ಹೋಂಡಾ ಜಾಝ್ ಪ್ರಿವಿಲೇಜ್ ಎಡಿಷನ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.7.36 ಲಕ್ಷ

Written By:

ಹೋಂಡಾ ಸಂಸ್ಥೆಯ ಜಾಝ್ ಪ್ರಿವಿಲೇಜ್ ಎಡಿಷನ್ ಭಾರತದಲ್ಲಿ ಬಿಡುಗಡೆಯಾಗಿದ್ದು, ಈ ಹೊಸ ಹೋಂಡಾ ಜಾಝ್ ಪ್ರಿವಿಲೇಜ್ ಆವೃತ್ತಿಯ ಬೆಲೆಗಳು 7.36 ಲಕ್ಷ ಎಕ್ಸ್ ಷೋ ರೂಂ(ದೆಹಲಿ) ಬೆಲೆ ಪಡೆದುಕೊಂಡಿದೆ.

To Follow DriveSpark On Facebook, Click The Like Button
ಹೋಂಡಾ ಜಾಝ್ ಪ್ರಿವಿಲೇಜ್ ಎಡಿಷನ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.7.36 ಲಕ್ಷ

ಹೋಂಡಾ ಕಂಪನಿಯ ಬಹು ಉದ್ದೇಶಿತ 'ವಿ' ರೂಪಾಂತರದ ಮೇಲೆ ಆಧಾರಿತವಾಗಿರುವ ಈ ಹೊಂಡಾ ಜಾಝ್ ಪ್ರಿವಿಲೇಜ್ ಆವೃತಿಯು ಸಾಮಾನ್ಯ ಜಾಝ್ ಮಾದರಿಗಿಂತ ಹೆಚ್ಚು ಭಿನ್ನವಾಗಿದ್ದು, ಸಾಕಷ್ಟು ಸುರಕ್ಷತಾ ಅಂಶಗಳನ್ನು ಒಳಗೊಂಡಿದೆ ಎಂದು ಕಂಪನಿ ಹೇಳಿಕೊಂಡಿದೆ.

ಹೋಂಡಾ ಜಾಝ್ ಪ್ರಿವಿಲೇಜ್ ಎಡಿಷನ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.7.36 ಲಕ್ಷ

ಪ್ರಿವಿಲೇಜ್ ಆವೃತಿಯ ಈ ಜಾಝ್ ಕಾರು, ಹೆಚ್ಚು ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಹೊಸ ಇನ್ಫೋಟೈನ್ಮೆಂಟ್ ಸಿಸ್ಟಮ್, ಹೆಚ್ಚು ಭದ್ರತೆ ಹಾಗು ಹೆಚ್ಚು ಕಂಫರ್ಟ್ ಈ ಕಾರು ಒಳಗೊಂಡಿರಲಿದೆ.

ಹೋಂಡಾ ಜಾಝ್ ಪ್ರಿವಿಲೇಜ್ ಎಡಿಷನ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.7.36 ಲಕ್ಷ

'ಪ್ರಿವಿಲೇಜ್ ಎಡಿಷನ್' ಬ್ಯಾಡ್ಜ್ ಪಡೆದುಕೊಂಡಿರುವ ಈ ಹೋಂಡಾ ಜಾಝ್ ಕಾರು ಪ್ರಿವಿಲೇಜ್ ಆಯ್ಕೆಗಳಿಗೆ ಹೆಚ್ಚು ಆದ್ಯತೆ ನೀಡಿದೆ ಎನ್ನಬಹುದು.ಹೊಸ ಕಾರಿನ ಹೊರಭಾಗದಲ್ಲಿ ಹೆಚ್ಚು ಕ್ರೀಡಾ ಅಂಶಗಳನ್ನು ಪಡೆದುಕೊಂಡಿದೆ.

ಹೋಂಡಾ ಜಾಝ್ ಪ್ರಿವಿಲೇಜ್ ಎಡಿಷನ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.7.36 ಲಕ್ಷ

ಈ ಕಾರು ಎಬಿಎಸ್, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಹಿಮ್ಮುಖ ಕ್ಯಾಮೆರಾ, ಮಿಶ್ರಲೋಹದ ಚಕ್ರಗಳು, ಪವರ್ ನಿಯಂತ್ರಿತ ಓವಿಆರ್‌ಎಂ ಮತ್ತು ಟರ್ನ್ ಇಂಡಿಕೇಟರ್‌ಗಳನ್ನು ಪಡೆದುಕೊಂಡಿದೆ.

ಹೋಂಡಾ ಜಾಝ್ ಪ್ರಿವಿಲೇಜ್ ಎಡಿಷನ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.7.36 ಲಕ್ಷ

ಹೊಸ ತಂತ್ರಜ್ಞಾನದ ಹಿಂಭಾಗದ ಪಾರ್ಕಿಂಗ್ ಸಂವೇದಕಗಳೊಂದಿಗೆ ಬಿಡುಗಡೆಗೊಂಡಿರುವ ಕಾರು, ಸ್ಯಾಟಲೈಟ್ ನ್ಯಾವಿಗೇಷನ್ ಹೊಂದಿರುವ 7 ಇಂಚಿನ ಟಚ್‌ಸ್ಕ್ರೀನ್ ಪರದೆ, 1.5 ಜಿಬಿ ಆಂತರಿಕ ಶೇಖರಣಾ, ಮಿರರ್ ಲಿಂಕ್ ಮತ್ತು ಬ್ಲೂಟೂತ್ ಜೊತೆಗೆ ಧ್ವನಿ ಆದೇಶಗಳು, ಯುಎಸ್‌ಬಿ ಸ್ಲಾಟ್, ಮ್ಯಾಪ್‌ಗಳು ಮತ್ತು ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್‌ಗಳು ಮತ್ತು HDMI-IN ಪೋರ್ಟ್ ಸೇರಿದಂತೆ ಸೌಕರ್ಯ ನೀಡಲಾಗಿದೆ.

ಹೋಂಡಾ ಜಾಝ್ ಪ್ರಿವಿಲೇಜ್ ಎಡಿಷನ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.7.36 ಲಕ್ಷ

ಹೋಂಡಾ ಜಾಝ್ ಪ್ರಿವಿಲೇಜ್ ಆವೃತಿಯು, ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. 1.2-ಲೀಟರ್ ಪೆಟ್ರೋಲ್ ಇಂಜಿನ್ 110 ಎನ್ಎಂ ತಿರುಗುಬಲದಲ್ಲಿ 89 ಬಿಎಚ್‌ಪಿ ಶಕ್ತಿ ಉತ್ಪಾದನೆ ಮಾಡಲಿದೆ.

ಹೋಂಡಾ ಜಾಝ್ ಪ್ರಿವಿಲೇಜ್ ಎಡಿಷನ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.7.36 ಲಕ್ಷ

1.2-ಲೀಟರ್ ಡೀಸೆಲ್ ಇಂಜಿನ್ 200 ಎನ್ಎಂ ತಿರುಗುಬಲದಲ್ಲಿ 98 ಬಿಎಚ್‌ಪಿ ಶಕ್ತಿ ಉತ್ಪಾದನೆ ಮಾಡಲಿದೆ ಹಾಗು ಎರಡೂ ಕಾರುಗಳು ಸಹ ಮಾನ್ಯುಯಲ್ ಅಥವಾ ಸಿವಿಟಿ ಗೇರ್ ಬಾಕ್ಸ್ ಆಯ್ಕೆ ಪಡೆದುಕೊಳ್ಳಲಿವೆ.

Read more on ಹೋಂಡಾ honda
English summary
Honda Jazz Privilege Edition launched in India. Prices for the all-new Honda Jazz Privilege Edition start at Rs 7.36 lakh ex-showroom (Delhi).
Story first published: Friday, August 25, 2017, 19:52 [IST]
Please Wait while comments are loading...

Latest Photos