೊ 800 ಕಾರಿನ ಮೇಲೆ ರೂ. 20,000 ವರೆಗೆ ನಗದು ರಿಯಾಯಿತಿ ದೊರೆಯುತ್ತದೆ. ಹೆಚ್ಚುವರಿಯಾಗಿ, ನೀವು ಹ್ಯಾಚ್ ಬ್ಯಾಕ್ ಕಾರಿನೊಂದಿಗೆ ರೂ. 15,000ರಿಂದ ರೂ 20,000ವರೆಗಿನ ವಿನಿಮಯ ಬೋನಸ್‌ಗಳನ್ನು ಪಡೆಯಬಹುದು.

ದೀಪಾವಳಿ ವಿಶೇಷ : ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

ಅಂತೆಯೇ, ಆಲ್ಟೊ 800 ಎಕ್ಸ್‌ಚೇಂಜ್ ಬೋನಸ್‌ಗಳಂತೆ ಆಲ್ಟೊ ಕೆ10 ಸಹ ಬೋನಸ್ ಪಡೆಯಲಿದ್ದು, ರೂ. 10,000ವರೆಗೆ ಡಿಸ್ಕೌಂಟ್ ನೀಡಲಾಗಿದೆ. ಇನ್ನು ಆಲ್ಟೊದ ಎಎಂಟಿ ಮಾದರಿಯು ರೂ. 15,000 ರೂಪಾಯಿಗಳವರೆಗೂ ನಗದು ರಿಯಾಯಿತಿಯನ್ನು ಪಡೆಯುತ್ತದೆ ಹಾಗು ರೂ. 20,000ವರೆಗೆ ವಿನಿಮಯ ಬೋನಸ್‌ಗಳನ್ನು ಪಡೆಯುತ್ತದೆ.

ದೀಪಾವಳಿ ವಿಶೇಷ : ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ವ್ಯಾಗನ್ ಆರ್

ಮಾರುತಿ 800 ಮತ್ತು ಆಲ್ಟೋ ನಂತರ, ವ್ಯಾಗನ್ ಕಂಪನಿಗೆ ಕಂಪನಿಯು ಅತಿ ಹೆಚ್ಚು ಮಾರಾಟವಾಗುವ ವಾಹನವಾಗಿದೆ, ಇದು ಭಾರತದಲ್ಲಿ ಪರಿಚಯಿಸಲ್ಪಟ್ಟ ನಂತರ 2 ಮಿಲಿಯನ್ ಕಾರುಗಳು ಮಾರಾಟವಾಗಿವೆ.

ದೀಪಾವಳಿ ವಿಶೇಷ : ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

ಮಾರುತಿ ಈ ದೀಪಾವಳಿಗಾಗಿ ವ್ಯಾಗನ್ ಆರ್ ಕಾರಿನ ಮೇಲೆ ನಗದು ರಿಯಾಯಿತಿಯನ್ನು ನೀಡುತ್ತಿದೆ. ನಗದು ರಿಯಾಯಿತಿಯು ವ್ಯಾಗನ್ ಆರ್ ಕಾರಿನ ಮೇಲೆ 20,000 ದಿಂದ 30,000 ರೂ. ವರೆಗೆ ಇರಲಿದೆ.

ದೀಪಾವಳಿ ವಿಶೇಷ : ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಸೆಲೆರಿಯೊ

ಮಾರುತಿ ಸೆಲೆರಿಯೊ ಕಾರಿನ ವಿನಿಮಯ ಬೋನಸ್ ರೂ. 15,000 ವರೆಗೆ ಇರಲಿದ್ದು, ಮಾರುತಿ ಸೆಲೆರಿಯೊ ಎಎಂಟಿ ರೂಪಾಂತರ ರೂ. 22,000ವರೆಗೆ ನಗದು ರಿಯಾಯಿತಿಯನ್ನು ಪಡೆಯುತ್ತದೆ ಮತ್ತು ಅದೇ ಮೊತ್ತದ ಎಕ್ಸ್‌ಚೇಂಜ್ ಬೋನಸ್‌ ಪಡೆಯುತ್ತದೆ.

ದೀಪಾವಳಿ ವಿಶೇಷ : ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಸ್ವಿಫ್ಟ್ & ಸ್ವಿಫ್ಟ್ ಡಿಜೈರ್

ಮಾರುತಿ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರು ಭಾರತದ ಅತ್ಯುತ್ತಮ ಹ್ಯಾಚ್ ಬ್ಯಾಕ್‌ಗಳಲ್ಲಿ ಒಂದಾಗಿದೆ ಮತ್ತು ಈ ಕಾರು ಪ್ರಾರಂಭವಾದ ಸಮಯದಿಂದ ಭಾರತದಲ್ಲಿ ಅಗ್ರ ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಮಾರುತಿ ಸುಜುಕಿ ಈ ದೀಪಾವಳಿಗೆ ರೂ. 20,000 ವರೆಗೆ ರಿಯಾಯಿತಿ ಮತ್ತು ಮತ್ತು ರೂ 15 ಸಾವಿರ ಬೆಲೆಬಾಳುವ ಚಿನ್ನದ ನಾಣ್ಯ ಉಡುಗೊರೆಯಾಗಿ ನೀಡಲಿದೆ.

ದೀಪಾವಳಿ ವಿಶೇಷ : ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

ಮಾರುತಿ ಸ್ವಿಫ್ಟ್ ಡೀಸೆಲ್ ಮಾದರಿಯು ರೂ. 20,000 ರಿಂದ 22,000ವರೆಗೆ ಡಿಸ್ಕೌಂಟ್ ಮತ್ತು ರೂ.15,000ವರೆಗಿನ ವಿನಿಮಯ ಬೋನಸ್‌ಗಳನ್ನು ಹೊಂದಿದೆ.

ದೀಪಾವಳಿ ವಿಶೇಷ : ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

ಆಗಸ್ಟ್ 2017ರಲ್ಲಿ ಭಾರತದಲ್ಲಿ ಉತ್ತಮ ಮಾರಾಟವಾದ ಕಾರು ಎಂಬ ಖ್ಯಾತಿಯನ್ನು ಮಾರುತಿ ಸ್ವಿಫ್ಟ್ ಡಿಜೈರ್ ತನ್ನದಾಗಿಸಿಕೊಂಡಿತ್ತು ಮತ್ತು ಭಾರತದ ಅತ್ಯಂತ ಜನಪ್ರಿಯ ಕಾಂಪ್ಯಾಕ್ಟ್ ಸೆಡಾನ್‌ಗಳಲ್ಲಿ ಒಂದಾಗಿದೆ. ಮಾರುತಿ ಸುಜುಕಿ ಡಿಜೈರ್ ಟೂರ್ ಕಾರು ರೂ. 20,000 ನಗದು ರಿಯಾಯಿತಿಯನ್ನು ಕಾಣಲಿದೆ.

ದೀಪಾವಳಿ ವಿಶೇಷ : ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಎರ್ಟಿಗಾ

ಮಾರುತಿ ಎರ್ಟಿಗಾ ಕಾರಿನ ಖರೀದಿದಾರರು ಪೆಟ್ರೋಲ್ ಮಾದರಿಯಲ್ಲಿ ರೂ. 5,000 ನಗದು ರಿಯಾಯಿತಿಯನ್ನು ಪಡೆಯಬಹುದು. ಎರ್ಟಿಗಾ ಪೆಟ್ರೋಲ್ ಕಾರಿನ ಮೇಲೆ ರೂ. 20,000 ಸಾವಿರದಷ್ಟು ವಿನಿಮಯ ಬೋನಸ್ ಲಾಭವನ್ನು ನೀವು ಪಡೆದುಕೊಳ್ಳಬಹುದು.

ದೀಪಾವಳಿ ವಿಶೇಷ : ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

ಮಾರುತಿ ಎರ್ಟಿಗಾದ ಡೀಸೆಲ್ ರೂಪಾಂತರವು ರೂ. 30,000 ವರೆಗೆ ನಗದು ರಿಯಾಯಿತಿ ಮತ್ತು 20,000 ರೂ. ಬೋನಸ್ ವಿನಿಮಯದೊಂದಿಗೆ ಲಭ್ಯವಿದೆ.

ದೀಪಾವಳಿ ವಿಶೇಷ : ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಸಿಯಾಜ್

ಪೆಟ್ರೋಲ್ ಕಾರಿನ ಮೇಲೆ ಯಾವುದೇ ರೀತಿಯ ನಗದು ರಿಯಾಯಿತಿಯನ್ನು ಕಂಪನಿ ಘೋಷಣೆ ಮಾಡಿಲ್ಲ. ಆದರೆ ಪೆಟ್ರೋಲ್ ಮಾದರಿಯ ಸಿಯಾಜ್ ಕಾರಿನ ಮೇಲೆ ರೂ. 30,000 ರೂಪಾಯಿಗಳ ವಿನಿಮಯ ಬೋನಸ್ ಲಭ್ಯವಿರುತ್ತದೆ. ಡೀಸೆಲ್ ಸಿಯಾಜ್ ರೂ. 40,000 ರಿಯಾಯಿತಿಯೊಂದಿಗೆ ಮತ್ತು ರೂ. 50,000ವರೆಗೆ ವಿನಿಮಯ ಬೋನಸ್ ಪಡೆದುಕೊಂಡಿದೆ.

ದೀಪಾವಳಿ ವಿಶೇಷ : ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

ದೀಪಾವಳಿಯ ಸಮಯದಲ್ಲಿ ಮಾರುತಿ ಕಾರುಗಳ ಮೇಲೆ ರಿಯಾಯಿತಿಯ ಕೊಡುಗೆಗಳನ್ನು ಕಂಪನಿ ಒದಗಿಸುತ್ತದ್ದು, ಮಾರುತಿ ಸುಜುಕಿ ಕಾರು ಕೊಳ್ಳುವವರಿಗೆ ಇದು ಸುಸಂದರ್ಭ ಎನ್ನಬಹುದು.

English summary
Maruti Suzuki, India's largest carmaker, has announced a slew of discount and benefits this festive season. The Indo-Japanese company is offering discounts ranging from Rs 5,000 to Rs 50,000 along with exchange offers.
Story first published: Wednesday, September 27, 2017, 18:23 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark