ಬೆಂಗಳೂರಿಗೂ ಲಗ್ಗೆಯಿಟ್ಟ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ..!!

ನಿನ್ನೆಯಷ್ಟೇ ದೆಹಲಿಯಲ್ಲಿ ಅಮೋಘವಾಗಿ ಬಿಡುಗೊಂಡಿದ್ದ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ ಕಾರು ಇಂದು ಬೆಂಗಳೂರಿನಲ್ಲೂ ಬಿಡುಗಡೆಗೊಂಡಿದ್ದು, ನವೀನ ಆವೃತಿಯಾದ ವೆರ್ನಾ ಕಾರು ರೂ.7.99 ಲಕ್ಷ ಎಕ್ಸ್ ಶೋರೂಂ(ಬೆಂಗಳೂರು) ಬೆಲೆಗಳನ್ನು ಪಡೆದುಕೊಂಡಿದೆ.

By Praveen

ನಿನ್ನೆಯಷ್ಟೇ ದೆಹಲಿಯಲ್ಲಿ ಅಮೋಘವಾಗಿ ಬಿಡುಗೊಂಡಿದ್ದ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ ಕಾರು ಇಂದು ಬೆಂಗಳೂರಿನಲ್ಲೂ ಬಿಡುಗಡೆಗೊಂಡಿದ್ದು, ಆರಂಭಿಕ ಕಾರು ಆವೃತ್ತಿಯ ಬೆಲೆಯು ಬೆಂಗಳೂರು ಎಕ್ಸ್‌ಶೋರಂ ಪ್ರಕಾರ ರೂ.7.99 ಲಕ್ಷಕ್ಕೆ ಹಾಗೂ ಉನ್ನತ ಆವೃತ್ತಿಯ ಬೆಲೆಯು ರೂ.12.23 ಲಕ್ಷಕ್ಕೆ ಲಭ್ಯವಿರಲಿವೆ.

ಬೆಂಗಳೂರಿಗೂ ಲಗ್ಗೆಯಿಟ್ಟ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ..!!

ಮೂರನೆಯ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ ಎಕ್ಸಿಕ್ಯೂಟಿವ್ ಸೆಡಾನ್ ಮಾದರಿಯಲ್ಲಿ ಅಭಿವೃದ್ಧಿಗೊಂಡಿದ್ದು, ಹೋಂಡಾ ಕಂಪನಿಯ ಸಿಟಿ, ಮಾರುತಿ ಸುಜುಕಿ ಸಿಯಾಜ್ ಕಾರು ಮಾದರಿಗಳೊಂದಿಗೆ ತೀವ್ರ ಸ್ಪರ್ಧೆ ನೆಡೆಸುವ ತವಕದಲ್ಲಿದೆ.

ಬೆಂಗಳೂರಿಗೂ ಲಗ್ಗೆಯಿಟ್ಟ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ..!!

ಹ್ಯುಂಡೈ ವೆರ್ನಾ ಪೆಟ್ರೋಲ್ ಆವೃತ್ತಿಗಳ ಬೆಲೆಗಳು

ಹ್ಯುಂಡೈ ವೆರ್ನಾ ಇ- ರೂ.7,99,900

ಹ್ಯುಂಡೈ ವೆರ್ನಾ ಇಎಕ್ಸ್- ರೂ.9,06,900

ಹ್ಯುಂಡೈ ವೆರ್ನಾ ಇಎಕ್ಸ್ ಎಟಿ- ರೂ.10,22,900

ಹ್ಯುಂಡೈ ವೆರ್ನಾ ಎಸ್ಎಕ್ಸ್- ರೂ.9,49,900

ಹ್ಯುಂಡೈ ವೆರ್ನಾ ಎಸ್ಎಕ್ಸ್ (ಒ)- ರೂ.11,08,900

ಹ್ಯುಂಡೈ ವೆರ್ನಾ ಎಸ್ಎಕ್ಸ್ (ಒ) ಎಟಿ- ರೂ.12,23,900

ಬೆಂಗಳೂರಿಗೂ ಲಗ್ಗೆಯಿಟ್ಟ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ..!!

ಸುಧಾರಿತ ತಂತ್ರಜ್ಞಾನವನ್ನು ಪಡೆದುಕೊಂಡು ಬಿಡುಗಡೆಗೊಂಡಿರುವ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ ಕಾರು ಡಿಸೇಲ್ ಮತ್ತು ಪೆಟ್ರೋಲ್ ಆವೃತ್ತಿಯಲ್ಲಿ ಲಭ್ಯವಿದ್ದು, ಇಎಕ್ಸ್, ಎಸ್ಎಕ್ಸ್ ಮತ್ತು ಎಸ್ಎಕ್ಸ್(ಒ) ಎಂಬ ಆರು ವಿವಿಧ ಆವೃತಿಗಳಲ್ಲಿ ಸಿದ್ಧಗೊಂಡಿದೆ.

ಬೆಂಗಳೂರಿಗೂ ಲಗ್ಗೆಯಿಟ್ಟ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ..!!

ಹ್ಯುಂಡೈ ವೆರ್ನಾ ಡೀಸೆಲ್ ಆವೃತ್ತಿಗಳ ಬೆಲೆಗಳು

ಹ್ಯುಂಡೈ ವೆರ್ನಾ ಇ- ರೂ. 9,19,900

ಹ್ಯುಂಡೈ ವೆರ್ನಾ ಇಎಕ್ಸ್- ರೂ. 9,99,900

ಹ್ಯುಂಡೈ ವೆರ್ನಾ ಇಎಕ್ಸ್ ಎಟಿ- ರೂ. 11,39,900

ಹ್ಯುಂಡೈ ವೆರ್ನಾ ಎಸ್ಎಕ್ಸ್- ರೂ. 11,11,900

ಹ್ಯುಂಡೈ ವೆರ್ನಾ ಎಸ್ಎಕ್ಸ್ ಪ್ಲಸ್ ಎಟಿ- ರೂ. 12,61,900

ಹ್ಯುಂಡೈ ವೆರ್ನಾ ಎಸ್ಎಕ್ಸ್ (ಒ)- ರೂ. 12,39,900

Recommended Video

2017 Hyundai Verna Launched In India - DriveSpark
ಬೆಂಗಳೂರಿಗೂ ಲಗ್ಗೆಯಿಟ್ಟ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ..!!

ಹೊಸ ವೆರ್ನಾ ಪೆಟ್ರೋಲ್ ರೂಪಾಂತರವು ಇಎಕ್ಸ್ ಮತ್ತು ಎಸ್ಎಕ್ಸ್(ಓ) ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆ ಪಡೆದುಕೊಂಡಿದೆ ಹಾಗು ಡೀಸೆಲ್ ರೂಪಾಂತರಗಳಲ್ಲಿ, ಇಎಕ್ಸ್ ಮತ್ತು ಎಸ್ಎಕ್ಸ್ ಪ್ಲಸ್ ಮಾದರಿಗಳಲ್ಲಿ ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

ಬೆಂಗಳೂರಿಗೂ ಲಗ್ಗೆಯಿಟ್ಟ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ..!!

ಹ್ಯುಂಡೈ ವೆರ್ನಾ ಕಾರು 3 ವರ್ಷ ಅಥವಾ ಅನಿಯಮಿತ ಕಿಲೋಮೀಟರ್ ಖಾತರಿಯನ್ನು ಪಡೆದುಕೊಂಡಿದೆ. ಜೊತಗೆ ರಸ್ತೆ ಬದಿಯ ನೆರವು ಒದಗಿಸಲು ಕಂಪನಿ ತೀರ್ಮಾನಿಸಿದ್ದು, ಮೂರು ಬಾರಿ ಮ್ಯಾಪ್ಕೇರ್ ಸ್ಯಾಟ್‌ಲೈಟ್ ನೇವಿಗೇಶನ್ ಸಿಸ್ಟಮ್ ನವೀಕರಣಗಳನ್ನು ಪಡೆದುಕೊಳ್ಳಬಹುದಾಗಿದೆ.

ಬೆಂಗಳೂರಿಗೂ ಲಗ್ಗೆಯಿಟ್ಟ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ..!!

ಮೂರನೆಯ ತಲೆಮಾರಿನ ನೂತನ ಹ್ಯುಂಡೈ ಎಕ್ಸಿಕ್ಯೂಟಿವ್ ಸೆಡಾನ್ ವೆರ್ನಾ ಕಾರು, 1.6-ಲೀಟರ್ ಪೆಟ್ರೋಲ್ ಮತ್ತು 1.6-ಲೀಟರ್ ಡೀಸೆಲ್ ಎಂಬ ಎರಡು ಎಂಜಿನ್ ಆಯ್ಕೆಯನ್ನು ಹೊಂದಿದೆ. ಪೆಟ್ರೋಲ್ ಎಂಜಿನ್ 151 ಎನ್‌ಎಂ ತಿರುಗುಬಲದಲ್ಲಿ 121ರಷ್ಟು ಟಾರ್ಕ್ ಉತ್ಪಾದಿಸುತ್ತದೆ ಮತ್ತು ಡೀಸೆಲ್ ಎಂಜಿನ್ 260 ಎನ್‌ಎಂ ತಿರುಗುಬಲದಲ್ಲಿ 126ರಷ್ಟು ಟಾರ್ಕ್ ಉತ್ಪಾದಿಸುತ್ತದೆ.

ಬೆಂಗಳೂರಿಗೂ ಲಗ್ಗೆಯಿಟ್ಟ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ..!!

ಎರಡೂ ಮಾದರಿಯೂ ಸಹ 6-ಸ್ಪೀಡ್ ಮಾನ್ಯುಯಲ್ ಅಥವಾ 6 ಸ್ಪೀಡ್ ಆಟೊಮ್ಯಾಟಿಕ್ ಗೇರ್‌ಬಾಕ್ಸ್ ಅಳವಡಿಸಲಾಗಿದೆ. ಪೆಟ್ರೋಲ್ ಆವೃತಿಯ ಕಾರು ಲೀಟರಿಗೆ 17.7 ಕಿಲೋಮೀಟರ್‌ ಮೈಲೇಜ್ ನೀಡಲಿದೆ ಹಾಗು ಡೀಸೆಲ್ ಕಾರು 24.76 ಕಿಲೋಮೀಟರ್‌ ಮೈಲೇಜ್ ನೀಡಲಿದೆ.

ಬೆಂಗಳೂರಿಗೂ ಲಗ್ಗೆಯಿಟ್ಟ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ..!!

ಕೆ 2 ಫ್ಲ್ಯಾಟ್ ಫಾರ್ಮ್ ಆಧಾರ ಮೇಲೆ ಅಭಿವೃದ್ದಿಗೊಂಡಿರುವ 3ನೇ ಜನರೇಷನ್ ಹ್ಯುಂಡೈ ವೆರ್ನಾ ಕಾರು ಹೆಚ್ಚಿನ ಶಕ್ತಿಯನ್ನು ಪಡೆದುಕೊಂಡಿದ್ದು, ಬಿಗಿತವನ್ನು ಹೆಚ್ಚಿಗೆ ಮಾಡಲಿದೆ ಹೀಗಾಗಿ ಕಾರಿನ

ಕ್ರ್ಯಾಶಿಂಗ್ ಬಲಾಡ್ಯತೆಯನ್ನು ಹೆಚ್ಚಿಗೆಗೊಳಿಸಲಿದೆ.

ಬೆಂಗಳೂರಿಗೂ ಲಗ್ಗೆಯಿಟ್ಟ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ..!!

ಎಸ್ಎಕ್ಸ್(ಒ) ಮತ್ತು ಎಸ್ಎಕ್ಸ್ ಆವೃತಿಗಳ ಒಳಭಾಗದಲ್ಲಿ, 7 ಇಂಚಿನ ಟಚ್ ಸ್ಕ್ರೀನ್ ಟಿವಿ ವ್ಯವಸ್ಥೆ ಹೊಂದಿರುತ್ತದೆ. ಈ 7 ಇಂಚಿನ ಟಚ್ ಸ್ಕ್ರೀನ್ ಪರದೆಯು ಆಂಡ್ರಾಯ್ಡ್ ಆಟೊ, ಆಪಲ್ ಕಾರ್‌ಪ್ಲೇ ಮತ್ತು ಮಿರರ್ ಲಿಂಕ್ ಕನೆಕ್ಟಿವಿಟಿ ವ್ಯವಸ್ಥೆ ಹೊಂದಿದೆ.

ಬೆಂಗಳೂರಿಗೂ ಲಗ್ಗೆಯಿಟ್ಟ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ..!!

ಹಳೆಯ ಆವೃತಿಗೆ ಹೋಲಿಸಿದರೆ ಹೊಸ ಕಾರು ಮುಂಭಾಗದಲ್ಲಿ 30 ಮಿ.ಮೀ ಉದ್ದ, 29 ಮಿ.ಮೀ ಅಗಲ, 6 ಮಿಮೀ ಎತ್ತರವಾಗಲಿದ್ದು, ಕಾರು ಮೊದಲಿಗಿಂತಲೂ ಹೆಚ್ಚು ತೀಕ್ಷ್ಣವಾಗಿ ಕಾಣುತ್ತದೆ ಮತ್ತು ಈ ಕಾರಿನ ಎಂಜಿನ್ ಹೆಚ್ಚು ಶಕ್ತಿಯುತವಾಗಿರುವುದರಿಂದ ಉತ್ತಮ ಮೈಲೇಜ್ ನೀಡುವಲ್ಲಿ ಸಹಕಾರಿಯಾಗಿವೆ.

ಬೆಂಗಳೂರಿಗೂ ಲಗ್ಗೆಯಿಟ್ಟ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸೆಡಾನ್ ವಿಭಾಗಕ್ಕೆ ಹೊಸ ಆಯಾಮ ನೀಡುವ ಉದ್ದೇಶದೊಂದಿಗೆ ನ್ಯೂ ಜನರೇಷನ್ ವೆರ್ನಾ ಕಾರನ್ನು ಪರಿಚಯಿಸಲಾಗಿದ್ದು, ಹೋಂಡಾ ಸಿಟಿ, ಮಾರುತಿ ಸುಜುಕಿ ಆವೃತ್ತಿಗಳಗೆ ಇದು ತೀವ್ರ ಹೊಡೆತ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Article Published On: Wednesday, August 23, 2017, 15:33 [IST]
English summary
Read in Kannada about 2017 Hyundai Verna Launched In Bangalore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+