ಕಾರುಗಳ ಮೇಲೆ ಡಿಸ್ಕೌಂಟ್ ಆಫರ್ ಘೋಷಣೆ ಮಾಡಿದ ಹೋಂಡಾ !!
ಹೋಂಡಾ ಇಂಡಿಯಾ ಎರಡು ತಿಂಗಳುಗಳ ಅವಧಿಯ ವಾರ್ಷಿಕೋತ್ಸವ ಘೋಷಿಸಿದ್ದು, 'ದಿ ಗ್ರೇಟ್ ಹೋಂಡಾ ಫೆಸ್ಟ್' ಎಂದು ಹೆಸರಿಸಿದೆ. ಸೆಪ್ಟೆಂಬರ್ 1ರಂದು ಈ ಉತ್ಸವ ಪ್ರಾರಂಭವಾಗಿದ್ದು, ಅಕ್ಟೋಬರ್ 31ರವರೆಗೆ ನಡೆಯಲಿದೆ.
ಹೋಂಡಾ ಇಂಡಿಯಾ ಎರಡು ತಿಂಗಳುಗಳ ಅವಧಿಯ ವಾರ್ಷಿಕೋತ್ಸವ ಘೋಷಿಸಿದ್ದು, 'ದಿ ಗ್ರೇಟ್ ಹೋಂಡಾ ಫೆಸ್ಟ್' ಎಂದು ಹೆಸರಿಸಿದೆ. ಸೆಪ್ಟೆಂಬರ್ 1ರಂದು ಈ ಉತ್ಸವ ಪ್ರಾರಂಭವಾಗಿದ್ದು, ಅಕ್ಟೋಬರ್ 31ರವರೆಗೆ ನಡೆಯಲಿದೆ.

ಪ್ರತಿ ವರ್ಷವೂ ಸಹ ಕಾರು ಮಾರಾಟ ಸಂಸ್ಥೆಗಳು ಹಬ್ಬದ ಋತುವಿನಲ್ಲಿ ಉತ್ತಮ ಕೊಡುಗೆಗಳನ್ನು ನೀಡುತ್ತಾ ಬಂದಿರುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಆದರೆ, ಡಬಲ್ ಧಮಾಕ ಎಂಬಂತೆ, ಹೋಂಡಾ ಸಂಸ್ಥೆಯು ತನ್ನ ವಾರ್ಷಿಕೋತ್ಸವದ ಜೊತೆ ಜೊತೆಗೆ ಹಬ್ಬದ ಆಚರಣೆಗೆ ಮುಂದಾಗಿದೆ.

ಹೌದು, ಈ ವರ್ಷದ ಹಬ್ಬದ ಋತುವಿನಲ್ಲಿ ಹೋಂಡಾ ಸಂಸ್ಥೆಯು ಮುಂದಿನ ಎರಡು ತಿಂಗಳಿನಲ್ಲಿ ಉತ್ತಮ ಮಾರಾಟವನ್ನು ದಾಖಲಿಸಲಿದೆ ಎಂಬ ಮಾತುಗಳು ವಾಹನೋದ್ಯಮದಲ್ಲಿ ಕೇಳಿಬರುತ್ತಿವೆ.

ನೀಡಲಾದ ಎರಡು ತಿಂಗಳ ಸಮಯದ ಚೌಕಟ್ಟಿನಲ್ಲಿ ತಮ್ಮ ವಾಹನಕ್ಕೆ ಇನ್ವಾಯ್ಸ್ ಮಾಡಿಸಿದ ಯಾರಾದರೂ ಈ ಆಫರ್ ಪಡೆಯಬಹುದಾಗಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಆಫರ್ ಕೇವಲ ಕಾರುಗಳ ಮೇಲಿನ ರಿಯಾಯಿತಿ ಬಗ್ಗೆ ಅಷ್ಟೇ ಮಾತ್ರವಲ್ಲದೆ, ಹೋಂಡಾ ಸಂಸ್ಥೆಯ ಗ್ರಾಹಕರು ರೂ.1 ನೀಡಿ ಚಂದಾದಾರರಾದಲ್ಲಿ ಅಮೆರಿಕಾಗೆ ಪ್ರವಾಸ ಹೋಗುವತಹ ಸೌಲಭ್ಯ ಸಹ ಪಡೆಯಬಹುದಾಗಿದೆ.

ಹೋಂಡಾ ಕಾರುಗಳ ಆಫರ್ಸ್ ಈ ಕೆಳಗಿನಂತಿದೆ :
ಬ್ರಿಯೋ: ರೂ.21,000 ವರೆಗೆ ರಿಯಾಯಿತಿ ಪಡೆಯಬಹುದಾಗಿದೆ. ಇದರ ಜೊತೆಗೆ ರೂ.1 ನೀಡಿ ಹೋಂಡಾ ಅಶ್ಯೂರೆನ್ಸ್ ಸದಸ್ಯತ್ವವನ್ನು ಎಲ್ಲಾ ರೂಪಾಂತರಗಳ ಮೇಲೆ ಹೊಂದಬಹುದಾಗಿದೆ.

ಜಾಝ್: ರೂ.15,000 ವರೆಗೆ ನಗದು ರಿಯಾಯಿತಿ ಮತ್ತು ರೂ. 42,000ವರೆಗಿನ ಪ್ರಯೋಜನಗಳನ್ನು ಹೊಂದಿದ್ದು, ಇದರ ಜೊತೆಗೆ ರೂ.1 ನೀಡಿ ಹೋಂಡಾ ಅಶ್ಯೂರೆನ್ಸ್ ಸದಸ್ಯತ್ವ ಹೊಂದಬಹುದಾಗಿದೆ.

ಅಮೇಜ್ : ಅಮೇಜ್ ಕಾರಿನ ಮೇಲೆ ರೂ. 26,000 ಮೌಲ್ಯದ ಬಿಡಿಭಾಗಗಳನ್ನು ಪಡೆಯಬಹುದ್ದು, ರೂ.50,000 ವರೆಗಿನ ಪ್ರಯೋಜನಗಳನ್ನು ಪಡೆಯಬಹುದು. ಈ ಆಫರ್ ಪೆಟ್ರೋಲ್ ಅಥವಾ ಡೀಸಲ್ ವಾಹನಗಳೆರಡಕ್ಕೂ ಲಭ್ಯವಿದೆ.

ಬಿಆರ್-ವಿ: ಬಿಆರ್-ವಿ ನಿಧಾನಗತಿಯಲ್ಲಿ ಮಾರಾಟವಾಗುತ್ತಿರುವ ಕಾರಾಗಿದ್ದು, ಈ ಕಾರಿನ ಪೆಟ್ರೋಲ್ ಮತ್ತು ಡೀಸಲ್ ಎರಡೂ ಆಯ್ಕೆಗಳ ಮೇಲೆ ನೀವು 1 ಲಕ್ಷದವರೆಗಿನ ನಗದು ರಿಯಾಯಿತಿ ಪಡೆಯಬಹುದು ಎಂದು ಕಂಪನಿ ತಿಳಿಸಿದೆ.


Click it and Unblock the Notifications