ಹೋಂಡಾ ಸಿಬಿಆರ್ 150 ಆರ್, ಸಿಬಿಆರ್ 250ಆರ್ ಬೈಕುಗಳ ಉತ್ಪಾದನೆ ಸ್ಥಗಿತ

Written By:

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿ ತನ್ನ ದ್ವಿಚಕ್ರ ವಾಹನಗಳಾದ ಸಿಬಿಆರ್ 150 ಆರ್ ಮತ್ತು ಸಿಬಿಆರ್ 250ಆರ್ ಬೈಕುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.

ಹೋಂಡಾ ಸಿಬಿಆರ್ 150 ಆರ್ ಮತ್ತು ಸಿಬಿಆರ್ 250ಆರ್ ಬೈಕುಗಳ ಉತ್ಪಾದನೆ ಸ್ಥಗಿತ

ಈ ವರ್ಷದ ಕಳೆದ ಏಪ್ರಿಲ್ 1ರಿಂದ ಹೋಂಡಾ ಸಂಸ್ಥೆಯು ಈ ಎರಡೂ ಮಾದರಿಗಳ ಒಂದೂ ಬೈಕನ್ನು ಸಹ ತಯಾರಿಸಿಲ್ಲ ಎಂದು ಮನಿ ಕಾಂಟ್ರೋಲ್ ವರದಿ ಮಾಡಿದೆ. ಮಾರ್ಚ್ 30-31ರ ಒಳಗಾಗಿ ಈ ಬೈಕುಗಳ ಹಳೆಯ ಸ್ಟಾಕ್ ರಿಯಾಯಿತಿಯೊಂದಿಗೆ ಮಾರಾಟ ಮಾಡಲಾಗಿದೆ ಎಂದು ವರದಿ ಮಾಡಿದೆ.

ಹೋಂಡಾ ಸಿಬಿಆರ್ 150 ಆರ್ ಮತ್ತು ಸಿಬಿಆರ್ 250ಆರ್ ಬೈಕುಗಳ ಉತ್ಪಾದನೆ ಸ್ಥಗಿತ

ಎರಡೂ ಮೋಟಾರ್ ಸೈಕಲ್‌ಗಳು ಬಿಎಸ್-3 ಎಂಜಿನ್ ಆಯ್ಕೆಯನ್ನು ಹೊಂದಿದ್ದವು ಎನ್ನಲಾಗಿದ್ದು, ಈ ಎಂಜಿನ್ ಪಡೆದ ಬೈಕುಗಳು ಏಪ್ರಿಲ್ 1ರಿಂದ ಅನುಪಯುಕ್ತ ವಿಭಾಗಕ್ಕೆ ಸೇರಿರುವುದರಿಂದ ಈ ನಿರ್ಧಾರಕ್ಕೆ ಕಂಪನಿ ಬಂದಿದೆ ಎನ್ನಬಹುದು.

ಹೋಂಡಾ ಸಿಬಿಆರ್ 150 ಆರ್ ಮತ್ತು ಸಿಬಿಆರ್ 250ಆರ್ ಬೈಕುಗಳ ಉತ್ಪಾದನೆ ಸ್ಥಗಿತ

ಹೋಂಡಾ ಕಂಪನಿಯು ಸಿಬಿಆರ್ 150ಆರ್ ಮತ್ತು ಸಿಬಿಆರ್ 250ಆರ್ ಮೋಟಾರ್ ಸೈಕಲ್‌ಗಳನ್ನು ಭಾರತದ ಅಧಿಕೃತ ವೆಬ್ ಸೈಟ್‌ನಿಂದ ತೆಗೆದುಹಾಕಿರುವುದನ್ನು ನಾವು ಗಮನಿಸಬಹುದಾಗಿದೆ.

ಹೋಂಡಾ ಸಿಬಿಆರ್ 150 ಆರ್ ಮತ್ತು ಸಿಬಿಆರ್ 250ಆರ್ ಬೈಕುಗಳ ಉತ್ಪಾದನೆ ಸ್ಥಗಿತ

ಬಿಎಸ್-4 ಎಂಜಿನ್ ಆಯ್ಕೆ ಹಾಗು ಮತ್ತಿತರ ಸೌಲಭ್ಯಗಳೊಂದಿಗೆ ಈ ಮೋಟಾರ್ ಸೈಕಲ್‌ಗಳು ಮತ್ತೆ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಬಹುದು ಎಂಬ ಸುಳಿವನ್ನು ಹೋಂಡಾ ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಆದರೆ, ಸಮಯವನ್ನು ಖಚಿತಪಡಿಸಿಲ್ಲ.

ಹೋಂಡಾ ಸಿಬಿಆರ್ 150 ಆರ್ ಮತ್ತು ಸಿಬಿಆರ್ 250ಆರ್ ಬೈಕುಗಳ ಉತ್ಪಾದನೆ ಸ್ಥಗಿತ

2011ರಲ್ಲಿ ಮೊದಲ ಬಾರಿಗೆ ಈ ಬೈಕುಗಳನ್ನು ಹೋಂಡಾ ಸಂಸ್ಥೆಯು ಭಾರತದಲ್ಲಿ ಪರಿಚಯಿಸಿತು. ಪರಿಷ್ಕೃತ ಎಂಜಿನ್ ಮತ್ತು ಗುಣಮಟ್ಟದ ನಿರ್ಮಾಣದ ಕಾರಣದಿಂದಾಗಿ ಈ ಜೋಡಿ ದ್ವಿಚಕ್ರ ವಾಹನಗಳು ಜನಪ್ರಿಯವಾಗಿವೆ. BS-III ಕಂಪ್ಲೈಂಟ್ ಎಂಜಿನ್ ಹೊಂದಿರುವ ಹೋಂಡಾ ಸಿಬಿಆರ್ 150 ಆರ್ ಬೈಕ್ 18.3 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತದೆ ಮತ್ತು ಸಿಬಿಆರ್ 250 ಆರ್ ಬೈಕ್ 26.15 ಬಿಎಚ್‌ಪಿ ಶಕ್ತಿ ಬಿಡುಗಡೆ ಮಾಡುತ್ತದೆ.

ಹೋಂಡಾ ಸಿಬಿಆರ್ 150 ಆರ್ ಮತ್ತು ಸಿಬಿಆರ್ 250ಆರ್ ಬೈಕುಗಳ ಉತ್ಪಾದನೆ ಸ್ಥಗಿತ

ಆದರೆ ಸರಿಯಾದ ನವೀಕರಣ ಇಲ್ಲದೆ ಇರುವ ಕಾರಣ ಈ ಮೋಟಾರ್ ಸೈಕಲ್ ಮಾರಾಟವು ಕಳೆದ ಒಂದು ವರ್ಷದಲ್ಲಿ ಕ್ಷೀಣಿಸಿತ್ತು. ಬೇರೆ ಕಂಪನಿಗಳ ಹೊಸ ಪ್ರತಿಸ್ಪರ್ಧಿ ವಾಹನಗಳು ಬಿಡುಗಡೆಗೊಂಡ ನಂತರ ಸಿಬಿಆರ್ 150ಆರ್ ಮತ್ತು ಸಿಬಿಆರ್ 250ಆರ್ ಮೋಟಾರ್ ಸೈಕಲ್‌ಗಳ ಪ್ರಗತಿಗೆ ಭಾರಿ ಹಿನ್ನಡೆಯಾಯಿತು.

Read more on ಹೋಂಡಾ honda
English summary
Honda Motorcycle and Scooter India has halted the production of its two motorcycles, the CBR 150R and CBR 250R.
Story first published: Thursday, September 28, 2017, 17:25 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark