ಡಬ್ಲ್ಯು-ವಿ ಕಾರುಗಳನ್ನು ದಾಖಲೆಯ ಪ್ರಮಾಣದಲ್ಲಿ ಮಾರಾಟ ಮಾಡಿದ ಹೋಂಡಾ

Written By:

ಕಳೆದ ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆಯಾಗಿದ್ದ ಹೋಂಡಾ ಡಬ್ಲ್ಯು-ವಿ ಕಾರು ಮಾರಾಟ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಇದುವರೆಗೆ ಹೊಸ ಕಾರಿಗಾಗಿ 23 ಸಾವಿರ ಬುಕ್ಕಿಂಗ್ ಪಡೆಯಲಾಗಿದೆ.

To Follow DriveSpark On Facebook, Click The Like Button
ಹೋಂಡಾ ಡಬ್ಲ್ಯು-ವಿ ಕಾರು

ಹೋಂಡಾದ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲಿ ಅತ್ಯಧಿಕ ಬೇಡಿಕೆ ಹೊಂದಿರುವ ಡಬ್ಲ್ಯು-ವಿ ಕಾರು ಮಾದರಿಯೂ ಹಲವು ವಿಶೇಷತೆಗಳೊಂದಿಗೆ ಅಭಿವೃದ್ಧಿ ಹೊಂದಿದ್ದು, ಈ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಡಬ್ಲ್ಯು-ವಿ ಮಾರಾಟದಲ್ಲಿ ದಾಖಲೆ ಕಂಡಿದೆ.

ಹೋಂಡಾ ಡಬ್ಲ್ಯು-ವಿ ಕಾರು

ಎಲೆಕ್ಟ್ರಿಕ್ ಸನ್‌ರೂಫ್, ಚಾಲಕನಿಗೆ ಸಹಾಕವಾಗುವ ಕೂಲ್ ಕಪ್ ಹೊಲ್ಡರ್, ಸ್ಮಾರ್ಟ್‌ಫೋನ್ ಹೊಲ್ಡರ್, ಆರ್ಮ್ ರೆಸ್ಟ್ ಪ್ಯಾಡ್, ಡ್ಯುಯಲ್ ಏರ್‌ಬ್ಯಾಗ್ ಮತ್ತು ಎಬಿಎಸ್ ತಂತ್ರಜ್ಞಾನ ಸೇರಿದಂತೆ ಹಲವು ಸೌಲಭ್ಯಗಳನ್ನು ಡಬ್ಲ್ಯು-ವಿ ಕಾರಿನಲ್ಲಿ ಒದಗಿಸಲಾಗಿದೆ.

ಹೋಂಡಾ ಡಬ್ಲ್ಯು-ವಿ ಕಾರು

ಹೀಗಾಗಿಯೇ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಡಬ್ಲ್ಯು-ವಿ ಕಾರುಗಳ ಖರೀದಿಗೆ ಇದುವರೆಗೆ 23 ಸಾವಿರ ಬುಕ್ಕಿಂಗ್ ಪಡೆಯಲಾಗಿದ್ದು, ಇದರಲ್ಲಿ ಕೇವಲ 16 ಸಾವಿರ ಕಾರುಗಳನ್ನು ಮಾತ್ರ ಗ್ರಾಹಕರಿಗೆ ಒದಗಿಸುಲು ಸಾಧ್ಯವಾಗಿದೆ.

ಹೋಂಡಾ ಡಬ್ಲ್ಯು-ವಿ ಕಾರು

ಪ್ರತಿ ತಿಂಗಳು ನಾಲ್ಕು ಸಾವಿರ ಡಬ್ಲ್ಯು-ವಿ ಕಾರುಗಳು ಮಾತ್ರ ಉತ್ಪಾದನೆಯಾಗುತ್ತಿದ್ದು, ಈ ಹಿನ್ನೆಲೆ ಗ್ರಾಹಕರ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಕ್ರಮಕೈಗೊಂಡಿರುವ ಹೋಂಡಾ ಸಂಸ್ಥೆಯು ಪ್ರತಿ ತಿಂಗಳು ಡಬ್ಲ್ಯು-ವಿ ಉತ್ಪಾದನೆಯನ್ನು 5 ಸಾವಿರಕ್ಕೆ ಏರಿಕೆ ಮಾಡಲು ಮುಂದಾಗಿದೆ.

ಹೋಂಡಾ ಡಬ್ಲ್ಯು-ವಿ ಕಾರು

ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಡಬ್ಲ್ಯು-ವಿ ಕಾರುಗಳು ಲಭ್ಯವಿದ್ದು, ಪೆಟ್ರೋಲ್ ಮಾದರಿಯೂ 1.2-ಲೀಟರ್ ಎಂಜಿನ್ ಹೊಂದಿದ್ದರೆ ಡೀಸೆಲ್ ಮಾದರಿಯೂ 1.5-ಲೀಟರ್ ಎಂಜಿನ್ ಜೊತೆ ಅಭಿವೃದ್ಧಿ ಹೊಂದಿವೆ.

ಹೋಂಡಾ ಡಬ್ಲ್ಯು-ವಿ ಕಾರು

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಸೆಡಾನ್ ಮಾದರಿಗಳಲ್ಲಿ ಹೋಂಡಾ ಉತ್ಪಾದನೆಯ ಸಿಟಿ 2017 ಮುಂಚೂಣಿಯಲ್ಲಿದ್ದು, ಅದೇ ನಿಟ್ಟಿನಲ್ಲಿ ಡಬ್ಲ್ಯು-ವಿ ಆವೃತ್ತಿ ಕೂಡಾ ಅತಿ ಹೆಚ್ಚು ಬೇಡಿಕೆ ಪಡೆಯುವ ಮೂಲಕ ಮುಂಬರುವ ದಿನಗಳಲ್ಲಿ ಸಬ್ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

Read more on ಹೋಂಡಾ honda
English summary
Read in Kannada about WR-V The Next Big Winner For Honda In India?
Story first published: Thursday, July 20, 2017, 13:13 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark