ಭಾರತದಲ್ಲಿ ಏಳು ಲಕ್ಷ ಮಾರಾಟ ಮೈಲಿಗಳನ್ನು ಮುಟ್ಟಿದ ಹೋಂಡಾ ಸಿಟಿ ವಾಹನ
ಸೆಡಾನ್ ವಿಭಾಗ ಎಂದ ಕೂಡಲೇ ಎಲ್ಲರ ಮನಸ್ಸಿನಲ್ಲಿಯೂ ಸಹ ಈ ಕಾರು ಒಮ್ಮೆ ಬಂದು ಹೋಗದೆ ಇರಲಾರದು ! ಯಾವ ಕಾರಿನ ಬಗ್ಗೆ ಮಾತಾಡ್ತಾ ಇದ್ದೇವೆ ಅನ್ಕೊಂಡ್ರಾ ? ಅದೇರಿ ಹೋಂಡಾ ಸಿಟಿ ಕಾರಿನ ಬಗ್ಗೆ... ಮುಂದೆ ಓದಿ.
ಸೆಡಾನ್ ವಿಭಾಗ ಎಂದ ಕೂಡಲೇ ಎಲ್ಲರ ಮನಸ್ಸಿನಲ್ಲಿಯೂ ಸಹ ಈ ಕಾರು ಒಮ್ಮೆ ಬಂದು ಹೋಗದೆ ಇರಲಾರದು ! ಯಾವ ಕಾರಿನ ಬಗ್ಗೆ ಮಾತಾಡ್ತಾ ಇದ್ದೇವೆ ಅನ್ಕೊಂಡ್ರಾ ? ಅದೇರಿ ಹೋಂಡಾ ಸಿಟಿ ಕಾರಿನ ಬಗ್ಗೆ... ಮುಂದೆ ಓದಿ.

ಹೌದು, 1998ರಲ್ಲಿ ಮೊದಲ ಬಾರಿಗೆ ಸಿಟಿ ಎಂಬ ಹೆಸರಿನ ಸೆಡಾನ್ ಕಾರನ್ನು ಮೊದಲ ಬಾರಿಗೆ ಭಾರತದಲ್ಲಿ ಪರಿಚಯಿಸಿತ್ತು ಈ ಕಾರು ತನ್ನ ಶಕ್ತಿಯನ್ನು ವೃದ್ಧಿಸಿಕೊಂಡು ಬಂದಿದೆ ಎನ್ನಬಹುದು. ಹೋಂಡಾ ಇಲ್ಲಿಯವರೆಗೆ ನಾಲ್ಕು ತಲೆಮಾರುಗಳ ಸಿಟಿ ಕಾರನ್ನು ಭಾರತದಲ್ಲಿ ಮಾರಾಟ ಮಾಡಿದೆ ಮತ್ತು ಪ್ರತಿಯೊಂದು ಪೀಳಿಗೆಯೂ ಸಹ ಕಾರಿನ ಮೊಲ್ಯವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಿದೆ ಎನ್ನಬಹುದು.

ಈ ಪ್ರಖ್ಯಾತ ಕಾರು ಸದ್ಯ ಸುದ್ದಿಯಲಿದ್ದು, ಎಲ್ಲಾ ಪೀಳಿಗೆಗಳನ್ನು ಒಟ್ಟುಗೂಡಿಸಿದರೆ ಹೋಂಡಾ ಸಂಸ್ಥೆಯು ಪ್ರಪಂಚದಾದ್ಯಂತ ಒಟ್ಟು 7 ಲಕ್ಷ ಸೆಡಾನ್ ಕಾರುಗಳನ್ನು ಮಾರಾಟ ಮಾಡಿದೆ ಎಂಬ ಧಾಖಲೆ ಮಾಹಿತಿ ಲಭ್ಯವಾಗಿದೆ.

ಭಾರತದಲ್ಲಿ 2014ರಂದು ಪರಿಚಯಿಸಿದ ನಾಲ್ಕನೇ ಜನರೇಷನ್ ಮಾದರಿಯು 2.69 ಲಕ್ಷ ಮಾರಾಟ ಸಂಖ್ಯೆಯನ್ನು ಧಾಟಿದ್ದು, ಈ ಕಾರಿನ ಯಶಸ್ವಿ ಆವೃತಿ ಎಂಬ ಖ್ಯಾತಿ ಪಡೆದುಕೊಂಡಿದೆ ಹಾಗು ಜಾಗತಿಕವಾಗಿ 3.6 ದಶಲಕ್ಷ ಹೊಂಡಾ ಸಿಟಿ ಕಾರನ್ನು ಮಾರಾಟ ಮಾಡಿದೆ.

ಸಿಟಿ ಕಾರಿನ ಶೇಕಡಾ 25% ಮಾರಾಟವು ಭಾರತದಲ್ಲೇ ನೆಡೆಸಿರುವುದು ಹೆಮ್ಮೆಯ ಸಂಗತಿ ಎನ್ನಬಹುದು. ಭಾರತದಲ್ಲಿ ಹೆಚ್ಚು ಗ್ರಾಹಕರನ್ನು ಸಿಟಿ ಕಾರು ಪಡೆದುಕೊಂಡಿದ್ದು, ಹೋಂಡಾ ಸಿಟಿಯು ಭಾರತದಲ್ಲಿ ಅತ್ಯುತ್ತಮ ಮಾರಾಟದ ಮಾದರಿಯಾಗಿದೆ ಮತ್ತು ಇಲ್ಲಿಯವರೆಗೆ ದೇಶದಲ್ಲಿ ಒಟ್ಟು 7 ಲಕ್ಷ ಯೂನಿಟ್‌ಗಳ ಮಾರಾಟವನ್ನು ಸಾಧಿಸಿರುವ ಏಕೈಕ ಪ್ರೀಮಿಯಂ ಸೆಡಾನ್ ಆಗಿದೆ.

ಸುಧಾರಿತ ಸುರಕ್ಷತೆ, ಭವ್ಯವಾದ ಚಾಲನಾ ಕಾರ್ಯಕ್ಷಮತೆ, ಹೆಚ್ಚಿನ ಇಂಧನ ದಕ್ಷತೆ, ಉತ್ತಮ ಸೌಕರ್ಯ ಮತ್ತು ಶ್ರೀಮಂತ ಸಲಕರಣೆಗಳ ಪಟ್ಟಿಯೊಂದಿಗೆ ಸಂಪೂರ್ಣ ಸ್ಪೂರ್ತಿಯ ನೋಟವನ್ನು ಈ ಕಾರು ಪಡೆದುಕೊಂಡಿದೆ ಹಾಗು ಮುಂಬರುವ ವರ್ಷಗಳಲ್ಲಿ ಹೋಂಡಾ ಸಿಟಿಯು 'ಹೆಚ್ಚು ಇಷ್ಟವಾದ ಬ್ರ್ಯಾಂಡ್' ಸ್ಥಿತಿಯನ್ನು ಉಳಿಸಿಕೊಳ್ಳಲಿದೆ ಎಂಬ ನಂಬಿಕೆಯನ್ನು ಕಂಪನಿ ಹೊಂದಿದೆ.

ಸಿಟಿ ಕಾರು 1.5 ಲೀಟರ್ ಇ-ವಿಟಿಇಸಿ ಪೆಟ್ರೋಲ್ ಮತ್ತು ಐ-ಡಿಟಿಇಸಿ ಟರ್ಬೊ ಡೀಸೆಲ್ ಎಂಬ ಎರಡು ಎಂಜಿನ್ ಆಯ್ಕೆ ಮತ್ತು ಮೂರು ಟ್ರಾನ್ಸ್ಮಿಷನ್ ಆಯ್ಕೆಗಳೊಂದಿಗೆ ಲಭ್ಯವಿದೆ.

ಪೆಟ್ರೋಲ್ ಎಂಜಿನ್ 117 ಬಿಎಚ್‌ಪಿ ಮತ್ತು 145 ಎಮ್ಎಂ ಟಾರ್ಕ್ ಉತ್ಪಾದಿಸುತ್ತದೆ ಮತ್ತು 5 ಸ್ಪೀಡ್ ಮ್ಯಾನ್ಯುವಲ್ ಮತ್ತು ಸಿವಿಟಿ ಆಟೊಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗುತ್ತದೆ. ಡೀಸೆಲ್ ಎಂಜಿನ್ 6 ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಪಡೆಯುತ್ತದೆ.

ಸಿಟಿ ಸೆಡಾನ್ ಇತಿಹಾಸದಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ನಾಲ್ಕನೇ ಪೀಳಿಗೆಯ ಸಿಟಿ ಕಾರನ್ನು ಮಾರಾಟ ಮಾಡಿದೆ. ಡೀಸೆಲ್ ಎಂಜಿನ್ ಲಭ್ಯತೆಯು ಈ ಕಾರಿನ ಯಶಸ್ಸಿಗೆ ಮತ್ತೊಂದು ಪ್ರಮುಖ ಕಾರಣವಾಗಿದೆ.

ಸಿ-ಸೆಗ್ಮೆಂಟ್ ಸೆಡಾನ್ ವಿಭಾಗದಲ್ಲಿ ಈ ಕಾರು ಸ್ಥಾನವನ್ನು ಪಡೆದುಕೊಳ್ಳಲಿದ್ದು, ಮಾರುತಿ ಸುಜುಕಿ ಸಂಸ್ಥೆಯ ಮತ್ತೊಂದು ಸೆಡಾನ್ ಕಾರು ಸಿಯಾಜ್ ಮತ್ತು ಹ್ಯುಂಡೈ ಸಂಸ್ಥೆಯ ವರ್ನಾ ಕಾರುಗಳೊಂದಿಗೆ ಸ್ಪರ್ಧೆ ನೆಡೆಸಲಿದೆ.


Click it and Unblock the Notifications