ಹ್ಯುಂಡೈ ವೆರ್ನಾ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ರೂ.7.99 ಲಕ್ಷ

ಹ್ಯುಂಡೈ ವೆರ್ನಾ ಕಾರು ಭಾರತದಲ್ಲಿ ಬಿಡುಗಡೆಗೊಂಡಿದ್ದು, ಈ ನವೀನ ಆವೃತಿಯಾದ ವರ್ನ ಕಾರು ರೂ.7.99 ಲಕ್ಷ ಎಕ್ಸ್ ಷೋರೂಂ(ದೆಹಲಿ) ಬೆಲೆಗಳನ್ನು ಪಡೆದುಕೊಂಡಿದೆ.

By Girish

ಹ್ಯುಂಡೈ ವೆರ್ನಾ ಕಾರು ಭಾರತದಲ್ಲಿ ಬಿಡುಗಡೆಗೊಂಡಿದ್ದು, ಈ ನವೀನ ಆವೃತಿಯಾದ ವರ್ನ ಕಾರು ರೂ.7.99 ಲಕ್ಷ ಎಕ್ಸ್ ಷೋರೂಂ(ದೆಹಲಿ) ಬೆಲೆಗಳನ್ನು ಪಡೆದುಕೊಂಡಿದೆ.

ಹ್ಯುಂಡೈ ವೆರ್ನಾ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ರೂ.7.99 ಲಕ್ಷ

ಮೂರನೆಯ ತಲೆಮಾರಿನ ನೂತನ ಹ್ಯುಂಡೈ ಎಕ್ಸಿಕ್ಯೂಟಿವ್ ಸೆಡಾನ್ ವೆರ್ನಾ ಕಾರನ್ನು ಭಾರತದಲ್ಲಿ ಅನಾವರಣಗೊಳಿಸಿದ್ದು, ಈ ಕಾರು ಹೋಂಡಾ ಕಂಪನಿಯ ಸಿಟಿ, ಮಾರುತಿ ಸುಜುಕಿ ಸಿಯಾಜ್ ಎಸ್ ಕಾರುಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಸ್ಪರ್ಧೆ ನೆಡೆಸಲಿದೆ.

ಹ್ಯುಂಡೈ ವೆರ್ನಾ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ರೂ.7.99 ಲಕ್ಷ

ಸಾಕಷ್ಟು ತಂತ್ರಜ್ಞಾನವನ್ನು ಪಡೆದುಕೊಂಡು ಬಿಡುಗಡೆಗೊಂಡಿರುವ ಈ ಹ್ಯುಂಡೈ ವೆರ್ನಾ ಕಾರು ಇಎಕ್ಸ್, ಎಸ್ಎಕ್ಸ್ ಮತ್ತು ಎಸ್ಎಕ್ಸ್(ಒ) ಎಂಬ ಆರು ವಿವಿಧ ಆವೃತಿಗಳಲ್ಲಿ ಈ ಹೊಸ ಜನರೇಶನ್ ಕಾರು ಬಿಡುಗಡೆಗೊಳ್ಳಲಿದೆ.

ಹ್ಯುಂಡೈ ವೆರ್ನಾ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ರೂ.7.99 ಲಕ್ಷ

ಹೊಸ ವೆರ್ನಾ ಪೆಟ್ರೋಲ್ ರೂಪಾಂತರವು ಇಎಕ್ಸ್ ಮತ್ತು ಎಸ್ಎಕ್ಸ್(ಓ) ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆ ಪಡೆದುಕೊಂಡಿದೆ ಹಾಗು ಡೀಸೆಲ್ ರೂಪಾಂತರಗಳಲ್ಲಿ, ಇಎಕ್ಸ್ ಮತ್ತು ಎಸ್ಎಕ್ಸ್+ ಮಾದರಿಗಳಲ್ಲಿ ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

ಹ್ಯುಂಡೈ ವೆರ್ನಾ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ರೂ.7.99 ಲಕ್ಷ

ಹ್ಯುಂಡೈ ವೆರ್ನಾ ಕಾರು 3 ವರ್ಷ ಅಥವಾ ಅನಿಯಮಿತ ಕಿಲೋಮೀಟರ್ ಖಾತರಿಯನ್ನು ಪಡೆದುಕೊಂಡಿದೆ ಮತ್ತು ರಸ್ತೆ ಬದಿಯ ನೆರವು ಒದಗಿಸಲು ಕಂಪನಿ ತೀರ್ಮಾನಿಸಿದೆ ಹಾಗು ಮೂರು ಬಾರಿ ಮ್ಯಾಪ್ಕೇರ್ ಸ್ಯಾಟ್‌ಲೈಟ್ ನೇವಿಗೇಶನ್ ಸಿಸ್ಟಮ್ ನವೀಕರಣಗಳನ್ನು ಪಡೆದುಕೊಳ್ಳಬಹುದಾಗಿದೆ.

ಹ್ಯುಂಡೈ ವೆರ್ನಾ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ರೂ.7.99 ಲಕ್ಷ

ಮೂರನೆಯ ತಲೆಮಾರಿನ ನೂತನ ಹ್ಯುಂಡೈ ಎಕ್ಸಿಕ್ಯೂಟಿವ್ ಸೆಡಾನ್ ವೆರ್ನಾ ಕಾರು, 1.6-ಲೀಟರ್ ಪೆಟ್ರೋಲ್ ಮತ್ತು 1.6-ಲೀಟರ್ ಡೀಸೆಲ್ ಎಂಬ ಎರಡು ಎಂಜಿನ್ ಆಯ್ಕೆಯನ್ನು ಹೊಂದಿದೆ. ಪೆಟ್ರೋಲ್ ಎಂಜಿನ್ 151 ಏನ್‌ಎಂ ತಿರುಗುಬಲದಲ್ಲಿ 121ರಷ್ಟು ಟಾರ್ಕ್ ಉತ್ಪಾದಿಸುತ್ತದೆ ಮತ್ತು ಡೀಸೆಲ್ ಎಂಜಿನ್ 260 ಏನ್‌ಎಂ ತಿರುಗುಬಲದಲ್ಲಿ 126ರಷ್ಟು ಟಾರ್ಕ್ ಉತ್ಪಾದಿಸುತ್ತದೆ.

ಹ್ಯುಂಡೈ ವೆರ್ನಾ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ರೂ.7.99 ಲಕ್ಷ

ಎರಡೂ ಮಾದರಿಯೂ ಸಹ 6-ಸ್ಪೀಡ್ ಮಾನ್ಯುಯಲ್ ಅಥವಾ 6 ಸ್ಪೀಡ್ ಆಟೊಮ್ಯಾಟಿಕ್ ಗೇರ್‌ಬಾಕ್ಸ್ ಅಳವಡಿಸಲಾಗಿದೆ. ಪೆಟ್ರೋಲ್ ಆವೃತಿಯ ಕಾರು ಲೀಟರಿಗೆ 17.7 ಕಿಲೋಮೀಟರ್‌ ಮೈಲೇಜ್ ನೀಡಲಿದೆ ಹಾಗು ಡೀಸೆಲ್ ಕಾರು 24.76 ಕಿಲೋಮೀಟರ್‌ ಮೈಲೇಜ್ ನೀಡಲಿದೆ.

ಹ್ಯುಂಡೈ ವೆರ್ನಾ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ರೂ.7.99 ಲಕ್ಷ

ಕೆ 2 ಫ್ಲ್ಯಾಟ್ ಫಾರ್ಮ್ ಆಧಾರ ಮೇಲೆ ಅಭಿವೃದ್ದಿಗೊಂಡಿರುವ 3ನೇ ಜನರೇಷನ್ ಹ್ಯುಂಡೈ ವೆರ್ನಾ ಕಾರು ಹೆಚ್ಚಿನ ಶಕ್ತಿಯ ಉಕ್ಕಿನ್ನು ಪಡೆದುಕೊಂಡಿದ್ದು, ಬಿಗಿತವನ್ನು ಹೆಚ್ಚಿಗೆ ಮಾಡಲಿದೆ ಮತ್ತು ಕಾರಿನ ಕ್ರ್ಯಾಶ್‌ವರ್ತಿನೆಸ್ ಹೆಚ್ಚಿಗೆಗೊಳಿಸಲಿದೆ.

ಹ್ಯುಂಡೈ ವೆರ್ನಾ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ರೂ.7.99 ಲಕ್ಷ

ಎಸ್ಎಕ್ಸ್(ಒ) ಮತ್ತು ಎಸ್ಎಕ್ಸ್ ಆವೃತಿಗಳ ಒಳಭಾಗದಲ್ಲಿ, 7 ಇಂಚಿನ ಟಚ್ ಸ್ಕ್ರೀನ್ ಟಿವಿ ವ್ಯವಸ್ಥೆ ಹೊಂದಿರುತ್ತದೆ. ಈ 7 ಇಂಚಿನ ಟಚ್ ಸ್ಕ್ರೀನ್ ಪರದೆಯು ಆಂಡ್ರಾಯ್ಡ್ ಆಟೊ, ಆಪಲ್ ಕಾರ್‌ಪ್ಲೇ ಮತ್ತು ಮಿರರ್ ಲಿಂಕ್ ಕನೆಕ್ಟಿವಿಟಿ ವ್ಯವಸ್ಥೆ ಹೊಂದಿದೆ.

ಹ್ಯುಂಡೈ ವೆರ್ನಾ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ರೂ.7.99 ಲಕ್ಷ

ಹೊಸ ಸೆಡಾನ್ ಕಾರಿನ ಆಯಾಮಗಳ ವಿಚಾರ ಸಹ ಸೋರಿಕೆಯಾಗಿದೆ.ಹಳೆಯ ಆವೃತಿಗೆ ಹೋಲಿಸಿದರೆ ಹೊಸ ಕಾರು ಮುಂಭಾಗದಲ್ಲಿ 30 ಮಿ.ಮೀ ಉದ್ದ, 29 ಮಿ.ಮೀ ಅಗಲ, 6 ಮಿಮೀ ಎತ್ತರವಾಗಲಿದೆ.

ಹ್ಯುಂಡೈ ವೆರ್ನಾ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ರೂ.7.99 ಲಕ್ಷ

ಹೊಸ ಹ್ಯುಂಡೈ ವೆರ್ನಾ ಕಾರು ಮೊದಲಿಗಿಂತಲೂ ಹೆಚ್ಚು ತೀಕ್ಷ್ಣವಾಗಿ ಕಾಣುತ್ತದೆ ಮತ್ತು ಈ ಕಾರಿನ ಎಂಜಿನ್ ಹೆಚ್ಚು ಶಕ್ತಿಯುತವಾಗಿ ಮತ್ತು ಉತ್ತಮ ಮೈಲೇಜ್ ನೀಡಲಿದೆ.

ಭಾರತದಲ್ಲಿ ಬಿಡುಗಡೆ

ಹ್ಯುಂಡೈ ವೆರ್ನಾ ಪೆಟ್ರೋಲ್ ಆವೃತ್ತಿಗಳ ಬೆಲೆಗಳು

ಹ್ಯುಂಡೈ ವೆರ್ನಾ ಇ- ರೂ.7,99,900

ಹ್ಯುಂಡೈ ವೆರ್ನಾ ಇಎಕ್ಸ್- ರೂ.9,06,900

ಹ್ಯುಂಡೈ ವೆರ್ನಾ ಇಎಕ್ಸ್ ಎಟಿ- ರೂ.10,22,900

ಹ್ಯುಂಡೈ ವೆರ್ನಾ ಎಸ್ಎಕ್ಸ್- ರೂ.9,49,900

ಹ್ಯುಂಡೈ ವೆರ್ನಾ ಎಸ್ಎಕ್ಸ್ (ಒ)- ರೂ.11,08,900

ಹ್ಯುಂಡೈ ವೆರ್ನಾ ಎಸ್ಎಕ್ಸ್ (ಒ) ಎಟಿ- ರೂ.12,23,900

ಭಾರತದಲ್ಲಿ ಬಿಡುಗಡೆ

ಹ್ಯುಂಡೈ ವೆರ್ನಾ ಡೀಸೆಲ್ ಆವೃತ್ತಿಗಳ ಬೆಲೆಗಳು

ಹ್ಯುಂಡೈ ವೆರ್ನಾ ಇ- ರೂ. 9,19,900

ಹ್ಯುಂಡೈ ವೆರ್ನಾ ಇಎಕ್ಸ್- ರೂ. 9,99,900

ಹ್ಯುಂಡೈ ವೆರ್ನಾ ಇಎಕ್ಸ್ ಎಟಿ- ರೂ. 11,39,900

ಹ್ಯುಂಡೈ ವೆರ್ನಾ ಎಸ್ಎಕ್ಸ್- ರೂ. 11,11,900

ಹ್ಯುಂಡೈ ವೆರ್ನಾ ಎಸ್ಎಕ್ಸ್ ಪ್ಲಸ್ ಎಟಿ- ರೂ. 12,61,900

ಹ್ಯುಂಡೈ ವೆರ್ನಾ ಎಸ್ಎಕ್ಸ್ (ಒ)- ರೂ. 12,39,900

Most Read Articles

Kannada
English summary
Read in kannada about Hyundai Verna launched in India. Prices for the all-new Hyundai Verna start at Rs 7.99 Lakh ex-showroom (Delhi).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X