2017ರ ಹೋಂಡಾ ಅಮೇಜ್ ಪ್ರಿವಿಲೇಜ್ ಎಡಿಷನ್ ಬಿಡುಗಡೆ

Written By:

2013ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿ ಭಾರೀ ಜನಪ್ರಿಯತೆ ಹೊಂದಿದ್ದ ಹೋಂಡಾ ಅಮೇಜ್ ಆವೃತ್ತಿಯೂ ಇದೀಗ ಪ್ರಿಲಿಲೇಜ್ ಎಡಿಷನ್ ಕಾರು ಆವೃತ್ತಿ ಬಿಡುಗಡೆಯಾಗಿದ್ದು, ಹಲವು ವಿಶೇಷತೆಗಳಿಂದ ಕೂಡಿರುವ ಹೊಸ ಕಾರಿನ ಸಂಪೂರ್ಣ ಮಾಹಿತಿ ಇಲ್ಲಿದೆ.

2017ರ ಹೋಂಡಾ ಅಮೇಜ್ ಪ್ರಿವಿಲೇಜ್ ಎಡಿಷನ್ ಬಿಡುಗಡೆ

ಈ ಹಿಂದೆ ಸೆಡಾನ್ ಆವೃತ್ತಿಗಳಲ್ಲಿ ಅತಿಹೆಚ್ಚು ಬೇಡಿಕೆ ಹೊಂದಿದ್ದ ಅಮೇಜ್ ಆವೃತ್ತಿಯನ್ನು ಪ್ರಸ್ತುತ ತಂತ್ರಜ್ಞಾನಗಳೊಂದಿಗೆ ಉನ್ನತಿಕರಿಸಿರುವ ಹೋಂಡಾ ಸಂಸ್ಥೆಯು ಪ್ರಿವಿಲೇಜ್ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಕಾರಿನ ಬೆಲೆಯು ಎಕ್ಸ್‌ಶೋರಂಗಳ ಪ್ರಕಾರ ರೂ.6.49 ಲಕ್ಷಕ್ಕೆ ಲಭ್ಯವಿದೆ.

2017ರ ಹೋಂಡಾ ಅಮೇಜ್ ಪ್ರಿವಿಲೇಜ್ ಎಡಿಷನ್ ಬಿಡುಗಡೆ

ಡಿಸೇಲ್ ಮತ್ತು ಪೆಟ್ರೋಲ್ ಆವೃತ್ತಿಯಲ್ಲಿ ಖರೀದಿಗೆ ಲಭ್ಯವಿರುವ ಹೋಂಡಾ ಅಮೇಜ್ ಪ್ರಿವಿಲೇಜ್ ಎಡಿಷನ್, ಪೆಟ್ರೋಲ್ ಆವೃತ್ತಿಯು 1.2-ಲೀಟರ್ ಎಂಜಿನ್ ಮತ್ತು ಡೀಸೆಲ್ ಆವೃತ್ತಿಯು 1.5-ಲೀಟರ್ ಎಂಜಿನ್‌ ಸಾಮರ್ಥ್ಯ ಹೊಂದಿವೆ.

2017ರ ಹೋಂಡಾ ಅಮೇಜ್ ಪ್ರಿವಿಲೇಜ್ ಎಡಿಷನ್ ಬಿಡುಗಡೆ

ಬೆಲೆಗಳು

ಪೆಟ್ರೋಲ್ ಆವೃತ್ತಿಯ ಬೆಲೆ- ರೂ.6.49 ಲಕ್ಷ, ಡಿಸೇಲ್ ಆವೃತ್ತಿಯ ಬೆಲೆ- ರೂ.7.73 ಲಕ್ಷ

2017ರ ಹೋಂಡಾ ಅಮೇಜ್ ಪ್ರಿವಿಲೇಜ್ ಎಡಿಷನ್ ಬಿಡುಗಡೆ

ಡಿಜಿ ಪ್ಯಾಡ್ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಮತ್ತು ವಿನೂತನ ಗ್ರಾಫಿಕ್ಸ್ ವಿನ್ಯಾಸಗಳೊಂದಿಗೆ ಬಿಡುಗಡೆಯಾಗಿರುವ ಹೋಂಡಾ ಅಮೇಜ್ ಪ್ರಿವಿಲೇಜ್ ಎಡಿಷನ್, ಅದ್ಭುತ ಒಳವಿನ್ಯಾಸವನ್ನು ಕೂಡಾ ಹೊಂದಿದೆ.

2017ರ ಹೋಂಡಾ ಅಮೇಜ್ ಪ್ರಿವಿಲೇಜ್ ಎಡಿಷನ್ ಬಿಡುಗಡೆ

ಪೆಟ್ರೋಲ್ ಆವೃತ್ತಿಯು 88ಬಿಎಚ್‌ಪಿ, 109ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, ಅದೇ ರೀತಿಯಾಗಿ ಡೀಸೆಲ್ ಆವೃತ್ತಿಯು 99-ಬಿಎಚ್‌ಪಿ ಮತ್ತು 200ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಪಡೆದುಕೊಂಡಿವೆ.

2017ರ ಹೋಂಡಾ ಅಮೇಜ್ ಪ್ರಿವಿಲೇಜ್ ಎಡಿಷನ್ ಬಿಡುಗಡೆ

ಇನ್ನು ಮೈಲೇಜ್ ವಿಚಾರವಾಗಿ ಹೋಂಡಾ ಅಮೇಜ್ ಪ್ರಿವಿಲೇಜ್ ಎಡಿಷನ್ ಹೆಚ್ಚು ಗಮನಸೆಳೆಯುತ್ತಿದ್ದು, ಪ್ರತಿ ಲೀಟರ್‌ಗೆ ಪೆಟ್ರೋಲ್ ಆವೃತ್ತಿ 17.8ಕಿ.ಮಿ ಮೈಲೇಜ್ ನೀಡದರೆ ಡೀಸೆಲ್ ಆವೃತ್ತಿಯು 25.8ಕಿ.ಮಿ ಮೈಲೇಜ್ ನೀಡುತ್ತವೆ.

2017ರ ಹೋಂಡಾ ಅಮೇಜ್ ಪ್ರಿವಿಲೇಜ್ ಎಡಿಷನ್ ಬಿಡುಗಡೆ

ಇನ್ನು ಕಾರಿನ ಒಳವಿನ್ಯಾಸವು ಕೂಡಾ ಸಾಕಷ್ಟು ಬದಲಾವಣೆ ಪಡೆದುಕೊಂಡಿದ್ದು, 3ಡಿ ನೆವಿಗೆಷನ್, ವೈ-ಫೈ ಸೌಲಭ್ಯ, ಮಲ್ಟಿಪಲ್ ಯುಎಸ್‌ಬಿ ಸ್ಪಾಟ್ ಜೊತೆಗೆ ಸುರಕ್ಷೆತೆಗಾಗಿ ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್,ಎಬಿಎಸ್ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ.

2017ರ ಹೋಂಡಾ ಅಮೇಜ್ ಪ್ರಿವಿಲೇಜ್ ಎಡಿಷನ್ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಪ್ರಮುಖ ಸೆಡಾನ್ ಆವೃತ್ತಿಗಳಾದ ಮಾರುತಿ ಡಿಜೈರ್, ಹ್ಯುಂಡೈ ಎಕ್ಸೆಂಟ್, ಟಾಟಾ ಟಿಗೋರ್, ಫೋರ್ಡ್ ಆಸ್ಫೈರ್ ಮತ್ತು ಫೋಕ್ಸ್‌ವ್ಯಾಗನ್ ಆಮಿಯೋ ಆವೃತ್ತಿಗಳು ಹೊಸ ತಂತ್ರಜ್ಞಾನದೊಂದಿಗೆ ಉನ್ನತಿಕರಣದೊಂದಿಗೆ ಮರುಬಿಡುಗಡೆಯಾಗಿದ್ದು, ಈ ಹಿನ್ನೆಲೆ ಸೆಡಾನ್ ಮಾದರಿಗಳಿಗೆ ಸ್ಪರ್ಧೆ ಒಡ್ಡುವ ನಿಟ್ಟಿನಲ್ಲಿ ಹೋಂಡಾ ಅಮೇಜ್ ಪ್ರಿವಿಲೇಜ್ ಎಡಿಷನ್ ಬಿಡುಗಡೆಯಾಗಿದೆ.

Read more on ಹೋಂಡಾ honda
English summary
Read in Kannada about 2017 Honda Amaze Privilege Edition Launched In India.
Story first published: Wednesday, July 19, 2017, 10:38 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark