ಭಾರತಕ್ಕೆ ಮತ್ತೆ ಲಗ್ಗೆ ಇಡಲಿದೆ ಹೋಂಡಾ ಸಿವಿಕ್ ಕಾರು

ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು ಭಾರತವು ಬಹು ನಿರೀಕ್ಷಿತ ಸಿವಿಕ್ ಕಾರಿನ ಫೇಸ್‌ಲಿಫ್ಟ್ ಕಾರನ್ನು ಪ್ರಾರಂಭಿಸಲಿದೆ ಎಂದು ಅಧಿಕೃತ ಮಾಹಿತಿಯನ್ನು ದೃಢಪಡಿಸಿದೆ.

By Girish

ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು ಭಾರತವು ಬಹು ನಿರೀಕ್ಷಿತ ಸಿವಿಕ್ ಕಾರಿನ ಫೇಸ್‌ಲಿಫ್ಟ್ ಕಾರನ್ನು ಪ್ರಾರಂಭಿಸಲಿದೆ ಎಂದು ಅಧಿಕೃತ ಮಾಹಿತಿಯನ್ನು ದೃಢಪಡಿಸಿದೆ.

ಭಾರತಕ್ಕೆ ಮತ್ತೆ ಲಗ್ಗೆ ಇಡಲಿದೆ ಹೋಂಡಾ ಸಿವಿಕ್ ಕಾರು

ಎಸ್‌ಯುವಿ ಕಾರುಗಳ ಕಡೆಗೆ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆಯ ಹೊರತಾಗಿಯೂ, ಸೆಡಾನ್ ವಿಭಾಗದ ಈ ಕಾರನ್ನು ಬಿಡುಗಡೆಗೊಳಿಸಲು ಜಪಾನಿನ ಕಾರು ತಯಾರಕ ಕಂಪನಿಯು ತೀರ್ಮಾನಿಸಿದೆ. ಇತ್ತೀಚಿಗೆ ಹೋಂಡಾ ಸಿಟಿ ಕಾರನ್ನು ಮತ್ತಷ್ಟು ಅಪ್ಡೇಟ್ ಮಾಡಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು.

ಭಾರತಕ್ಕೆ ಮತ್ತೆ ಲಗ್ಗೆ ಇಡಲಿದೆ ಹೋಂಡಾ ಸಿವಿಕ್ ಕಾರು

2006ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ತನ್ನ ಸಿವಿಕ್ ಕಾರನ್ನು ಬಿಡುಗಡೆಗೊಳಿಸಿತ್ತು. ಸದ್ಯ ಎಂಟನೇ ತಲೆಮಾರಿನ ಸಿವಿಕ್ ಕಾರನ್ನು 2018ರಲ್ಲಿ ಬಿಡುವೂಡೆಗೊಳಿಸಲು ಹೋಂಡಾ ಮುಂದಾಗಿದ್ದು, ಹೋಂಡಾ ಪ್ರಿಯರಿಗೆ ಖುಷಿಯ ವಿಚಾರ ಎನ್ನಬಹುದು.

ಭಾರತಕ್ಕೆ ಮತ್ತೆ ಲಗ್ಗೆ ಇಡಲಿದೆ ಹೋಂಡಾ ಸಿವಿಕ್ ಕಾರು

ಮೊದಲ ಬಾರಿಗೆ ಬಿಡುಗಡೆಗೊಂಡ ನಂತರ ಆರಂಭಿಕ ಯಶಸ್ಸಿನ್ನು ತನ್ನದಾಗಿಸಿಕೊಂಡಿತ್ತು.ಆದರೆ, ಡೀಸೆಲ್ ಆವೃತಿ ಬಿಡುಗಡೆಗೊಳಿಸದೆ ಇರುವುದು ಮತ್ತು ಈ ವಿಭಾಗದ ಕಡೆ ಗ್ರಾಹಕರ ಒಲವು ಕಡಿಮೆಯಾದ ಕಾರಣ ತನ್ನ ಖ್ಯಾತಿಯನ್ನು ಕಳೆದುಕೊಂಡಿತು.

Recommended Video

[Kannada] BMW 330i Gran Turismo Launched In India - DriveSpark
ಭಾರತಕ್ಕೆ ಮತ್ತೆ ಲಗ್ಗೆ ಇಡಲಿದೆ ಹೋಂಡಾ ಸಿವಿಕ್ ಕಾರು

2013ರಲ್ಲಿ, ಜಪಾನಿನ ಕಾರು ತಯಾರಕ ಕಂಪನಿಯು ಈ ಮಾದರಿಯನ್ನು ಸ್ಥಗಿತಗೊಳಿಸಿತ್ತು ಮತ್ತು ಈ ಕಾರಿನ ಉತ್ತರಾಧಿಕಾರಿಯನ್ನು ಸಹ ಬಿಡುಗಡೆಗೊಳಿಸಲಿಲ್ಲ ಎಂಬುದನ್ನು ನಾವು ಗಮನಿಸಬಹುದಾಗಿದೆ. ಸದ್ಯ ಹೊಸ ತಲೆಮಾರಿನ ಸಿವಿಕ್ ಜಾಗತಿಕವಾಗಿ ಹೆಚ್ಚು ಶ್ರೇಯಸ್ಸು ಪಡೆದುಕೊಂಡಿದ್ದು, ಈ ಕಾರು ಮತ್ತೆ ಭಾರತದ ರಸ್ತೆಗಳ ಮೇಲೆ ಸಂಚರಿಸಲಿದೆ.

ಭಾರತಕ್ಕೆ ಮತ್ತೆ ಲಗ್ಗೆ ಇಡಲಿದೆ ಹೋಂಡಾ ಸಿವಿಕ್ ಕಾರು

ಎಂಟನೇ ತಲೆಮಾರಿನ ಮಾದರಿಯಂತೆ, ಒಂಬತ್ತನೇ ಕಾರೂ ಸಹ ವಿನ್ಯಾಸ ಶ್ರೇಷ್ಠತೆ ಪಡೆದುಕೊಳ್ಳಲಿದ್ದು, ಕಡಿಮೆ ಸ್ಲಾಂಗ್, ನಯಗೊಳಿಸಿದ ಸಿಲೂಯೆಟ್, ಫಾಸ್ಟ್‌ಬ್ಯಾಕ್ ಲುಕ್ ಹೊಂದಿರಲಿದೆ. ಉದ್ದ ಮತ್ತು ಎತ್ತರವು ಬದಲಾಗುವ ಸಾಧ್ಯತೆ ಹೆಚ್ಚಿಗೆ ಇದ್ದು, ಪ್ರಸ್ತುತ 2,700 ಮಿ.ಮೀ ವೀಲ್ ಬೇಸ್‌ನಲ್ಲಿ ಯಾವುದೇ ರೀತಿಯ ಬದಲಾವಣೆ ಕಾಣುವುದಿಲ್ಲ ಎನ್ನಲಾಗಿದೆ.

ಭಾರತಕ್ಕೆ ಮತ್ತೆ ಲಗ್ಗೆ ಇಡಲಿದೆ ಹೋಂಡಾ ಸಿವಿಕ್ ಕಾರು

ಸಿವಿಕ್ ಕಾರಿನ ಎಂಜಿನ್ 140 ಎಚ್‌ಪಿ ಶಕ್ತಿ ಹೊಂದುವ ಸಾಧ್ಯತೆ ಇದ್ದು, 1.8 ಲೀಟರ್ ಪೆಟ್ರೋಲ್ ಮತ್ತು 1.6 ಲೀಟರ್ ಡೀಸೆಲ್ ಆಯ್ಕೆಯಲ್ಲಿ ಬಿಡುಗಡೆಯಾಗುವ ಸಂಭವವಿದೆ. ಆದರೆ, ಬಹಳ ದುಬಾರಿ ಎಂಜಿನ್ ಎನ್ನುವ ಕಾರಣಕ್ಕೆ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಈ ಕಾರು ಬಿಡುಗಡೆಯಾಗುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

Article Published On: Saturday, October 28, 2017, 17:47 [IST]
English summary
Honda Cars India has officially confirmed that it will launch the much-awaited Civic sometime in 2019.
Read more on honda ಹೋಂಡಾ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+