ಮಾರ್ಚ್‌ನಲ್ಲಿ ಬರ್ತಿದೆ ಹೋಂಡಾ ಡಬ್ಲ್ಯೂಆರ್-ವಿ: ಕಾರಿನ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಚಾರ ಇಲ್ಲಿದೆ.

ಹೋಂಡಾ ಕಂಪನಿಯ ಹ್ಯಾಚ್‌ಬ್ಯಾಕ್ ಮಾದರಿ ಹೋಂಡಾ ಡಬ್ಲ್ಯೂಆರ್-ವಿ ಕಾರು ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.

By Girish

ಪ್ರತಿಷ್ಠಿತ ಕಾರು ತಯಾರಕ ಕಂಪನಿ ಹೋಂಡಾ ಕ್ರಾಸ್ಓವರ್ ಹ್ಯಾಚ್‌ಬ್ಯಾಕ್ ಮಾದರಿಯ ಹೋಂಡಾ ಡಬ್ಲ್ಯೂಆರ್-ವಿ ಕಾರನ್ನು ಬಿಡುಗಡೆಗೊಳಿಸಲು ಯೋಜನೆ ರೂಪಿಸಿದೆ.

ಮಾರ್ಚ್‌ನಲ್ಲಿ ಬರ್ತಿದೆ ಹೋಂಡಾ ಡಬ್ಲ್ಯೂಆರ್-ವಿ: ಕಾರಿನ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಚಾರ ಇಲ್ಲಿದೆ.

ಹೊಸ ಮಾದರಿಯ ಹೋಂಡಾ ಸಿಟಿ ಕಾರಿಗೆ ದೊರೆತ ಅತ್ಯದ್ಭುತ ಪ್ರತಿಕ್ರಿಯೆಯಿಂದ ಸಂತೋಷಗೊಂಡಿರುವ, ಹೋಂಡಾ ಕಾರು ತಯಾರಕ ಸಂಸ್ಥೆ ಈಗ ತನ್ನ ಹೋಂಡಾ ಡಬ್ಲ್ಯೂಆರ್-ವಿ ಕಾರನ್ನು ಬಿಡುಗಡೆಗೊಳಿಸುವ ತವಕದಲ್ಲಿದೆ.

ಮಾರ್ಚ್‌ನಲ್ಲಿ ಬರ್ತಿದೆ ಹೋಂಡಾ ಡಬ್ಲ್ಯೂಆರ್-ವಿ: ಕಾರಿನ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಚಾರ ಇಲ್ಲಿದೆ.

ಹೋಂಡಾ ಡಬ್ಲ್ಯೂಆರ್-ವಿ ಕಾರಿನ ಬಿಡುಗಡೆ ದಿನಾಂಕ, ಯಾವ ಯಾವ ಮಾದರಿಗಳಲ್ಲಿ ಈ ಕಾರು ಬಿಡುಗಡೆಗೊಳ್ಳುತ್ತಿದೆ, ಈ ಕಾರಿನ ವೈಶಿಷ್ಟ್ಯತೆ ಏನೆಂಬುದನ್ನು ಈ ಕೆಳಗೆ ವಿವರಿಸಲಾಗಿದೆ.

ಮಾರ್ಚ್‌ನಲ್ಲಿ ಬರ್ತಿದೆ ಹೋಂಡಾ ಡಬ್ಲ್ಯೂಆರ್-ವಿ: ಕಾರಿನ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಚಾರ ಇಲ್ಲಿದೆ.

ಮುಂದಿನ ತಿಂಗಳು ಮಾರ್ಚ್-16ಕ್ಕೆ ಹೋಂಡಾ ಡಬ್ಲ್ಯೂಆರ್-ವಿ ಕಾರು ಭಾರತದ ರಸ್ತೆಗಿಳಿಯಲಿದೆ ಎಂದು ಕಂಪನಿ ತಿಳಿಸಿದೆ.

ಮಾರ್ಚ್‌ನಲ್ಲಿ ಬರ್ತಿದೆ ಹೋಂಡಾ ಡಬ್ಲ್ಯೂಆರ್-ವಿ: ಕಾರಿನ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಚಾರ ಇಲ್ಲಿದೆ.

ತನ್ನ ಮತ್ತೊಂದು ಕಾರು ಜಾಝ್ ಕಾರಿನ ಕ್ರೇಸ್ಓವರ್ ಮಾದರಿಯನ್ನು ಮತ್ತಷ್ಟು ಅಂದಗೊಳಿಸಿ ಹೋಂಡಾ ಡಬ್ಲ್ಯೂಆರ್-ವಿ ತಯಾರು ಮಾಡಿದೆ ಎನ್ನಬಹುದು.

ಮಾರ್ಚ್‌ನಲ್ಲಿ ಬರ್ತಿದೆ ಹೋಂಡಾ ಡಬ್ಲ್ಯೂಆರ್-ವಿ: ಕಾರಿನ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಚಾರ ಇಲ್ಲಿದೆ.

ಕಂಪನಿಯು ಜಾಝ್ ಕಾರಿಗಿಂತಲೂ ಹೋಂಡಾ ಡಬ್ಲ್ಯೂಆರ್-ವಿ ಕಾರನ್ನು ವಿಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸಲು ಬಹಳಷ್ಟು ಶ್ರಮ ವಹಿಸಿದ್ದು, ಪ್ರಸಕ್ತ ಬೇಡಿಕೆಗಳಿಗೆ ಹೇಳಿಮಾಡಿಸಿದ ಕಾರ್ ಎನ್ನಬಹುದು. ಎತ್ತರಿಸಿದ ಬಾನೆಟ್ ಹೊಂದಿರುವ ಕಾರು ಇದಾಗಿದ್ದು, ಪ್ಲಾಸ್ಟಿಕ್‌ನಿಂದ ಮಾಡಿದ ಕ್ಲ್ಯಾಡಿಂಗ್ ಹೊಂದಿರುವ ಕಾರು ಇದಾಗಿದೆ.

ಮಾರ್ಚ್‌ನಲ್ಲಿ ಬರ್ತಿದೆ ಹೋಂಡಾ ಡಬ್ಲ್ಯೂಆರ್-ವಿ: ಕಾರಿನ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಚಾರ ಇಲ್ಲಿದೆ.

ಎಂಜಿನ್ ವಿಚಾರ ಹೇಳಬೇಕೆಂದರೆ, ಹೊಸ ಡಬ್ಲ್ಯೂಆರ್-ವಿ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಮಾದರಿಗಳಲ್ಲಿ ಬಿಡುಗಡೆಗೊಳ್ಳಲಿದೆ.

ಮಾರ್ಚ್‌ನಲ್ಲಿ ಬರ್ತಿದೆ ಹೋಂಡಾ ಡಬ್ಲ್ಯೂಆರ್-ವಿ: ಕಾರಿನ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಚಾರ ಇಲ್ಲಿದೆ.

ಜಾಝ್ ಕಾರಿನಲ್ಲಿರುವಂತೆ ಸ್ಟ್ಯಾಂಡರ್ಡ್ 1.2-ಲೀಟರ್ ಐ-ವಿಟಿಈಸಿ ಪೆಟ್ರೋಲ್ ಎಂಜಿನ್ ಈ ಕಾರಿನಲ್ಲಿಯೂ ಅಳವಡಿಸಲಾಗಿದ್ದು, 110ಎನ್ಎಂ ತಿರುಗುಬಲದಲ್ಲಿ 89 ಅಶ್ವಶಕ್ತಿ ಉತ್ಪಾದಿಸಲಿದೆ. 5 ಸ್ಪೀಡ್ ಮಾನ್ಯುಯಲ್ ಸಿವಿಟಿ (Continuously Variable Transmission) ಹೊಂದಿರುವ ಗೇರ್‌ಬಾಕ್ಸ್ ಇರಿಸಲಾಗಿದೆ.

ಮಾರ್ಚ್‌ನಲ್ಲಿ ಬರ್ತಿದೆ ಹೋಂಡಾ ಡಬ್ಲ್ಯೂಆರ್-ವಿ: ಕಾರಿನ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಚಾರ ಇಲ್ಲಿದೆ.

1.5-ಲೀಟರ್ ಐ-ಡಿಟಿಈಸಿ ಡೀಸೆಲ್ ಎಂಜಿನ್ ಹೊಂದಿರುವ ಕಾರು ಕೂಡ ಬಿಡುಗಡೆಗೊಳ್ಳುತ್ತಿದ್ದು, ಈ ಕಾರು 200ಏನ್ಎಂ ತಿರುಗುಬಲದಲ್ಲಿ 99 ಅಶ್ವಶಕ್ತಿ ಉತ್ಪಾದಿಸುವಷ್ಟು ಶಕ್ತವಾಗಿದ್ದು, 6 ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಹೊಂದಿರಲಿದೆ.

ಮಾರ್ಚ್‌ನಲ್ಲಿ ಬರ್ತಿದೆ ಹೋಂಡಾ ಡಬ್ಲ್ಯೂಆರ್-ವಿ: ಕಾರಿನ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಚಾರ ಇಲ್ಲಿದೆ.

ಇತ್ತೀಚಿನ ಎಲ್ಲಾ ಕಾರುಗಳಲ್ಲಿ ಇರುವಂತೆ ಕಾರಿನ ಒಳಭಾಗದಲ್ಲಿ ಆಪಲ್ ಕಾರ್-ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ವ್ಯವಸ್ಥೆಯನ್ನು(Touchscreen Infotainment System) ಮತ್ತು ಸ್ವಯಂಚಾಲಿತ ಹವಾನಿಯಂತ್ರಣ ವ್ಯವಸ್ಥೆ ಒಳಗೊಂಡಿರಲಿದೆ.

ಮಾರ್ಚ್‌ನಲ್ಲಿ ಬರ್ತಿದೆ ಹೋಂಡಾ ಡಬ್ಲ್ಯೂಆರ್-ವಿ: ಕಾರಿನ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಚಾರ ಇಲ್ಲಿದೆ.

ಒಟ್ಟಿನಲ್ಲಿ ಹೋಂಡಾ ಕಂಪನಿಯ ಮಟ್ಟಿಗೆ ಹೋಂಡಾ ಡಬ್ಲ್ಯೂಆರ್-ವಿ ದೊಡ್ಡ ಮಟ್ಟದ ಬಿಡುಗಡೆ ಎನ್ನಬಹುದು, ಹಾಗು ಈ ಕ್ರಾಸ್ಓವರ್ ಹ್ಯಾಚ್ ಬ್ಯಾಕ್ ಕಾರು ಮತ್ತಿತರ ಕಾರುಗಳಾದ ಫೋರ್ಡ್ ಕಂಪನಿಯ ಇಕೋಸ್ಪೋರ್ಟ್, ಮಾರುತಿ ಸುಝುಕಿಯ ವಿಟಾರಾ ಬ್ರೆಝ್, ಐ20 ಆಕ್ಟಿವ್ ಮತ್ತು ಟೊಯೋಟಾ ಎಟಿಯೋಸ್ ಕಾರುಗಳಿಗೆ ಪೈಪೋಟಿ ನೀಡುವುದು ಖಂಡಿತ.

ಹೋಂಡಾ ಕಂಪನಿಯ ಮತ್ತೊಂದು ಹೊಸ ಕಾರು ಹೋಂಡಾ ಸಿಟಿ ಚಿತ್ರಗಳನ್ನು ಈ ಕೆಳಗೆ ವೀಕ್ಷಿಸಿ.

Most Read Articles

Kannada
Read more on ಹೋಂಡಾ honda
English summary
Honda WR-V - the crossover hatchback is all set to launch in India. What can we expect from the upcoming Honda WR-V? Launch details, variants, and features explained.
Story first published: Friday, February 24, 2017, 12:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X