ಬಿಆರ್-ವಿ ಆವೃತ್ತಿಯಲ್ಲಿ ಡಿಜಿಪ್ಯಾಡ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸೌಲಭ್ಯ ಒದಗಿಸಿದ ಹೋಂಡಾ

ವಾಹನ ಸವಾರರಿಗೆ ನೆರವಾಗಬಲ್ಲ ಸುಧಾರಿತ ಮಾಹಿತಿ ಸಲಕರಣೆಗಳನ್ನು ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೋಂಡಾ ಕೂಡಾ ತನ್ನ ಪ್ರಮುಖ ಕಾರು ಮಾದರಿಗಳಲ್ಲಿ ಡಿಜಿಪ್ಯಾಡ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸೌಲಭ್ಯ ಒದಗಿಸುತ್ತಿದೆ.

By Praveen

ಮಾಹಿತಿ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇದೀಗ ಎಲ್ಲಾ ವಾಹನ ಉತ್ಪಾದಕರು ವಾಹನ ಸವಾರರಿಗೆ ನೆರವಾಗಬಲ್ಲ ಸುಧಾರಿತ ಮಾಹಿತಿ ಸಲಕರಣೆಗಳನ್ನು ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೋಂಡಾ ಕೂಡಾ ತನ್ನ ಪ್ರಮುಖ ಕಾರು ಮಾದರಿಗಳಲ್ಲಿ ಡಿಜಿಪ್ಯಾಡ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸೌಲಭ್ಯ ಒದಗಿಸುತ್ತಿದೆ.

ಬಿಆರ್-ವಿನಲ್ಲಿ ಡಿಜಿಪ್ಯಾಡ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸೌಲಭ್ಯ

ಈ ಹಿಂದೆ ಹೋಂಡಾ ನಿರ್ಮಾಣದ ಸಿಟಿ 2017 ಮತ್ತು ಡಬ್ಲ್ಯುಆರ್-ವಿ ಆವೃತ್ತಿಗಳಲ್ಲಿ ಮಾತ್ರ ಒದಗಿಸಲಾಗಿದ್ದ ಡಿಜಿಪ್ಯಾಡ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸೌಲಭ್ಯವನ್ನು ಇದೀಗ ಬಿಆರ್-ವಿ ಆವೃತ್ತಿಯಲ್ಲೂ ಒದಗಿಸಲಾಗಿದ್ದು, ಪ್ರಯಾಣದ ಅವಧಿಯಲ್ಲಿ ವಾಹನ ಸವಾರರಿಗೆ ಸಾಕಷ್ಟು ಅನುಕೂಲಕರವಾಗಲಿವೆ.

ಬಿಆರ್-ವಿನಲ್ಲಿ ಡಿಜಿಪ್ಯಾಡ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸೌಲಭ್ಯ

7 ಇಂಚು ಗಾತ್ರವನ್ನು ಹೊಂದಿರುವ ಡಿಜಿಪ್ಯಾಡ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸೌಲಭ್ಯವು ಒಂದೇ ಸೂರಿನಡಿ ಎಲ್ಲ ಮಾಹಿತಿ ನೀಡಬಲ್ಲ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಇದರೊಂದಿಗೆ ಟಚ್ ಸ್ಕ್ರೀನ್ ಆಡಿಯೋ ವಿಡಿಯೋ ನೆವಿಗೆಷನ್(ಎವಿಎನ್) ವ್ಯವಸ್ಥೆಯನ್ನು ಪಡೆದುಕೊಂಡಿದೆ.

ಬಿಆರ್-ವಿನಲ್ಲಿ ಡಿಜಿಪ್ಯಾಡ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸೌಲಭ್ಯ

ಬಿಆರ್-ವಿ ಒದಗಿಸಲಾಗಿರುವ ಡಿಜಿಪ್ಯಾಡ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಅಳವಡಿಕೆಯು 3ಡಿ ನೆವಿಗೆಷನ್ ಹೊಂದಿದ್ದು, ಧ್ವನಿ ಸಂಪರ್ಕದಿಂದಲೇ ನಿಯಂತ್ರಣ ಮಾಡಬಹುದಾಗಿದೆ. ಜೊತೆಗೆ ಬ್ಲ್ಯೂಟೂಥ್, ಎಎಮ್/ಎಫ್ಎಂ, ಹೆಚ್‌ಡಿಎಂಐ ಪೋರ್ಟ್ ನೀಡಲಾಗಿದೆ.

ಬಿಆರ್-ವಿನಲ್ಲಿ ಡಿಜಿಪ್ಯಾಡ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸೌಲಭ್ಯ

ಆದ್ರೆ ಹೊಸ ಸೌಲಭ್ಯಗಳನ್ನು ಒದಗಿಸಿದ್ದರು ಬೆಲೆಗಳಲ್ಲಿ ಯಾವುದೇ ಬದಲಾವಣೆ ತರದ ಹೋಂಡಾ, ಈ ಹಿಂದಿನ ಬೆಲೆಗಳಾದ ರೂ.12 .27 ಲಕ್ಷ (ಪೆಟ್ರೋಲ್ ಉನ್ನತ ಆವೃತ್ತಿ) ಮತ್ತು ರೂ.13.22(ಡೀಸೆಲ್ ಉನ್ನತ ಆವೃತ್ತಿ) ಮುಂದುವರಿಸಲಾಗಿದೆ.

ಬಿಆರ್-ವಿನಲ್ಲಿ ಡಿಜಿಪ್ಯಾಡ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸೌಲಭ್ಯ

ಇನ್ನು ಡಿಜಿಪ್ಯಾಡ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸೌಲಭ್ಯದ ಜೊತೆ ಹೊಸದೊಂದು ಆಯ್ಕೆ ನೀಡಿರುವ ಹೋಂಡಾ, ರಿರ್ ಪಾರ್ಕಿಂಗ್ ಸೆನ್ಸಾರ್ ತಂತ್ರಜ್ಞಾನವನ್ನು ಒದಗಿಸಲಾಗಿದೆ. ಇದು ಪಾರ್ಕಿಂಗ್ ವೇಳೆ ನೇರವಾಗುದಲ್ಲದೇ ಹಾನಿ ಸಂದರ್ಭಗಳನ್ನು ತಪ್ಪಿಸಲು ಸಹಕಾರಿಯಾಗುತ್ತದೆ.

ಬಿಆರ್-ವಿನಲ್ಲಿ ಡಿಜಿಪ್ಯಾಡ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸೌಲಭ್ಯ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಬಿಆರ್-ವಿ ಮಾದರಿಯು ಎಸ್‌ಯುವಿ ವೈಶಿಷ್ಟ್ಯತೆಗಳೊಂದಿಗೆ ಜನಪ್ರಿಯತೆ ಸಾಧಿಸಿದ್ದು, ಇದೀಗ ಡಿಜಿಪ್ಯಾಡ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸೌಲಭ್ಯವನ್ನು ಒದಗಿಸಿರುವುದು ಎಸ್‌ಯುವಿ ಪ್ರಿಯರಿಗೆ ಸಹಾಯಕಾರಿಯಾಗಲಿದೆ.

Most Read Articles

Kannada
Read more on ಹೋಂಡಾ honda
English summary
Read in Kannada about Honda BR-V Gets Digipad Touchscreen Infotainment System.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X