ಭಾರತದಲ್ಲಿ ತನ್ನ ಮೊದಲ ಚಾರ್ಜಿಂಗ್ ಸ್ಟೇಷನ್ ಉದ್ಘಾಟನೆ ಮಾಡಿದ ಫೋರ್ಟಮ್

ಪ್ರಖ್ಯಾತ ಫಿನ್ನಿಷ್ ಕ್ಲೀನ್ ಎನರ್ಜಿ ಕಂಪೆನಿಯಾದ ಫೋರ್ಟಮ್, ಭಾರತದಲ್ಲಿ ಎಲೆಕ್ಟ್ರಿಕ್ ಚಾರ್ಜ್‌ಜಿಂಗ್ ವಿಚಾರವಾಗಿ ಎನ್‌ಬಿಸಿಸಿ (ಇಂಡಿಯಾ) ಸಂಸ್ಥೆಯೊಂದಿಗೆ ಮೆಮೊರಾಂಡಮ್ ಆಫ್ ಅಂಡರ್‌ಸ್ಟ್ಯಾಂಡಿಂಗ್(ಎಮ್ಒಯು)ಗೆ ಸಹಿ ಹಾಕಿದೆ.

By Girish

ಎನ್‌ಬಿಸಿಸಿ ನಿರ್ವಹಣೆ ಮಾಡುತ್ತಿರುವ ನ್ಯೂ ಮೋತಿ ಬಾಗ್ ಕಾಲೋನಿಯಲ್ಲಿ, ಪೈಲಟ್ ಯೋಜನೆಯ ಆಧಾರದ ಮೇಲೆ ವಿದ್ಯುತ್ ವಾಹನಗಳ 22 ಕಿಲೋವ್ಯಾಟ್ ಎ.ಸಿ ಚಾರ್ಜರ್ ಪಾಯಿಂಟನ್ನು ಫೋರ್ಟಮ್ ಕಂಪನಿ ಸ್ಥಾಪಿಸಿದ್ದು, ಕ್ಲೌಡ್-ಆಧಾರಿತ ಕಂಪ್ಯೂಟಿಂಗ್ ಸಿಸ್ಟಮ್ ರೀತಿಯಲ್ಲಿ ಈ ಸ್ಟೇಷನ್ ನಿರ್ವಹಿಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಭಾರತದಲ್ಲಿ ತನ್ನ ಮೊದಲ ಚಾರ್ಜಿಂಗ್ ಸ್ಟೇಷನ್ ಉದ್ಘಾಟನೆ ಮಾಡಿದ ಫೋರ್ಟಮ್

ದೆಹಲಿಯಲ್ಲಿ ಅಳವಡಿಸಲಾಗಿರುವ ಮೊದಲ ಚಾರ್ಜಿಂಗ್ ಪಾಯಿಂಟ್ ದೇಶದಾದ್ಯಂತ ಇವಿ ಚಾರ್ಜಿಂಗ್ ಪಾಯಿಂಟ್‌ಗಳ ಅಭಿವೃದ್ಧಿಪಡಿಸುವ ಯೋಜನೆಯ ಮೊದಲ ಭಾಗವಾಗಿದ್ದು, ಇದನ್ನು ಫಿನ್ಲೆಂಡ್ ದೇಶದ ವಸತಿ, ಶಕ್ತಿ ಮತ್ತು ಪರಿಸರದ ಮಂತ್ರಿಯಾಗಿರುವ ಕಿಮ್ಮೋ ಟಿಲೈಕೆನೆನ್ ರವರು ಉದ್ಘಾಟಿಸಿದರು.

ಭಾರತದಲ್ಲಿ ತನ್ನ ಮೊದಲ ಚಾರ್ಜಿಂಗ್ ಸ್ಟೇಷನ್ ಉದ್ಘಾಟನೆ ಮಾಡಿದ ಫೋರ್ಟಮ್

ಈ ಚಾರ್ಜಿಂಗ್ ಸ್ಟೇಷನ್, ಜಿಪಿಆರ್‌ಎಸ್ ಮತ್ತು ಒಸಿಪಿಪಿ 1.5 ಸಂವಹನ ವ್ಯವಸ್ಥೆಯನ್ನು ಒಳಗೊಂಡಿದೆ ಹಾಗು ಹೊರಾಂಗಣ ಕಾರ್ಯಾಚರಣೆಗಳಿಗೆ ಸೂಕ್ತವಾದ IP54 ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ. ದೆಹಲಿಯ ಈ ಸ್ಟೇಷನ್ ಎರಡು ಚಾರ್ಜಿಂಗ್ ಪಾಯಿಂಟ್‌ಗಳನ್ನು ಹೊಂದಿದೆ, ಎರಡು ಕಾರುಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಲು ಅನುವು ಮಾಡಿಕೊಡುತ್ತದೆ.

ಭಾರತದಲ್ಲಿ ತನ್ನ ಮೊದಲ ಚಾರ್ಜಿಂಗ್ ಸ್ಟೇಷನ್ ಉದ್ಘಾಟನೆ ಮಾಡಿದ ಫೋರ್ಟಮ್

ಇತ್ತೀಚಿಗೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಜನರು ಹೆಚ್ಚು ಒಲವು ತೋರುತ್ತಿದ್ದು, 2030ರ ವೇಳೆಗೆ ಭಾರತದದ್ಯಂತ ಶೇ.100ರಷ್ಟು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಎಂಜಿನ್ ಪ್ರೇರಿತ ವಾಹನಗಳನ್ನು ರಸ್ತೆಗಿಳಿಸುವ ಯೋಜನೆಗಳು ಹೊಂದಿದೆ.

ಭಾರತದಲ್ಲಿ ತನ್ನ ಮೊದಲ ಚಾರ್ಜಿಂಗ್ ಸ್ಟೇಷನ್ ಉದ್ಘಾಟನೆ ಮಾಡಿದ ಫೋರ್ಟಮ್

ಈ ನಿಟ್ಟಿನಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಕಾಗುವ ಮೂಲ ಸೌಕರ್ಯಗಳನ್ನು ಭಾರತದಾದ್ಯಂತ ವಿಸ್ತರಣೆಗೆ ಕೈಹಾಕಿರುವ ಸರ್ಕಾರ, ಕಾರು ಚಾರ್ಜ್ ಮಾಡುವ ಸ್ಟೇಷನ್ ಸ್ಥಾಪನೆಯಂತಹ ಮೂಲಭೂತ ಸೌಕರ್ಯವನ್ನು ಅಭಿವೃದ್ಧಿಪಡಿಸಲು ಈ MoUಗೆ ಸಹಿ ಮಾಡಿದೆ.

ಭಾರತದಲ್ಲಿ ತನ್ನ ಮೊದಲ ಚಾರ್ಜಿಂಗ್ ಸ್ಟೇಷನ್ ಉದ್ಘಾಟನೆ ಮಾಡಿದ ಫೋರ್ಟಮ್

ಕೇಂದ್ರ ಸರ್ಕಾರದ ನೀತಿ ಆಯೋಗವೂ ಕೂಡ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಕಾರುಗಳು ಮತ್ತು ಬೈಕ್‌ಗಳ ಉತ್ಪಾದನೆ ಮೇಲಿನ ಸಬ್ಸಡಿ ಯೋಜನೆಯನ್ನು ಮುಂದುವರಿಸು ನಿರ್ಧರಿಸಿದ್ದು, ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳಿಗೆ ರೂ. 1.38 ಲಕ್ಷ ಮತ್ತು ಬೈಕ್‌ಗಳಿಗೆ ರೂ. 29,000 ಸಾವಿರ ಪ್ರೋತ್ಸಾಹ ಧನ ಮುಂದುವರಿಸಲು ನಿರ್ಧರಿಸಿದೆ.

Most Read Articles

Kannada
English summary
Leading Finnish clean energy company, Fortum Oyj has signed a Memorandum of Understanding (MoU) with NBCC (India). Fortum has installed a 22 KW AC charger for electric vehicles on a pilot plan basis in New Moti Bagh Colony maintained by NBCC.
Story first published: Saturday, October 7, 2017, 11:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X