ಕಾರುಗಳ ಮೇಲೆ ಡಿಸೆಂಬರ್ ತಿಂಗಳ ಭರ್ಜರಿ ಆಫರ್ ನೀಡಿದ ಹ್ಯುಂಡೈ
ಭಾರತದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಕಂಪನಿಯು ತನ್ನ ಕಾರುಗಳ ಮೇಲೆ ಹೆಚ್ಚಿನ ಕೊಡುಗೆ ಮತ್ತು ರಿಯಾಯಿತಿಗಳನ್ನು ಘೋಷಿಸಿದೆ. ಈ ಕೊಡುಗೆಯು ಕೇವಲ ಡಿಸೆಂಬರ್ 2017ರಲ್ಲಿ ಮಾತ್ರ ಲಭ್ಯವಿದೆ.
ಭಾರತದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಕಂಪನಿಯು ತನ್ನ ಕಾರುಗಳ ಮೇಲೆ ಹೆಚ್ಚಿನ ಕೊಡುಗೆ ಮತ್ತು ರಿಯಾಯಿತಿಗಳನ್ನು ಘೋಷಿಸಿದೆ. ಈ ಕೊಡುಗೆಯು ಕೇವಲ ಡಿಸೆಂಬರ್ 2017ರಲ್ಲಿ ಮಾತ್ರ ಲಭ್ಯವಿದೆ.

ಕಂಪನಿಯು 'ಹುಂಡೈ ಡಿಸೆಂಬರ್ ಡಿಲೈಟ್' ಎಂದು ಯೋಜನೆಯನ್ನು ಹೊರ ತಂದಿದ್ದು, ಈ ಮೂಲಕ ತನ್ನ ಗ್ರಾಹಕರಿಗೆ ವರ್ಷಾಂತ್ಯದ ಕೊಡುಗೆಗಳನ್ನು ನೀಡಲು ಮುಂದಾಗಿದೆ. ಯಾವೆಲ್ಲ ಕೊಡುಗೆಗಳನ್ನು ಕಂಪನಿ ನೀಡಲಿದೆ ಎಂಬುದರ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಹ್ಯುಂಡೈ ಕಂಪನಿಯು ತನ್ನ ಪ್ರವೇಶ ಮಟ್ಟದ ಹ್ಯುಂಡೈ ಇಯಾನ್ ಕಾರಿನ ಮೇಲೆ ರೂ.65,000ಗಳಷ್ಟು ರಿಯಾಯಿತಿಯನ್ನು ಘೋಷಿಸಿದೆ. ಈ ಪ್ರಕಾರ ಈ ಹ್ಯಾಚ್‌ಬ್ಯಾಕ್ ಕಾರು 2.95 ಲಕ್ಷ ಎಕ್ಸ್ ಶೋರೂಂ ಬೆಲೆ ಪಡೆದುಕೊಳ್ಳಲಿದೆ.

ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ಪೆಟ್ರೋಲ್ ಮಾದರಿಯ ಮೇಲೆ ರೂ.80,000 ರಷ್ಟು ಡಿಸ್ಕೌಂಟ್ ಮತ್ತು ಡೀಸೆಲ್ ಮಾದರಿಯ ಕಾರಿನ ಮೇಲೆ ರೂ.90,000 ವಿಶೇಷ ದರ ನಿಗದಿಪಡಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಭಾರತದಲ್ಲಿ ಇತ್ತೀಚಿಗೆ ಸಬ್ ಫೋರ್ ಮೀಟರ್ ಕಾರು ವಿಭಾಗವು ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿದೆ. ಈ ವಿಭಾಗಕ್ಕೆ ಸೇರಿರುವ ಎಕ್ಸ್‌ಸೆಂಟ್ ಕಾರಿನ ಪೆಟ್ರೋಲ್ ಮತ್ತು ಡೀಸೆಲ್ ರೂಪಾಂತರಗಳ ಮೇಲೆ ರೂ.60,000 ರಿಯಾಯಿತಿ ನೀಡಲಾಡಿದ್ದು, ಈ ಕಾರು ರೂ.5.29 ಲಕ್ಷ ವಿಶೇಷ ಬೆಲೆಯಲ್ಲಿ ಲಭ್ಯವಿದೆ.

ಹ್ಯುಂಡೈ ಎಲೈಟ್ ಐ20 ಮತ್ತು ಐ20 ಆಕ್ಟಿವ್ ಕಾರುಗಳಿಗೂ ಸಹ ಈ ವಿಶೇಷ ರಿಯಾಯಿತಿ ಆಫರ್ ನೀಡಲು ಕಂಪನಿ ತೀರ್ಮಾನಿಸಿದೆ. ಈ ಪ್ರೀಮಿಯಂ ಹ್ಯುಂಡೈ ಹ್ಯಾಚ್‌ಬ್ಯಾಕ್ ಕಾರುಗಳು ರೂ.55,000 ಕಡಿಮೆ ಬೆಲೆಯಲ್ಲಿ ಲಭ್ಯವಿವೆ.

ಮೇಲಿನ ಕೊಡುಗೆಗಳನ್ನು ಹೊರತುಪಡಿಸಿ, ಒಳಭಾಗದಲ್ಲಿ ಅಳವಡಿಸಲಾಗುವ ಇನ್ಫೋಟೈನ್ಮೆಂಟ್ ವ್ಯವಸ್ಥೆಯ ಮೇಲೆ ಹೆಚ್ಚುವರಿ ರೂ.10,000 ವರೆಗಿನ ಉಳಿತಾಯ ಸೌಲಭ್ಯವನ್ನು ಹ್ಯುಂಡೈ ನೀಡುತ್ತಿದೆ ಹಾಗು ಹೆಚ್ಚುವರಿಯಾಗಿ, ಆಕರ್ಷಕ ವಿನಿಮಯ ಮತ್ತು ನಗದು ಪ್ರಯೋಜನಗಳನ್ನೂ ಸಹ ಒದಗಿಸಲಾಗುತ್ತಿದೆ.

ಈ ಸೀಮಿತ ಅವಧಿಯ ಕೊಡುಗೆಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿದೆ. ಇದಕ್ಕೆ ಸಂಬಂಧಪಟ್ಟ ಮಾರಾಟ ಪ್ರತಿನಿಧಿಗಳೊಂದಿಗೆ ಒಮ್ಮೆ ವಿಸ್ತೃತವಾದ ಚರ್ಚೆ ನಡೆಸಿ ನಂತರ ನಿಮ್ಮ ನೆಚ್ಚಿನ ಕಾರನ್ನು ಕೊಂಡುಕೊಂಡರೆ ಉತ್ತಮ.


Click it and Unblock the Notifications








