ಸದ್ಯದಲ್ಲೇ ಹಾಟ್ ಹ್ಯಾಚ್‌ಬ್ಯಾಕ್‌ನೊಂದಿಗೆ ಬರಲಿದೆ ಹ್ಯುಂಡೈ ಐ30..!!
ವರ್ಷದ ಅಂತ್ಯಕ್ಕೆ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜುಗೊಂಡಿರುವ ಹ್ಯುಂಡೈ ಐ30, ಹಾಟ್ ಹ್ಯಾಚ್‌ಬ್ಯಾಕ್ ವಿನ್ಯಾಸನೊಂದಿಗೆ ಮತ್ತೊಮ್ಮೆ ಬೃಹತ್ ಬೇಡಿಕೆ ಸೃಷ್ಠಿಸುವ ತವಕದಲ್ಲಿದೆ.
ವರ್ಷದ ಅಂತ್ಯಕ್ಕೆ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜುಗೊಂಡಿರುವ ಹ್ಯುಂಡೈ ಐ30, ಹಾಟ್ ಹ್ಯಾಚ್‌ಬ್ಯಾಕ್ ವಿನ್ಯಾಸನೊಂದಿಗೆ ಮತ್ತೊಮ್ಮೆ ಬೃಹತ್ ಬೇಡಿಕೆ ಸೃಷ್ಠಿಸುವ ತವಕದಲ್ಲಿದೆ.

ದಕ್ಷಿಣ ಕೊರಿಯಾದ ಪ್ರಮುಖ ಕಾರು ಉತ್ವಾದನಾ ಸಂಸ್ಥೆ ಹ್ಯುಂಡೈ ತನ್ನ ಬಹುನೀರಿಕ್ಷಿತ ಐ30 ಹಾಟ್ ಹ್ಯಾಚ್‌ಬ್ಯಾಕ್ ಕಾರನ್ನು ಬಿಡುಗಡೆಗೆ ಸಜ್ಜುಗೊಂಡಿದ್ದು, ವಿನೂತನ ಕಾರು ಮಾದರಿಯನ್ನು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ತಕ್ಕಂತೆ ಅಭಿವೃದ್ಧಿಗೊಳಿಸಲಾಗಿದೆ.

ವಿಶೇಷ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿಗೊಂಡಿರುವ ಹ್ಯುಂಡೈ ಐ30 ಕಾರಿನಲ್ಲಿ ಪರೀಕ್ಷಾರ್ಥವಾಗಿ 6 ಸಾವಿರ ಕಿ.ಮಿ ಯಶಸ್ವಿ ಪ್ರವಾಸ ಕೈಗೊಳ್ಳಲಾಗಿದ್ದು, ಸದ್ಯದಲ್ಲೇ ಹ್ಯುಂಡೈ ಪ್ರಿಯರಿಗೆ ಹೊಸ ಕಾರು ಮಾದರಿ ಖರೀದಿಗೆ ಲಭ್ಯವಾಗಲಿದೆ.

ಹೊಸ ಹ್ಯುಂಡೈ ಐ30 ಕಾರು 2.0-ಲೀಟರ್ ನಾಲ್ಕು ಸಿಲಿಂಡರ್ ಎಂಜಿನ್ ಸಾಮರ್ಥ್ಯ ಹೊಂದಿದ್ದು, 271 ಬಿಎಚ್‌ಪಿ ಉತ್ಪಾದಿಸುತ್ತದೆ. ಇದಲ್ಲದೇ 6-ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆ ಕೂಡಾ ಇದ್ದು, 8-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಕೂಡಾ ಲಭ್ಯವಿದೆ.

ಇದರೊಂದಿಗೆ 19-ಇಂಚಿನ್ ಅಲಾಯ್ ಚಕ್ರಗಳ ವ್ಯವಸ್ಥೆ ಕೂಡಾ ಇದ್ದು, ಪೆರೇಲಿ ಪಿ ಜೀರೋ ಟೈರ್ ಹೊಂದಿರಲಿದೆ. ಹೊಸ ಮಾದರಿಯ ಹ್ಯುಂಡೈ ಐ30 ಆವೃತ್ತಿಗೆ ಸ್ಪೋರ್ಟ್ಸ್ ಆವೃತ್ತಿಯ ಟಚ್ ನೀಡಲಾಗಿದ್ದು, ಡ್ಯುಯಲ್ ಎಕ್ಸಾಸ್ಟ್ ಕೊಳಗೆ ನೀಡಲಾಗಿದೆ.

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚಿನ ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ ಎಲೆಕ್ಟ್ರಿಕ್ ಕಾರು ಮಾದರಿಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಠಿಯಾಗಿದ್ದು, ಬರಲಿರುವ ಐ30 ಮಾದರಿ ಕೂಡಾ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಒಟ್ಟಿನಲ್ಲಿ ಬಿಡುಗಡೆ ನಂತರವಷ್ಚೇ ಸಂಪೂರ್ಣ ಮಾಹಿತಿ ಲಭ್ಯವಾಗಲಿದ್ದು, ಹೊಸ ಮಾದರಿಯ ಐ30 ಪ್ರಮುಖ ಹ್ಯಾಚ್‌ಬ್ಯಾಕ್ ಮಾದರಿಗಳಲ್ಲೇ ಅತ್ಯುತ್ತಮ ಮಾದರಿಯಾಗಿ ಹೊರಹೊಮ್ಮುವ ತವಕದಲ್ಲಿದೆ.


Click it and Unblock the Notifications