ಡೀಸೆಲ್ ಎಂಜಿನ್ ಹೊಂದಿರುವ ಹೋಂಡಾ ಸಿಆರ್-ವಿ ಕಾರು ಸದ್ಯದಲ್ಲೇ ಬರಲಿದೆ

Written By:

ಜಪಾನಿನ ವಾಹನ ತಯಾರಕ ಕಂಪನಿ ಹೋಂಡಾ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಐದನೇ ತಲೆಮಾರಿನ ಸಿಆರ್-ವಿ ಕಾರನ್ನು ಬಿಡುಗಡೆಗೊಳಿಸಲು ಸಿದ್ಧವಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಡೀಸೆಲ್ ಎಂಜಿನ್ ಹೊಂದಿರುವ ಹೋಂಡಾ ಸಿಆರ್-ವಿ ಕಾರು ಸದ್ಯದಲ್ಲೇ ಬರಲಿದೆ

ಬಲ್ಲ ಮೂಲಗಳ ಪ್ರಕಾರ ಹೋಂಡಾ ಸಿಆರ್-ವಿ ಕಾರು ಮುಂದಿನ ವರ್ಷದ ಮೊದಲಿಗೆ ಭಾರತೀಯ ರಸ್ತೆಗೆ ಇಳಿಯಲಿದೆ ಎನ್ನಲಾಗಿದ್ದು, ಈ ಹೊಸ ಎಸ್‌ಯುವಿ ಪ್ರಸ್ತುತ 2.4-ಲೀಟರ್ ಪೆಟ್ರೋಲ್ ಇಂಜಿನ್ ಪಡೆಯುವ ಸಾಧ್ಯತೆ ಇದೆ.

ಡೀಸೆಲ್ ಎಂಜಿನ್ ಹೊಂದಿರುವ ಹೋಂಡಾ ಸಿಆರ್-ವಿ ಕಾರು ಸದ್ಯದಲ್ಲೇ ಬರಲಿದೆ

ಈಗಾಗಲೇ ಹೆಚ್ಚು ಫ್ಯಾನ್ಸ್ ಗಳಿಸಿಕೊಂಡಿರುವ ಸಿಆರ್-ವಿ ಕಾರು, 2.4-ಲೀಟರ್ ಪೆಟ್ರೋಲ್ ಎಂಜಿನ್ 190 ಬಿಎಚ್‌ಪಿ ಎಂಜಿನ್ ಮತ್ತು ಸ್ವಯಂಚಾಲಿತ ಗೇರ್ ಬಾಕ್ಸ್ ಪಡೆದುಕೊಂಡಿದೆ.

ಡೀಸೆಲ್ ಎಂಜಿನ್ ಹೊಂದಿರುವ ಹೋಂಡಾ ಸಿಆರ್-ವಿ ಕಾರು ಸದ್ಯದಲ್ಲೇ ಬರಲಿದೆ

ಆದರೆ ಒಳ್ಳೆಯ ಸುದ್ದಿ ಏನೆಂದರೆ ಭಾರತ ಮಾದರಿಯ ಸಿಆರ್-ವಿ ಕಾರು ಡೀಸೆಲ್ ರೂಪಾಂತರದಲ್ಲಿಯೂ ಬಿಡುಗಡೆಗೊಳ್ಳುತ್ತಿದ್ದು, ಡೀಸೆಲ್ ಕಾರು ಪ್ರಿಯರಿಗೆ ಸಂತೋಷಕರ ವಿಚಾರ ಎನ್ನಬಹುದು.

ಡೀಸೆಲ್ ಎಂಜಿನ್ ಹೊಂದಿರುವ ಹೋಂಡಾ ಸಿಆರ್-ವಿ ಕಾರು ಸದ್ಯದಲ್ಲೇ ಬರಲಿದೆ

ಈ ಡೀಸೆಲ್ ಟ್ರಿಮ್ ಕಾರು 1.6-ಲೀಟರ್ ಐ-ಡಿಟಿಇಸಿ ಮೋಟಾರ್ ಪಡೆದುಕೊಂಡಿದ್ದು, 350 ಎನ್ಎಂ ತಿರುಗುಬಲದಲ್ಲಿ 158 ಅಶ್ವಶಕ್ತಿ ಉತ್ಪಾದಿಸುತ್ತದೆ ಮತ್ತು ಈ ಎಂಜಿನ್ ಝಡ್ಎಫ್ 9 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆದುಕೊಂಡಿದೆ.

ಡೀಸೆಲ್ ಎಂಜಿನ್ ಹೊಂದಿರುವ ಹೋಂಡಾ ಸಿಆರ್-ವಿ ಕಾರು ಸದ್ಯದಲ್ಲೇ ಬರಲಿದೆ

ಈ ಕಾರಿನ ಡೀಸೆಲ್ ಎಂಜಿನ್ ಭಾರತದಲ್ಲಿ ಜೋಡಿಣೆ ಮಾಡಲು ಹೋಂಡಾ ಸಂಸ್ಥೆ ನಿರ್ಧರಿಸಿದ್ದು, ಇದರಿಂದಾಗಿ ಕಾರಿನ ಬೆಲೆ ಕಡಿತಗೊಳ್ಳಲಿದೆ ಎನ್ನಲಾಗಿದೆ.

ಡೀಸೆಲ್ ಎಂಜಿನ್ ಹೊಂದಿರುವ ಹೋಂಡಾ ಸಿಆರ್-ವಿ ಕಾರು ಸದ್ಯದಲ್ಲೇ ಬರಲಿದೆ

ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಎರಡೂ ಸಹ ಮುಂಭಾಗ ಚಕ್ರದ ಡ್ರೈವ್ ಮತ್ತು ಆಯ್ಕೆ ಇರುವಂತಹ ಆಲ್-ವೀಲ್-ಡ್ರೈವ್ ವ್ಯವಸ್ಥೆಯೊಂದಿಗೆ ಹೊರ ಬರಲಿವೆ.

Read more on ಹೋಂಡಾ honda
English summary
Japanese automaker Honda is all set to launch the fifth-gen CR-V in the Indian market, But the good news is, the India-spec CR-V will also come in diesel variant.
Story first published: Thursday, June 22, 2017, 18:52 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark