ಲ್ಯಾಂಡ್ ರೋವರ್ ಡಿಸ್ಕವರಿ ಭಾರತ ಬಿಡುಗಡೆ ; ಬೆಲೆ ರೂ. 71.38 ಲಕ್ಷ
ಐಷಾರಾಮಿ ಕಾರು ಉತ್ಪಾದಕ ಮತ್ತು ಟಾಟಾ ಕಂಪನಿಯ ಅಂಗ ಸಂಸ್ಥೆಯಾದ ಲ್ಯಾಂಡ್ ರೋವರ್ ಸಂಸ್ಥೆಯ ಬಹುನಿರೀಕ್ಷಿತ ಡಿಸ್ಕವರಿ ಕಾರು ಭಾರತದಲ್ಲಿ ಬಿಡುಗಡೆಯಾಗಿದ್ದು, ರೂ. 71.38 ಲಕ್ಷ ಎಕ್ಸ್ ಶೋರೂಂ(ಇಂಡಿಯಾ)ದರ ಪಡೆದುಕೊಂಡಿದೆ.
ಐಷಾರಾಮಿ ಕಾರು ಉತ್ಪಾದಕ ಮತ್ತು ಟಾಟಾ ಕಂಪನಿಯ ಅಂಗ ಸಂಸ್ಥೆಯಾದ ಲ್ಯಾಂಡ್ ರೋವರ್ ಸಂಸ್ಥೆಯ ಬಹುನಿರೀಕ್ಷಿತ ಡಿಸ್ಕವರಿ ಕಾರು ಭಾರತದಲ್ಲಿ ಬಿಡುಗಡೆಯಾಗಿದ್ದು, ರೂ. 71.38 ಲಕ್ಷ ಎಕ್ಸ್ ಶೋರೂಂ(ಇಂಡಿಯಾ)ದರ ಪಡೆದುಕೊಂಡಿದೆ.

1989ರಲ್ಲಿ ಮೊದಲ ಬಾರಿಗೆ ಡಿಸ್ಕವರಿ ಕಾರಿನ ಮೊದಲ ಆವೃತಿ ಬಿಡುಗಡೆಗೊಂಡಿದ್ದನ್ನು ನಾವಿಂದು ಸ್ಮರಿಸಬಹುದಾಗಿದೆ. ಸದ್ಯ ಬಿಡುಗಡೆಗೊಂಡಿರುವ ಹೊಸ ವಾಹನವು ಐದನೇ ಪೀಳಿಗೆಯ ಮಾದರಿಯಾಗಿದೆ. ಈ ಹೊಸ ಪೂರ್ಣ-ಗಾತ್ರದ ಎಸ್‌ಯುವಿ ಕಾರನ್ನು ಪಿಎಲ್ಎ ಪ್ಲಾಟ್‌ಫಾರಂ ಅಡಿಯಲ್ಲಿ ಹಗುರವಾಗಿ ನಿರ್ಮಿಸಲಾಗಿದೆ.

ಬಿಡುಗಡೆಗೊಂಡಿರುವ ಈ ಹೊಚ್ಚ ಹೊಸ ಡಿಸ್ಕವರಿ ಕಾರಿನ ಬುಕಿಂಗ್ ಎರಡು ತಿಂಗಳ ಹಿಂದೆಯೇ ಪ್ರಾರಂಭವಾಗಿದ್ದು, ಹಿಂದಿನ ಮಾದರಿಗೆ ಹೋಲಿಕೆ ಮಾಡಿದರೆ 480 ಕೆ.ಜಿಯಷ್ಟು ಹಗುರವಾಗಿದೆ ಹಾಗು ಬಲಿಷ್ಠ ನಿರ್ಮಾಣ ಪಡೆದುಕೊಂಡಿದೆ.

ಹಿಂದಿನ ಪೀಳಿಗೆಯ ಮಾದರಿಗಿಂತ ಈ ಹೊಸ ಕಾರು ಹೆಚ್ಚು ವೇಗ ಮತ್ತು ಸಾಮರ್ಥ್ಯ ಹೊಂದಿದೆ. ಏಳು ಆಸನದ ಈ ಪೂರ್ಣ ಗಾತ್ರದ ಎಸ್‌ಯುವಿ 3.0-ಲೀಟರ್ ವಿ6 ಪೆಟ್ರೋಲ್ ಮತ್ತು 3.0-ಲೀಟರ್ ಡೀಸಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.

3.0-ಲೀಟರ್ ವಿ6 ಪೆಟ್ರೋಲ್ ಎಂಜಿನ್ ಆಯ್ಕೆಯ ಕಾರು 450 ಎನ್ಎಂ ತಿರುಗುಬಲದಲ್ಲಿ 335 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ ಹಾಗು 3.0-ಲೀಟರ್ ಡೀಸಲ್ ಎಂಜಿನ್ ಆಯ್ಕೆಯ ಕಾರು 600 ಎನ್ಎಂ ತಿರುಗುಬಲದಲ್ಲಿ 254 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ.

ವಿ6 ಪೆಟ್ರೋಲ್ ಮಾದರಿಯು ಕೇವಲ 7.1 ಸೆಕೆಂಡುಗಳಲ್ಲಿ 100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುವಷ್ಟು ಬಲಿಷ್ಠವಾಗಿದೆ ಮತ್ತು ಡೀಸಲ್ ಮಾದರಿಯು ಕೇವಲ 8.1 ಸೆಕೆಂಡುಗಳಲ್ಲಿ 100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುವಷ್ಟು ಬಲಿಷ್ಠವಾಗಿದೆ.
Recommended Video


ಎರಡೂ ಎಂಜಿನ್‌ಗಳೂ ಸಹ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿರಲಿದ್ದು, ವಿ6 ಪೆಟ್ರೋಲ್ ಮಾದರಿಯು ಗಂಟೆಗೆ ಗರಿಷ್ಠ 245 ಕಿ.ಮೀ ವೇಗ ಮಿತಿ ಹೊಂದಿದೆ ಹಾಗು 3.0-ಲೀಟರ್ ಡೀಸಲ್ ಎಂಜಿನ್ ಮಾದರಿಯು ಗಂಟೆಗೆ ಗರಿಷ್ಠ 209 ಕಿ.ಮೀ ವೇಗ ಮಿತಿ ಹೊಂದಿದೆ.

ಹೊಸ ಲ್ಯಾಂಡ್ ರೋವರ್ ಡಿಸ್ಕವರಿ, ಸ್ವಯಂಚಾಲಿತ ಟೈರ್ ತರಬೇತಿ ಆಯ್ಕೆ ಮತ್ತು ಬುದ್ಧಿವಂತ ಸೀಟ್ ಪದರ ಕಾರ್ಯಚಟುವಟಿಕೆಯ ಜೊತೆ ಪೂರ್ಣ-ಗಾತ್ರದ ಬಿಡಿಭಾಗ ಚಕ್ರ ಹಾಗು ಮತ್ತಿತರ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಇತರ ಪ್ರಮುಖ ವಿಶೇಷತೆಗಳೆಂದರೆ, 10-ಇಂಚಿನ ಇನ್ ಕಾಂಟ್ರೋಲ್ ಟಚ್ ಪ್ರೋ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, 14-ಸ್ಪೀಕರ್ ಮೆರಿಡಿಯನ್ ಡಿಜಿಟಲ್ ಸರೌಂಡ್ ಸಿಸ್ಟಮ್ ಪಡೆಯುತ್ತದೆ.

ಹೊಸ ಡಿಸ್ಕವರಿ ಕಾರು ಶಾಶ್ವತವಾದ ನಾಲ್ಕು-ಚಕ್ರ ಚಾಲನೆಯೊಂದಿಗೆ ಅತ್ಯಂತ ಸಮರ್ಥವಾದ ಡಿಸ್ಕವರಿ ಕಾರಾಗಿದ್ದು, ಈ ಕಾರು ಎರಡು ಬುದ್ಧಿವಂತ ವ್ಯವಸ್ಥೆಗಳ ಆಯ್ಕೆಯೊಂದಿಗೆ ಬಿಡುಗಡೆಯಾಗಿದೆ.

ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಹೊಸ ಲ್ಯಾಂಡ್ ರೋವರ್ ಡಿಸ್ಕವರಿ ಕಾರು ಮುಂಭಾಗದ ಗಾಳಿಚೀಲಗಳು, ಪರದೆ ಗಾಳಿಚೀಲಗಳು, ಆಂಟಿ ಲಾಕ್ ಬ್ರೇಕ್‌ಗಳು, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಡ್ ಡಿಸ್ಟ್ರಿಬ್ಯೂಷನ್, ಕಾರ್ನರ್ ಬ್ರೇಕ್ ನಿಯಂತ್ರಣ, ಸ್ಥಿರತೆ ನಿಯಂತ್ರಣ, ತುರ್ತು ಬ್ರೇಕ್ ಸಹಾಯ ಮತ್ತು ಸರೌಂಡ್ ಕ್ಯಾಮರಾ ಸಿಸ್ಟಮ್ ಆಯ್ಕೆಗಳನ್ನು ಪಡೆದುಕೊಂಡಿದೆ.

ಹೊಚ್ಚ ಹೊಸ ಲ್ಯಾಂಡ್ ರೋವರ್ ಡಿಸ್ಕವರಿ ಹಿಂದಿನ ಪೀಳಿಗೆಗೆ ಹೋಲಿಸಿದರೆ ಹೆಚ್ಚು ಸಾಮರ್ಥ್ಯ, ಸಾಕಷ್ಟು ವೈಶಿಷ್ಟ್ಯಗಳೊಂದಿಗೆ ಬಹುಮುಖ ಕಾರ್ಯವೈಖರಿಗಳೊಂದಿಗೆ ಬಿಡುಗಡೆಗೊಂಡಿದೆ. ಈ ಕಾರು ಭಾರತದಲ್ಲಿ ಆಡಿ ಕ್ಯೂ7 ಮತ್ತು ವೊಲ್ವೊ XC90 ಕಾರುಗಳಿಂದ ಸ್ಪರ್ಧೆ ಎದುರಿಸಲಿದೆ.


Click it and Unblock the Notifications








