'ರಾನ್ಸಮ್ ವೇರ್' ಸೈಬರ್ ದಾಳಿಗೆ ನಲುಗಿದ ಹೋಂಡಾ..!

Written By:

ರಾನ್ಸಮ್ ವೇರ್' ಸೈಬರ್ ದಾಳಿಯಿಂದ ಭಾರತ ಸೇರಿದಂತೆ ವಿಶ್ವದ ಸುಮಾರು 150 ದೇಶಗಳ 2 ಲಕ್ಷಕ್ಕೂ ಕಂಪ್ಯೂಟರ್‌ಗಳಿಗೆ ವೈರಸ್ ತಗುಲಿದ್ದು, ಸದ್ಯ ಇದರ ಬಿಸಿ ಪ್ರತಿಷ್ಠಿತ ಹೋಂಡಾ ಸಂಸ್ಥೆಗೂ ತಟ್ಟಿದೆ.

'ರಾನ್ಸಮ್ ವೇರ್' ಸೈಬರ್ ದಾಳಿಗೆ ನಲುಗಿದ ಹೋಂಡಾ..!

ರಾನ್ಸಮ್ ವೇರ್ ಸೈಬರ್ ದಾಳಿ ಜಾಗತಿಕ ಸಂಚಲನ ಮೂಡಿಸಿದೆ. ಸದ್ಯ ಹೋಂಡಾ ಸಂಸ್ಥೆಗೂ ಸೈಬರ್ ದಾಳಿಯ ಬಿಸಿ ತಟ್ಟಿದ್ದು, ಜಪಾನ್‌ ರಾಜಧಾನಿ ಟೋಕಿಯೋದಲ್ಲಿರುವ ಸಯಾಮಾ ಕಾರು ಉತ್ವಾದನಾ ಘಟಕವನ್ನು ತಾತ್ಕಾಲಿಕ ಸ್ಥಗಿತಗೊಳಿಸಿರುವ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ.

'ರಾನ್ಸಮ್ ವೇರ್' ಸೈಬರ್ ದಾಳಿಗೆ ನಲುಗಿದ ಹೋಂಡಾ..!

ರಾನ್ಸಮ್ ವೇರ್ ಸೈಬರ್ ದಾಳಿ ಹಿನ್ನೆಲೆ ಹೋಂಡಾ ಸಂಸ್ಥೆಯ ಮಹತ್ವದ ಮಾಹಿತಿಗಳು ಹ್ಯಾಕರ್‌ಗಳ ಕೈಗೆ ಸೇರಿದ್ದು, ಜೂನ್ 19 ರಂದು ಒಂದು ದಿನದ ಮಟ್ಟಿಗೆ ಸಯಾಮಾ ಕಾರು ಉತ್ಪಾದನಾ ಘಟಕ ಸ್ಥಗಿತಗೊಳಿಸಿಲಾಗಿತ್ತು.

'ರಾನ್ಸಮ್ ವೇರ್' ಸೈಬರ್ ದಾಳಿಗೆ ನಲುಗಿದ ಹೋಂಡಾ..!

ಆದ್ರೆ ಇದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗಿಲ್ಲ ಎಂದು ಸ್ಪಷ್ಟನೆ ನೀಡಿರುವ ಹೋಂಡಾ ಹಿರಿಯ ಅಧಿಕಾರಿಗಳು, ವೈರಸ್ ದಾಳಿಗೆ ಒಳಾಗಿರುವ ಸಿಸ್ಟಮ್'ಗಳ ಸಾಫ್ಟ್'ವೇರ್ ಅಪ್'ಡೇಟ್ ಮಾಡಲಾಗುತ್ತಿದೆ ಎಂದಿದ್ದಾರೆ.

'ರಾನ್ಸಮ್ ವೇರ್' ಸೈಬರ್ ದಾಳಿಗೆ ನಲುಗಿದ ಹೋಂಡಾ..!

ಇನ್ನು ಹೋಂಡಾ ಅಷ್ಟೇ ಅಲ್ಲದೇ ರೆನಾಲ್ಟ್ ಮತ್ತು ನಿಸ್ಸಾನ್ ಕಾರು ಉತ್ಪಾದನೆ ಘಟಕದ ಮೇಲೂ ಈ ಹಿಂದೆ 'ರಾನ್ಸಮ್ ವೇರ್' ಸೈಬರ್ ದಾಳಿ ನಡೆದಿತ್ತು. ಆದ್ರೆ ಯಾವುದೇ ರೀತಿಯ ದೊಡ್ಡ ಪ್ರಮಾಣದ ಹಾನಿಯಾಗಿರಲಿಲ್ಲ.

English summary
Read in kannada about Japanese car maker, Honda Motor Co has stated that it has halted production at its domestic vehicle plant for a day. The reason behind the shutdown is WannaCry ransomware, a computer virus.
Story first published: Wednesday, June 21, 2017, 16:20 [IST]
Please Wait while comments are loading...

Latest Photos