ಎಎಂಟಿ ಆವೃತ್ತಿಯಲ್ಲೂ ಲಭ್ಯವಾಗಲಿದೆ ಮಹೀಂದ್ರಾ ಕೆಯುವಿ100 ನೆಕ್ಸ್ಟ್
ಕೆಯುವಿ100ನೆಕ್ಸ್ಟ್ ಆವೃತ್ತಿಯು ಮ್ಯಾನುವಲ್ ಗೇರ್‌ಬಾಕ್ಸ್ ವ್ಯವಸ್ಥೆಯೊಂದಿಗೆ ಮಾತ್ರ ಖರೀದಿಗೆ ಲಭ್ಯವಿದ್ದು, ಇದೀಗ ಅದೇ ಆವೃತ್ತಿಯಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ (ಎಎಂಟಿ) ಮಾದರಿಯನ್ನು ಕೂಡಾ ಪರಿಚಯಿಸುವ ಬಗ್ಗೆ ಸುಳಿವು ನೀಡಲಾಗಿದೆ.
ನಿನ್ನೆಯಷ್ಟೇ ಭಾರತೀಯ ಮಾರುಕಟ್ಟೆಯಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಂಡಿರುವ ಮಹೀಂದ್ರಾ ಕೆಯುವಿ100ನೆಕ್ಸ್ಟ್ ಆವೃತ್ತಿಯು ಮ್ಯಾನುವಲ್ ಗೇರ್‌ಬಾಕ್ಸ್ ವ್ಯವಸ್ಥೆಯೊಂದಿಗೆ ಮಾತ್ರ ಖರೀದಿಗೆ ಲಭ್ಯವಿದ್ದು, ಇದೀಗ ಅದೇ ಆವೃತ್ತಿಯಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ (ಎಎಂಟಿ) ಮಾದರಿಯನ್ನು ಕೂಡಾ ಪರಿಚಯಿಸುವ ಬಗ್ಗೆ ಸುಳಿವು ನೀಡಲಾಗಿದೆ.

ಈ ಬಗ್ಗೆ ಸ್ವತಃ ಮಹೀಂದ್ರಾ ಸಂಸ್ಥೆಯೆ ಸುಳಿವು ನೀಡಿದ್ದು, ಸದ್ಯದಲ್ಲೇ ಎಎಂಟಿ ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ಕೆಯುವಿ100 ನೆಕ್ಸ್ಟ್ ಆವೃತ್ತಿಯ ಎಎಂಟಿ ಸೌಲಭ್ಯದೊಂದಿಗೆ ಖರೀದಿಗೆ ಲಭ್ಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
Recommended Video


ಇನ್ನು ಮಾರುಕಟ್ಟೆ ಖರೀದಿಗೆ ಲಭ್ಯವಾಗಿರುವ ಮ್ಯಾನುವಲ್ ಗೇರ್‌ಬಾಕ್ಸ್ ಆವೃತ್ತಿಗಳು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕೆ2, ಕೆ2 ಪ್ಲಸ್, ಕೆ4 ಪ್ಲಸ್, ಕೆ6 ಪ್ಲಸ್, ಕೆ8 ಎಂಬ ವಿವಿಧ ಮಾದರಿಗಳನ್ನು ಪರಿಚಯಿಸಲಾಗಿದೆ.

ಜೊತೆಗೆ ಅತ್ಯುತ್ತಮ ಬೆಲೆಗಳಲ್ಲಿ ಬಿಡುಗಡೆಯಾಗಿರುವ ಕೆಯುವಿ100 ನೆಕ್ಸ್ಟ್ ಮಾದರಿಗಳು ಆರಂಭಿಕವಾಗಿ ರೂ.4.39 ಲಕ್ಷಕ್ಕೆ ಹಾಗೂ ಉನ್ನತ ಕಾರು ಮಾದರಿಯೂ ರೂ.7.33 ಲಕ್ಷಕ್ಕೆ ಬಿಡುಗಡೆಗೊಂಡಿವೆ.

ಎಂಜಿನ್ ಸಾಮರ್ಥ್ಯ
ಕೆಯುವಿ100 ನೆಕ್ಸ್ಟ್ ಆವೃತ್ತಿಗಳು 1.2-ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.2-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, ಪೆಟ್ರೋಲ್ ಮಾದರಿಗಳು 82-ಬಿಎಚ್‌ಪಿ, 115-ಎನ್ಎಂ ಟಾರ್ಕ್ ಮತ್ತು ಡೀಸೆಲ್ ಆವೃತ್ತಿಗಳು 77-ಬಿಎಚ್‌ಪಿ, 190-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಜೊತೆಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಒದಗಿಸಲಾಗಿದ್ದು, ಕ್ರೋಮ್ ಡಿಸೈನ್, ಡ್ಯುಯಲ್ ಟೋನ್ ಬಂಪರ್, ಎಲ್‌ಇಡಿ ಡಿಆರ್‌ಎಲ್ಎಸ್, ಕ್ಲಿಯರ್ ಲೆನ್ಸ್ ಟೈಲ್‌ಮ್ಯಾಪ್, ಡ್ಯುಯಲ್ ಏರ್‌ಬ್ಯಾಗ್, ಅಲಾಯ್ ಚಕ್ರಗಳನ್ನು ಹೊಂದಿರುವುದು ಖರೀದಿಗೆ ಉತ್ತಮವಾಗಿದೆ.

ಇನ್ನೊಂದು ಪ್ರಮುಖ ವಿಚಾರವೆಂದರೆ ಎಎಂಟಿ ಆವೃತ್ತಿ ಬಿಡುಗಡೆ ನಂತರ ಮುಂದಿನ ವರ್ಷ ಇದೇ ಆವೃತ್ತಿಯು ಎಲೆಕ್ಟ್ರಿಕ್ ಎಂಜಿನ್‌ನಲ್ಲೂ ಲಭ್ಯವಾಗುವ ಬಗ್ಗೆ ಮಹೀಂದ್ರಾ ಸುಳಿವು ನೀಡಿದ್ದು, ಎಬಿಎಸ್, ಇಬಿಡಿ, 7-ಇಂಚಿನ ಟಚ್ ಸ್ಕ್ರಿನ್ ಇನ್ಪೋಟೈನ್‌ಮೆಂಟ್ ವ್ಯವಸ್ಥೆ ಇರಿಸಿರುವುದು ಕೆಯುವಿ100 ನೆಕ್ಸ್ಟ್ ಆವೃತ್ತಿಯನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗಿದೆ.


Click it and Unblock the Notifications