ಗುರುಗ್ರಾಮ್‌ನಲ್ಲಿ ಸೇವೆಗೆ ಸಿದ್ಧಗೊಂಡ ಎಲೆಕ್ಟ್ರಿಕ್ ಬಸ್‌ಗಳು

Written By:

ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ ಎಲೆಕ್ಟ್ರಿಕ್ ವಾಹನಗಳಿಗೆ ವಿಶೇಷ ಒತ್ತು ನೀಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ರೂಪಿಸಿರುವ ಹರಿಯಾಣ ಸರ್ಕಾರವು ಗುರುಗ್ರಾಮ್‌ನಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸೇವೆಯನ್ನು ಆರಂಭಿಸುತ್ತಿದೆ.

ಗುರುಗ್ರಾಮ್‌ನಲ್ಲಿ ಸೇವೆಗೆ ಸಿದ್ಧಗೊಂಡ ಎಲೆಕ್ಟ್ರಿಕ್ ಬಸ್‌ಗಳು

ನಗರ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ ಪ್ರಮಾಣ ಹೆಚ್ಚುತ್ತಿದ್ದು, ಮಾಲಿನ್ಯ ತಡೆ ಉದ್ದೇಶದಿಂದ ಹರಿಯಾಣ ಸರ್ಕಾರವು ಮಾಹಿತಿ ತಂತ್ರಜ್ಞಾನ ನಗರಿ ಗುರುಗ್ರಾಮ್‌ನಲ್ಲಿ ಬೃಹತ್ ಯೋಜನೆ ರೂಪಿಸುತ್ತಿದೆ.

ಗುರುಗ್ರಾಮ್‌ನಲ್ಲಿ ಸೇವೆಗೆ ಸಿದ್ಧಗೊಂಡ ಎಲೆಕ್ಟ್ರಿಕ್ ಬಸ್‌ಗಳು

ಸ್ಥಳೀಯ ಸಾರಿಗೆ ಇಲಾಖೆಯನ್ನು ಆಧುನಿಕರಣಗೊಳಿಸುತ್ತಿರುವ ಹರಿಯಾಣ ಸರ್ಕಾರವು ಗುರುಗ್ರಾಮ್‌ನಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸುತ್ತಿದ್ದು, ಹೊಸ ಯೋಜನೆ ಸದ್ಯದಲ್ಲೇ ಚಾಲನೆ ಪಡೆದುಕೊಳ್ಳುತ್ತಿದೆ.

ಗುರುಗ್ರಾಮ್‌ನಲ್ಲಿ ಸೇವೆಗೆ ಸಿದ್ಧಗೊಂಡ ಎಲೆಕ್ಟ್ರಿಕ್ ಬಸ್‌ಗಳು

ಮೊದಲ ಹಂತವಾಗಿ ಗುರುಗ್ರಾಮ್‌ನಲ್ಲಿ 100 ಎಲೆಕ್ಟ್ರಿಕ್ ಬಸ್‌ಗಳು ಸೇವೆ ಆರಂಭಿಸಲಿದ್ದು, ಪೋಲ್ಯಾಂಡ್ ದೇಶದ ಸಾರಿಗೆ ವ್ಯವಸ್ಥೆಯ ಮಾದರಿಯನ್ನೇ ಇಲ್ಲೂ ಅಳವಡಿಕೆ ಮಾಡಿಕೊಳ್ಳಲಾಗುತ್ತಿದೆ.

ಗುರುಗ್ರಾಮ್‌ನಲ್ಲಿ ಸೇವೆಗೆ ಸಿದ್ಧಗೊಂಡ ಎಲೆಕ್ಟ್ರಿಕ್ ಬಸ್‌ಗಳು

ಸದ್ಯ ಎಲೆಕ್ಟ್ರಿಕ್ ಬಸ್‌ಗಳನ್ನು ಬಳಕೆ ಮಾಡಿದ್ದಲ್ಲಿ ಪ್ರತಿವರ್ಷ 42.50 ಲಕ್ಷ ಲೀಟರ್ ಡೀಸೆಲ್ ಉಳಿತಾಯವಾಗಲಿದ್ದು, 1,150 ಟನ್ ಕಾರ್ಬನ್ ಉತ್ಪತ್ತಿಗೆ ಕಡಿವಾಣ ಹಾಕಬಹುದಾಗಿದೆ ಎಂದು ಅಂದಾಜಿಸಲಾಗಿದೆ.

ಗುರುಗ್ರಾಮ್‌ನಲ್ಲಿ ಸೇವೆಗೆ ಸಿದ್ಧಗೊಂಡ ಎಲೆಕ್ಟ್ರಿಕ್ ಬಸ್‌ಗಳು

ದೆಹಲಿ ಮತ್ತು ಗುರುಗ್ರಾಮ್ ಆಯ್ದ ಪ್ರದೇಶಗಳಲ್ಲಿ ಮೊದಲ ಹಂತವಾಗಿ ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸಲಿದ್ದು, ಮುಂಬರುವ ದಿನಗಳಲ್ಲಿ ಗುರುಗ್ರಾಮ್ ಎಲ್ಲಾ ಪ್ರದೇಶಗಳಿಗೂ ಎಲೆಕ್ಟ್ರಿಕ್ ಬಸ್ ಸಂಚಾರ ಲಭ್ಯವಾಗಲಿದೆ.

ಗುರುಗ್ರಾಮ್‌ನಲ್ಲಿ ಸೇವೆಗೆ ಸಿದ್ಧಗೊಂಡ ಎಲೆಕ್ಟ್ರಿಕ್ ಬಸ್‌ಗಳು

ಪೋಲ್ಯಾಂಡ್ ಮೂಲದ ಬಿಎನ್‌ಜಿ ಗ್ರೂಫ್ ನೇತೃತ್ವದಲ್ಲಿ ಈ ಯೋಜನೆ ರೂಪಗೊಳ್ಳುತ್ತಿದ್ದು, ಗುರುಗ್ರಾಮ್‌ನಲ್ಲಿ ಹೊಸ ಯೋಜನೆ ಯಶಸ್ವಿ ಆದಲ್ಲಿ ಮುಂಬರುವ ದಿನಗಳಲ್ಲಿ ದೇಶದ ಇತರೆ ಪ್ರಮುಖ ನಗರಗಳಲ್ಲೂ ಎಲೆಕ್ಟ್ರಿಕ್ ಬಸ್‌ಗಳು ಸಂಚಲಿಸಲಿವೆ.

English summary
Haryana To Introduce Electric Buses In Gurgaon.
Story first published: Wednesday, July 5, 2017, 17:22 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark