ಮೊಟ್ಟ ಮೊದಲ ಬಾರಿಗೆ ಥೈಲ್ಯಾಂಡ್‌ಗೆ ಭಾರತದ ಡೀಸೆಲ್ ಎಂಜಿನ್ ರಫ್ತು ಮಾಡಲಿದೆ ಹೋಂಡಾ
ಭಾರತದಲ್ಲಿರುವ ಜಪಾನಿನ ಕಾರು ತಯಾರಿಕಾ ಕಂಪೆನಿ ಹೋಂಡಾ ಸಂಸ್ಥೆ ಮೊದಲ ಬಾರಿಗೆ ಪೂರ್ತಿಯಾಗಿ ಜೋಡಣೆಗೊಂಡ 1.6 ಲೀಟರ್ ಡೀಸೆಲ್ ಎಂಜಿನ್ ರಫ್ತು ಮಾಡಲಿದೆ.
ಭಾರತದಲ್ಲಿರುವ ಜಪಾನಿನ ಕಾರು ತಯಾರಿಕಾ ಕಂಪೆನಿ ಹೋಂಡಾ ಸಂಸ್ಥೆ ಮೊದಲ ಬಾರಿಗೆ ಪೂರ್ತಿಯಾಗಿ ಜೋಡಣೆಗೊಂಡ 1.6 ಲೀಟರ್ ಡೀಸೆಲ್ ಎಂಜಿನ್ ರಫ್ತು ಮಾಡಲಿದೆ.

ರಾಜಸ್ಥಾನದಲ್ಲಿರುವ ತಪುಕಾರ ಘಟಕದಿಂದ ಪೂರ್ತಿಯಾಗಿ ಜೋಡಣೆ ಮಾಡಲಾಗಿರುವ 1.6 ಲೀಟರ್ ಡೀಸೆಲ್ ಎಂಜಿನ್ ರಫ್ತು ಮಾಡುವುದಾಗಿ ಹೋಂಡಾ ಕಂಪನಿಯ ಪ್ರಕಟಣೆಯಲ್ಲಿ ತಿಳಿಸಿದ್ದು, ಈ ಬಗ್ಗೆ ಈಗಾಗಲೇ ತನ್ನ ಗಮನಹರಿಸಿದ್ದು, ಸದ್ಯದರಲ್ಲಿಯೇ ಕೆಲಸ ಪ್ರಾರಂಭಿಸಲಿದೆ.

ಭಾರತದಲ್ಲಿ ಉತ್ಪಾದಿಸಿದ 1.6-ಲೀಟರ್ ಡೀಸೆಲ್ ಎಂಜಿನ್ ಪಡೆಯುವ ಮೊದಲ ಮಾರುಕಟ್ಟೆ ಥೈಲ್ಯಾಂಡ್ ಎನ್ನಿಸಿಕೊಳ್ಳಲಿದೆ.

ಸದ್ಯ ಭಾರತದಲ್ಲಿ 1.6-ಲೀಟರ್ ಡೀಸೆಲ್ ಎಂಜಿನ್ ಮಾತ್ರ ಉತ್ಪಾದಿಸುತ್ತಿದ್ದು, 2017 ರ ಜುಲೈ ತಿಂಗಳಿನಿಂದ ಕಂಪನಿಯು ಎಂಜಿನ್ ರಫ್ತು ಮಾಡಲು ಪ್ರಾರಂಭಿಸುತ್ತದೆ ಎನ್ನಲಾಗಿದೆ.

ಥೈಲ್ಯಾಂಡ್ ದೇಶದಲ್ಲಿ ಹೋಂಡಾ ಸಂಸ್ಥೆಯು, ವಾಹನ ವೇದಿಕೆಗಳ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆಯ ದೊಡ್ಡ ಘಟಕಗಳನ್ನು ಹೊಂದಿದೆ ಮತ್ತು ಥೈಲ್ಯಾಂಡ್‌ನಲ್ಲಿ ಉತ್ಪಾದನೆಯಾಗುವ ಕಾರುಗಳಿಗೆ ಭಾರತದಲ್ಲಿ ತಯಾರಿಸುವ ಎಂಜಿನ್ ಜೋಡಣೆ ಮಾಡಲು ತೀರ್ಮಾನಿಸಿದೆ.

ಭಾರತದಂತೆ ಥೈಲ್ಯಾಂಡ್ ದೇಶದಲ್ಲಿ ಕೂಡ ಹೋಂಡಾ ಸಂಸ್ಥೆಗೆ ದೊಡ್ಡ ವಾಹನ ಮಾರುಕಟ್ಟೆ ಇದ್ದು, ಇದರಿಂದಾಗಿ ಡೀಸೆಲ್ ಎಂಜಿನ್ ರಫ್ತು ಅತಿಅವಶ್ಯಕತೆ ಎಂದು ಕಂಪನಿ ತಿಳಿಸಿದೆ.


Click it and Unblock the Notifications