ಬರ್ತಿದೆ ಹೊಸ ರೂಲ್ಸ್ !! ಬೆಂಗಳೂರಿನಲ್ಲಿ ಇನ್ಮೇಲೆ ಎರಡನೇ ಭಾನುವಾರ ನಿಮ್ಮ ವಾಹನ ರಸ್ತೆಗಿಳಿಯುವಂತಿಲ್ಲ

Written By:

ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆಗೊಳಿಸಲು ಸಾಕಷ್ಟು ಪ್ರಯತ್ನವನ್ನು ಕರ್ನಾಟಕ ಸರ್ಕಾರ ಮಾಡಿದೆ, ಈಗಲೂ ಸಹ ಮಾಡುತ್ತಿದೆ. ಈಗ ಮತ್ತೊಂದು ನಿಯಮವನ್ನು ಜಾರಿಗೊಳಿಸಲು ಮುಂದಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಬರ್ತಿದೆ ಹೊಸ ರೂಲ್ಸ್ !! ಬೆಂಗಳೂರಿನಲ್ಲಿ ಇನ್ಮೇಲೆ ಎರಡನೇ ಭಾನುವಾರ ನಿಮ್ಮ ವಾಹನ ರಸ್ತೆಗಿಳಿಯುವಂತಿಲ್ಲ

ನಮಗೆಲ್ಲರಿಗೂ ತಿಳಿದಿರುವಂತೆ, ಬೆಂಗಳೂರಿನ ತುಂಬಾ ಜನರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳಿವೆ, ಎನ್ನುವುದು ಉತ್ಪ್ರೇಕ್ಷೆಯ ಮಾತಲ್ಲ !! ಈ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ವಿಕಾಸಸೌಧದಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ ಹೊಸ ನಿಯಮ ಜಾರಿಗೆ ತರುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಬರ್ತಿದೆ ಹೊಸ ರೂಲ್ಸ್ !! ಬೆಂಗಳೂರಿನಲ್ಲಿ ಇನ್ಮೇಲೆ ಎರಡನೇ ಭಾನುವಾರ ನಿಮ್ಮ ವಾಹನ ರಸ್ತೆಗಿಳಿಯುವಂತಿಲ್ಲ

ಈ ನಿಯಮದ ಪ್ರಕಾರ, ಪ್ರತಿ ತಿಂಗಳ ಎರಡನೇ ಭಾನುವಾರ ಖಾಸಗಿ ವಾಹನಗಳನ್ನು ಹೊರಗೆ ತರದೆ ಸಾರಿಗೆ ಸಂಸ್ಥೆಯ ಬಸ್‌ಗಳು, ಬಾಡಿಗೆ ವಾಹನ, ರಿಕ್ಷಾಗಳನ್ನು ಬಳಸುವಂತೆ ಅವರು ಜನರಿಗೆ ಕರೆ ನೀಡಿದರು.

ಬರ್ತಿದೆ ಹೊಸ ರೂಲ್ಸ್ !! ಬೆಂಗಳೂರಿನಲ್ಲಿ ಇನ್ಮೇಲೆ ಎರಡನೇ ಭಾನುವಾರ ನಿಮ್ಮ ವಾಹನ ರಸ್ತೆಗಿಳಿಯುವಂತಿಲ್ಲ

ಸಾರಿಗೆ ಇಲಾಖೆ ವತಿಯಿಂದ ಪ್ರತಿ ತಿಂಗಳ ಎರಡನೇ ಭಾನುವಾರ ವಿರಳ ಸಂಚಾರ ದಿನ ( ಲೆಸ್ ಟ್ರಾಫಿಕ್ ಡೇ) ಅಭಿಯಾನ ನಡೆಸಲು ಚಿಂತನೆ ನಡೆಸಲಾಗಿದೆ.

ಬರ್ತಿದೆ ಹೊಸ ರೂಲ್ಸ್ !! ಬೆಂಗಳೂರಿನಲ್ಲಿ ಇನ್ಮೇಲೆ ಎರಡನೇ ಭಾನುವಾರ ನಿಮ್ಮ ವಾಹನ ರಸ್ತೆಗಿಳಿಯುವಂತಿಲ್ಲ

ಸ್ವಂತ ವಾಹನ ಬಳಸದೇ ಸಮೂಹ ಸಾರಿಗೆ ಬಳಸಲು ಮನವಿ ಮಾಡಿದ್ದಾರೆ. ಬಿಎಂಟಿಸಿ, ಹಳದಿ ಬಾಡಿಗೆ ವಾಹನ ಆಟೋಗಳಿಗೆ ನಿರ್ಬಂಧವಿಲ್ಲ ಎಂದು ಹೇಳಿದ್ದಾರೆ ಹಾಗು 2018 ರ ಫೆಬ್ರವರಿ 2 ನೇ ಭಾನುವಾರ ವಿರಳ ಸಂಚಾರ ಅಭಿಯಾನಕ್ಕೆ ಚಾಲನೆ ಸಿಗಲಿದೆ.

ಬರ್ತಿದೆ ಹೊಸ ರೂಲ್ಸ್ !! ಬೆಂಗಳೂರಿನಲ್ಲಿ ಇನ್ಮೇಲೆ ಎರಡನೇ ಭಾನುವಾರ ನಿಮ್ಮ ವಾಹನ ರಸ್ತೆಗಿಳಿಯುವಂತಿಲ್ಲ

ಇಂದಿನಿಂದ 73 ಎಲೆಕ್ಟ್ರಾನಿಕ್ ಬಸ್‌ಗಳು ಸಂಚಾರಕ್ಕೆ ಮುಕ್ತವಾಗಲಿವೆ. ಕಟ್ಟಡ ಕಾರ್ಮಿಕರು, ಗಾರ್ಮೆಂಟ್ಸ್ ಕಾರ್ಮಿಕರಿಗೆ ಇಂದಿರಾ ಬಸ್ ಪಾಸ್‌ಗಳನ್ನು ವಿತರಿಸಲಾಗುವುದು ಎಂದು ಸಾರಿಗೆ ಸಚಿವರು ತಿಳಿಸಿದರು.

ಬರ್ತಿದೆ ಹೊಸ ರೂಲ್ಸ್ !! ಬೆಂಗಳೂರಿನಲ್ಲಿ ಇನ್ಮೇಲೆ ಎರಡನೇ ಭಾನುವಾರ ನಿಮ್ಮ ವಾಹನ ರಸ್ತೆಗಿಳಿಯುವಂತಿಲ್ಲ

ಮಾರ್ಚ್ 19ರಂದು ಅರ್ಥ್ ಅವರ್ ಎಂದು ರಾತ್ರಿ ವೇಳೆ ಒಂದು ಗಂಟೆ ಕಾಲ ವಿದ್ಯುತ್ ದೀಪ ಆರಿಸುವ ಕೆಲಸ ನಡೆಯುತ್ತಿದೆ. ಇದನ್ನು ಸ್ಪೂರ್ತಿಯಾಗಿಟ್ಟುಕೊಂಡು ಈ ನಿರ್ಧಾರನ್ನು ತೆಗೆದುಕೊಂಡಿರುವುದಾಗಿ ಹಾಗು ಈ ನಿಯಮವನ್ನು ಎಲ್ಲರೂ ಸಹ ತಪ್ಪದೆ ಪಾಲಿಸಬೇಕಾಗಿ ಮನವಿ ಮಾಡಿದರು.

ಬರ್ತಿದೆ ಹೊಸ ರೂಲ್ಸ್ !! ಬೆಂಗಳೂರಿನಲ್ಲಿ ಇನ್ಮೇಲೆ ಎರಡನೇ ಭಾನುವಾರ ನಿಮ್ಮ ವಾಹನ ರಸ್ತೆಗಿಳಿಯುವಂತಿಲ್ಲ

ಇಂದು ವಾಹನಗಳು ಹೊಗೆ ಉಗುಳುತ್ತಿರುವ ಪರಿಣಾಮವಾಗಿ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ 1.86 ಕೋಟಿ ವಾಹನಗಳಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ನಾವೆಲ್ಲರೂ ಸೇರಿ ಈ ನಿರ್ಧಾರಕ್ಕೆ ಕೈಜೊಡಿಸೋಣ.

English summary
To avoid Delhi smog like situation, every 2nd Sunday to be a less traffic day in Bengaluru.
Story first published: Saturday, December 2, 2017, 15:28 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark